ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನದ ಹಿನ್ನಡೆಗೆ ಕಾಂಗ್ರೆಸ್ ಕಾರಣವಾಗಿದೆ. ಕಾಂಗ್ರೆಸ್ ಲಸಿಕೆಯ ಬಗ್ಗೆ ಜನರಲ್ಲಿ ಮಾಡಿದ ಅಪಪ್ರಚಾರದಿಂದ ಜನತೆಯಲ್ಲಿ ಲಸಿಕೆಯ ಬಗ್ಗೆ ಗೊಂದಲಗಳು ಉಂಟಾಗಿದ್ದುವು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರರಾದ ಜಗದೀಶ್ ಶೇಣವಾ ಆರೋಪಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಾಂಗ್ರೆಸ್ ಜನರಲ್ಲಿ ಹುಟ್ಟು ಹಾಕಿದ್ದ ಅಪನಂಬಿಕೆಗಳನ್ನು ಸರ್ಕಾರ ಮುತುವರ್ಜಿ ವಹಿಸಿ ದೂರಮಾಡಿದ್ದು ವಾಕ್ಸಿನೇಶನ್‌ಗಾಗಿ ಆಂದೋಲವೇ ಆರಂಭಿಸಿದೆ. ಸರ್ಕಾರದ ಕಾರ್ಯಕ್ಕೆ ಬಿಜೆಪಿಯು ಬೆಂಬಲ ನೀಡುತ್ತಿದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಮೇರಾ ಬೂತ್ ವ್ಯಾಕ್ಸಿನೇ಼ಶನ್ ಯುಕ್ತ್ ಆಂದೋಲನವನ್ನು ರಾಷ್ಟ್ರವ್ಯಾಪಿ ಆಯೋಜಿಸಿದ್ದು, ಜಿಲ್ಲೆಯಲ್ಲೂ ಈ ಆಂದೋಲವನ್ನು ಜನರ ಆಂದೋಲನಾವನ್ನಾಗಿ ರೂಪುಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಇಂದು ಜೂನ್ 25. ತುರ್ತು ಪರಿಸ್ಥಿತಿ ಘೋಷಿಸಿದ ಕರಾಳ ದಿನವಾಗಿದ್ದು, ಪ್ರತೀ ಜಿಲ್ಲೆಗಳಲ್ಲೂ ಈ ನಿಟ್ಟಿನಲ್ಲಿ ವೆಬೆಕ್ಸ್ ಹಾಗೂ ಸಾಮಾಜಿಕ ಜಾಲಾ ತಾಣಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೀಸಾ ಬಂಧಿತರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.