Connect with us

DAKSHINA KANNADA

Big Breaking: ಮಂಗಳೂರು ಕುಕ್ಕರ್ ಬಾಂಬ್​ ಸ್ಪೋಟದ ಹೊಣೆ ಹೊತ್ತ ಐಸಿಸ್‌..!

Published

on

ಮಂಗಳೂರು: ಮೂರು ತಿಂಗಳ ಹಿಂದೆ ನಗರದ ಕಂಕನಾಡಿ ಗರೋಡಿ ಬಳಿ ಆಟೋದಲ್ಲಿ ಕುಕ್ಕರ್ ಬಾಂಬ್​ ಸ್ಫೋಟದ ಹೊಣೆಯನ್ನು ಐಸಿಸ್‌ ಉಗ್ರ ಸಂಘಟನೆ ಹೊತ್ತಿದೆ.

   ಆರೋಪಿ ಶಾರೀಕ್‌

ಐಸಿಸ್​ ಸಂಘಟನೆಯ ವಕ್ತಾರ ಐಎಸ್​​ಕೆಪಿ (Islamic State – Khorasan Province) ನಡೆಸುವ ವಾಯ್ಸ್ ಆಫ್ ಕೂರಸ ಮ್ಯಾಗಜೀನ್‌ನಲ್ಲಿ ಕರ್ನಾಟಕದ ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರು ಸ್ಪೋಟದ ಹೊಣೆ ಹೊತ್ತಿರುವ ಕುರಿತಾಗಿ ಪ್ರಕಟಿಸಲಾಗಿದೆ.
ಇತ್ತೀಚೆಗೆ ಶಂಕಿತ ಉಗ್ರ ಶಾರೀಕ್​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​​ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿತ್ತು. ಶಂಕಿತ ಉಗ್ರ ಶಾರೀಕ್​ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು.

ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ. ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ತಪ್ಪಿಸಿ ಮುಂದಿನ ದಿನಗಳಲ್ಲಿ ಮತ್ತೆ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಹಾಕಿದ್ದರು.

ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​​ ಮಾಧ್ಯಮ ಹೇಳಿಕೆ

ಘಟನೆ ವಿವರ
2022ರ ನವೆಂಬರ್ 19 ರ ಬೆಳಗ್ಗೆ ಮೈಸೂರಿನಿಂದ ಮಂಗಳೂರಿನ ಕದ್ರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಸ್ಪೋಟಿಸಲೆಂದೇ ತಾನು ತಯಾರಿಸಿದ್ದ ಕುಕ್ಕರ್ ಬಾಂಬ್ ಸಮೇತ ಮಂಗಳೂರಿನ ಕೆ.ಎಸ್.ಆರ್.ಟಿ.ಸಿ ಬಸ್​ಗೆ ಹತ್ತಿ ಮಂಗಳೂರಿನ ಪಡೀಲಿನಲ್ಲಿ ಇಳಿದಿದ್ದ.

ನಂತರ ಪಂಪ್ ವೆಲ್ ಕಡೆ ನಡೆದುಕೊಂಡು ಬಂದಿದ್ದ. ಅರ್ಧ ದಾರಿಯಲ್ಲಿ ಪಂಪ್‌ವೆಲ್‌ಗೆ ಎಂದು ರಿಕ್ಷಾವೊಂದಕ್ಕೆ ಹತ್ತಿದ ಆದರೆ ರಿಕ್ಷಾ ಕಂಕನಾಡಿ ಗರೋಡಿ ಬಳಿ ತಲುಪುತ್ತಿದ್ದಂತೆ ಬ್ಲಾಸ್ಟ್ ಆಗಿತ್ತು.

ಈ ಘಟನೆಯಲ್ಲಿ ಶಾರೀಕ್ ಹಾಗೂ ಆಟೋ ಡ್ರೈವರ್‌ ಪುರುಷೋತ್ತಮ ಪೂಜಾರಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಶಾರೀಕ್ ಎನ್‌ಐಎ ವಶದಲ್ಲಿದ್ದು, ಪುರುಷೋತ್ತಮ ಪೂಜಾರಿ ಆರೋಗ್ಯ ಚೇತರಿಕೆ ಕಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಉಗ್ರ ಗೋಡೆ ಬರಹದ ಆರೋಪಿಯೂ ಇವನೇ
2020 ರಲ್ಲಿ ನಗರದ ನ್ಯಾಯಲಯ ಆವರಣ ಮತ್ತು ಕದ್ರಿ ಕೈಬಟ್ಟಲ್‌ ರಸ್ತೆ ಪಕ್ಕದ ಆವರಣಗೋಡೆಯಲ್ಲಿ ಬರೆಯಲ್ಪಟ್ಟಿದ್ದ ಉಗ್ರ ಗೋಡೆ ಬರಹವನ್ನೂ ಈತನೇ ಬರೆದಿದ್ದ. ಈ ವೇಳೆ ಈತನನ್ನು ಬಂಧಿಸಿ ಜಾಮೀನು ಮೇಲೆ ಬಿಡುಗಡೆಗೊಂಡು ತಲೆಮರೆಸಿಕೊಂಡಿದ್ದ.

DAKSHINA KANNADA

ಪದ್ಮರಾಜ್ ಪೂಜಾರಿ ಪ್ರಚಾರ ಶೈಲಿ..! ಜನಾರ್ದನ ಪೂಜಾರಿಯನ್ನ ನೆನೆದ ಜನ…!

Published

on

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರ ಪ್ರಚಾರ ಶೈಲಿಗೆ ಜನ ಜನಾರ್ದನ ಪೂಜಾರಿಯವರನ್ನು ನೆನಪಿಸಿಕೊಳ್ತಾ ಇದ್ದಾರೆ. ಗುರುವಿನಂತೆ ಶಿಷ್ಯ ಕೂಡಾ ಪ್ರಚಾರ ಮಾಡ್ತಾ ಇರೋದು ನೋಡಿದ ಜನ ಇವರು ನಿಜವಾಗಿಯೂ ಜನಾರ್ದನ ಪೂಜಾರಿ ಅವರಂತೆ ಜನನಾಯಕ ಅಂತಿದ್ದಾರೆ.

ಜನಾರ್ದನ ಪೂಜಾರಿ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕೊನೆಯ ಸ್ಪರ್ಧೆಯನ್ನ ನೀಡಿದ್ದರು. ಹತ್ತು ವರ್ಷದ ಬಳಿಕ ಅವರ ಶಿಷ್ಯ ಪದ್ಮರಾಜ್ ಪೂಜಾರಿ ಈಗ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಪದ್ಮರಾಜ್ ಪೂಜಾರಿ ಅವರು ಜನರೊಂದಿಗೆ ಬೆರೆಯುವ ರೀತಿ, ಜನರಿಗೆ ತೋರಿಸುವ ಪ್ರೀತಿ, ಹಾಗೂ ಪ್ರಚಾರದ ವೇಳೆ ಅವರು ವರ್ತಿಸೋ ರೀತಿ ನೋಡಿದ ಸಾಕಷ್ಟು ಜನ ಜನಾರ್ಧನ ಪೂಜಾರಿ ಅವರ ಚುನಾವಣ ಪ್ರಚಾರದ ವೈಖರಿಯನ್ನು ನೆನಪಿಸಕೊಳ್ಳುವಂತೆ ಮಾಡಿದೆ.

ಸಂಸದರಾಗಿ , ಕೇಂದ್ರ ಸಚಿವರಾಗಿ, ಬಡವರ ಬಂಧು ಅಂತ ಕರೆಸಿಕೊಂಡಿದ್ದ ಜನಾರ್ದನ ಪೂಜಾರಿ ಅವರಿಗೆ ಚುನಾವಣೆಯಲ್ಲಿ ಸೋಲಾಗಿದ್ರೂ, ಜನರು ಮಾತ್ರ ಅವರನ್ನು ಮರೆತಿಲ್ಲ. ಜನಾರ್ದನ ಪೂಜಾರಿಯವರು ರಾಜಕೀಯದಿಂದ ದೂರ ಉಳಿದು ವರ್ಷಗಳೇ ಕಳೆದ್ರು ಜನರಿಗೆ ಅವರ ಮೇಲಿರೋ ಪ್ರೀತಿ ಅಭಿಮಾನ ಕಡಿಮೆ ಆಗಿಲ್ಲ. ಚುನಾವಣಾ ಸಮುಯದಲ್ಲಿ ಪ್ರಚಾರಕ್ಕೆ ಇಳಿಯುತ್ತಿದ್ದ ಜನಾರ್ದನ ಪೂಜಾರಿ ಅವರ ಪ್ರಚಾರ ವೈಖರಿಯನ್ನಂತು ಜನ ಮರೆಯೋದೆ ಕಷ್ಟ. ಮುಂಜಾನೆಯಿಂದ ರಾತ್ರಿ ವರೆಗೂ ಅವರು ಮತಯಾಚನೆ ಮಾಡುತ್ತಿದ್ದ ರೀತಿಗೆ ಜನರೇ ದಂಗಾಗಿ ಹೋಗ್ತಾ ಇದ್ರು. ಇನ್ನು ನಡೆದುಕೊಂಡು ಮತಯಾಚಿಸೋ ಜನಾರ್ದನ ಪೂಜಾರಿ ಅವರ ಜೊತೆ ಕಾರ್ಯಕರ್ತರು ಓಡಿಕೊಂಡು ಹೋಗಬೇಕು ಅನ್ನುವಷ್ಟು ವೇಗವಾಗಿ ಸಾಗ್ತಾ ಇದ್ರು. ಅದೇ ಸೇಮ್ ಟು ಸೇಮ್ ಅನ್ನುವಂತೆ ಪದ್ಮರಾಜ್ ಪೂಜಾರಿ ಕೂಡಾ ಪ್ರಚಾರ ಮಾಡ್ತಾ ಇದ್ದಾರೆ.

ಪದ್ಮರಾಜ್ ಪೂಜಾರಿಯವರು ಒಮ್ಮೆ ಬೈಕ್‌ನಲ್ಲಿ ಮತಯಾಚನೆಗೆ ತೆರಳಿದ್ರೆ, ಮತ್ತೊಮ್ಮೆ ಜೀಪ್ ಏರಿ ರೋಡ್ ಶೋ ನಡೆಸ್ತಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಪಾದಯಾತ್ರೆ ಮಾಡಿದ್ರೆ ಅವರ ವೇಗದ ನಡಿಗೆ ಮತ್ತು ಓಡಿಕೊಂಡು ಹೋಗುವ ಅವರ ಶೈಲಿ ಜನಾರ್ದನ ಪೂಜಾರಿ ಅವರನ್ನು ನೆನಪಿಸುತ್ತದೆ. ಎಲ್ಲೇ ಹೋದ್ರು ಜನ ಪದ್ಮರಾಜ್ ಅವರನ್ನು ಮುತ್ತಿಕೊಂಡು ಪ್ರೀತಿಯಿಂದ ಮಾತಾಡಿಸ್ತಾ ಇದ್ದಾರೆ. ಅದೇ ರೀತಿ ಪದ್ಮಾರಾಜ್ ಕೂಡಾ ಜನರಿಗೆ ಬಹಳಷ್ಟು ಹತ್ತಿರವಾಗಿ ಅಭಿಮಾನ ಪ್ರೀತಿಯನ್ನ ಗಳಿಸಿಕೊಂಡಿದ್ದಾರೆ. ಸದ್ಯಕ್ಕಂತು ಜನ ಜನಾರ್ದನ ಪೂಜಾರಿ ಅವರ ಸ್ಥಾನ ತುಂಬಲು ಪದ್ಮರಾಜ್ ಅವರೇ ಸರಿಯಾದ ಅಭ್ಯರ್ಥಿ ಅಂತ ಮಾತನಾಡುತ್ತಿದ್ದು, ಅವರ ಗೆಲುವಿಗೆ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ಉಡುಪಿ: ಅನ್ಯಕೋಮಿನವರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ : ಸುನಿಲ್ ಕುಮಾರ್

Continue Reading

BELTHANGADY

ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!

Published

on

ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ 8 ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ಏ.19ರಂದು ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲೆಯ ಮುಂದಿನ ಅವಧಿಯಲ್ಲಿ 8 ನೇ ತರಗತಿ ವಿದ್ಯಾರ್ಥಿಯಾಗಿದ್ದ ನಂದನ್ (13) ಎಂಬಾತ ಆತ್ಮಹತ್ಯೆಗೆ ಶರಣಾದ ಬಾಲಕ.

Read More..; ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ

ಪಂಜದ ದಿವಂಗತ ರೋಹಿತ್ ಗೌಡ ಎಂಬವರ ಮಗನಾಗಿದ್ದ ಈತ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ಮಾವನ ಮನೆಯಲ್ಲಿದ್ದ. ಅಲ್ಲಿಂದಲೆ ಉಪ್ಪಿನಂಗಡಿಯ ಖಾಸಗಿ ಶಾಲೆಗೆ ಹೋಗುತ್ತಿದ್ದ. ಈತ ಈ ಬಾರಿ ಏಳನೇ ತರಗತಿ ಉತ್ತೀರ್ಣನಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದ. ಏ.19ರಂದು ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದ. ಮನೆಯ ಇನ್ವಾರ್ಟರ್ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ಹೇಳಿದ್ದಾರೆ ಎನ್ನಲಾಗಿದೆ. ಇದೇ ನೆಪವನ್ನು ಇಟ್ಟುಕೊಂಡು ಮನನೊಂದ ಬಾಲಕ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎಲ್ಲಾ ವಿಚಾರವನ್ನು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Continue Reading

DAKSHINA KANNADA

ತ್ರಿಶೂರ್ ಪೂರಂ..! ದೇಶದ ಹೆಮ್ಮೆಯ ಉತ್ಸವ..!

Published

on

ವಿವಿಧತೆಯಲ್ಲಿ ಏಕತೆ ಕಾಣುವ ನಮ್ಮ ದೇಶ ಹಲವು ಸಂಸ್ಕೃತಿ, ಕಲೆ, ಆಚರಣೆ, ಭಾಷೆ, ಜಾತಿ, ಧರ್ಮದ ಮೂಲಕ ವಿಶ್ವದ ಗಮನ ಸೆಳೆದಿದೆ. ದಿಪಾವಳಿ, ಹೋಳಿ, ಈದ್ , ಕ್ರಿಸ್ಮಸ್‌, ಹೀಗೆ ಹಲವು ಹಬ್ಬಗಳು ರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಆದ್ರೆ, ಇನ್ನೂ ಕೆಲವು ಹಬ್ಬಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿದೆ. ಅದರಲ್ಲಿ ವಿಶೇಷ ಹಬ್ಬವಾಗಿ ಕೇರಳದಲ್ಲಿ ಆಚರಿಸುವ ತ್ರಿಶೂರ್ ಪೂರಂ ಸದ್ಯ ಏಷ್ಯಾದಲ್ಲೇ ಅತೀ ಹೆಚ್ಚು ಜನರು ಭಾಗವಹಿಸುವ ಉತ್ಸವವಾಗಿ ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದೆ.

ಏನಿದು ತ್ರಿಶೂರ್ ಪೂರಂ ಹಬ್ಬ

ತ್ರಿಶೂರ್ ಪೂರಂ ಅನ್ನೋದು ತ್ರಿಶೂರಿನ ಶಿವ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವ. ಮಲೆಯಾಳಂ ಕ್ಯಾಲೆಂಡರ್ ಪ್ರಕಾರ ಪೂರಂ ನಕ್ಷತ್ರದಲ್ಲಿ ಚಂದ್ರೋದಯದ ವೇಳೆಯಲ್ಲಿ ನಡೆಯುವ ಉತ್ಸವ ಇದು. ತ್ರಿಶೂರ್ ನಲ್ಲಿರೋ ವಡಕ್ಕುನಾಥನ್‌ ಅರ್ಥಾತ್ ಶಿವ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಇದು. ಆನೆಗಳ ಮೂಲಕ ದೇವರನ್ನು ಹೊತ್ತುಕೊಂಡು ದೇವಸ್ಥಾನದ ಬಾಗಿಲು ಪ್ರವೇಶ ಮಾಡೋದು ಈ ಉತ್ಸವದ ವಿಶೇಷ. ಹೀಗಾಗಿ  ಸಾವಿರಾರು ವಿದೇಶಿಗರು ಉತ್ಸವ ನೋಡಲು ಆಗಮಿಸ್ತಾರೆ ಅನ್ನೋದೇ ವಿಶೇಷ.

ತ್ರಿಶೂರ್ ಪೂರಂ ಹಬ್ಬದ ಹಿನ್ನೆಲೆ

ರಾಮವರ್ಮ ಕುಂಞಿಪಿಳ್ಳೆ ಎಂಬ ಕೊಚ್ಚಿನ್ ಮಹಾರಾಜ 17 ನೇ ಶತಮಾನದಲ್ಲಿ ಅರುಟ್ಟುಪುಳ ಪೂರಂ ಎಂಬ ಉತ್ಸವವನ್ನು ನಡೆಸಿಕೊಂಡು ಬಂದಿದ್ದರು. ಅರುಟ್ಟುಪುಳ ಪೂರಂ ಎಂಬ ಒಂದು ದಿನದ ಉತ್ಸವಕ್ಕೆ ತ್ರಿಶೂರು ಸೇರಿದಂತೆ ಸುತ್ತಮುತ್ತಲಿನ ದೇವಸ್ತಾನಗಳು ಇದರಲ್ಲಿ ಭಾಗಿ ಆಗುತ್ತಿದ್ದವು. 1796 ರಲ್ಲಿ ಮಳೆಯ ಕಾರಣಿದಿಂದ ತ್ರಿಶೂರ್‌ನಿಂದ ಹೊರಟಿದ್ದ ದೇವಾಲಯ ತಂಡಗಳಿಗೆ ಅರುಟ್ಟುಪುಳ ಪೂರಂ ಉತ್ಸವದಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿತ್ತು. ಇದರಿಂದ ಕೋಪಗೊಂಡಿದ್ದ ತ್ರಿಶೂರಿನ ರಾಜ ಶಕ್ತನ್ 1796 ರಲ್ಲೇ ತ್ರಿಶೂರಿನಲ್ಲೇ ಈ ಪೂರಂ ಉತ್ಸವ ಆರಂಭಿಸಿದ್ರು ಅನ್ನೋ ಐತಿಹಾಸಿಕ ಕಥೆ ಇದೆ. ಅಂದಿನಿಂದ ತ್ರಿಶೂರಿನ ಹತ್ತು ದೇವಾಲಯಗಳು ಒಟ್ಟಾಗಿ ತ್ರಿಶೂರ್ ಪೂರಂ ಆಚರಿಸಲು ಆರಂಭವಾಯ್ತು ಅನ್ನೋ ದಾಖಲೆಗಳು ಸಿಗುತ್ತದೆ.

ಧರ್ಮಾತೀತವಾಗಿ ನಡೆಯುವ ಪೂರಂ ಉತ್ಸವ

ತ್ರಿಶೂರ್ ಪೂರಂ ಅಂದ ತಕ್ಷಣ ನೆನಪಾಗುವುದು ಅಲ್ಲಿ ಕಾಣಸಿಗುವ ಸರ್ವಧರ್ಮ ಸಮನ್ವಯತೆ. ಇಂತಹ ದೃಶ್ಯ  ಬಹುಶಃ  ದೇಶದ ಬೇರೆಲ್ಲೂ ಕಾಣಲು ಸಿಗಲಾರದು. ತ್ರಿಶೂರ್ ಪೂರಂ ಉತ್ಸವದಲ್ಲಿ ಪ್ರತಿ ವರ್ಷ ಹೊಸ ಕೊಡೆಗಳನ್ನು ತಯಾರಿಸಲಾಗುತ್ತದೆ. ಕುಡವಟ್ಟಂ ಎಂದು ಕರೆಯುವ ಈ ಕೊಡೆಗಳ ವಿಶೇಷ ಆಕರ್ಷಣೆಗೆ ಕ್ರೈಸ್ತ ಸಮೂದಾಯದವರ ಕೊಡುಗೆ ಇದ್ರೆ, ಪೂರಂಗೆ ಬೇಕಾದ ಪೆಂಡಾಲ್ ಹಾಕೋದು ಇಲ್ಲಿನ ಮುಸ್ಲಿಂ ಸಮೂದಾಯದವರು. ಇನ್ನು ಉತ್ಸವ ನೋಡಲು ಹಿಂದೂ ಮುಸ್ಲಿಂ ಕ್ರೈಸ್ತ ಹೀಗೆ ಎಲ್ಲಾ ಧರ್ಮದವರೂ ಆಗಮಿಸುವುದು ಇಲ್ಲಿನ ವಿಶೇಷ. ಇದೇ ಕಾರಣಕ್ಕೆ ಈ ತ್ರಿಶೂರ್ ಪೂರಂ ಇಂದು ಜಗತ್ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ತ್ರಿಶೂರ್ ಪೂರಂ ಹಬ್ಬ ಹೇಗೆ ನಡೆಯುತ್ತದೆ

ತ್ರಿಶೂರು ಹಾಗೂ ಸುತ್ತಮುತ್ತಲಿನ ಹತ್ತು ದೇವಲಾಯಗಳಿಂದ ಆನೆಯ ಮೂಲಕ ದೇವರನ್ನು ಹೊತ್ತು ಶಿವ ದೇವಾಲಯಕ್ಕೆ ತರಲಾಗುತ್ತದೆ. ಒಂದೊಂದು ದೇವಸ್ಥಾನದಿಂದ ದೇವರನ್ನು ಹೊತ್ತು ಬಾಗಿಲು ದಾಟಿ ಬರುವ ಆನೆಗಳನ್ನು ನೋಡಲು ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಈ ವೇಳೆ ಮೊಳಗುವ ಪಂಚ ವಾದ್ಯಗಳನ್ನು ಕೇಳಲೆಂದೇ ಕೆಲವರು ಬರುವುದಿದೆ. ಕಣಿಮಂಗಲಂ ಶಾಸ್ತಾವು ದೇವಾಲಯದಿಂದ ಆರಂಭವಾಗುವ ಈ ಉತ್ಸವ ಬಳಿಕ ಒಂದೊಂದೆ ದೇವಸ್ಥಾನದಿಂದ ಬರಲು ಆರಂಭವಾಗುತ್ತದೆ. ಚಂಡೆ, ಮದ್ದಳೆ, ಕಹಳೆ,ತಾಳ ಹಾಗೂ ಎಡಕ್ಕ ಹೀಗೆ ಪಂಚವಾದ್ಯದ ಮೆರವಣಿಗೆ ನಡೆಯುತ್ತದೆ. ಹತ್ತು ಆನೆಗಳು ದೇವಾಲಯದ ಮುಂದೆ ನಿಂತಿದ್ದರೆ , ಐವತ್ತಕ್ಕೂ ಹೆಚ್ಚು ಆನೆಗಳು ಉತ್ಸವದಲ್ಲಿ ಭಾಗಿಯಾಗುತ್ತದೆ. ಚಿನ್ನದ ಹಣೆಪಟ್ಟಿ, ಚಿನ್ನದ ಪ್ರಭಾವಳಿಯನ್ನು ಹಿಡಿದು , ಪಾರೆಮೆಕ್ಕಾವು ಮತ್ತು ತಿರುವಂಬಾಡಿ ಎಂಬ ಎರಡು ತಂಡಗಳು ಪೂರಂ ನಡೆಯುವ ಸ್ಥಳದಲ್ಲಿ ಮುಖಾಮುಖಿಯಾಗಿ ನಿಂತು ಛತ್ರಿ ವಿನಿಯಮ ಮಾಡಿಕೊಳ್ಳುವ ದೃಶ್ಯ ಪೂರಂನಲ್ಲಿ ವಿಶೇಷ ಅನುಭವ ನೀಡುವ ದೃಶ್ಯ ಕೂಡಾ ಹೌದು. ಕುಡಮಟ್ಟಂ ಅಂತ ಇದನ್ನು ಕರೆಯಲಾಗುತ್ತಿದ್ದು ಶಿವದೇವಲಾಯದ ಪಶ್ಚಿಮ ಗೋಪುರದ ಬಳಿ ಇದು ಸಂಪನ್ನಗೊಳ್ಳುತ್ತದೆ.

 

Continue Reading

LATEST NEWS

Trending