Home ಪ್ರಮುಖ ಸುದ್ದಿ ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ

ಮಂಗಳೂರು: ಕೊರೋನ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರೈಲು ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್ ತೆರೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ಕೊಂಕಣ ರೈಲ್ವೆ ಹಾಗೂ ದಕ್ಷಿಣ ರೈಲ್ವೆಗೆ ಸುತ್ತೋಲೆ ಹೊರಡಿಸಿತ್ತು.

ಈ ನಿಟ್ಟಿನಲ್ಲಿ ಇದೀಗ ಮಂಗಳೂರಿನಲ್ಲಿ ರೈಲ್ವೆ ಬೋಗಿಗಳನ್ನು ಐಸೋಲೇಶನ್ ವಾರ್ಡ್ ಗಳಾಗಿ ಪರಿವರ್ತನೆ ಕಾರ್ಯ ಆರಂಭಗೊಂಡಿದೆ.

ಮಂಗಳೂರು ರೈಲ್ವೇ ಡಿಪೋದ 20 ಬೋಗಿಗಳನ್ನು ಗುರುತಿಸಿದ್ದು, ಕೊರೊನಾ ಸಂಬಂಧಿಸಿದಂತೆ ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್ ತೆರೆಯಲು ಸಿದ್ಧತೆ ನಡೆಸಿದೆ ಎಂದು ದಕ್ಷಿಣ ರೈಲ್ವೇಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಈಗಾಗಲೇ ಐಸೋಲೇಶನ್ ವಾರ್ಡ್ ಆಗಿ ಬದಲಾಯಿಸುವ ಕಾರ್ಯ ಆರಂಭಗೊಂಡಿದ್ದು, ಒಂದು ಬೋಗಿ ಒಂದು ಭಾಗದಲ್ಲಿ ವೈದ್ಯಕಿಯ ಸಿಬ್ಬಂದಿಗಳಿಗೆ ಮಿಸಲಿಟ್ಟಿದ್ದು, ಉಳಿದ 8 ವಿಭಾಗಗಳನ್ನು ರೋಗಿಗಳಿಗೆ ಮೀಸಲಿಡಲಾಗಿದೆ.

ಒಂದು ಬೋಗಿಯಲ್ಲಿರುವ ನಾಲ್ಕು ಬಾತ್ ರೂಮ್ ಗಳಲ್ಲಿ ಒಂದನ್ನು ಸ್ನಾನದ ಕೋಣೆಯಾಗಿ ಪರಿವರ್ತಿಸಲಾಗುತ್ತಿದೆ.

ಎಪ್ರಿಲ್ 30 ರೊಳಗೆ ಎಲ್ಲಾ ಬೋಗಿಗಳನ್ನು ಐಸೋಲೇಶನ್ ವಾರ್ಡ್ ಆಗಿ ಪರಿವರ್ತಿಸಬೇಕೆಂದು ರೈಲ್ವೆ ಇಲಾಖೆ ತಿಳಿಸಿದ್ದು, ಕಾರ್ಯ ಭರದಿಂದ ಸಾಗಿದೆ.

ಅಲ್ಲದೆ ತಮಿಳುನಾಡಿನ ಪೆರಂಬೂರಿನಲ್ಲಿ ಕೂಡ ಖಾಲಿ ಬೋಗಿ ಹಾಗೂ ಸ್ಲೀಪರ್ ಕೋಚ್ ಗಳನ್ನು ಐಸೋಲೇಶನ್ ವಾರ್ಡ್ ಆಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ.

ಸೀಟುಗಳನ್ನು ತೆಗೆದು ಅಗತ್ಯ ಕ್ವಾರಂಟೈನ್ ಸೌಲಭ್ಯ ನೀಡಲು, ಟಾಯ್ಲೆಟ್, ಬಾತ್ ರೂಂ ಸೌಲಭ್ಯ ಕಲ್ಪಿಸಲು ಕೋಚ್ ಗಳ ಮರು ವಿನ್ಯಾಸದ ಕಾರ್ಯ ಭರದಿಂದ ಸಾಗಿದೆ.

- Advertisment -

RECENT NEWS

ಜುಲೈವರೆಗೆ ಉಡುಪಿ ಕೃಷ್ಣನ ದರ್ಶನ ಭಾಗ್ಯ ಇಲ್ಲ

20 ರಿಂದ 30 ದಿನಗಳ ನಂತರ ಪರಿಸ್ಥಿತಿ ನೋಡಿ ಅವಕಾಶ ಉಡುಪಿ: ರಾಜ್ಯ ಸರಕಾರ ಈಗಾಗಲೇ ಜೂನ್ 8ರ ನಂತರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಅದರಂತೆ ಈಗಾಗಲೇ ರಾಜ್ಯದ ಮುಜರಾಯಿ ಇಲಾಖೆ...

ಕೃಷ್ಣನಗರಿಯಲ್ಲಿ ನಿಲ್ಲದ ಕೊರೊನಾ ಪ್ರವಾಹ: ಇಂದು ಮತ್ತೆ 121 ಮಂದಿಗೆ ಪಾಸಿಟಿವ್..!

ಉಡುಪಿಗೆ ಕಂಟಕವಾದ ಮಹಾರಾಷ್ಟ್ರ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆ..! ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಹೆಮ್ಮಾರಿ ಕೊರೊನಾ ಪ್ರವಾಹ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ದಿನೇ ದಿನೇ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ 121...

ಮತ್ತೆ ಜಿಲ್ಲೆಯಲ್ಲಿ ಕೊರೊನಾ ಸದ್ದು: ಇಂದು 24 ಮಂದಿಗೆ ಕೊರೊನಾ ಸೋಂಕು ದೃಢ…..!!

ದ.ಕ ಜಿಲ್ಲೆಯಲ್ಲಿಂದು 24 ಮಂದಿಗೆ ಕೊರೊನಾ ಪಾಸಿಟಿವ್… ಸೋಂಕಿತರ ಸಂಖ್ಯೆ 167ಕ್ಕೆ ಏರಿಕೆ… ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡ 24 ಮಂದಿಗೆ ಮಹಾಮಾರಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ...

ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದು ಹೆಮ್ಮಾರಿಯಂತೆ ವರ್ತಿಸಿದ ಬಿಜೆಪಿ ನಾಯಕಿ ಸೊನಾಲಿ ಪೋಗಟ್..

ಟಿಕ್ ಟಾಕ್ ಸ್ಟಾರ್, ಬಿಜೆಪಿ ನಾಯಕಿ ಸೊನಾಲಿ ಫೋಗಟ್ ದರ್ಪ: ವಿಡಿಯೋ ವೈರಲ್... ನವದೆಹಲಿ: ಟಿಕ್ ಟಾಕ್ ಸ್ಟಾರ್, ಬಿಜೆಪಿ ನಾಯಕಿ ಸೊನಾಲಿ ಫೋಗಟ್ ಅಧಿಕಾರಿಯೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್...