Monday, January 24, 2022

ಮೃತದೇಹ ಹೊತ್ತು ದುರ್ಗಮ ಹಾದಿಯಲ್ಲಿ 25 ಕಿ.ಮೀ ಕ್ರಮಿಸಿ ಶವ ಹಸ್ತಾಂತರ ಮಾಡಿದ ಐಟಿಬಿಟಿ ಯೋಧರು.!

ಮೃತದೇಹ ಹೊತ್ತು ದುರ್ಗಮ ಹಾದಿಯಲ್ಲಿ 25 ಕಿ.ಮೀ ಕ್ರಮಿಸಿ ಶವ ಹಸ್ತಾಂತರ ಮಾಡಿದ ಐಟಿಬಿಟಿ ಯೋಧರು.!

ನವದೆಹಲಿ: ಇಂಡೊ- ಟಿಬೆಟಿಯನ್ ಗಡಿ ಪೊಲೀಸ್ ಐಟಿಬಿಪಿ ಸಿಬ್ಬಂದಿ ವ್ಯಕ್ತಿಯೊಬ್ಬನ ಮೃತ ದೇಹವನ್ನು ಹೊತ್ತುಕೊಂಡು ಉತ್ತರಾಖಂಡದ ಪರ್ವತ ಪ್ರದೇಶದಲ್ಲಿ ಸುಮಾರು 8 ಗಂಟೆಗಳ ಕಾಲ ಕಾಲ್ನಡಿಗೆ ಮೂಲಕ 25 ಕಿ.ಮೀ ಕ್ರಮಿಸಿ, ಆತನ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪಿಥೋರ್‌ಗಡದ ಸುಯಾನಿ ಗ್ರಾಮದ ಬಳಿ ಕುದುರೆ ಸಹಾಯಕನ ಶವ ಪತ್ತೆಯಾಗಿತ್ತು.

ಐಟಿಬಿಪಿಯ 14ನೇ ಬೆಟಾಲಿಯನ್‌ನ ಎಂಟು ಸಿಬ್ಬಂದಿಯ ತಂಡ ಶನಿವಾರ ಬೆಳಿಗ್ಗೆ 11.30ಕ್ಕೆ ಚಾರಣವನ್ನು ಪ್ರಾರಂಭಿಸಿ, ಸಂಜೆ 7.30ರ ಸುಮಾರಿಗೆ ಮುನ್ಸಾರಿ ಗ್ರಾಮವನ್ನು ತಲುಪಿದೆ.

ಪ್ರರ್ವತ ಪ್ರದೇಶಗಳ ಕಿರುದಾರಿಯ ಮೂಲಕ ಮೃತ ದೇಹವನ್ನು ಸ್ಟ್ರೆಚರ್‌ನಲ್ಲಿ ಹೊತ್ತು, ಮಳೆಯ ನಡುವೆಯೂ 25 ಕಿ.ಮೀ ದೂರವನ್ನು ಕಾಲ್ನಡಿಗೆ ಮೂಲಕ ಕ್ರಮಿಸಿದ್ದಾರೆ ಎಂದು ಐಟಿಬಿಪಿ ವಕ್ತಾರರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಐಟಿಬಿಪಿ ಪೊಲೀಸ್ ತಂಡ, ಗಾಯಗೊಂಡಿದ್ದ ಮಹಿಳೆಯೊಬ್ಬರನ್ನು 15 ಗಂಟೆಗಳ ಕಾಲ ಕ್ರಮಿಸಿ ಪಿಥೋರ್‌ಗಡದಲ್ಲಿರುವ ಅವರ ಮನೆಗೆ ತಲುಪಿಸಿತ್ತು.

Hot Topics

‘ಸುಳ್ಳುಗಳ ಮೂಲಕ ನಾರಾಯಣಗುರುವಿಗೆ ಮಾಡಿದ ಅಪಚಾರವನ್ನು ಮುಚ್ಚಿಟ್ಟುಕೊಳ್ಳಲಾಗದು’

ಮಂಗಳೂರು: ಸುಳ್ಳುಗಳ ಮೂಲಕ ಸಾಮಾಜಿಕ ಸುಧಾರಣೆಯ ಹರಿಕಾರ  ನಾರಾಯಣ ಗುರು ಅವರಿಗೆ ಮಾಡಿದ ಅಪಚಾರವನ್ನು ಬಿಜೆಪಿ ಮುಚ್ಚಿಟ್ಟುಕೊಳ್ಳಲಾಗದು ಎಂದು ಸಿಪಿಐಎಂ ಹೇಳಿದೆ.ಕೇರಳ ರಾಜ್ಯ ಸರಕಾರ ಸೂಚಿಸಿದ ನಾರಾಯಣಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ...

ಯಕ್ಷಗಾನ ಕಲಾವಿದ ಗೋವಿಂದ ಶೇರಿಗಾರ್ ನಿಧನ: ಯಕ್ಷಗಾನ ಕಲಾರಂಗ ಸಂತಾಪ

ಕುಂದಾಪುರ: ಗಂಡುಕಲೆಯಲ್ಲಿ ಸ್ತ್ರೀ ವೇಷಧಾರಿ ಪಾತ್ರ ಮಾಡುತ್ತಿದ್ದ ಮಾರ್ಗೋಳಿ ಗೋವಿಂದ ಶೇರಿಗಾರ್ (96) ನಿಧನರಾಗಿದ್ದು ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.ಬಡಗುತಿಟ್ಟು ಪುರಾಣ ಪ್ರಸಂಗಗಳಲ್ಲಿ ಅತ್ಯಂತ ಪ್ರಸಿದ್ಧವಾದ ದೇವಿ ಮಹಾತ್ಮೆ ಪ್ರಸಂಗಗಳಲ್ಲಿ ಮೊದಲು...

ಮಲಗಿದ್ದ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಸೊಸೆ

ಚಿತ್ರದುರ್ಗ: ಅತ್ತೆ-ಸೊಸೆ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ.ರುದ್ರಮ್ಮ(60) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಆರೋಪಿ ಸೊಸೆ ಮುದ್ದಕ್ಕ (38)ಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ...