Connect with us

BELTHANGADY

ಜಲಜೀವನ ಮಿಷನ್ : ಬೆಳ್ತಂಗಡಿಯ ಸುಲ್ಕೇರಿ ಪ್ರಥಮ ಹರ್ ಘರ್ ಗ್ರಾಮ ಪಂಚಾಯತ್ ಘೋಷಣೆ..!

Published

on

ಜಲಜೀವನ ಮಿಷನ್ ಯೋಜನೆ ಅನುಷ್ಟಾನದಲ್ಲಿ ದಲ್ಚಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಪ್ರಥಮ ಹರ್ ಘರ್ ಗ್ರಾಮ ಪಂಚಾಯತ್ ಎಂದು ಘೋಷಿಸಲಾಗಿದೆ.

ಮಂಗಳೂರು : ಜಲಜೀವನ ಮಿಷನ್  ಯೋಜನೆ ಅನುಷ್ಟಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಪ್ರಥಮ ಹರ್ ಘರ್ ಗ್ರಾಮ ಪಂಚಾಯತ್ ಎಂದು ಘೋಷಿಸಲಾಗಿದೆ.

ದ.ಕ ಜಿಲ್ಲಾ ಪಂಚಾಯತ್ ಮಂಗಳೂರು , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬೆಳ್ತಂಗಡಿ , ಗ್ರಾಮ ಪಂಚಾಯತ್ ಸುಲ್ಕೇರಿ ಇವರ ಸಹಭಾಗಿತ್ವದಲ್ಲಿ ಸಮುದಾಯ ಸಂಸ್ಥೆ ಇವರ ಸಂಯೋಜನೆಯಲ್ಲಿ ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾವರ ,ಕುದ್ಯಾಡಿ ,ಸುಲ್ಕೇರಿ ಗ್ರಾಮಗಳನ್ನು ತಾಲ್ಲೂಕಿನ ಪ್ರಥಮ ಹರ್ ಘರ್ ಜಲ್ ಗ್ರಾಮ ವಾಗಿ ಘೋಷಣೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾರಾಯಣ ಪೂಜಾರಿ ಅಧ್ಯಕ್ಷತೆಯಲ್ಲಿ ಘೋಷಿಸಲಾಯಿತು.

ಉಪದ್ಯಾಕ್ಷರಾದ ಶ್ರೀಮತಿ ಯಶೋಧ ಎಲ್ ಬಂಗೇರ, ಗ್ರಾಮ ಪಂಚಾಯತ್ ಸದಸ್ಯರುಗಳಾದ ರವಿ ಪೂಜರಿ ಹಾರಡೆ, ಶ್ರೀಮತಿ ಗಿರಿಜ ,ಶುಭಕರ್, ಶ್ರೀಮತಿ ಪೂರ್ಣಿಮ, ಶ್ರೀಮತಿ ಪೇಮ ಉಪಸ್ಥಿತರಿದರು.

ಜೀವನ್ ಮಿಷನ್ .ಜಲಜೀವನ್ ಮಿಷನ್ ಐಇಸಿ/ಹೆಚ್.ಆರ್ಡಿ ಮುಖ್ಯಸ್ಥ ಶಿವರಾಮ್ ಪಿ.ಬಿ ಹರ್ ಘರ್ ಜಲ್ ಬಗ್ಗೆ ಮಾಹಿತಿ ನೀಡಿದರು.

ಪಂಚಾಯತ್ ಪಿಡಿಒ ಶ್ರೀಮತಿ ಗಾಯತ್ರಿ ಪ್ರಸ್ತಾವಿಕ ಮಾಹಿತಿ ನೀಡಿದರು. ಜಲ ಜೀವನ್ ಮಿಷನ್ ನ ದ.ಕ ಜಿಲ್ಲಾ ವ್ಯವಸ್ಥಾಪಕರಾದ ವಿಘ್ನೇಶ್ ರಾವ್ ಬಿ.ಕೆ ಹರ್ ಘರ್ ಜಲ್ ಗ್ರಾಮ ಘೋಷಣೆಯನ್ನು ನಿರ್ವಹಿಸಿದರು.

ಈ ಸಂದರ್ಭದಲ್ಲಿ ನಾವರ ಕುದ್ಯಾಡಿ, ಸುಲ್ಕೇರಿ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಅನುಷ್ಠಾನ ಗೊಂಡು ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕವನ್ನು ಖಾತರಿ ಪಡಿಸಿ ಸರ್ವರ ಒಪ್ಪಿಗೆಯೊಂದಿಗೆ ಹರ್ ಘರ್ ಜಲ್ ಗ್ರಾಮ ವಾಗಿ ಘೋಷಣೆಯನ್ನು ಮಾಡಲಾಯಿತು.

ಕಿರಿಯ ಅಭಿಯಂತರ ತಮ್ಮಣ್ಣ ಪಾಟೀಲು ಮಾರ್ಗದರ್ಶನ ನೀಡಿದರು. ಅಭಿಯಂತರರಾದ ಶರತ್ ಕೊಲ್ಯ. ಜೆಜೆಎಂನ ವಿಶಾಲಾಕ್ಷಿ, ಗುತ್ತಿಗೆದಾರದ ಅನಿಲ್ ಕುಮಾರ್, ಗುತ್ತಿಗೆ ವಿಭಾಗದ ತಾಂತ್ರಿಕ ಸಿಬ್ಬಂದಿ, ಪಂಚಾಯತ್ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಅಂಗನವಾಡಿ, ಇಲಾಖಾ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದು ಮಾಹಿತಿ ಪಡೆದರು. ಸುಲ್ಕೇರಿ ಪಂಚಾಯತ್ ಕಾರ್ಯದರ್ಶಿ ಕೊರಗಪ್ಪ ನ್ಯಾಕ್ ವಂದಿಸಿದರು.

BELTHANGADY

ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!

Published

on

ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ 8 ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ಏ.19ರಂದು ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲೆಯ ಮುಂದಿನ ಅವಧಿಯಲ್ಲಿ 8 ನೇ ತರಗತಿ ವಿದ್ಯಾರ್ಥಿಯಾಗಿದ್ದ ನಂದನ್ (13) ಎಂಬಾತ ಆತ್ಮಹತ್ಯೆಗೆ ಶರಣಾದ ಬಾಲಕ.

Read More..; ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ

ಪಂಜದ ದಿವಂಗತ ರೋಹಿತ್ ಗೌಡ ಎಂಬವರ ಮಗನಾಗಿದ್ದ ಈತ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ಮಾವನ ಮನೆಯಲ್ಲಿದ್ದ. ಅಲ್ಲಿಂದಲೆ ಉಪ್ಪಿನಂಗಡಿಯ ಖಾಸಗಿ ಶಾಲೆಗೆ ಹೋಗುತ್ತಿದ್ದ. ಈತ ಈ ಬಾರಿ ಏಳನೇ ತರಗತಿ ಉತ್ತೀರ್ಣನಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದ. ಏ.19ರಂದು ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದ. ಮನೆಯ ಇನ್ವಾರ್ಟರ್ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ಹೇಳಿದ್ದಾರೆ ಎನ್ನಲಾಗಿದೆ. ಇದೇ ನೆಪವನ್ನು ಇಟ್ಟುಕೊಂಡು ಮನನೊಂದ ಬಾಲಕ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎಲ್ಲಾ ವಿಚಾರವನ್ನು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Continue Reading

BELTHANGADY

ಶ್ವಾನ ಪ್ರಿಯರೇ ಎಚ್ಚರ..ಎಚ್ಚರ..! ಮಾಲಕಿಯ ತಲೆ ಸೀಳಿದೆ ಸಾಕು ನಾಯಿ..!

Published

on

ಬೆಳ್ತಂಗಡಿ : ಮನೆಯಲ್ಲಿ ಪ್ರಾಣಿಗಳನ್ನು ಸಾಕುವುದೆಂದರೆ ಹೆಚ್ಚಿನವರಿಗೆ ಇಷ್ಟ. ಅದರಲ್ಲೂ ನಾಯಿ ಪ್ರಿಯರು ಅನೇಕ ಮಂದಿ ಇದ್ದಾರೆ. ತಮ್ಮ ಮನೆಗಳಲ್ಲಿ ವಿವಿಧ ತಳಿಯ ನಾಯಿಗಳನ್ನು ಸಾಕುತ್ತಾರೆ. ಈ ನಾಯಿಗಳನ್ನು ಪ್ರೀತಿಸಿದಾಗ ಅವೂ ಅದಕ್ಕೆ ಪ್ರತಿಯಾಗಿ ಪ್ರೀತಿ ಕೊಡೋದು ಸಹಜ. ಆದರೆ, ಅದಕ್ಕೆ ವಿರುದ್ಧವಾದ ಘಟನೆಯೂ ನಡೆಯಬಹುದು ಎಂಬುದಕ್ಕೆ ಗುರುವಾರ(ಏ.18) ಬೆಳ್ತಂಗಡಿಯಲ್ಲಿ ನಡೆದ ಈ ಸುದ್ದಿ ನಿದರ್ಶನವಾಗಿದೆ.


ಮನೆ ಮಾಲಕಿ ತನ್ನ ಸಾಕು ನಾಯಿಯನ್ನು ಮುದ್ದಾಡುವಾಗ ಅದು ಏಕಾಏಕಿ ದಾ*ಳಿ ಮಾಡಿ, ತಲೆ ಭಾಗವನ್ನು ಸೀಳಿ ಹಾಕಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಮುಂಡಾಜೆ ಗ್ರಾಮ ನಿಡಿಕಲ್ ಓಂಕಾರ್ ನಿವಾಸಿ ದಿವಂಗತ ರಾಮ್ ದಾಸ್ ಎಂಬವರ ಪತ್ನಿ 49 ವರ್ಷದ ಪೂರ್ಣಿಮಾ ಗಂಭೀ*ರ ಗಾ*ಯಗೊಂಡ ಮಹಿಳೆ.

ಇದನ್ನೂ ಓದಿ : Viral Video; ಸ್ಮೋಕ್ ಬಿಸ್ಕೆಟ್ ತಿನ್ನುತ್ತಿದ್ದಂತೆಯೇ ಬಾಲಕ ಅಸ್ವಸ್ಥ

ಪೂರ್ಣಿಮಾ ತನ್ನ ಮನೆಯ ಸಾಕು ನಾಯಿಯನ್ನು ಎಂದಿನಂತೆ ಮುದ್ದಾಡುತ್ತಿದ್ದರು. ಈ ವೇಳೆ ಅವರು ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾರೆ. ಅದೇನಾಯ್ತೋ ಗೊತ್ತಿಲ್ಲ, ಸಾಕು ನಾಯಿ ಪೂರ್ಣಿಮಾ ಮೇಲೆ ದಾ*ಳಿ ನಡೆಸಿದೆ. ತಲೆ ಭಾಗ ಸೀ*ಳಿ ಹಾಕಿದೆ. ಕೈ ಕಚ್ಚಿ ಗಂಭೀ*ರ ಗಾ*ಯಗೊಳಿಸಿದೆ. ಸದ್ಯ, ಪೂರ್ಣಿಮಾ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

BELTHANGADY

ಸೌದೆ ಒಡೆಯಲೂ ಬಂತು ಯಂತ್ರ… ಹೇಗಿದೆ ನೋಡಿ..!

Published

on

ದಕ್ಷಿಣ ಕನ್ನಡ: ಇತ್ತೀಚಿನ ದಿನಗಳಲ್ಲಿ ಎಲ್ಲಾ ಕೆಲಸಗಳೂ ಯಂತ್ರದ ಮೂಲಕವೇ ನಡೆಯುತ್ತಿದೆ. ಮನೆಯಲ್ಲಿ ನೆಲ ಒರಸಲು ಮಿಷಿನ್, ಅಡುಗೆ ಮಾಡಲು ಮಿಷಿನ್ ಹಾಗೆಯೇ ವಾಷಿಂಗ್ ಮಿಷಿನ್‌ನಲ್ಲಿ ಬಟ್ಟೆ ಒಗೆದರೂ ಅದನ್ನು ಆರಿಸಲೂ ಒಂದು ಮಿಷಿನ್ ಬಂದಿದೆ. ಹೀಗೆ ಪ್ರತಿ ಕೆಲಸಕ್ಕೂ ಜನರು ಯಂತ್ರಗಳನ್ನು ಅವಲಂಭಿಸಿದ್ದಾರೆ. ಹಿಂದೆ ಮರ ಕಡಿಯಲೂ ಜನರೇ ಬೇಕಿತ್ತು. ಆದರೆ ಆ ಜಾಗಕ್ಕೂ ಮಿಷಿನ್ ಬಂತು. ಈಗ ಕಟ್ಟಿಗೆ ಒಡೆಯಲೂ ಮಿಷಿನ್ ಬಂದಿದೆ.

ಹೌದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೇ ಬೇಕಾದ ಸೈಝ್‌ಗೆ ಕಟ್ಟಿಗೆಯನ್ನು ಒಡೆಯಲು ವಿಶೇಷ ರೀತಿಯ ಯಂತ್ರವೊಂದು ಬಂದಿದೆ. ಈಗ ಬೇಸಿಗೆಯ ಬಿಸಿ ಏರಿದೆ. ಆದರೆ ನಾಳೆಯ ದಿನ ಮಳೆ ಬರಬಹುದು. ಆಗ ಸ್ನಾನ ಮಾಡಲು ನೀರು ಕಾಯಿಸಲು, ಅಡುಗೆಗೆ ಕಟ್ಟಿಗೆಯ ಉಪಯೋಗ ಆಗುತ್ತದೆ ಎಂದು ಜನರು ಈಗಲೇ ಅದನ್ನು ಸಂಗ್ರಹಿಸಿಡುತ್ತಾರೆ. ಇನ್ನು ಬೇಸಿಗೆಯಲ್ಲಿ ಸೋಲಾರ್ ಬಿಸಿ ಆದರೂ ಮಳೆಗಾಲದಲ್ಲಿ ಅದರ ಕೆಲಸ ಕಮ್ಮಿ. ಆಗ ಜನರು ಕಟ್ಟಿಗೆಗಾಗಿಯೇ ಅವಲಂಬಿತರಾಗುತ್ತಾರೆ. ಈಗ ಸೌದೆ ಒಡೆಯುವ ಕೆಲಸ ಯಂತ್ರಗಳೇ ಮಾಡುತ್ತಿದೆ. ಈ ಯಂತ್ರ ಜನರು ಪರಿಶ್ರಮಕ್ಕೆ ಬ್ರೇಕ್ ಹಾಕಿದ್ದು, ಕಷ್ಟದ ಕೆಲಸ ಸುಲಭ ಮಾಡುತ್ತಿದೆ.

ಈ ಮಿಷಿನ್‌ನ ಬೆಲೆ 2.5 ಲಕ್ಷ ರೂಪಾಯಿ. ಬೆಳ್ತಂಗಡಿ ತಾಲೂಕಿನ ಸವಣಾಲಿನ ಕೇಶವ ಗೌಡ ಎನ್ನುವವರು ಇದನ್ನು ತಮಿಳುನಾಡಿನಿಂದ ತರಿಸಿದ್ದಾರೆ. ಇದು ಪೆಟ್ರೋಲ್ ಚಾಲಿತ ಯಂತ್ರವಾಗಿದ್ದು, ಸಣ್ಣ ಕಟ್ಟಿಗೆಯಿಂದ ಹಿಡಿದು ದೊಡ್ಡ ಕಟ್ಟಿಗೆಯವರೆಗೆ ನಮಗೆ ಬೇಕಾದ ಗಾತ್ರಕ್ಕೆ ಈ ಯಂತ್ರದಲ್ಲಿ ತುಂಡು ಮಾಡಬಹುದು.

ಇದನ್ನೂ ಓದಿ : ಈಶ್ವರಪ್ಪ ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಮೋದಿ ಭಾಗಿ!?

ಯಂತ್ರ ಚಾಲನೆಗೊಂಡಂತೆ ಚೂಪಾದ ಕೊಡಲಿಯ ಮೊನೆಯೊಂದು ಮೇಲಿನಿಂದ ಕೆಳಗೆ ಬರುತ್ತದೆ. ಇದು ಕಟ್ಟಿಗೆಯನ್ನು ಕ್ಷಣ ಮಾತ್ರದಲ್ಲಿ ಸೀಳಿ ಹಾಕುತ್ತದೆ. ಈ ಕೆಲಸಕ್ಕೆ ಇಬ್ಬರು ಇದ್ದಾರೆ.

ಜನರ ಶ್ರಮದಿಂದ ದಿನಗಟ್ಟಲೇ ಆಗುವ ಕೆಲಸ ಈ ಯಂತ್ರದ ಸಹಾಯದಿಂದ ಒಂದೆರಡು ಗಂಟೆಗಳಲ್ಲಿ ಆಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಕಟ್ಟಿಗೆ ಒಡೆಯಲು ಈಗ ಕಾರ್ಮಿಕರು ಸಿಗುತ್ತಿಲ್ಲ. ಆದ್ದರಿಂದ, ಈ ಯಂತ್ರ ಜನರ ಸಹಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎನ್ನುವುದು ಜನರ ಅಭಿಪ್ರಾಯ.

Continue Reading

LATEST NEWS

Trending