ಮಂಗಳೂರು/ಚೆನ್ನೈ : ತಮಿಳುನಾಡಿನಲ್ಲಿ ಕನಿಷ್ಠ 5300 ವರ್ಷಗಳ ಹಿಂದೆಯೇ ಕಬ್ಬಿಣ ಕರಗಿಸುವ ತಂತ್ರಜ್ಞಾನದ ಅರಿವು ಇತ್ತು ಎಂಬುವುದನ್ನು ವಿಶ್ವಾಸದಿಂದ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಘೋಷಿಸಿದ್ದಾರೆ.
ರಾಜ್ಯ ಪುರಾತತ್ವ ಇಲಾಖೆಯಿಂದ ಪ್ರಕಟವಾಗಿರುವ ‘ಆಂಟಿಕ್ಷಿಟಿ ಆಫ್ ಐರನ್’ (ತಮಿಳುನಾಡಿನ ಇತ್ತೀಚಿನ ರೇಡಿಯೋಮೆಟ್ರಿಕ್ ದತ್ತಾಂಶ) ಎಂಬ ಸಂಶೋಧನಾ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ತಮಿಳುನಾಡಿನಲ್ಲಿ ನಡೆದಿರುವ ಉತ್ಖನನಗಳ ಸಂಗತಿಗಳು ಭಾರತೀಯ ಉಪಖಂಡದ ಚರಿತ್ರೆಯಲ್ಲಿ ಹೊಸ ತಿರುವು ಕೊಟ್ಟಿವೆ. ತಮಿಳುನಾಡಿನಲ್ಲಿ 5,300 ವರ್ಷಗಳ ಹಿಂದೆ ಕಬ್ಬಿಣವನ್ನು ತಯಾರಿಸಲಾಗುತ್ತಿದ್ದುದು ಗೊತ್ತಾಗಿದೆ. ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಲ್ಯಾಬ್‌ಗಳು ನಡೆಸಿದ ಸಂಶೋಧನೆಗಳಿಂದ ಇದು ರುಜುವಾತಾಗಿದೆ. ಕಬ್ಬಿಣ ಯುಗವು ತಮಿಳು ನೆಲದಿಂದ ಪ್ರಾರಂಭವಾಯಿತು’ ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
ಶಿವಗಲೈಯಲ್ಲಿ ಉತ್ಖನನ
ತೂತುಕುಡಿ ಜಿಲ್ಲೆಯ ಶಿವಗಲೈಯಲ್ಲಿ ಉತ್ಖನನ ನಡೆಸುವ ವೇಳೆ ಸಿಕ್ಕ ಕತ್ತಿಗಳು, ಚೂರಿಗಳು, ಬಾಣದ ಮೊನೆಗಳು, ಕೊಡಲಿಗಳು ಸೇರಿದಂತೆ ಕಬ್ಬಿಣದ ಕಲಾಕೃತಿಗಳು ಎಷ್ಟು ಕಾಲ ಹಿಂದಿನದು ಎಂಬುದನ್ನು ಪರೀಕ್ಷಿಸುವಾಗ ಈ ವಿಚಾರ ಬೆಳಕಿಗೆ ಬಂದಿದೆ.
ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಶೈಕ್ಷಣಿಕ ಮತ್ತು ಸಂಶೋಧನಾ ಸಲಹೆಗಾರ ಪ್ರೊ.ಕೆ. ರಾಜನ್ ಮತ್ತು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಜಂಟಿ ನಿರ್ದೇಶಕ ಆರ್. ಶಿವಾನಂದಂ ‘ಆಂಟಿಕ್ಷಿಟಿ ಆಫ್ ಐರನ್’ ಎಂಬ ಪುಸ್ತಕವನ್ನು ಬರೆದಿದ್ದಾರೆ.
ಮೂರು ಸಂಶೋಧನಾ ಪ್ರಯೋಗಾಲಯದಲ್ಲಿ ದೃಢ
ಶಿವಗಲೈನಿಂದ ಉತ್ಖನನದ ಮಾದರಿಗಳನ್ನು ಮೂರು ಪ್ರಮುಖ ಸಂಶೋಧನಾ ಪ್ರಯೋಗಾಲಯಗಳು ವಿಶ್ಲೇಷಿಸಿವೆ. ಅಮೆರಿಕಾದಲ್ಲಿರುವ ಬೀಟಾ ಅನಾಲಿಟಿಕ್ಸ್, ಅಹಮದಾಬಾದ್‌ನಲ್ಲಿರುವ ಭೌತಿಕ ಸಂಶೋಧನಾ ಪ್ರಯೋಗಾಲಯ ಮತ್ತು ಲಕ್ನೋದಲ್ಲಿರುವ ಬೀಟಾ ಅನಾಲಿಟಿಕ್ಸ್, ಅಹಮದಾಬಾದ್‌ನಲ್ಲಿರುವ ಭೌತಿಕ ಸಂಶೋಧನಾ ಪ್ರಯೋಗಾಲಯ ಮತ್ತು ಲಕ್ನೋದಲ್ಲಿರುವ ಬೀರ್ಬಲಗ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್ ಸಂಸ್ಥೆಗಳು ಕಬ್ಬಿಣ ಯುಗದ ಬಗ್ಗೆ ದೃಢಪಡಿಸಿವೆ.
ದಕ್ಷಿಣ ಭಾರತದಲ್ಲಿ ಕ್ರಿ.ಪೂ 3500ಕ್ಕಿಂತ ಮುಂಚೆಯೇ ಕಬ್ಬಿಣ ಚಾಲ್ತಿಯಲ್ಲಿತ್ತು ಎಂಬುದು ತಿಳಿಯುತ್ತದೆ. ಈ ಅಧ್ಯಯನದ ಫಲಿತಾಂಶವನ್ನು ಕಬ್ಬಿಣದ ಬಳಕೆ ಮತ್ತು ಉಗಮದ ಸಂಶೋಧನೆ ನಡೆಸುತ್ತಿದ್ದ ದೇಶದ ಪ್ರಮುಖ ಪುರತಾತ್ವ ಶಾಸ್ತ್ರಜ್ಞರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.
ಇನ್ನೂ ತಮಿಳುನಾಡಿನ ಆರ್ಕಿಯಾಲಾಜಿ ಇಲಾಖೆ ಪ್ರಕಟಿಸಿದ ವರದಿಯ ಪ್ರಕಾರ, ಸಿಂಧೂ ನಾಗರಿಕತೆ ಮತ್ತು ದಕ್ಷಿಣ ಭಾರತದಲ್ಲಿ ಶುರುವಾದ ಕಬ್ಬಿಣ ಯುಗ ಎರಡೂ ಕೂಡ ಏಕಕಾಲದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಹೇಳುತ್ತದೆ.
ಮಂಗಳೂರು : ಸುಳ್ಯ ಸಮೀಪದ ಮಂಡೆಕೋಲು ಮೀಸಲು ಅರಣ್ಯ ಪ್ರದೇಶದ ಎರಕಲಪಾಡಿ ಎಂಬಲ್ಲಿ ಕಾಡಾನೆಯ ಕಳೆಬರ ಪತ್ತೆಯಾಗಿದೆ.
ಸುಮಾರು 50 ವರ್ಷ ಪ್ರಾಯದ ಗಂಡಾನೆಯು ತೀವ್ರ ರಕ್ತ ಸ್ರಾವದಿಂದ ಮೃತ ಪಟ್ಟಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಕಾಡಿನಲ್ಲಿ ಆನೆಗಳ ನಡುವೆ ನಡೆದ ಕಾಳಗದಲ್ಲಿ ಈ ಗಂಡಾನೆ ಗಂಭೀರ ಗಾಯಗೊಂಡಿತ್ತು.
ಇದರ ಪರಿಣಾಮವಾಗಿ ತೀವ್ರ ರಕ್ತ ಸ್ರಾವ ಉಂಟಾಗಿ ಆನೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಆನೆಯ ಮೈನಲ್ಲಿ ಅಲ್ಲಲ್ಲಿ ಹಲವು ಗಾಯಗಳು ಕಂಡು ಬಂದಿದ್ದು, ಇದು ಕಾಳಗದಿಂದ ಆಗಿರಬಹುದು ಎಂದು ಅರಣ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯ ಅಧಿಕಾರಿಗಳು ಆನೆಯ ಕಳೆಬರದ ವಿಲೇವಾರಿಗೆ ಕ್ರಮ ಕೈಗೊಂಡಿದ್ದಾರೆ.
ಉಡುಪಿ : ಅಲೆವೂರು ಗುಡ್ಡೆಯಂಗಡಿಯಲ್ಲಿನ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯೊಂದರ ಗೋಡೌನ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಿಂದ ಅಂದಾಜು 40 ಲಕ್ಷ ರೂಪಾಯಿ ನಷ್ಟವಾಗಿದೆ.
ಘಟನೆಯಲ್ಲಿ ಗೋಡೌನ್‌ನಲ್ಲಿ ಸಂಗ್ರಹಿಸಲಾಗಿದ್ದ ವಿವಿಧ ವಸ್ತುಗಳು ಮತ್ತು ಉಪಕರಣಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಬೆಂಕಿಯನ್ನು ಹತೋಟಿಗೆ ತಂದಿದ್ದು, ಸಂಭವನೀಯ ಭಾರೀ ಅನಾಹುತ ತಪ್ಪಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಮಂಗಳೂರು/ಬೆಂಗಳೂರು : ಸ್ಯಾಂಡಲ್‌ವುಡ್ ಕ್ಯೂಟ್ ಸ್ಟಾರ್ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ನಿನ್ನೆ (ಜ 26) ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ತಮ್ಮ ಮದುವೆಯ ವಾರ್ಷಿಕೋತ್ಸವದ ದಿನವೇ ಸಿಹಿ ಸುದ್ದಿ ನೀಡಿದ್ದಾರೆ.
ಬೆಂಗಳೂರಿನ ಅಕ್ಷಯ್ ಆಸ್ಪತ್ರೆಯಲ್ಲಿ ನಟಿ ಹರಿಪ್ರಿಯಾ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಜೋಡಿ 2023ರ ಜನವರಿ 26ರಂದು ಅಂದರೆ 2 ವರ್ಷದ ಹಿಂದೆ ಮದುವೆ ಆಗಿದ್ದು. 2025ರ ಜನವರಿ 26ರಂದು ಪುತ್ರ ಜನಿಸಿದ್ದಾನೆ.
ನಿನ್ನೆ ಸಂಜೆ ವೇಳೆಗೆ ಹರಿಪ್ರಿಯಾ ಅವರು ತಾಯಿಯಾದ ಸುದ್ದಿ ಸಿಕ್ಕಿದೆ. ಮೊದಲ ಮಗುವಿನ ಆಗಮನದಿಂದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಕುಟುಂಬದಲ್ಲಿ ಸಂತಸ ಮೂಡಿದೆ. ನಟಿ ಹರಿಪ್ರಿಯಾ ತಾಯಿಯಾದ ವಿಚಾರವನ್ನು ವಸಿಷ್ಠ ಸಿಂಹ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ರಿವೀಲ್ ಮಾಡಿದ್ದಾರೆ. ತಮ್ಮ ಆನಿವರ್ಸರಿ ದಿನವೇ ಮಗ ಬಂದಿದ್ದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ. ನೆಟ್ಟಿಗರು, ಅಭಿಮಾನಿಗಳು, ಸಿನಿರಂಗದವರು ಅಭಿನಂದನೆ ತಿಳಿಸುತ್ತಿದ್ದಾರೆ.