Thursday, August 11, 2022

ನೆಲ್ಯಾಡಿ: ಪ್ರಯಾಣಿಕರಿದ್ದ ಜೀಪು ಪಲ್ಟಿ- ಹಲವು ಮಂದಿಗೆ ಗಾಯ

ನೆಲ್ಯಾಡಿ: ಪ್ರಯಾಣಿಕರಿದ್ದ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಹಲವು ಮಂದಿ ಗಂಭೀರ ಗಾಯಗೊಂಡ ಘಟನೆ ಕೊಕ್ಕಡ ಮತ್ತು ಅರಸಿನಮಕ್ಕಿ ಸಮೀಪದ ಪುತ್ತಿಗೆಯಲ್ಲಿ ರಾತ್ರಿ ನಡೆದಿದೆ.


ಕೊಕ್ಕಡ ಸಮೀಪ ನೇಮಕ್ಕೆಂದು ಕಡಬದ ಕೊಣಾಜೆಯಿಂದ ಕುಟುಂಬವೊಂದು ಜೀಪಿನಲ್ಲಿ ತೆರಳುತ್ತಿದ್ದ ವೇಳೆ ಮುತ್ತಿಗೆ ತಲುಪುತ್ತಿದ್ದಂತೆ ತಿರುವಿನಲ್ಲಿ ಚಾಲಕನ ಹತೋಟಿ ತಪ್ಪಿ ಜೀಪು ಪಲ್ಟಿಯಾಗಿದೆ. ಜೀಪಿನಲ್ಲಿದ್ದವರ ಪೈಕಿ ಮೂವರು ಮಕ್ಕಳು, ವೃದ್ದೆ ಸೇರಿದಂತೆ ಏಳು ಮಂದಿಗೆ ಗಾಯವಾಗಿದೆ.

ಕೆಲವು ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ, ಜೊತೆಗೆ ತೀವ್ರ ಗಾಯಗೊಂಡ ವೃದ್ದೆ ಮತ್ತು ಮಕ್ಕಳನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

LEAVE A REPLY

Please enter your comment!
Please enter your name here

Hot Topics

ಪ್ರವೀಣ್ ಹತ್ಯೆ ಪ್ರಕರಣ: ಪ್ರಮುಖ ಮೂವರು ಆರೋಪಿಗಳ ಬಂಧನ-ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆ

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದು, ಗೌಪ್ಯ ಸ್ಥಳದಲ್ಲಿ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಶಿಯಾಬ್, ಬಶೀರ್, ರಿಯಾಝ್ ಎಂದು...

ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ರಕ್ಷಾಬಂಧನ

ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಇಂದು ರಕ್ಷಾಬಂಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರರವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು...

ಸ್ವಾತಂತ್ರ್ಯ ಸಂಭ್ರಮಕ್ಕೆ ಅಹಿತಕರ ಘಟನೆ ಆಗದಂತೆ ದ.ಕದಲ್ಲಿ ಟೈಟ್ ಸೆಕ್ಯೂರಿಟಿ

ಮಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತೋತ್ಸವಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಇನ್ನೊಂದೆಡೆ ಪೊಲೀಸರು ಬಂದೋಬಸ್ತು ಬಿಗಿಗೊಳಿಸಿದ್ದಾರೆ.ಯಾವುದೇ ಸಂಭಾವ್ಯ ಅಹಿತಕರ ಘಟನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಬಿಗಿ ಕಣ್ಗಾವಲು ಇರಿಸಿದ್ದಾರೆ. ಜಿಲ್ಲಾದ್ಯಂತ ಪ್ರಮುಖ...