LATEST NEWS
‘ಬುಲ್ಡೋಜರ್ ಪಾಲಿಟಿಕ್ಸ್’ ಬಗ್ಗೆ ಜಮಾತ್ ಉಲಾಮಾದಿಂದ ಸುಪ್ರೀಂಗೆ ಅರ್ಜಿ
Published
3 years agoon
By
Adminದೆಹಲಿ: ಹಿಂಸಾಚಾರ, ಗಲಭೆ, ಕೋಮುದಳ್ಳುರಿ ಸೇರಿದಂತೆ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವವರ ಮನೆಗಳನ್ನು ಬುಲ್ಡೋಜರ್ ಬಳಸಿ ಕೆಡವುದನ್ನು ಪ್ರಶ್ನಿಸಿ ಇಸ್ಲಾಮಿಕ್ ಧಾರ್ಮಿಕ ಸಂಘಟನೆಯ ಜಮಾತ್ ಉಲಾಮಾ-ಎ-ಹಿಂದ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಮಾತ್ ಉಲಾಮಾ-ಎ-ಹಿಂದ್ ಅಧ್ಯಕ್ಷ ಅರ್ಷದ್ ಮದಾನಿ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅಪರಾಧ ತಡೆಯುವ ನೆಪದಲ್ಲಿ ಅಲ್ಪಸಂಖ್ಯಾತರನ್ನು ಹತ್ತಿಕ್ಕಲು ಬುಲ್ಡೋಜರ್ಗಳನ್ನು ಬಳಸಲಾಗುತ್ತಿದೆ. ಈ ಕೆಟ್ಟ ಪರಂಪರೆಗೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದ್ದಾರೆ.
‘ದೇಶದಲ್ಲಿ ಪ್ರಚಲಿತದಲ್ಲಿರುವ ಅಪರಾಧ ನ್ಯಾಯ ಪ್ರಕ್ರಿಯೆ ವ್ಯವಸ್ಥೆಗೂ ಬುಲ್ಡೋಜರ್ ರಾಜಕಾರಣವು ಬಾಧಕವಾಗಿದೆ. ನ್ಯಾಯ ವಿಚಾರಣೆ ಮತ್ತು ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳಿಗೆ ಪಾತ್ರವೇ ಇಲ್ಲದಂತೆ ಆಗಿದೆ.
ಸರ್ಕಾರಗಳು ಈ ದುಸ್ಸಾಹಸಗಳಿಗೆ ಶೀಘ್ರ ಕಡಿವಾಣ ಹಾಕಬೇಕು. ಮತ್ತೊಮ್ಮೆ ಇಂಥ ಪ್ರಕರಣಗಳು ಮರುಕಳಿಸದಂತೆ ಕ್ರಮ ವಹಿಸಬೇಕು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ನ್ಯಾಯಾಲಯ ಅವಕಾಶ ನೀಡಬಾರದು’ ಎಂದು ಜಮಾತ್ ತನ್ನ ಅರ್ಜಿಯಲ್ಲಿ ಕೋರಿದೆ.
LATEST NEWS
ತಂಗಿಯನ್ನೇ ಹನಿಟ್ರ್ಯಾಪ್‌ಗೆ ಬಳಸಿ 2 ಕೋಟಿ ಲೂಟಿ…ಜಿಮ್ ಮಾಲಕ ಸೇರಿ ಮೂವರು ಅರೆಸ್ಟ್!
Published
12 minutes agoon
23/11/2024By
NEWS DESK4ಮಂಗಳೂರು/ಬೆಂಗಳೂರು : ಇತ್ತೀಚೆಗೆ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಹನಿಟ್ರ್ಯಾಪ್ ಗೆ ಬ*ಲಿಯಾಗಿದ್ದು, 2 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಈ ಘಟನೆ ನಡೆದಿರೋದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ.
ಜಿಮ್ ಮಾಲಕನಿಂದ ಪರಿಚಯವಾದ ಮಹಿಳೆ :
2018ರಲ್ಲಿ ಆರ್.ಟಿ ನಗರದ ಜಿಮ್ ಗೆ ಸಂ*ತ್ರಸ್ತ ವ್ಯಕ್ತಿ ಹೋಗುತ್ತಿದ್ದರು. ಈ ವೇಳೆ ಜಿಮ್ ಮಾಲಕ ಅಜೀಂ ಉದ್ದೀನ್ ನ ಸಹೋದರಿ ತಬಸ್ಸುಮ್ ಬೇಗಂ(38) ಎಂಬ ಮಹಿಳೆಯ ಪರಿಚಯವಾಗಿತ್ತು. ಮದುವೆಯಾಗಿ ಮಕ್ಕಳನ್ನು ಹೊಂದಿದ್ದ ಹಿನ್ನೆಲೆ ಸಂತ್ರಸ್ತ ಆಕೆಯೊಂದಿಗೆ ಸಂಬಂಧ ಬೆಳೆಸಲು ಹಿಂದೇಟು ಹಾಕಿದ್ದರು. ತಬಸ್ಸುಮ್ ಬೇಗಂ ಮಾತ್ರ ವ್ಯಕ್ತಿಯನ್ನು ಬಿಡಲು ಸಿದ್ಧಳಿರಲಿಲ್ಲ. ಅವಳ ಹಠಕ್ಕೆ ಮಣಿದ ವ್ಯಕ್ತಿ ಸಂಬಂಧ ಬೆಳೆಸಿದ್ದರು.
ಬಳಿಕ ದೈಹಿಕ ಸಂಬಂಧವೂ ಬೆಳೆಯಿತು. ಆಮೇಲೆ ಶುರುವಾಯ್ತು ನೋಡಿ ಕಾಟ. ಖಾಸಗಿ ಫೋಟೋ, ವೀಡಿಯೋಗಳನ್ನು ಲೀಕ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಲು ತಬಸ್ಸುಮ್ ಶುರು ಮಾಡಿದ್ದಾಳೆ. ಈ ಗ್ಯಾಂಗ್ ನಲ್ಲಿ ಇವಳು ಮಾತ್ರವಲ್ಲ ಆಕೆಯ ಸಹೋದರ ಅಜೀಂ ಉದ್ದೀನ್(41) ಮತ್ತು ಅಭಿಷೇಕ್ ಅಲಿಯಾಸ್ ಅವಿನಾಶ್(33) ಎಂಬವರೂ ಇದ್ದಾರೆ.
ಬೆ*ದರಿಕೆ ಹಾಕಿ ಹಣ ಲೂಟಿ :
ಈ ಬ್ಲಾಕ್ ಮೇಲ್ ಒಂದಲ್ಲ ಎರಡಲ್ಲ ಬರೋಬ್ಬರಿ 5 ವರ್ಷಗಳಿಂದ ನಡೆಯುತ್ತಿತ್ತಂತೆ. ಈ ಗ್ಯಾಂಗ್ ನಲ್ಲಿ ಅಭಿಷೇಕ್ ಇದ್ದಾನಲ್ಲ ಆತ ತಾನು ಪೊಲೀಸ್ ಅಧಿಕಾರಿ ಎಂದಿದ್ದನಂತೆ. ಖಾಸಗಿ, ಫೋಟೋ, ವೀಡಿಯೋಗಳನ್ನು ಸೋರಿಕೆ ಮಾಡುವ ಬೆದ*ರಿಕೆ ಹಾಕಿದ್ದ. ಸುಳ್ಳು ಅತ್ಯಾ*ಚಾರ ಪ್ರಕರಣ ದಾಖಲಿಸುವುದಾಗಿ,. ಅಲ್ಲದೇ, ಡೆ*ತ್ ನೋಟ್ ನಲ್ಲಿ ಹೆಸರು ಬರೆದು ಆ*ತ್ಮಹ*ತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದರಂತೆ. ಇದರಿಂದ ಭಯಬಿದ್ದ ಸಂತ್ರಸ್ತ ತನ್ನ ಭವಿಷ್ಯ ನಿಧಿ ಉಳಿತಾಯದ ಹಣ ಹಿಂತೆಗೆದುಕೊಂಡಿದ್ದರು. ಅಲ್ಲದೇ, ಬ್ಯಾಂಕ್ ಸಾಲ, ಕೈ ಸಾಲವೂ ಬೆಳೆಯಿತು.
ಇದನ್ನೂ ಓದಿ : ಚಳಿ ಇದೆ ಎಂದು ಬಿಸಿನೀರು ಸ್ನಾನ ಮಾಡೋರಿಗೆ ಬಿಗ್ ಶಾಕ್ !!
ಸಂತ್ರಸ್ತ ಆರೋಪಿಗೆ ಮಾಸಿಕ 1.25 ಲಕ್ಷ ರೂ. ಹಣ ನೀಡುತ್ತಿದ್ದರು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೇರೆ ದಾರಿ ಕಾಣದೆ ಸಿಸಿಬಿ ಮೊರೆ ಹೋಗಿದ್ದಾರೆ ಸಂ*ತ್ರಸ್ತನ ದೂರಿನ ಅನ್ವಯ ಸಿಸಿಬಿ ಪೊಲೀಸರು ಮಹಿಳೆ ಹಾಗೂ ಅಜೀಂ, ಅಭಿಷೇಕ್ ನನ್ನು ಬಂಧಿಸಿದ್ದಾರೆ.
Baindooru
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
Published
21 minutes agoon
23/11/2024By
NEWS DESK2ವಿಜಯಪುರ: ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. 3ಕ್ಕೆ 3 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು, ಕೈ ನಾಯಕರ ಆತ್ಮವಿಶ್ವಾಸ ಹೆಚ್ಚಾಗಿದೆ. ಮೂರು ಉಪಚುನಾವಣೆ ಗೆದ್ದ ಕಾಂಗ್ರೆಸ್ ನಾಯಕರು ವಿಜಯೋತ್ಸವದಲ್ಲಿ ಬ್ಯುಸಿಯಾಗಿದ್ದಾರೆ.
ಕಾಂಗ್ರೆಸ್ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೆ ಬಿಜೆಪಿ ನಾಯಕರಿಗೆ ಬಹಳ ದೊಡ್ಡ ನಿರಾಸೆಯಾಗಿದೆ. ಬಿಜೆಪಿ ನಾಯಕರು ನಿರೀಕ್ಷೆ ಮಾಡದ ತೀರ್ಪನ್ನು ಮೂರು ವಿಧಾನಸಭಾ ಕ್ಷೇತ್ರದ ಮತದಾರರು ನೀಡಿದ್ದು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಸೋಲು ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ಬೇಸರಕ್ಕೆ ಕಾರಣವಾಗಿದೆ.
ಬೈಎಲೆಕ್ಷನ್ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಮನೆಯಲ್ಲಿನ ಟಿವಿ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲ್ಹಾರ ಪಟ್ಟಣದ ವೀರಭದ್ರಪ್ಪ ಬಾಗಿ ಎಂಬುವವರು ಇಂದು ಬೆಳಗ್ಗೆಯಿಂದ ಉಪಚುನಾವಣಾ ಫಲಿತಾಂಶವನ್ನು ಟಿವಿಯಲ್ಲಿ ನೋಡುತ್ತಾ ಇದ್ದರು. 3ಕ್ಕೆ 3 ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತಿದ್ದಂತೆ ಟಿವಿ ಒಡೆದು ರಾಜ್ಯ ಬಿಜೆಪಿ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರ ಒಗ್ಗಟ್ಟಿನ ಕೊರತೆಯಿಂದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಬಿಜೆಪಿ ವರಿಷ್ಠರು ಮೊದಲು ಬಿಜೆಪಿ ನಾಯಕರು, ಮುಖಂಡರ ಸಭೆ ಕರೆಯಬೇಕು. ಬಿಜೆಪಿ ನಾಯಕರ ನಡುವಿನ ಒಡಕಿನಿಂದ ಕಾರ್ಯಕರ್ತರು ಹಾಳಾಗುವ ಪರಿಸ್ಥಿತಿ ಬಂದಿದೆ ಎಂದು ವೀರಭದ್ರಪ್ಪ ಬಾಗಿ ಆಗ್ರಹಿಸಿದ್ದಾರೆ.
Baindooru
ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: KSRTC ಬಸ್ಸಿನಲ್ಲಿ ‘UPI’ ಮೂಲಕ ಟಿಕೆಟ್ ಖರೀದಿಸಲು ಅವಕಾಶ
Published
1 hour agoon
23/11/2024By
NEWS DESK2ಬೆಂಗಳೂರು : ಇಷ್ಟು ದಿನ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಜನರು ನಗದು ಹಣ ನೀಡಿ ಟಿಕೆಟ್ ಪಡೆಯುತ್ತಿದ್ದರು. ಈ ವೇಳೆ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆ ವಿಷಯವಾಗಿ ಗಲಾಟೆ ನಡೆಯುತ್ತಿತ್ತು. ಆದರೆ ಇದೀಗ ಪ್ರಯಾಣಿಕರ ಬೇಡಿಕೆಯಂತೆ ಕೆಎಸ್ಆರ್ಟಿಸಿಯು ಇನ್ನು ಮುಂದೆ ಬಸ್ಗಳಲ್ಲಿ ಯುಪಿಐ ಮೂಲಕ ಹಣ ಪೇ ಮಾಡಿ ಟಿಕೆಟ್ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಿದೆ.
ಹೌದು ಪ್ರಯಾಣಿಕರ ಬಹುದಿನಗಳ ಬೇಡಿಕೆಯಂತೆ ಇದೀಗ KSRTC ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿ, ದುಡ್ಡು ಕೊಟ್ಟು ಚಿಲ್ಲರೆ ವಿಚಾರವಾಗಿ ಕಂಡಕ್ಟರ್ ಜೊತೆಗೆ ಸಣ್ಣಪುಟ್ಟ ಕಿರಿಕ್ ಆಗುತ್ತಿದ್ದವು. ಆದರೆ ಇದೀಗ ಆ ಚಿಂತೆ ಬಿಟ್ಟುಬಿಡಿ. ಡೈನಮಿಕ್ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ರಾಜ್ಯದ 8800 ಬಸ್ಗಳಲ್ಲಿ ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ
ಆನ್ಲೈನ್ ಹಣ ಸಂದಾಯ ಮಾಡುವ ಆಪ್ ಗಳಾದ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಹಾಗೂ ಭೀಮ್ ಆಪ್ ಮೂಲಕ ಹಣ ಪಾವತಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಎಟಿಎಂ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಗಳಲ್ಲೂ ಹಣ ಸ್ವೀಕರಿಸಲಾಗುತ್ತದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.
LATEST NEWS
ಪಿಲಿಕುಳ ಕಂಬಳಕ್ಕೆ ಪ್ರಾಣಿಪ್ರಿಯರ ವಿರೋಧ !
Viral Video: ಮಿಂಚಿನ ವೇಗದಲ್ಲಿ ಊಟ ಬಡಿಸಿದ ನಾಲ್ವರು ಯುವಕರು
ವಿದ್ಯಾಸಿರಿ ವಿದ್ಯಾರ್ಥಿ ವೇತನ 2 ಸಾವಿರಕ್ಕೆ ಏರಿಕೆ: ಸಿಎಂ ಸಿದ್ದರಾಮಯ್ಯ
ಜಾರ್ಖಂಡ್ನಲ್ಲಿ ಬಿಗ್ ಟ್ವಿಸ್ಟ್; ಜೆಎಂಎಂ ಮುನ್ನಡೆ – ಎನ್ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ
ಕರ್ನಾಟಕ ಉಪಚುನಾವಣೆ : ‘ಕೈ’ ಹಿಡಿದ ಮತದಾರ…ಕಮಲಕ್ಕೆ ಶಾಕ್
ಮಹಾರಾಷ್ಟ್ರದಲ್ಲಿ ಮಹಾಯುತಿಗೆ 200+ ಕ್ಷೇತ್ರಗಳಲ್ಲಿ ಮುನ್ನಡೆ
Trending
- LATEST NEWS3 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS5 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- Baindooru1 day ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION2 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ