Wednesday, October 5, 2022

ಮಲ್ಪೆ ಬೀಚ್‍ನಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ..!

ಮಲ್ಪೆ ಬೀಚ್‍ನಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ..!

ಉಡುಪಿ: ಉಡುಪಿಯ ಮಲ್ಪೆ ಬೀಚ್‍ನಲ್ಲಿ ನೀರುಪಾಲಾಗುತ್ತಿದ್ದ ಬೆಂಗಳೂರು ಮೂಲದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.

ಪ್ರವಾಸಕ್ಕೆಂದು ಬೆಂಗಳೂರಿನಿಂದ ಹತ್ತು ಪ್ರವಾಸಿಗರ ತಂಡ ಉಡುಪಿ ಜಿಲ್ಲೆಗೆ ಆಗಮಿಸಿತ್ತು. ಮಲ್ಪೆ ಬೀಚ್‍ಗೆ ಬಂದ ಈ ತಂಡ ಮೋಜು ಮಸ್ತಿಯಲ್ಲಿ ತೋಡಗಿತ್ತು.ಈ ಸಂದರ್ಭ ಯುವತಿಯೊಬ್ಬಳು ಮುಳಗತೊಡಗಿದ್ದು, ಸಹಾಯಕ್ಕಾಗಿ ಬೊಬ್ಬೆ ಹೊಡೆದಾಗ ಯುವತಿಯ ರಕ್ಷಣೆ ಗೆ ಆ ತಂಡದ ಇಬ್ಬರು ಯುವಕರು ಧಾವಿಸಿದ್ದಾರೆ,ಅವರು ಕೂಡ ಈಜು ಬಾರದೆ ಮುಳುಗ ತೊಡಗಿದ್ದಾರೆ. ಈ ಮೂವರನ್ನು ಜೆಟ್ ಸ್ಕೀ ಮತ್ತು ಪ್ರವಾಸೀ ದೋಣಿಯ ಚಾಲಕರಿಂದ ರಕ್ಷಣೆ ಮಾಡಿದ್ದಾರೆ. ತಕ್ಷಣವೇ ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಅರಬ್‌ ನಾಡಲ್ಲಿ ನೂತನ ಹಿಂದೂ ದೇವಾಲಯ: ಉದ್ಘಾಟಿಸಿದ UAE ಸಚಿವ ಶೇಖ್ ನಹ್ಯಾನ್

ದುಬೈ(ಯುಎಇ): ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ.ಯುಎಇಯ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.ಯುಎಇಯ...

ಮಂಗಳೂರು: ಹೆಲಿಕಾಪ್ಟರ್‌ನಲ್ಲಿ ವೈಷ್ಣೋದೇವಿ ಮಂದಿರಕ್ಕೆ ಕರೆದೊಯ್ಯುವುದಾಗಿ 38 ಸಾವಿರ ರೂ. ವಂಚನೆ

ಮಂಗಳೂರು: ವೈಷ್ಣೋದೇವಿ ಮಂದಿರ ಯಾತ್ರೆಗೆ ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುತ್ತೇನೆಂದು ನಂಬಿಸಿ ಮಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ರೂ.38 ಸಾವಿರ ವಂಚನೆಗೈದ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಂಚನೆಗೊಳಗಾದ ವ್ಯಕ್ತಿ ಬೆಂಗಳೂರಿನಲ್ಲಿ IT consultant...

ಉಡುಪಿಯಲ್ಲಿ ಬೋನಿಗೆ ಬಿದ್ದ ಚಿರತೆ: ಮತ್ತೆ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಉಡುಪಿ: ಜಿಲ್ಲೆಯ ಮಟಪಾಡಿ ಗ್ರಾಮದಲ್ಲಿ ಊರಿನ ಜನರು ಅರಣ್ಯ ಇಲಾಖೆ ಮೂಲಕ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.ಮಟಪಾಡಿ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಬೋನನ್ನು...