ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಕೊನೆಯ ಪಂಚಾಯಿತಿ ನಿನ್ನೆ ನಡೆಯಿತು. ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ. ಫಿನಾಲೆ ವಾರಕ್ಕೂ ಮುನ್ನ ಇಬ್ಬರು ಆಚೆ ಬೀಳಲಿದ್ದಾರೆ.
ಈ ವಾರ ರಜತ್, ಭವ್ಯಾ ಗೌಡ, ಗೌತಮಿ, ಉಗ್ರಂ ಮಂಜು ಮತ್ತು ಧನರಾಜ್ ನಾಮಿನೇಟ್ ಆಗಿದ್ದರು. ಅಂದಹಾಗೆ ಶನಿವಾರದ ಎಪಿಸೋಡ್‌ನಲ್ಲಿ ಗೌತಮಿ ಜಾಧವ್ ಅವರು ಎಲಿಮಿನೇಟ್ ಆಗಿದ್ದಾರೆ. ಆದರೆ, ಎಲಿಮಿನೇಟ್ ಆಗುವ ಎರಡನೇ ಸ್ಪರ್ಧಿ ಯಾರು ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಕೊನೆಯ ಎಲಿಮಿನೇಷನ್ ವಾರದ ಪಂಚಾಯಿತಿಯಲ್ಲಿ ನಡೆದಿದೆ. ಈ ವಾರ ನಡೆಯಬೇಕಿದ್ದ ಮಿಡ್ ವೀಕ್ ಎಲಿಮಿನೇಷನ್ ಕಾರಣಾಂತರಗಳಿಂದ ನಡೆಯದಿದ್ದ ಕಾರಣ ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಸುದೀಪ್ ಮೊದಲೇ ಹೇಳಿ ಬಿಟ್ಟರು.
ಹನುಮಂತು, ಮೋಕ್ಷಿತಾ ಮತ್ತು ತ್ರಿವಿಕ್ರಮ್ ಅವರುಗಳು ಮೊದಲೇ ಫಿನಾಲೆ ವಾರ ತಲುಪಿಬಿಟ್ಟಿದ್ದರು. ಉಳಿದವರು ರಜತ್, ಉಗ್ರಂ ಮಂಜು, ಧನರಾಜ್, ಭವ್ಯ ಗೌಡ ಮತ್ತು ಗೌತಮಿ. ಈ ಐವರಲ್ಲಿ ಗೌತಮಿ ನಿನ್ನೆಯ ಎಪಿಸೋಡ್‌ನಲ್ಲಿ ಎಲಿಮಿನೇಟ್ ಆಗಿದ್ದಾರೆ.
ಆದರೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಗೌತಮಿ ಜಾಧವ್ ನಂತರ ದೊಡ್ಮನೆಯಿಂದ ಮತ್ತೊಬ್ಬರು ಔಟ್ ಆಗಿದ್ದಾರೆ. ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡುತ್ತಲೇ ಬಂದಿದ್ದ ‘ಅಣ್ಣ ಜಿಂಕೆ’ ಎಂದೇ ಖ್ಯಾತಿಯಾಗಿದ್ದ ಧನರಾಜ್ ಆಚಾರ್ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.
ಧನರಾಜ್ ಅವರು ಆರಂಭದಲ್ಲಿ ಅಷ್ಟಾಗಿ ಆಟದಲ್ಲಿ ತೊಡಗಿಸಿಕೊಳ್ಳದೆ ಒಂಟಿಯಾಗಿ ಇದ್ದರು. ಹನುಮಂತನ ವೈಲ್ಡ್ ಕಾರ್ಡ್ ಎಂಟ್ರಿ ಬಳಿಕ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಬದಲಾಗಿದ್ದ ಧನರಾಜ್ ಆಚಾರ್ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.
ಫಿನಾಲೆ ವೀಕ್‌ಗೆ ಒಂದು ಹೆಜ್ಜೆ ಬಾಕಿ ಇರುವಾಗಲೇ ಎಡವಿದ್ದು ನೆಗೆಟಿವ್ ಪಾಯಿಂಟ್ ಆಗಿರಬಹುದು ಎಂಬುದು ವೀಕ್ಷಕರ ಅಭಿಪ್ರಾಯ. ಕಳೆದ ವಾರ ಟಾಸ್ಕ್‌ನಲ್ಲಿ ಧನರಾಜ್ ಆಚಾರ್ ಮಾಡಿಕೊಂಡ ಸಣ್ಣ ಎಡವಟ್ಟು ಇಂದು ಅವರ ಎಲಿಮಿನೇಷನ್‌ಗೆ ಕಾರಣವಾಗಿರಬಹುದು ಎಂಬುದು ಬಿಗ್‌ಬಾಸ್ ವೀಕ್ಷಕರ ಮಾತಾಗಿದೆ. ಅದರಲ್ಲೂ ಧನರಾಜ್ ಆಚಾರ್ ನಾಮಿನೇಟ್ ಆದ ದಿನದಿಂದ ಕೇವಲ ಮೂರು ದಿನಗಳ ಕಾಲ ಮಾತ್ರ ಓಟಿಂಗ್ ಮಾಡಬಹುದಿತ್ತು. ಇದು ಕೂಡ ಧನರಾಜ್ ಆಚಾರ್ ಎಲಿಮಿನೇಟ್ ಆಗಲು ಕಾರಣವಾಯಿತು ಎನ್ನಬಹುದು.
ಶನಿವಾರದ ಎಪಿಸೋಡ್‌ನಲ್ಲಿ ಒಬ್ಬರು ಮತ್ತು ಭಾನುವಾರದ ಎಪಿಸೋಡ್‌ನಲ್ಲಿ ಒಬ್ಬರು ಮನೆಯಿಂದ ಆಚೆ ಬಂದಿದ್ದಾರೆ. ಶನಿವಾರ ಗೌತಮಿ ಜಾಧವ್ ಎಲಿಮಿನೇಟ್ ಆಗಿದ್ದಾರೆ. ಭಾನುವಾರದ ಎಪಿಸೋಡ್‌ನಲ್ಲಿ ಧನರಾಜ್ ಆಚಾರ್ ಹೊರಬಂದಿದ್ದಾರೆ ಎನ್ನಲಾಗಿದೆ.
ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಇದೀಗ ಸೆಮಿ ಫಿನಾಲೆ ವಾರ ಮುಕ್ತಾಯವಾಗುತ್ತಾ ಬಂದಿದೆ. ಇಂದು ಕಿಚ್ಚ ಸುದೀಪ್ ವಾರಾಂತ್ಯದ ಪಂಚಾಯ್ತಿ ನಡೆಸಿಕೊಡಲಿದ್ದಾರೆ. ಇದರಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ. ಇದು ನಾಮಿನೇಟ್ ಆಗಿರುವ ಸ್ಪರ್ಧಿಗಳ ಆಟವನ್ನು ನಿರ್ಧಾರ ಮಾಡಲಿದೆ.
ಇನ್ನೊಂದು ಕಡೆ ಮಧ್ಯವಾರದಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಹಾಗೆ ಮಾಡಿಲ್ಲ. ಈಗ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ನಡೆಯೋದು ಪಕ್ಕಾ ಆಗಿದೆ. ಇಂದು (ಜ.18) ಎಲಿಮಿನೇಷನ್ ನಡೆಯಲಿದ್ದು, ಒಬ್ಬರು ಹೊರ ಹೋಗುವುದು ಪಕ್ಕಾ ಎನ್ನಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಳ್ಳಲು ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಮುಂದಿನ ವೀಕೆಂಡ್‌ನಲ್ಲಿ ಫಿನಾಲೆ ನಡೆಯಲಿದೆ. ಅಲ್ಲಿಯವರೆಗೆ ಯಾರು ಇರುತ್ತಾರೆ ಹಾಗೂ ಯಾರು ಹೋಗುತ್ತಾರೆ ಎಂದು ಊಹಿಸೋದು ಕೂಡ ಕಷ್ಟ ಎಂಬಂತಾಗಿದೆ. ಹೀಗಿರುವಾಗಲೇ ಶನಿವಾರ ಸ್ಪರ್ಧಿಗಳಿಗೆ ಒಂದು ಶಾಕಿಂಗ್ ವಿಚಾರ ಇರಲಿದೆ ಎಂದು ಹೇಳಲಾಗುತ್ತಿದೆ.
ಕೆಲವು ವರದಿಗಳ ಪ್ರಕಾರ ಇಂದು ಶೋ ಆರಂಭಕ್ಕೂ ಮೊದಲೇ ಅಥವಾ ಶೋ ಕೊನೆಯಲ್ಲಿ ಎಲಿಮಿನೇಷನ್ ನಡೆಯೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾನುವಾರ ಕೂಡ ಒಂದು ಎಲಿಮಿನೇಷನ್ ನಡೆಯಲಿದೆ. ಈ ವಾರ ಒಟ್ಟಾರೆ ಇಬ್ಬರು ಅಥವಾ ಮೂವರು ಹೊರ ಹೋಗಲಿದ್ದಾರೆ.
ಸದ್ಯ ಹನುಮಂತ ಅವರು ಎಲಿಮಿನೇಷನ್‌ನಿಂದ ಬಚವ್ ಆಗಿದ್ದಾರೆ. ಮೋಕ್ಷಿತಾ ಪೈ ಅವರನ್ನು ಹನುಮಂತ ಸೇವ್ ಮಾಡಿದ್ದು, ಫಿನಾಲೆ ವಾರ ತಲುಪಿದ್ದಾರೆ. ಇನ್ನು ಡಬಲ್ ಎಲಿಮಿನೇಷನ್ ಇರುವ ಕಾರಣ ನಾಮಿನೇಟ್ ಆಗಿರುವ ಗೌತಮಿ, ರಜತ್, ಮಂಜು, ಭವ್ಯ ಹಾಗೂ ಧನರಾಜ್ ಮೊಗದಲ್ಲಿ ಆತಂಕ ಕಾಡುತ್ತಿದೆ. ನಗು ಎನ್ನುವುದು ಮಾಯವಾಗಿ ಕಣ್ಣೀರು ಬಾಕಿ ಉಳಿದಿದೆ. ಕೊನೆ ಹಂತಕ್ಕೆ ಬಂದು ಹೊರ ನಡೆದರೆ ಹೇಗೆ ಎಂದು ಯೋಚನೆಯಲ್ಲಿ ತೊಡಗಿದ್ದಾರೆ. ಹನುಮಂತು, ಮೋಕ್ಷಿತಾ ಅವರನ್ನು ಉಳಿಸಿಕೊಂಡಿದ್ದು ಧನರಾಜ್‌ಗೆ ಕೈಕೊಟ್ಟಿದ್ದಾರೆ.
ಈ ವಾರ ಯಾರಿಗೆ ಮನೆಯಿಂದ ಗೇಟ್‌ಪಾಸ್ ?
ಉಗ್ರಂ ಮಂಜು, ರಜತ್ ಮತ್ತು ಭವ್ಯಾ ಗೌಡ ಅವರ ಆಟಕ್ಕೆ ಹೋಲಿಕೆ ಮಾಡಿದರೆ ಗೌತಮಿ ಈ ವಾರ ಹೊರ ಹೋಗೋದು ಬಹುತೇಕ ಖಚಿತ. ಅಷ್ಟೇ ಅಲ್ಲದೆ, ಅವರಿಗೆ ಫ್ಯಾನ್ಸ್ ಫಾಲೋವಿಂಗ್ ಕೂಡ ತೀರಾ ಕಡಿಮೆ ಇದೆ. ಇನ್ನು ಇವರನ್ನು ಹೊರತುಪಡಿಸಿ ಧನರಾಜ್ ಅವರು ತಮ್ಮ ಆಟಕ್ಕೆ ಫುಲ್ ಸ್ಟಾಪ್ ಇಡುವ ಸಾಧ್ಯತೆ ಇದೆ.
ಆಟದ ವೈಖರಿ, ಮನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ ಇವೆಲ್ಲವನ್ನೂ ಗಮನಿಸಿದರೆ ಧನರಾಜ್ ಉತ್ತಮವಾಗಿದ್ದಾರೆ. ಆದರೆ ಈ ವಾರದ ಟಾಸ್ಕ್ ಒಂದರಲ್ಲಿ ನಿಯಮದ ಅರಿವಿಲ್ಲದೆ, ಕನ್ನಡಿ ನೋಡಿಕೊಂಡು ಟಾಸ್ಕ್ ಕಂಪ್ಲೀಟ್ ಮಾಡಿದ್ದರು. ಈ ಒಂದು ತಪ್ಪಿನಿಂದಾಗಿ ಅವರಿಗೆ ಓಟಿಂಗ್ ವ್ಯವಸ್ಥೆಯಲ್ಲಿ ಪೆಟ್ಟು ಬೀಳುವ ಸಾಧ್ಯತೆ ಇದೆ.
ಅಲ್ಲದೆ ನಾಮಿನೇಟ್ ಆದ ಪ್ರತಿ ಸ್ಪರ್ಧಿಗಳಿಗೆ ವಾರದಲ್ಲಿ 5 ದಿನ ಓಟ್ ಮಾಡುವ ಅವಕಾಶವಿರುತ್ತದೆ. ಆದರೆ ಈ ಬಾರಿ ಧನರಾಜ್ ಅವರಿಗೆ 3 ದಿನವಷ್ಟೇ ಅದರ ಅವಕಾಶ ಸಿಗಲಿದೆ. ಹೀಗಾಗಿ ಕಡಿಮೆ ಓಟ್ ಇವರ ಪಾಲಾಗುವ ಸಾಧ್ಯತೆ ಇದೆ. ಹೀಗಾಗಿ ಈ ವಾರ ಗೌತಮಿ ಮತ್ತು ಧನರಾಜ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಾಧ್ಯತೆ ಹೆಚ್ಚಿದೆ.
ಮಂಗಳೂರು/ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11′ ಯಶಸ್ವಿಯಾಗಿ ಮುನ್ನುಗುತ್ತಿದ್ದು, ಫೈನಲ್ ಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಇದೇ ಸೀಸನ್ ನಿಂದ ಎಲಿಮಿನೇಟ್ ಆಗಿದ್ದ ಕೆಲ ಸ್ಪರ್ಧಿಗಳು ಮತ್ತೆ ದೊಡ್ಮನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ.
ಈಗಾಗಲೇ ಸೀಸನ್ 10ರ ಕೆಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ಹೋಗಿದ್ದಾರೆ. ಅಲ್ಲದೇ ಚೆಂದನವನದ ತಾರೆಗಳಾದ ಅದಿತಿ, ಶರಣ್ ಅವರು ಹನುಮಂತುಗೆ ಗ್ರ್ಯಾಂಡ್ ಫಿನಾಲೆ ಟಿಕೆಟ್ ನೀಡಿ ಶುಭ ಹಾರೈಸಿದ್ದರು.
ಆದರೆ ಡಬಲ್ ಎಲಿಮಿನೇಶನ್ನಿಂದ ಶಾಕ್ ಆಗಿದ್ದ ಮನೆಮಂದಿಗೆ, ಇದೇ ಸೀಸನ್‌ನ ಎಲಿಮಿನೇಟ್ ಆದ ಸ್ಪರ್ಧಿಗಳು ಮತ್ತೆ ಮನೆಗೆ ಅತಿಥಿಗಳಾಗಿ ಆಗಮಿಸಿರುವುದು ಮತ್ತೆ ಆರಂಭದಲ್ಲಿದ್ದ ಖುಷಿ, ಸಂತೋಷ ಅದೇ ಸಡಗರ ಮರಳಿ ಬಂದಂತೆ ಆಗಿದೆ. ಇದರಿಂದ ಖುಷಿ ಪಟ್ಟಿರುವ ಹಾಲಿ ಸ್ಪರ್ಧಿಗಳು ಒಬ್ಬರನ್ನ ಒಬ್ಬರು ಎತ್ತಿಕೊಂಡು, ತಬ್ಬಿಕೊಂಡು ಸಖತ್ ಖುಷಿ ಪಟ್ಟಿದ್ದಾರೆ.
ಶಿಶಿರ್, ರಂಜಿತ್, ಗೋಲ್ಡ್ ಸುರೇಶ್, ಅನುಷಾ ರೈ, ಹಂಸ, ಯಮುನಾ, ಮಾನಸ ಅತಿಥಿಗಳಾಗಿ ಮನೆಗೆ ವಾಪಸ್ ಆಗಿದ್ದಾರೆ. ಕೂಡಿಟ್ಟ ನೆನಪುಗಳು, ಸಿಹಿ-ಕಹಿ ಅನುಭವಗಳು, ಕೆಟ್ಟ ಘಟನೆಗಳು ಸಾಕಷ್ಟು ಇವೆ. ಸದ್ಯ ಮನೆಯೊಳಗಡ ಬಂದಿರುವ ಎಲಿಮಿನೇಟ್ ಸ್ಪರ್ಧಿಗಳು, ಈಗ ಉಳಿದಿರುವ ಸ್ಪರ್ಧಿಗಳಿಗೆ ಎನರ್ಜಿ ಬೂಸ್ಟ್ ಕೊಡಲಿದ್ದಾರೆ.
ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳಿಗೆ ತಮ್ಮ ತಪ್ಪುಗಳನ್ನು ತಕ್ಷಣ ತಿದ್ದಿಕೊಳ್ಳುವಂತೆ, ಕೆಲವೇ ಕೆಲವು ದಿನಗಳು ಬಾಕಿ ಇರುವುದರಿಂದ ಸ್ಪರ್ಧಿಗಳು ಸಖತ್ ಚಾಣಕ್ಷತೆಯಿಂದ ಆಡಬೇಕು ಎಂದು ಮನವರಿಕೆ ಮಾಡಲಿದ್ದಾರೆ. ಆದರೂ ಡಬಲ್ ಎಲಿಮಿನೇಷನ್ ಶಾಕ್‌ನಲ್ಲಿರುವ ಸ್ಪರ್ಧಿಗಳಿಗೆ, ಎಲಿಮಿನೇಟ್ ಆದ ಸ್ಪರ್ಧಿಗಳ ಆಗಮನದಿಂದ ಮತ್ತೆ ಮಿಡ್ ವೀಕ್ ಎಲಿಮಿನೇಶನ್ ಭಯ ಕಾಡುತ್ತಿದೆ.
ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಬಿಗ್ ಬಾಸ್ ಮನೆಯಿಂದ ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಮನೆ ಖಾಲಿ ಮಾಡುತ್ತಿದ್ದಾರೆ. ಆದರೆ ದೊಡ್ಮನೆಯಲ್ಲಿ ಉಳಿದಿರುವ 7 ಸ್ಪರ್ಧಿಗಳಲ್ಲಿ 16 ನೇ ವಾರ ಒಬ್ಬರಲ್ಲ, ಇಬ್ಬರೂ ಎಲಿಮಿನೇಟ್ ಆಗಿ ಹೊರ ಬರಬಹುದು ಎಂಬುದು ಖಚಿತವಾಗಿದೆ.
ವಿಕೇಂಡ್ ನಲ್ಲಿ ಡಬಲ್ ಎಲಿಮಿನೇಷನ್ ಎಂಬುದು ಬಿಗ್ ಬಾಸ್ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಈಗಗಾಲೇ ಹನುಮಂತ ಫೈನಲ್ ಪ್ರವೇಶಿಸಿದ್ದು, ರಜತ್, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ, ಭವ್ಯಾ, ಮಂಜು, ಧನರಾಜ್ ಇವರಲ್ಲಿ ಯಾರು ಟಾಪ್ 5ರಲ್ಲಿ ಉಳಿಯುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಅಚ್ಚರಿ ಎಂಬಂತೆ ವಾರದ ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಆಚಾರ್ಯ ಗೆದ್ದುಕೊಂಡು ಈ ವಾರದ ನಾಮಿನೇಷನ್ನಿಂದ ಸೇಫ್ ಆಗಿದ್ದರು. ಬಿಗ್‌ಬಾಸ್ ಕೊಟ್ಟ ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಕನ್ನಡಿಯನ್ನು ನೋಡಿ ಫಜಲ್ ಗೇಮ್ ಆಡಿದ್ದು ಬೆಳಕಿಗೆ ಬಂದಿತ್ತು. ಹೀಗಾಗಿ ಬಿಗ್‌ಬಾಸ್ ಮಿಡ್ ವೀಕ್ ಎಲಿಮಿನೇಷನ್ ತಡೆ ಹಿಡಿದಿದ್ದರು.
ಆದರೆ ವೀಕೆಂಡ್ ಡಬಲ್ ಎಲಿಮಿನೇಷನ್ ಸ್ಪರ್ಧಿಗಳ ಎದೆ ಬಡಿತ ಹೆಚ್ಚಿಸುವಂತೆ ಮಾಡಿದೆ. ನಾಳೆ ನಡೆಯುವ ಕಿಚ್ಚನ ಪಂಚಾಯ್ತಿಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗಲಿದ್ದು, ಏಳು ಸ್ಪರ್ಧಿಗಳ ಪೈಕಿ ಯಾವ ಇಬ್ಬರೂ ಸ್ಪರ್ಧಿಗಳು ತಮ್ಮ ಆಟ ಅಂತ್ಯಗೊಳಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.