FILM
‘ಜವಾನ್’ ಶಾಕಿಂಗ್ ಕಲೆಕ್ಷನ್ – ಕೇವಲ 7 ದಿನಗಳಲ್ಲಿ ವಿಶ್ವದಾದ್ಯಂತ 700 ಕೋಟಿ..!
ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಕೇವಲ ಎಂಟು ದಿನಗಳಲ್ಲಿ 700ಕ್ಕೂ ಅಧಿಕ ಕೋಟಿ ರೂಗಳನ್ನು ಗಳಿಸುವ ಸೂಚನೆ ನೀಡಿದೆ.
ಮುಂಬೈ: ಅಟ್ಲಿ ನಿರ್ದೇಶನದ ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೇವಲ ಎಂಟು ದಿನಗಳಲ್ಲಿ 700ಕ್ಕೂ ಅಧಿಕ ಕೋಟಿ ರೂಗಳನ್ನು ಗಳಿಸುವ ಸೂಚನೆ ನೀಡಿದೆ.
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾದ ಅಬ್ಬರ ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದಿದ್ದು,
ಚಿತ್ರವು ಸೆಪ್ಟೆಂಬರ್ 7 ರಂದು ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು.
ಜವಾನ್ ಮೂಲಕ ನಾರ್ತ್ನಲ್ಲಿಯೂ ಭರ್ಜರಿಯಾಗಿ ಸೌಂಡ್ ಮಾಡುತ್ತಿದ್ದಾರೆ.ಶಾರುಖ್ ಖಾನ್ ಅವರ ಈ ಹಿಂದೆ ಬಿಡುಗಡೆಯಾದ ‘ಪಠಾಣ್’ ದೊಡ್ಡ ಯಶಸ್ಸನ್ನು ಕಂಡಿತು ಮತ್ತು ಅವರ ಅಭಿಮಾನಿಗಳು ಅದೇ ಸಾಲಿನಲ್ಲಿ ಈ ಚಿತ್ರಕ್ಕಾಗಿ ಕಾಯುತ್ತಿದ್ದರು. ಈಗ ಜವಾನ್ ರಿಲೀಸ್ ಆಗಿ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದೆ.
ದಿನ 3 – ₹ 140.17 ಕೋಟಿ
ದಿನ 4 – ₹ 156.80 ಕೋಟಿ
5 ನೇ ದಿನ – ₹ 52.39 ಕೋಟಿ
ದಿನ 6 – ₹ 38.21 ಕೋಟಿ
ದಿನ 7 – ₹ 34.06 ಕೋಟಿ
ದಿನ 8 – ₹ 28.79 ಕೋಟಿ
ಒಟ್ಟು – ₹ 684.71 ಕೋಟಿ
ಜವಾನ್ ಸಿನಿಮಾ ಪಠಾಣ್ ನಂತರ ಬಿಡುಗಡೆಯಾದ ಶಾರುಖ್ ಖಾನ್ ಅವರ ವರ್ಷದ ಎರಡನೇ ಸಿನಿಮಾವಾಗಿದೆ. ಇದರಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಮತ್ತು ಸನ್ಯಾ ಮಲ್ಹೋತ್ರಾ ನಟಿಸಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
FILM
ಮಲಯಾಳಂನ ‘2018’ ಚಿತ್ರ ಆಸ್ಕರ್ ಗೆ ನಾಮಿನೇಟ್
OSCAR AWARD : 2024ಕ್ಕೆ ಭಾರತವು ಆಸ್ಕರ್ ಪ್ರಶಸ್ತಿಗೆ ಮಲಯಾಳಂ ಭಾಷೆಯ ‘2018’ ಚಿತ್ರವನ್ನು ನಾಮಿನೇಟ್ ಮಾಡಿದೆ.
ಬಾರಿ ಆಸ್ಕರ್ಗೆ ಭಾರತದದಿಂದ ಕಳಿಸಲಾಗುವ ಅಧಿಕೃತ ಸಿನಿಮಾ ಘೋಷಣೆ ಆಗಿದ್ದು, ಮಲಯಾಳಂ ನ ‘2018’ ಸಿನೆಮಾ ಆಯ್ಕೆಯಾಗಿದೆ.
ಕಳೆದ ಸಲ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗಾಗಿ ಆಸ್ಕರ್ ಪ್ರಶಸ್ತಿ ಬಂದಿತ್ತು.
ಈ ಬಾರಿ ದಕ್ಷಿಣದ ಮತ್ತೊಂದು ಸಿನಿಮಾ ಈ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ನಾಮಿನೇಟ್ ಆಗಿದೆ.
ಮಲಯಾಳಂನ 2018 ಹೆಸರಿನ ಚಿತ್ರ ಈ ಬಾರಿ ಆಸ್ಕರ್ ಪ್ರಶಸ್ತಿಗಾಗಿ ಸೆಣಸಲಿದೆ. ಈ ವಿಷಯವನ್ನು ಆಸ್ಕರ್ ಆಯ್ಕೆ ಸಮಿತಿ ಅಧ್ಯಕ್ಷ, ಕನ್ನಡದವರೇ ಆಗಿರುವ ಗಿರೀಶ್ ಕಾಸರವಳ್ಳಿ ತಿಳಿಸಿದ್ದಾರೆ.
ಟೊವಿನೋ ಥಾಮಸ್ ನಟನೆಯ 2018 ಹೆಸರಿನ ಮಲಯಾಳಂ ಸಿನಿಮಾ ವಿಶೇಷ ಕಥಾವಸ್ತುವನ್ನು ಹೊಂದಿದೆ.
ಕೇರಳದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅತಿವೃಷ್ಠಿ ಸೃಷ್ಟಿಸಿದ ಆವಾಂತರವನ್ನು ಆಧರಿಸಿದ ಚಿತ್ರಿಸಲಾಗಿದೆ.
ಈ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ಈ ಸಿನಿಮಾವನ್ನು ಕಾಸರವಳ್ಳಿ ಅಧ್ಯಕ್ಷತೆಯ ಕಮೀಟಿಯು ಆಸ್ಕರ್ ಪ್ರಶಸ್ತಿ ಸ್ಪರ್ಧೆಗಾಗಿ ಆಯ್ಕೆ ಮಾಡಲಾಗಿದೆ.
ಈ ಆಯ್ಕೆಯು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಮೂಲಕ ನಡೆಯುತ್ತದೆ. ಇದು ಪ್ರತಿ ವರ್ಷವೂ ಒಂದು ಸಿನಿಮಾವನ್ನು ಆಯ್ಕೆ ಮಾಡಿ, ಸರಕಾರವೇ ಉಳಿದ ವೆಚ್ಚವನ್ನು ಭರಿಸಿ ಕಳುಹಿಸುತ್ತದೆ.
ಜೊತೆಗೆ ಖಾಸಗಿಯಾಗಿ ಯಾವ ಸಿನಿಮಾಗಳು ಕೂಡ ಸ್ಪರ್ಧಿಸಬಹುದಾಗಿದೆ.
FILM
ಲೇಡಿ ಸೂಪರ್ ಸ್ಟಾರ್ ನಯನತಾರಾ ಅವಳಿ ಮಕ್ಕಳ ಬರ್ತ್ ಡೇ ಸೆಲೆಬ್ರೇಷನ್
ದಕ್ಷಿಣ ಚಿತ್ರರಂಗದ ‘ಲೇಡಿ ಸೂಪರ್ ಸ್ಟಾರ್’ ಜನಪ್ರಿಯತೆಯ ನಯನತಾರಾ ಹಾಗೂ ಸೌತ್ ಸ್ಟಾರ್ ಡೈರೆಕ್ಟರ್ ವಿಘ್ನೇಶ್ ಶಿವನ್ ದಂಪತಿಯ ಅವಳಿ ಮಕ್ಕಳು ಉಯಿರ್ ಮತ್ತು ಉಲಗಮ್ ಮೊದಲ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾರೆ.
ಅವಳಿ ಮಕ್ಕಳ ಮೊದಲ ವರ್ಷದ ಹುಟ್ಟುಹಬ್ಬವಾಗಿರೋ ಕಾರಣ, ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಇಬ್ಬರೂ ಮಕ್ಕಳಿಗೆ ಬ್ಲ್ಯಾಕ್ & ವೈಟ್ ಡ್ರೆಸ್ ಧರಿಸಿ ಚೆಂದದ ಫೋಟೋಶೂಟ್ ಮಾಡಿಸಿ ಶೇರ್ ಮಾಡಿದ್ದಾರೆ.
ಸ್ಟಾರ್ ಕಪಲ್ ಸೋಷಿಯಲ್ ಮೀಡಿಯಾದಲ್ಲಿ ಅವಳಿ ಮಕ್ಕಳ ಪೋಟೋಗಳನ್ನು ಹಂಚಿಕೊಂಡು ಶುಭ ಹಾರೈಸಿದ್ದಾರೆ.
“ನಿಮ್ಮಿಬ್ಬರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಗು, ಸಂತೋಷ, ಮತ್ತು ಆಶೀರ್ವಾದಕ್ಕೆ ಒಂದು ವರ್ಷ. ನಮ್ಮ ಪ್ರೀತಿಯ ಉಯಿರ್ ಮತ್ತು ಉಲಗಮ್ ಗೆ ಹುಟ್ಟು ಹಬ್ಬದ ಶುಭಾಶಯಗಳು.
ನಿಮ್ಮ ಸುತ್ತ ಮುತ್ತಲಿರುವ ಎಲ್ಲರಲ್ಲೂ ಸಂತೋಷ ತರುವಂತೆ ಜೀವನದಲ್ಲಿ ನೀವಿಬ್ಬರೂ ಬಹಳ ಎತ್ತರಕ್ಕೆ ಸಾಗಿ. ನಿಮ್ಮನ್ನು ಬಹಳ ಪ್ರೀತಿಸುತ್ತೇವೆ.
ನೀವು ನಮ್ಮ ಜೀವನವನ್ನು ಪ್ರಜ್ವಲಿಸಿದ್ದೀರಿ. ವರ್ಣಮಯ ಮಾಡಿದ್ದೀರಿ. ನಿಮ್ಮೊಂದಿಗಿರುವುದು ಹಬ್ಬದಂತೆ. ನಿಮ್ಮಂತೆ ಇರುವ ಪವರ್ ಫುಲ್ ಟವರ್ ಎಂದು ಮೊದಲ ಜನ್ಮ ದಿನ ಆಚರಿಸಬೇಕೆಂದುಕೊಂಡಿದ್ದೆವು.
ಕನಸು ಈಡೇರಿದ್ದಕ್ಕಾಗಿ ಆ ಭಗವಂತನಿಗೆ ಧನ್ಯವಾದಗಳು. ಎಂದಿನಂತೆ ಆಶೀರ್ವದಿಸಲ್ಪಟ್ಟಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಫೋಟೋ ನೋಡಿ ಲಕ್ಷಕ್ಕೂ ಮೀರಿ ಹುಟ್ಟು ಹಬ್ಬದ ಶುಭಾಶಯಗಳು ಹರಿದು ಬಂದಿದೆ.
FILM
ರುಕ್ಮಿಣಿ ವಸಂತ್ ಸ್ಟಿಲ್ ಸಿಂಗಲ್ – ರಕ್ಷಿತ್ ಶೆಟ್ಟಿ ಫ್ಯಾನ್ಸ್ ಹ್ಯಾಪಿ
ಸಪ್ತ ಸಾಗರದಾಚೆ ಎಲ್ಲೋ ಸಿನೆಮಾ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ನಾನು ಇನ್ನೂ ಸಿಂಗಲ್ ಅನ್ನೋ ಮೂಲಕ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಗೆ ಸಿಹಿ ಸುದ್ದಿ ನೀಡಿದ್ದಾರೆ. ಈ ಸುದ್ದಿ ಕೇಳಿದ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಹಬ್ಬ ಮಾಡ್ತಿದ್ದಾರೆ.
ಬೆಂಗಳೂರು : ಸಪ್ತ ಸಾಗರದಾಚೆ ಎಲ್ಲೋ ಸಿನೆಮಾ ಬಂದ ಮೇಲಂತೂ ನಟಿ ರುಕ್ಮಿಣಿ ವಸಂತ್ ಕರ್ನಾಟಕದ ಹೊಸ ಕ್ರಶ್ ಆಗಿ ಬದಲಾಗಿದ್ದಾರೆ.ಅವರ ಸರಳವಾದ ಸೌಂದರ್ಯ, ಸಂಯಮದ ನಟನೆಗೆ ಕನ್ನಡ ಪ್ರೇಕ್ಷಕರು ಮಾರು ಹೋಗಿದ್ದಾರೆ. ಅದೆಷ್ಟೋ ಹುಡುಗರ ಮೊಬೈಲ್ ವಾಲ್ ಪೇಪರ್ ಕೂಡ ರುಕ್ಮಿಣಿ ವಸಂತ್ ಆಗಿದ್ದಾರೆ.
ಆದ್ರೆ ಪುಟ್ಟಿಗೆ ಲವ್ವರ್ ಇದ್ದರಾ ಅನ್ನೋ ಪ್ರಶ್ನೆ ಮಾತ್ರ ರುಕ್ಮಿಣಿ ಫ್ಯಾನ್ಸಲ್ಲಿ ಕಾಡ್ತಿತ್ತು. ಯಾಕಂದ್ರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ವೈರಲ್ ಆಗಿತ್ತು. ಆ ಫೋಟೋ ನೋಡಿ ರಕ್ಷಿತ್ ಫ್ಯಾನ್ಸ್ ನಿರಾಸೆಗೆ ಒಳಗಾಗಿದ್ರು.
ಹೌದು ಯುವಕನೊಬ್ಬನೊಟ್ಟಿಗೆ ರುಕ್ಮಿಣಿ ಆತ್ಮೀವಾಗಿ ಕಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಚಿತ್ರಕ್ಕೆ ರುಕ್ಮಿಣಿ ಕೂಡ “ಐ ಲವ್ ಯೂ” ಅಂತ ಪ್ರತಿಕ್ರಿಯೆ ನೀಡಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು.
ಇದೀ ಈ ಸುದ್ದಿಗೆ ಸ್ವತಃ ರುಕ್ಮಿಣಿ ವಸಂತ್ ಪ್ರತಿಕ್ರಿಯೆ ನೀಡಿದ್ದು, ಆ ವೈರಲ್ ಆಗಿರುವ ಚಿತ್ರದಲ್ಲಿರುವುದು ನನ್ನ ಗೆಳೆಯ, ನಾನು ಇನ್ನೂ ಸಿಂಗಲ್ ಎಂದು ಸ್ಪಷ್ಟನೆ ನೀಡಿದ್ದಾರೆ.
ಹೊಸಬಳಾಗಿದ್ದರೂ ನನ್ನ ಸಿನಿಮಾಗಳ ಬಗ್ಗೆ, ನನ್ನ ಖಾಸಗಿ ಜೀವನದ ಬಗ್ಗೆ ಜನ ಕೇರ್ ಮಾಡುತ್ತಿರುವುದು ಖುಷಿ ಆಗುತ್ತದೆ. ಇದೇ ಸಮಯದಲ್ಲಿ ಸುಳ್ಳು ಸುದ್ದಿಗಳು, ನೆಗೆಟಿವ್ ಕಮೆಂಟ್ಗಳು ಬೇಸರವನ್ನು ತರಿಸುತ್ತವೆ” ಎಂದಿದ್ದಾರೆ.
ಈ ಮಾತುಗಳನ್ನು ಸ್ವತಃ ರುಕ್ಮಿಣಿ ವಸಂತ್ ಬಾಯಾರೆ ಕೇಳಿ ರಕ್ಷಿತ್ ಶೆಟ್ಟಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ನಿಜ ಜೀವನದಲ್ಲೂ ರಕ್ಷಿತ್-ರುಕ್ಮಿಣಿ ಒಂದಾಗಲಿ ಅಂತ ಮನಸಾರೆ ಹಾರೈಸುತ್ತಿದ್ದಾರೆ.
- DAKSHINA KANNADA7 days ago
Ullala: 25 ಕೋಟಿ ರೂ. ಲಾಟರಿ ಒಲಿದಿದೆ ಎಂಬ ಲಿಂಕ್ ಕಳುಹಿಸಿ ಮೋಜಿನಾಟ..!
- FILM6 days ago
ಕುರೂಪಿಯಾದ ಹಾಲಿವುಡ್ ನಟಿ ಆ್ಯಮಿ ಜಾಕ್ಸನ್..!
- DAKSHINA KANNADA6 days ago
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಂಬೋ ಸರ್ಕಸ್- ಜನರನ್ನು ಬೆರಗುಗೊಳಿಸುವ ವಿಸ್ಮಯ ಪ್ರದರ್ಶನ..!
- FILM6 days ago
Film: ಹಂದಿ ಮಾಂಸ ಸೇವಿಸಿದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ..!