Monday, August 15, 2022

ಸಂಯುಕ್ತಾ ಹೆಗ್ಡೆ ಪರವಾಗಿ ನಿಂತ ಜಗ್ಗೇಶ್- ಬಾಲಿವುಡ್‌ ನಿಂದಲೂ ಸಂಯುಕ್ತಾ ಹೆಗ್ಡೆಗೆ ಬೆಂಬಲ..!

ಸಂಯುಕ್ತಾ ಹೆಗ್ಡೆ ಪರವಾಗಿ ನಿಂತ ಜಗ್ಗೇಶ್- ಬಾಲಿವುಡ್‌ ನಿಂದಲೂ ಸಂಯುಕ್ತಾ ಹೆಗ್ಡೆಗೆ ಬೆಂಬಲ..!

ಬೆಂಗಳೂರು: ಬೆಂಗಳೂರು ಉದ್ಯಾನದಲ್ಲಿ ಸ್ಪೋರ್ಟ್ಸ್ ಉಡುಗೆ ಧರಿಸಿ ಪ್ರಾಕ್ಟಿಸ್ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದ ನಟಿ ಸಂಯುಕ್ತಾ ಹೆಗ್ಡೆ ಪರವಾಗಿ ಹಲವರೂ ಜನ, ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ್ದು, ರಮ್ಯಾ ಕೂಡ ಬೆಂಬಲಿಸಿದ್ದಾರೆ.

ನಟ ನವರಸನಾಯಕ ಜಗ್ಗೇಶ್​ ಕೂಡ ಇದೀಗ ಸಂಯುಕ್ತಾ ಹೆಗ್ಡೆ ಪರ ಮಾತನಾಡಿದ್ದಾರೆ. ಈಗಷ್ಟೇ ನಟಿ ರಮ್ಯಾ ಸಹ ಸಂಯುಕ್ತಾ ಹೆಗ್ಡೆ ಟ್ವೀಟ್​ ರೀಟ್ವಿಟ್​ ಮಾಡಿಕೊಂಡು, ‘ಪೂರ್ತಿ ವಿಡಿಯೋವನ್ನು ನಾನು ನೋಡಿದ್ದೇನೆ.

ಸಂಯುಕ್ತಾ ಮತ್ತು ಆಕೆಯ ಫ್ರೆಂಡ್ಸ್​ ಅನ್ನು ನಡೆಸಿಕೊಂಡ ರೀತಿ ನೋಡಿ ನನಗೆ ಶಾಕ್​ ಆಯಿತು. ಕಾರಣ ಏನೇ ಇರಬಹುದು ಆದರೆ, ನೈತಿಕ ಪೊಲೀಸ್​ ಗಿರಿ, ಇನ್ನೊಬ್ಬರನ್ನು ನಿಂದಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದರು. ಇದೀಗ ಜಗ್ಗೇಶ್​ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್‌ ನಿಂದಲೂ ಸಂಯುಕ್ತಾ ಹೆಗ್ಡೆಗೆ ಬೆಂಬಲ : ಬಾಲಿವುಡ್‌ ನಿಂದಲೂ ಸಂಯುಕ್ತಾ ಹೆಗ್ಡೆಗೆ ಬೆಂಬಲ ಸಿಗುತ್ತಿದೆ. ಬಾಲಿವುಡ್​ ನಟಿ ರಿಚಾ ಚಡ್ಡಾ ಸಹ ಕೈ ಜೋಡಿಸಿದ್ದು ಸಂಯುಕ್ತಾ ಪರ ಟ್ವಿಟ್​ ರೀಟ್ವಿಟ್​ ಮಾಡಿ ಕವಿತಾ ರೆಡ್ಡಿಯ ಚಳಿ ಬಿಡಿಸಿದ್ದಾರೆ.

ಆ ರೀತಿಯ ಬಟ್ಟೆ ಹಾಕಿದ್ದಾರೆಂದ ಮಾತ್ರಕ್ಕೆ ಅವರನ್ನು ನೀವು ಏನು ಬೇಕಾದರೂ ಮಾಡಬಹುದು, ಅವರ ಮೇಲೆ ಕೈ ಮಾಡಬಹುದು ಎಂಬುದು ತಪ್ಪು ಮತ್ತು ನಿಮಗೆ ಆ ಯಾವ ಹಕ್ಕೂ ಇಲ್ಲ.

ಜಗತ್ತಿಗೆ ನೈತಿಕ ಪೊಲೀಸ್​ಗಿರಿಯ ಅಗತ್ಯ ಇಲ್ಲ. ಅದರಲ್ಲೂ ನಿಮ್ಮಂತ ಆಂಟಿಗಳಿಂದ ಅಲ್ಲ. ಗೌರವ ಎರಡೂ ಕಡೆಯ ರಸ್ತೆಯಿದ್ದಂತೆ’ ಎಂದಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಶಿರಾಡಿ ಘಾಟ್ ಹೆದ್ದಾರಿಗೆ ಶಾಶ್ವತ ಯೋಜನೆ ರೂಪಿಸುವಂತೆ ಗಡ್ಕರಿಗೆ ಮನವಿ ಮಾಡಿದ ಸಂಸದ ಡಾ. ಹೆಗ್ಗಡೆ

ಮಂಗಳೂರು: ರಾಜಧಾನಿ ಬೆಂಗಳೂರು ಮತ್ತು ಕರಾವಳಿಯನ್ನು ಬೆಸೆಯುವ ಶಿರಾಡಿ ಘಾಟ್ ಹಾದುಹೋಗುವ ಹೆದ್ದಾರಿ ಬಗ್ಗೆ ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಕಳೆದ ಶನಿವಾರ ದೆಹಲಿಯಲ್ಲಿ...

ಆ.18ರಂದು ಮಕ್ಕಳ “ಶ್ರೀಕೃಷ್ಣ ವೇಷ” ಸ್ಪರ್ಧೆ-ಪ್ರದೀಪ್ ಕಲ್ಕೂರ

ಮಂಗಳೂರು: ಮಂಗಳೂರು ನಗರದ ಕದ್ರಿ ಶ್ರಿ ಮಂಜುನಾಥೇಶ್ವರ ದೇವಾಲಯದ ಅಂಗಳದಲ್ಲಿ ಆಗಸ್ಟ್ 18ರಂದು ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ "ಶ್ರೀಕೃಷ್ಣ ವೇಷ" ಸ್ಪರ್ಧೆ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕಲ್ಕೂರ...

ಟೇಕ್ವಾಂಡೋ ಚಾಂಪಿಯನ್‌ಶಿಪ್‌: ಮಂಗಳೂರಿನ ಸಂಮಿತಾಳಿಗೆ ಬೆಳ್ಳಿ ಪದಕ

ಮಂಗಳೂರು: ಮಲೇಷ್ಯಾದ ಕೌಲಲಾಂಪುರದಲ್ಲಿರುವ ಜುರಾ ಸ್ಟೇಡಿಯಂನಲ್ಲಿ ನಡೆದ 14ನೇ ಅಂತಾರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಚಾಂಪಿಯನ್‌ ಶಿಪ್‌ನಲ್ಲಿ ಮಹಿಳೆಯರ ಕಿರಿಯ ವಿಭಾಗದಲ್ಲಿ ಮಂಗಳೂರಿನ ಸಂಮಿತಾ ಅಲೆವೂರಾಯ ಅವರು ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.ಸಂಮಿತಾ...