Sunday, March 26, 2023

ದೈವಸ್ಥಾನದ ಕಾಣಿಕೆ ಡಬ್ಬಿ ಕಳವು ಮಾಡಿದ ಆರೋಪಿಗೆ ಜೈಲು ಶಿಕ್ಷೆ..!

ಮಂಗಳೂರು : ದೈವಸ್ಥಾನದ ಕಾಣಿಕೆ ಡಬ್ಬಿ ಕದ್ದ ಆರೋಪಿಗೆ ಜೈಲು ಶಿಕ್ಷೆ ನೀಡಿ ಮಂಗಳೂರಿನ ಮಾನ್ಯ 2ನೇ ಸಿ.ಜಿ.ಎಂ ನ್ಯಾಯಾಲಯ ತೀರ್ಪು ನೀಡಿದೆ.

ಮಾರ್ಚ್ 15, 2021 ರಲ್ಲಿ ಈ ಪ್ರಕರಣ ನಡೆದಿತ್ತು. ಅಂದು ಮದ್ಯಾಹ್ನ 2 ಗಂಟೆಗೆ ಮಂಗಳೂರು ನಗರದ ಕಂಕನಾಡಿ ಪೈಪಾಸ್ ರಸ್ತೆಯುಲ್ಲಿರುವ ಕೆ.ಆರ್.ಕಾಂಪ್ಲೆಕ್ಸ್‌ನ | ನೇ ಮಹಡಿಯಲ್ಲಿರುವ ನವೀನ್ ಎಂಬವರ ಮಾಲೀಕತ್ವದ ಐಸಿರಿ ಎಂಬ ಹೋಟೆಲ್‌ನ ಕ್ಯಾಶ್ ಕೌಂಟರ್‌ನ ಮೇಲಿಟ್ಟಿದ್ದ ಕಂಕನಾಡಿ ಪಡುಮಲೆ ಕಲ್ಲುಟ್ಟಿ ದೇವಸ್ಥಾನದ ಚಿಲ್ಲರೆ ಹಣವಿದ್ದ ಕಾಣಿಕ ಡಬ್ಬಿಯನ್ನು ಆರೋಪಿ ಬಂಟ್ವಾಳ ಇರಾ ಗ್ರಾಮದ ಕುಕ್ಕಾಜೆ ಬೈಲಿನ ಮೊಹಮ್ಮದ್‌ ಆಸೀಪ್ ಕುಕ್ಕಾಜೆ(28 ವರ್ಷ) ಮತ್ತು ಮಹಮ್ಮದ್ ಇಲಿಯಾಸ್ @ ಆಳಿಯಾರ್ (30) ಎಂಬವರು ಕಳವು ಮಾಡಿದ್ದರ ಬಗ್ಗೆ ಮಂಗಳೂರು ಪೂರ್ವ ಪೊಲೀಸರು ಮಾನ್ಯ 2ನೇ ಸಿ.ಜೆ.ಎಂ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಕಳವಿನ ಬಗ್ಗೆ ಹೊಟೇಲ್ ಮಾಲಿಕರಾದ ನವೀನ್‌ರವರು ದೂರು ದಾಖಲಿಸಿದ ಬಳಿಕ ಅಂದಿನ ಪೊಲೀಸ್ ಉಪನಿರೀಕ್ಷಕರಾದ ಜ್ಞಾನ, ಶೇಖರ್ ರವರು ಪ್ರಕರಣದ ತನಿಖೆ ನಡೆಸಿ ಆರೋಪಿ ಮಹಮ್ಮದ್ ಆಸೀಫ್ ಕುಕ್ಕಾಜೆ ಈತನಿಂದ ಕಳವು ಮಾಡಿದ ಕಾಣಿಕೆ ಡಬ್ಬಿ ಹಾಗು ಕಾಣಿಕೆ ಡಬ್ಬಿಯಲ್ಲಿದ್ದ ರೂ 705.50 ನ್ನು ವಶಪಡಿಸಿಕೊಂಡು ತನಿಖೆ ಪೂರೈಸಿ ಆರೋಪಿಗಳ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

ಈ ಪ್ರಕರಣದಲ್ಲಿ ಎಲ್ಲಾ ಸಾಕ್ಷಿಧಾರರ ವಿಚಾರಣೆಯನ್ನು ನಡೆಸಿ ವಾದ ವಿವಾದವನ್ನು ಆಲಿಸಿದ ಮಾನ್ಯ 2ನೇ ಸಿ.ಜಿ.ಎಂ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಮಧುಕರ ಪಿ. ಭಾಗವತ್ ಕೆ ರವರು 1ನೇ ಆರೋಪಿ ಮಹಮ್ಮದ್ ಆಸೀಫ್ ಕುಕ್ಕಾಜೆ ತಪ್ಪಿತಸ್ಥನೆಂದು ನಿರ್ಣಯಿಸಿ ಭಾದಂಸಂ, ಕಲಂ: 380) ರಡಿಯ ಅಪರಾಧಕ್ಕಾಗಿ | ವರ್ಷ ಜೈಲು ಶಿಕ್ಷೆ ಮತ್ತು ರೂ 2000/- ದಂಡ. ದಂಡ ಪಾವತೀಸಲು ತಪ್ಪಿದಲ್ಲಿ 10 ದಿನಗಳ ಸಾಮಾನ್ಯ ಸೆರೆಮನೆ ವಾಸ ಅನುಭವಿಸಲು ಆದೇಶ ನೀಡಿದ್ದಾರೆ.

ಈ ಪ್ರಕರಣದಲ್ಲಿ 2ನೇ ಆರೋಪಿಯಾದ ಮಹಮ್ಮದ್ ಇಲಿಯಾಸ್ ಅವರನ್ನು ಸಾಕ್ಷ್ಯಧಾರದ ಕೊರತೆಯಿಂದ ಖುಲಾಸೆ ಮಾಡಲಾಗಿದೆ.

ಸರಕಾರದ ಪರವಾಗಿ 2ನೇ ಸಿಜೆಎಂ ನ್ಯಾಯಾಲಯದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಮೋಹನ್‌ ಕುಮಾರ್.ಬಿ ಇವರು ಪ್ರಕರಣವನ್ನು ನಡೆಸಿ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here

Hot Topics