Thursday, August 11, 2022

‘ಎತ್ತಿನಹೊಳೆ ಯೋಜನೆಗೆ ಬಿಜೆಪಿ ಮೂರೂವರೆ ವರ್ಷದಲ್ಲಿ ಏನೂ ಮಾಡಿಲ್ಲ’- ಕಾಂಗ್ರೆಸ್‌ನ ಐವನ್ ಡಿಸೋಜಾ ವ್ಯಂಗ್ಯ

ಮಂಗಳೂರು: ಎತ್ತಿನಹೊಳೆ ಯೋಜನೆಗೆ ಮೂರುವರೆ ವರ್ಷದಲ್ಲಿ ಏನೂ ಮಾಡಿಲ್ಲ. ಆದರೆ ಈಗ ಅನುದಾನ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಐವನ್ ಡಿಸೋಜಾ ನಿನ್ನೆ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ವ್ಯಂಗ್ಯವಾಡಿದರು.


ಅವರು ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿ “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಮಂಡಿಸಿರುವ ಬಜೆಟ್‌ ಪ್ರಗತಿಯ ಸಂಕೇತ ಆಗಿಲ್ಲ.

ಈ ಬಜೆಟ್‌ನಿಂದ ಜನರ ಬದುಕನ್ನು ಸುಧಾರಣೆ ಮಾಡಲು ಸಾಧ್ಯವಿಲ್ಲ. ಪ್ರಸ್ತುತ ಅನುಭವಿಸುತ್ತಿರುವ ಆರ್ಥಿಕ ಹಿನ್ನೆಡೆಗೆ ಇನ್ನಷ್ಟು ಹೊಡೆತ ನೀಡಲಿದೆ.

ಬಜೆಟ್ ಅಂದರೆ ಕೇವಲ ಸಹಾಯ ಮಾಡುವುದು ಮಾತ್ರವಲ್ಲ. ರಾಜ್ಯದ ಪ್ರಗತಿ ಯಾವ ರೀತಿಯಲ್ಲಿದೆ ಎನ್ನುವುದನ್ನು ತಿಳಿ ಹೇಳುವುದೇ ಬಜೆಟ್ ಎಂದು ಕಾಂಗ್ರೆಸ್ ಹೇಳಿದ್ದಾರೆ.  ಸಾಲದ ಹೊರೆಯನ್ನು ಜನರ ಮೇಲೆ ಹಾಕಿದ ಬಜೆಟ್ ಇದಾಗಿದೆ.

ಸಾಲದ ಹೊರೆಯನ್ನು ಜನರ ಮೇಲೆ ಹೊರಿಸಲಾಗಿದೆ. ರೈತರಿಗೆ, ಉದ್ಯಮಕ್ಕೆ, ವ್ಯಾಪಾರಿಗಳಿಗೆ, ಜನಸಾಮಾನಾನ್ಯರಿಗೆ ಏನೂ ಪ್ರಯೋಜನವೇ ಇಲ್ಲ.

ಇದರಲ್ಲಿ ಕಾರ್ಯಗತವಾಗುವ ಯಾವುದೇ ಯೋಜನೆ ಇಲ್ಲ. ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ 1000 ಕೋಟಿ ರೂಪಾಯಿ ಯೋಜನೆ ಮೀಸಲು ಇಟ್ಟಿದ್ದಾರೆ. ಆದರೆ ಇನ್ನೊಂದೆಡೆ ನಮ್ಮ ಹೋರಾಟವನ್ನು ನಿಲ್ಲಿಸಲು ಪ್ರಯತ್ನ ಮಾಡಿದರು.

ನೀವು ದುಡ್ಡು ಅದಕ್ಕೆ ಮೀಸಲಿಟ್ಟರೆ ಆ ಯೋಜನೆ ಆಗುತ್ತದೆಯೋ ಇಲ್ಲವೋ ಎನ್ನುವುದನ್ನೂ ತಿಳಿಸಿ” ಎಂದು ಸವಾಲು ಹಾಕಿದರು.

ಈ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಲಾಗುತ್ತಿದೆ. ಅನೇಕ ಯೋಜನೆಗಳನ್ನು ಈ ಹಿಂದೆ ಇರುವುದಕ್ಕೆ ಮತ್ತೆ ಅನುದಾನ ಇಟ್ಟಿದ್ದಾರೆ.

 

ಈ ಬಜೆಟ್‌ ಜನರನ್ನು ಸಂಪೂರ್ಣವಾಗಿ ಮೋಸ ಮಾಡುವ ರೀತಿಯಲ್ಲಿ ನೀವು ಮಾಡಿದ್ದೀರಿ ಎಂದು ಐವನ್ ಆಕ್ರೋಶ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

Hot Topics

ಹಂತಕರನ್ನು ಬಂಧಿಸಿದ ಪೊಲೀಸರಿಗೆ ಧನ್ಯವಾದ ತಿಳಿಸಿದ ಪ್ರವೀಣ್ ಕುಟುಂಬ

ಪುತ್ತೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿನ್ನೆಲೆ ಪ್ರವೀಣ್ ನೆಟ್ಟಾರು ಕುಟುಂಬಸ್ಥರು ಪೋಲೀಸ್ ಇಲಾಖೆಗೆ ಧನ್ಯವಾದ ಹೇಳಿದ್ದಾರೆ.ಈ ಬಗ್ಗೆ...

ಪ್ರವೀಣ್ ಹತ್ಯೆ ಪ್ರಕರಣ: ಪ್ರಮುಖ ಮೂವರು ಆರೋಪಿಗಳ ಬಂಧನ-ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆ

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದು, ಗೌಪ್ಯ ಸ್ಥಳದಲ್ಲಿ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಶಿಯಾಬ್, ಬಶೀರ್, ರಿಯಾಝ್ ಎಂದು...

ಕೃಷಿಕರೇ ಗಮನಿಸಿ: ಕಿಸಾನ್ ಸಮ್ಮಾನ್ ನಿಧಿಯ ಪರಿಹಾರಕ್ಕಾಗಿ ಆ. 15 ರೊಳಗೆ ಇ-ಕೆವೈಸಿ ಕಡ್ಡಾಯ

ಮಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ನಾಗರಿಕರ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಅಥವಾhttp://pmkisan.gov.in ಪೋರ್ಟಲ್‌ನ ಫಾರ್ಮರ್ಸ್ ಕೋರ್ನರ್ ಮೂಲಕ ಆಧಾರ್ ಸಂಖ್ಯೆ ಹಾಗೂ ಮೊಬೈಲ್...