Monday, August 10, 2020

ಅಂಧ ವೃದ್ಧನನ್ನ ಬಸ್ಸಿಗತ್ತಿಸಿದ ಮಹಿಳೆಗೆ ಜಾಯ್ ಅಲುಕ್ಕಾಸ್ ನಿಂದ ಸರ್ಪ್ರೈಸ್ ಗಿಫ್ಟ್

Array

ಬ್ರಹ್ಮಗಿರಿ ಬೆಟ್ಟ ಕುಸಿತ ಎರಡೇ ದಿನದಲ್ಲಿ ಕಾರ್ಯಾಚರಣೆ ಮುಗಿಸಿ – ಆರ್ ಅಶೋಕ್

ಕೊಡಗು : ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತವಾಗಿ ಕಣ್ಮರೆಯಾಗಿರುವ ನಾಲ್ವರನ್ನು ಹುಡುಕುವ ಕೆಲಸ ಎರಡೇ ದಿನಗಳಲ್ಲಿ ಮುಗಿಯಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೊಡಗಿನ ತಲಕಾವೇರಿಯ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಳಿಕೆ ಹಾದಿಯಲ್ಲಿ ಕೊರೊನಾ ಪ್ರಕರಣ..!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಳಿಕೆ ಹಾದಿಯಲ್ಲಿ ಕೊರೊನಾ ಪ್ರಕರಣ..! ಮಂಗಳೂರು :ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಸದ್ಯ ಇಳಿಕೆ ಹಾದಿಯಲ್ಲಿದ್ದು, ಇಂದು ಕೇವಲ 132 ಕೊರೊನಾ ಪ್ರಕರಣ ದಾಖಲಾಗಿದೆ. ಆದರೆ ಕೊರೊನಾದಿಂದ ಸಾವನಪ್ಪುತ್ತಿರುವವರ ಸಂಖ್ಯೆ...

ಉಡುಪಿ 6 ಸಾವಿರ ದಾಟಿದ ಕೊರೊನಾ ಒಟ್ಟು ಸೊಂಕಿತರ ಸಂಖ್ಯೆ

ಉಡುಪಿ ; ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 282 ಕೊರೊನಾ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಉಡುಪಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಆರು ಸಾವಿರ ದಾಟಿದೆ. ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 6201...

ಬಾಲಿವುಡ್ ಸ್ಟಾರ್ ನಿಧಿ ಅಗ್ರವಾಲ್..!

ಬಾಲಿವುಡ್ ಸ್ಟಾರ್ ನಿಧಿ ಅಗ್ರವಾಲ್...  ಸಮಯ ಸಿಕ್ಕಾಗ ಸೋಷಿಯಲ್ ಮೀಡಿಯಾ ಲೈವ್ ಬರುತ್ತಾ, ಅಭಿಮಾನಿಗಳ ಜೊತೆ ಮಾತನಾಡುತ್ತ ಕಾಲ ಕಳೆಯುವ ಹವ್ಯಾಸ ಇಟ್ಟುಕೊಟ್ಟಿದ್ದಾಳೆ ನಿಧಿ ಅಗ್ರವಾಲ್.. ಹೈದ್ರಾಬಾದ್ ನಲ್ಲಿ ನಲ್ಲಿ ಹುಟ್ಟಿ ಬಳಿಕ...

ಚಾಕಲೇಟ್ ಗಂಟಲಲ್ಲಿ ಸಿಲುಕಿ ಬಾಲಕ ಸಾವು

ಮಂಗಳೂರು: ಚಾಕಲೇಟ್ ಗಂಟಲಲ್ಲಿ ಸಿಲುಕಿದ ಪರಿಣಾಮ ಎಂಟು ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಉಳ್ಳಾಲ ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡದಲ್ಲಿ ಈ ದುರ್ಘಟನೆ ನಡೆದಿದೆ.ರಹೀಂ ಎಂಬವರ ಮಗ...

ಕೇರಳ : ಅಂಧ ವೃದ್ಧರೊಬ್ಬರ ಕೈಹಿಡಿದು ಬಸ್ ಹತ್ತಿಸಿದ ಮಹಿಳೆಗೆ ಇದೀಗ ಬಿಗ್ ಸರ್ಪ್ರೈಸ್ ಒಂದು ದೊರಕಿದೆ. ಸುಪ್ರಿತಾ ಎಂಬ ಮಹಿಳೆ ತಾನು ಕೆಲಸ ಮಾಡುತ್ತಿರುವ ಅಂಗಡಿಯ ಬಳಿಯಿರುವ ಬಸ್ ನಿಲ್ದಾಣದಲ್ಲಿ ಅಂಧ ವೃದ್ಧರೊಬ್ಬರು ಬಸ್ಸಿಗೆ ಕಾಯುತ್ತಿರುವುದನ್ನು ಗಮನಿಸಿದ್ದಾರೆ. ಅಂತೆಯೇ ಬಸ್ ನಿಲ್ದಾಣಕ್ಕೆ ಇನ್ನೇನು ಹೊರ ಬೇಕೆನ್ನುವಷ್ಟುರಲ್ಲಿ ಅಜ್ಜ ಕೂಡ ಅದೇ ಬಸ್ಸಿಗೆ ಹತ್ತಲು ಹಪಹಪಿಸಿದ್ದಾರೆ. ಇವೆಲ್ಲವನ್ನು ಗಮನಿಸಿದ್ದ ಸುಪ್ರಿತಾ ಕೂಡಲೇ ಓಡೋಡಿ ಬಂದು, ಹೊರಡಲು ಅಣಿಯಾಗುತ್ತಿದ್ದ ಬಸ್ಸನ್ನು ನಿಲ್ಲಿಸಿದ್ದಾರೆ. ಅಲ್ಲದೆ ತಾತನ ಕೈ ಹಿಡಿದು ಬಸ್ ಹತ್ತಿಸಿದ್ದಾರೆ.


ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಜಾಲತಾಣಿಗರು ಕೂಡ ಮಹಿಳೆಯ ಮಾನವೀಯ ಕಾರ್ಯಕ್ಕೆ ಮಾರು ಹೋಗಿ ಶಹಬ್ಬಾಸ್ ಅಂದಿದ್ದರು. ಇದಿಗ ಇದೇ ಮಹಿಳೆಗೆ ಒಂದು ದೊಡ್ಡ ಗಿಫ್ಟ್ ಸಿಕ್ಕಿದೆ. ಅದೇನಂದರೆ ಸುಪ್ರಿಯಾಗೆ ಕನಸಿನ ಮನೆಯೊಂದು ದೊರಕಿದೆ. ಈ ಮನೆಯನ್ನು ಪ್ರತಿಷ್ಠಿತ ಆಭರಣ ಮಳಿಗೆಯಾದ ಜಾಯ್ ಅಲುಕ್ಕಾಸ್ ಅವರು ನೀಡಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದ ಮಹಿಳೆಯನ್ನು ಸಂಸ್ಥೆ ಗೌರವಿಸಿದೆ.


ಮಾನವೀಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಾಯ್ ಅಲುಕ್ಕಾಸ್ ಗ್ರೂಪ್ ಮುಖ್ಯಸ್ಥ ಜಾಯ್ ಅಲುಕ್ಕಾಸ್ ಅವರು ಸುಪ್ರಿಯಾ ಅವರನ್ನು ಭೇಟಿ ಮಾಡಿ, ಮೊದಲು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆ ಬಳಿಕ ತ್ರಿಶೂರಿನಲ್ಲಿರುವ ಮುಖ್ಯ ಕಚೇರಿಗೆ ಬಂದು ಭೇಟಿಯಾಗುವಂತೆ ಹೇಳಿದ್ದಾರೆ ಈ ವೇಳೆ ಸುಪ್ರಿಯಾಗೆ ಅಲ್ಲಿ ಬಿಗ್ ಗಿಫ್ಟ್ ಸಿಕ್ಕಿದೆ.

ನಾನು ಮಾಡಿರುವ ಕಾರ್ಯಕ್ಕೆ ಇಂತಹದ್ದೊಂದು ದೊಡ್ಡ ಉಡುಗೊರೆ ಸಿಗುತ್ತೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ನಾನು ಜಾಯ್ ಅಲುಕ್ಕಾಸ್ ಮುಖ್ಯ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿರುವ ನೂರಾರು ಸಿಬ್ಬಂದಿ ನನ್ನನ್ನು ಹುರಿದುಂಬಿಸಿದರು. ಈ ವೇಳೆ ನನ್ನ ಕಣ್ಣಂಚಲ್ಲಿ ನೀರು ಬಂತು. ನಾನು ವೃದ್ಧನಿಗೆ ಮಾಡಿರುವ ಸಹಾಯ ಅಚಾನಕ್ ಆಗಿದೆ. ಆದರೆ ಆ ವಿಚಾರ ನನ್ನನ್ನು ಈ ಮಟ್ಟಕ್ಕೆ ಅಲ್ಲದೆ ಇಷ್ಟೊಂದು ಮಂದಿ ಮೆಚ್ಚಿ ಕೊಂಡಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಖುಷಿ ಹಂಚಿಕೊಂಡಿದ್ದಾರೆ.

ಸುಪ್ರಿಯಾ ಅವರು ಜಾಲಿ ಸಿಲ್ಕ್ಸ್ ಎಂಬ ಟೆಕ್ಸ್ ಟೈಲ್ ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ಪತಿ ಕೂಡ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

Hot Topics

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..! 

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..!  ಮಂಗಳೂರು : ಇಂದು ಬೆಳಿಗ್ಗೆ ಮಂಗಳೂರು ನಗರದ ಕದ್ರಿಯಲ್ಲಿ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ನಗರದ ಕದ್ರಿ...

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..!

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..! ಬೆಳ್ತಂಗಡಿ : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಸನಿಹದ ಮೃತ್ಯಂಜಯ ಹೊಳೆ ಅಪಾಯದ ಮಟ್ಟದಲ್ಲಿ...

ಕೇರಳ ಮನ್ನಾರ್ ಭೂ ಕುಸಿತಕ್ಕೆ 13 ಬಲಿ..ಮಣ್ಣಿನಡಿ ಸಿಲುಕಿರುವ 80ಕ್ಕೂ ಅಧಿಕ ಮಂದಿ

ತಿರುವನಂತಪುರಂ : ಕೇರಳದ ಇಡುಕ್ಕಿಯಲ್ಲಿ ಇಂದು ಬೆಳಗ್ಗೆ ಭೂಕುಸಿತವಾಗಿ 13 ಜನರು ಸಾವನ್ನಪ್ಪಿದ್ದಾರೆ. ಕೇರಳದ ಪ್ರಸಿದ್ಧ ಪ್ರವಾಸಿತಾಣ ಮುನ್ನಾರ್​​ನಿಂದ 25 ಕಿ.ಮೀ ದೂರದಲ್ಲಿರೋ ರಾಜಮಲೈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ....
Copy Protected by Chetans WP-Copyprotect.