Saturday, February 4, 2023

ಹೊಸ ವಿವಾದ ಹುಟ್ಟು ಹಾಕಿದ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡು-ಇದು ಕದ್ದ ಟ್ಯೂನಾ..!?

ಬೆಂಗಳೂರು: ತುಳುನಾಡಿನ ದೈವಾಧಾರಿತ ಚಿತ್ರ ಕಾಂತಾರ ವಿಮರ್ಶೆ ದೃಷ್ಟಿಯಿಂದ ಮಾತ್ರವಲ್ಲ, ಗಳಿಕೆ ವಿಚಾರದಲ್ಲಿಯೂ ಓಟ ಮುಂದುವರಿಸಿದೆ. ದೇಶ- ವಿದೇಶಗಳಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿ ಕಮಾಯಿ ಮಾಡುತ್ತಿದೆ. ಚಿತ್ರದ ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ. “ಸಿಂಗಾರ ಸಿರಿಯೇ…” ಮತ್ತು “ವರಾಹ ರೂಪಂ” ಎಲ್ಲರ ಅಚ್ಚುಮೆಚ್ಚಿನ ಹಾಡುಗಳಾಗಿದ್ದು ಇದೀಗ ವರಾಹ ರೂಪಂ ಹಾಡುಗಳ ಬಗ್ಗೆ ಬಗೆಬಗೆ ಮಾತುಗಳು ಜೊತೆಗೆ ಚರ್ಚೆಗಳು ಆರಂಭವಾಗಿವೆ.


ಇಡೀ ‘ಕಾಂತಾರ‘ ಚಿತ್ರದ ಜೀವಾಳವೇ ಆಗಿರುವ “ವರಾಹ ರೂಪಂ..” ಹಾಡನ್ನು ಮಲಯಾಳಂನಿಂದ ಕದಿಯಲಾಗಿದೆ ಎಂಬ ಸುದ್ದಿ ಇದೀಗ ವ್ಯಾಪಕವಾಗಿ ಹರಡುತ್ತಿದೆ.

ಈ ಬಗ್ಗೆ ಕೆಲ ಪ್ರಕಾರಗಳು ಹಬ್ಬುತ್ತಿಯಾದರೂ, ಚಿತ್ರತಂಡ ಮಾತ್ರ ಇದುವರೆಗೆ ಯಾವುದೇ ಪ್ರತಿಕ್ರೀಯೆ ನೀಡಿಲ್ಲ.

5 ವರ್ಷಗಳ ಹಿಂದೆ ಮಾಲಿವುಡ್‌ನಲ್ಲಿ “ನವರಸಂ” ಅನ್ನೋ ಹಾಡೊಂದು ಬಿಡುಗಡೆ ಆಗಿತ್ತು.
ಅದರಲ್ಲಿ ಥೈಕ್ಕುಡಂ ಬ್ರಿಡ್ಜ್‌ ಶೀರ್ಷಿಕೆಯಲ್ಲಿ ಮಾತೃಭೂಮಿ ಕಪ್ಪಾ ಟಿವಿ ಯೂಟ್ಯೂಬ್‌ನಲ್ಲಿ ಈ ಹಾಡಿದೆ.

ಈ ಹಾಡಿಗೂ ಮತ್ತು ಕಾಂತಾರದ ವರಹ ರೂಪಂ ಹಾಡಿನಲ್ಲಿ ಟ್ಯೂನ್‌ಗಳಲ್ಲಿ ಸಾಮ್ಯತೆ ಇದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಈ ಹಾಡನ್ನು ಮಲಯಾಳಂನಲ್ಲಿ ಬರೋಬ್ಬರಿ 38 ಲಕ್ಷ ಮಂದಿ ನೋಡಿದ್ದಾರೆ. ಸದ್ಯಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯ ಬಿಜಿಯಲ್ಲಿರುವ ಸಿನಿಮಾ ತಂಡ ಮಾತ್ರ ಈ ಬಗ್ಗೆ ಮಾತನಾಡುತ್ತಿಲ್ಲ.

ಹೊಂಬಾಳೆ ಫಿಲಂಸ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ರಿಷಬ್‌ ಶೆಟ್ಟಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು ಮುಸ್ಲಿಂ ಯುವಕನನ್ನು ವರಿಸಿದ ನೆದರ್ಲೆಂಡ್ ಕ್ರೈಸ್ತ ಕನ್ಯೆ..!

ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ,ಜಾತಿ - ಪಂಗಡವಿಲ್ಲ, ಭಾಷೆ ಬೇಕಿಲ್ಲ ಪ್ರೀತಿಸುವ ಮನಸ್ಸುಗಳಿದ್ದರೆ ಸಾಕು, ಯಾರಿಗೆ, ಯಾವಾಗ, ಯಾರಮೇಲಾದರೂ ಎಲ್ಲಿ ಬೇಕಾದರೂ ಪ್ರೀತಿ ಹುಟ್ಟಬಹುದು. ಮಂಗಳೂರು: ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ,ಜಾತಿ - ಪಂಗಡವಿಲ್ಲ,...

ಮುಲ್ಕಿ : ಇಬ್ಬರ ಸಾವಿಗೆ ಕಾರಣರಾದ ತುಳು ಕಾಮಿಡಿಯನ್ ಅರ್ಪಿತ್ ಅರೆಸ್ಟ್..!

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯರಾತ್ರಿ ಕಾರುಡಿಕ್ಕಿ ಹೊಡೆದು ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು ಓರ್ವ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ...

ಮಂಗಳೂರು : ಸುರತ್ಕಲಿನಿಂದ ಕೆಲಸಕ್ಕೆ ತೆರಳಿದ್ದ ಯುವತಿ ಕಾವೇರಿ ಮಿಸ್ಸಿಂಗ್..!

ಮಂಗಳೂರು: ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಯುವತಿ ತಡಂಬೈಲ್‌ ಗ್ರಾಮದ ಜಯಶ್ರೀ ಶೆಟ್ಟಿ ಎಂಬವರ ಮಗಳು ಕಾವೇರಿ(19) ಎಂದು ತಿಳಿದು ಬಂದಿದೆ.ಜ.27ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದವರು...