ಶಿವಮೊಗ್ಗ : ಬ್ರಾಹ್ಮಣ ಸಮಾಜದ ಹೆಣ್ಣು ಮಕ್ಕಳು ಇತರೆ ಜಾತಿಯವರನ್ನು ವಿವಾಹ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಯಬೇಕು ಎಂದು ಉಡುಪಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಧಾರ್ಮಿಕ ಪ್ರವಚನಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಅಂತರ್‌ಧರ್ಮೀಯ ವಿವಾಹ ಅದರಲ್ಲೂ ಬ್ರಾಹ್ಮಣ ಯುವತಿಯರ ಟಾರ್ಗೆಟ್ ಎಂಬ ಸುದ್ದಿಗಳು ಹರಿದಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ನಮ್ಮ ಕುಟುಂಬದ ಹೆಣ್ಣುಮಕ್ಕಳು ಬೇರೆಯವರ ಪಾಲಾಗುತ್ತಾರೆ. ಇದು ಹಿಂದೂ ಧರ್ಮ ಬೆಳವಣಿಗೆಗೆ ತೊಡಕು. ಬದುಕಿನ ದುರ್ಬಲತೆಯನ್ನ ಸಹಿಸಲಾರದೇ ಹೆಣ್ಣುಮಕ್ಕಳು ಆತ್ಮಹತ್ಯೆ ಶರಣಾಗುವುದನ್ನು ಕಾಣುತ್ತಿದ್ದೇವೆ.
ಅದಕ್ಕೋಸ್ಕರ ಮಾತೃಮಂಡಳಿ ಬೇಕು ಎಂದು ಸೂಚನೆ ಮಾಡಿದ್ದೇನೆ.ಬ್ರಾಹ್ಮಣ ಸಮಾಜದ ಹೆಣ್ಣುಮಕ್ಕಳು ಇತರೆ ಜಾತಿ, ಧರ್ಮದ ಯುವಕರನ್ನು ಮದುವೆಯಾಗುತ್ತಿರುವ ಕುರಿತು ಗಂಭೀರ ಚಿಂತನೆಯ ಅಗತ್ಯವಿದೆ.
ಇಂತಹ ಪ್ರಕರಣಗಳ ತಡೆಗೆ ಕುಟುಂಬದ ಹಿರಿಯನ್ನು ಒಳಗೊಂಡ ಮಾತೃಮಂಡಳಿ ರಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ಹೆಣ್ಣುಮಕ್ಕಳ ಸಮಸ್ಯೆ ಕೇಳೋದಕ್ಕೆ ಈ ತರಹದ ಒಂದು ಮಂಡಳಿ ಇದ್ದರೆ, ಕರೆಸಿ ಕೂರಿಸಿ ಸಮಸ್ಯೆ ಕೇಳಬಹುದು. ಸಮಸ್ಯೆಗೆ ತಕ್ಕ ಪರಿಹಾರ ಸೂಚಿಸಬಹುದು ಎಂದಿದ್ದಾರೆ.