LATEST NEWS
ಕಬ್ಬಿಣದ ಯುಗವು ತಮಿಳುನಾಡಿನ ನೆಲದಿಂದ ಪ್ರಾರಂಭವಾಯಿತು: ಸಿಎಂ ಎಂಕೆ ಸ್ಟಾಲಿನ್ ಹೇಳಿಕೆ
Published
1 day agoon
By
NEWS DESK3ಮಂಗಳೂರು/ಚೆನ್ನೈ : ತಮಿಳುನಾಡಿನಲ್ಲಿ ಕನಿಷ್ಠ 5300 ವರ್ಷಗಳ ಹಿಂದೆಯೇ ಕಬ್ಬಿಣ ಕರಗಿಸುವ ತಂತ್ರಜ್ಞಾನದ ಅರಿವು ಇತ್ತು ಎಂಬುವುದನ್ನು ವಿಶ್ವಾಸದಿಂದ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಘೋಷಿಸಿದ್ದಾರೆ.
ರಾಜ್ಯ ಪುರಾತತ್ವ ಇಲಾಖೆಯಿಂದ ಪ್ರಕಟವಾಗಿರುವ ‘ಆಂಟಿಕ್ಷಿಟಿ ಆಫ್ ಐರನ್’ (ತಮಿಳುನಾಡಿನ ಇತ್ತೀಚಿನ ರೇಡಿಯೋಮೆಟ್ರಿಕ್ ದತ್ತಾಂಶ) ಎಂಬ ಸಂಶೋಧನಾ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ತಮಿಳುನಾಡಿನಲ್ಲಿ ನಡೆದಿರುವ ಉತ್ಖನನಗಳ ಸಂಗತಿಗಳು ಭಾರತೀಯ ಉಪಖಂಡದ ಚರಿತ್ರೆಯಲ್ಲಿ ಹೊಸ ತಿರುವು ಕೊಟ್ಟಿವೆ. ತಮಿಳುನಾಡಿನಲ್ಲಿ 5,300 ವರ್ಷಗಳ ಹಿಂದೆ ಕಬ್ಬಿಣವನ್ನು ತಯಾರಿಸಲಾಗುತ್ತಿದ್ದುದು ಗೊತ್ತಾಗಿದೆ. ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಲ್ಯಾಬ್‌ಗಳು ನಡೆಸಿದ ಸಂಶೋಧನೆಗಳಿಂದ ಇದು ರುಜುವಾತಾಗಿದೆ. ಕಬ್ಬಿಣ ಯುಗವು ತಮಿಳು ನೆಲದಿಂದ ಪ್ರಾರಂಭವಾಯಿತು’ ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
ಶಿವಗಲೈಯಲ್ಲಿ ಉತ್ಖನನ
ತೂತುಕುಡಿ ಜಿಲ್ಲೆಯ ಶಿವಗಲೈಯಲ್ಲಿ ಉತ್ಖನನ ನಡೆಸುವ ವೇಳೆ ಸಿಕ್ಕ ಕತ್ತಿಗಳು, ಚೂರಿಗಳು, ಬಾಣದ ಮೊನೆಗಳು, ಕೊಡಲಿಗಳು ಸೇರಿದಂತೆ ಕಬ್ಬಿಣದ ಕಲಾಕೃತಿಗಳು ಎಷ್ಟು ಕಾಲ ಹಿಂದಿನದು ಎಂಬುದನ್ನು ಪರೀಕ್ಷಿಸುವಾಗ ಈ ವಿಚಾರ ಬೆಳಕಿಗೆ ಬಂದಿದೆ.
ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಶೈಕ್ಷಣಿಕ ಮತ್ತು ಸಂಶೋಧನಾ ಸಲಹೆಗಾರ ಪ್ರೊ.ಕೆ. ರಾಜನ್ ಮತ್ತು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಜಂಟಿ ನಿರ್ದೇಶಕ ಆರ್. ಶಿವಾನಂದಂ ‘ಆಂಟಿಕ್ಷಿಟಿ ಆಫ್ ಐರನ್’ ಎಂಬ ಪುಸ್ತಕವನ್ನು ಬರೆದಿದ್ದಾರೆ.
ಇದನ್ನೂ ಓದಿ: 100ನೇ ರಾಕೆಟ್ ಉಡಾವಣೆಗೆ ಸಕಲ ಸಿದ್ಧತೆ; ಇಸ್ರೋ ದಾಟಲಿರುವ ನಿರೀಕ್ಷೆ
ಮೂರು ಸಂಶೋಧನಾ ಪ್ರಯೋಗಾಲಯದಲ್ಲಿ ದೃಢ
ಶಿವಗಲೈನಿಂದ ಉತ್ಖನನದ ಮಾದರಿಗಳನ್ನು ಮೂರು ಪ್ರಮುಖ ಸಂಶೋಧನಾ ಪ್ರಯೋಗಾಲಯಗಳು ವಿಶ್ಲೇಷಿಸಿವೆ. ಅಮೆರಿಕಾದಲ್ಲಿರುವ ಬೀಟಾ ಅನಾಲಿಟಿಕ್ಸ್, ಅಹಮದಾಬಾದ್‌ನಲ್ಲಿರುವ ಭೌತಿಕ ಸಂಶೋಧನಾ ಪ್ರಯೋಗಾಲಯ ಮತ್ತು ಲಕ್ನೋದಲ್ಲಿರುವ ಬೀಟಾ ಅನಾಲಿಟಿಕ್ಸ್, ಅಹಮದಾಬಾದ್‌ನಲ್ಲಿರುವ ಭೌತಿಕ ಸಂಶೋಧನಾ ಪ್ರಯೋಗಾಲಯ ಮತ್ತು ಲಕ್ನೋದಲ್ಲಿರುವ ಬೀರ್ಬಲಗ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್ ಸಂಸ್ಥೆಗಳು ಕಬ್ಬಿಣ ಯುಗದ ಬಗ್ಗೆ ದೃಢಪಡಿಸಿವೆ.
ದಕ್ಷಿಣ ಭಾರತದಲ್ಲಿ ಕ್ರಿ.ಪೂ 3500ಕ್ಕಿಂತ ಮುಂಚೆಯೇ ಕಬ್ಬಿಣ ಚಾಲ್ತಿಯಲ್ಲಿತ್ತು ಎಂಬುದು ತಿಳಿಯುತ್ತದೆ. ಈ ಅಧ್ಯಯನದ ಫಲಿತಾಂಶವನ್ನು ಕಬ್ಬಿಣದ ಬಳಕೆ ಮತ್ತು ಉಗಮದ ಸಂಶೋಧನೆ ನಡೆಸುತ್ತಿದ್ದ ದೇಶದ ಪ್ರಮುಖ ಪುರತಾತ್ವ ಶಾಸ್ತ್ರಜ್ಞರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.
ಇನ್ನೂ ತಮಿಳುನಾಡಿನ ಆರ್ಕಿಯಾಲಾಜಿ ಇಲಾಖೆ ಪ್ರಕಟಿಸಿದ ವರದಿಯ ಪ್ರಕಾರ, ಸಿಂಧೂ ನಾಗರಿಕತೆ ಮತ್ತು ದಕ್ಷಿಣ ಭಾರತದಲ್ಲಿ ಶುರುವಾದ ಕಬ್ಬಿಣ ಯುಗ ಎರಡೂ ಕೂಡ ಏಕಕಾಲದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಹೇಳುತ್ತದೆ.
You may like
DAKSHINA KANNADA
ಮಂಗಳೂರು ಉದ್ಯಮಿಗೆ ಭೂ*ಗತ ಪಾ*ತಕಿಯಿಂದ ಬೆ*ದರಿಕೆ ಕರೆ!
Published
7 hours agoon
26/01/2025By
NEWS DESK4ಮಂಗಳೂರು : ಹಲವು ವರ್ಷಗಳ ಸದ್ದಡಗಿದ್ದ ಭೂಗತ ಲೋಕದ ಸದ್ದು ಮಂಗಳೂರಿನಲ್ಲಿ ಮತ್ತೆ ಕೇಳಿಸಿದೆ. ವಿದೇಶದಲ್ಲಿ ಕುಳಿತು ಮಂಗಳೂರಿನ ಉದ್ಯಮಿಗೆ ಹಫ್ತಾ ನೀಡುವಂತೆ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಈ ಹಿಂದೆ ಮಂಗಳೂರು ಕಾಸರಗೋಡು ಜಿಲ್ಲೆಯಲ್ಲಿ ಹಲವಾರು ಅಪರಾಧ ಪ್ರಕರಣಗಳ ಹಿಂದೆ ಇದ್ದ ಕಲಿ ಯೋಗೀಶ ಮತ್ತೆ ಫೀಲ್ಡ್‌ಗೆ ಇಳಿದಿದ್ದಾನೆ ಎಂಬ ಅನುಮಾನ ಮೂಡಿದೆ.
ರವಿ ಪೂಜಾರಿ, ಬನ್ನಂಜೆ ರಾಜ ಮೊದಲಾದ ಪಾ*ತಕಿಗಳ ಬಂಧನದ ಬಳಿಕ ಬಹುತೇಕ ಎಲ್ಲಾ ಭೂ*ಗತ ಪಾ*ತಕಿಗಳ ಸದ್ದು ಅಡಗಿ ಹೋಗಿತ್ತು. ಹೀಗಾಗಿ ಒಂದಷ್ಟು ಉದ್ಯಮಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟು ತಮ್ಮ ವ್ಯವಹಾರ ನಡೆಸ್ತಾ ಇದ್ರು. ಆದ್ರೆ ಈಗ ಬಜಪೆಯ ಉದ್ಯಮಿ ರೊನಾಲ್ಡ್ ಎಂಬವರಿಗೆ ಕಲಿ ಯೋಗೀಶನ ಹೆಸರಿನಲ್ಲಿ ಫೋನ್ ಮಾಡಿ ಬೆ*ದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಇದನ್ನೂ ಓದಿ : ಗೀಸರ್ ರಿಪೇರಿಗಂತ ಬಂದ ರಹಸ್ಯ ಕ್ಯಾಮರಾ ಇಟ್ಟ…ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾತ ಸಿಕ್ಕಿ ಬಿದ್ದಿದ್ಹೇಗೆ?
ಜನವರಿ 17 ರಂದು ಈ ಕರೆ ಬಂದಿದ್ದು 3 ಕೋಟಿ ನೀಡಬೇಕು, ಇಲ್ಲವಾದಲ್ಲಿ ಮನೆಯವರೆಲ್ಲರನ್ನೂ ಕೊ*ಲ್ಲುವುದಾಗಿ ಬೆ*ದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
LATEST NEWS
ಗೀಸರ್ ರಿಪೇರಿಗಂತ ಬಂದ ರಹಸ್ಯ ಕ್ಯಾಮರಾ ಇಟ್ಟ…ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾತ ಸಿಕ್ಕಿ ಬಿದ್ದಿದ್ಹೇಗೆ?
Published
7 hours agoon
26/01/2025By
NEWS DESK4ಮಂಗಳೂರು/ ಬೆಂಗಳೂರು : ಇಲ್ಲೊಬ್ಬ ಐನಾತಿ ಖದೀಮ ಗೀಸರ್ ರಿಪೇರಿಗೆಂದು ಬಂದು ರಹಸ್ಯ ಕ್ಯಾಮೆರಾ ಇಟ್ಟು ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ನಡೆದಿರೋದು ಬೆಂಗಳೂರಿನಲ್ಲಿ.
ಮಹಿಳೆಯ ಸ್ನಾನದ ವೀಡಿಯೋ ರಹಸ್ಯ ಕ್ಯಾಮೆರಾದ ಮೂಲಕ ಸೆರೆ ಹಿಡಿದ ಆತ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ. ಇದರಿಂದ ನೊಂದ ಮಹಿಳೆ ಯೂಟ್ಯೂಬರ್ ಸಹಾಯದಿಂದ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಏನಿದು ಪ್ರಕರಣ?
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆ ವಾಸವಾಗಿದ್ದು, ಮನೆಯ ಗೀಸರ್ ಹಾಳಾಗಿತ್ತು. ಹೀಗಾಗಿ ಆಕೆ ಟೆಕ್ನೀಷಿಯನ್‌ಗೆ ಕರೆ ಮಾಡಿದ್ದಾರೆ. ಈ ವೇಳೆ ಗೀಸರ್ ರಿಪೇರಿ ಮಾಡುವ ನೆಪದಲ್ಲಿ ಬಂದ ಖದೀಮ ಮನೆಯ ಗೀಸರ್‌ನಲ್ಲಿ ಯಾರಿಗೂ ಗೊತ್ತಾಗದಂತೆ ರಹಸ್ಯ ಕ್ಯಾಮರಾ ಫಿಕ್ಸ್ ಮಾಡಿ ಹೋಗಿದ್ದಾನೆ. ಬಳಿಕ ಮಹಿಳೆಯ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ಆಕೆಗೆ ವಾಟ್ಸ್ ಆ್ಯಪ್ ನಂಬರ್‌ಗೆ ಕಳುಹಿಸಿದ್ದಾರೆ. ನೀನು ನನ್ನ ಜೊತೆ ಬರಬೇಕು. ಇಲ್ಲವಾದಲ್ಲಿ ವೀಡಿಯೋಗಳನ್ನು ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದಾನೆ.
ಇದನ್ನೂ ಓದಿ : ಮನೆಯ ಕಪಾಟಿನಿಂದ ಬಟ್ಟೆಗಳು ಕೆಳಗೆ ಬೀಳುತ್ತದೆಯೇ? ಈ ಟಿಪ್ಸ್ ಸಹಾಯದಿಂದ ಕಬೋರ್ಡ್ ಈ ರೀತಿ ಜೋಡಿಸಿ
ಆತನ ಬೆದರಿಕೆಗೆ ಬೇಸತ್ತ ಮಹಿಳೆ ಈ ವಿಚಾರ ಮನೆಯವರಿಗೆ ಹೇಳಲು ಹಿಂಜರಿದಿದ್ದಾರೆ. ಕಾ*ಟ ಹೆಚ್ಚಾಗುತ್ತಿದ್ದಂತೆ ಯೂಟ್ಯೂಬರ್ ಮಂಜೇಶ್ ಯಶಸ್ ಎಂಬವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆಕೆಯ ಕಷ್ಟಕ್ಕೆ ಸ್ಪಂದಿಸಿದ ಯೂಟ್ಯೂಬರ್ ಹಾಗೂ ಅವರ ತಂಡ ದುರ್ಷರ್ಮಿಯ ಪತ್ತೆಗೆ ಬಲೆ ಬೀಸಿದೆ.
ಖದೀಮ ಸಿಕ್ಕಿ ಬಿದ್ದಿದ್ದು ಹೇಗೆ?
ಯೂಟ್ಯೂಬರ್ ಹಾಗೂ ಆತನ ತಂಡ ಮಹಿಳೆಯ ಕುಟುಂಬದೊಂದಿಗೆ ಸೇರಿ ಕಾ*ಮುಕನನ್ನು ಹಿಡಿಯಲು ಯೋಜನೆ ರೂಪಿಸುತ್ತಾರೆ. ಮಹಿಳೆಗೆ ಕರೆ ಮಾಡಿದ ಖದೀಮ ಬಸ್ ನಿಲ್ದಾಣದ ಬಳಿ ಬರಲು ಸೂಚಿಸಿದ್ದಾನೆ. ಈ ಸಂದರ್ಭ ಯುವಕರ ತಂಡ ತೆರಳಿ ಆತನನ್ನು ಹಿಡಿದು ಥ*ಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
DAKSHINA KANNADA
ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ
Published
7 hours agoon
26/01/2025By
NEWS DESK4ಮಂಗಳೂರು : ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ (62) ಅಲ್ಪಕಾಲದ ಅಸೌಖ್ಯದಿಂದ ಇಂದು(ಜ.26) ಬಾಳೆಪುಣಿಯ ಸ್ವಗೃಹದಲ್ಲಿ ನಿ*ಧನರಾಗಿದ್ದಾರೆ. ಅವರು ಪತ್ನಿ ಹಾಗೂ ಪುತ್ರನನ್ನು ಅ*ಗಲಿದ್ದಾರೆ.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸರಳ, ಸಜ್ಜನಿಕೆಯ ಬಾಳೆಪುಣಿ ಅವರು ಜನಾನುರಾಗಿಯಾಗಿದ್ದರು.
ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಸೆಹ್ವಾಗ್-ಆರತಿ ದಾಂಪತ್ಯದಲ್ಲಿ ಬಿರುಕು ?
ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ನಾಡಿಗೆ ಪರಿಚಯಿಸಿದ ಕೀರ್ತಿ ಗುರುವಪ್ಪ ಬಾಳೆಪುಣಿ ಅವರದು. ಪತ್ರಿಕೋದ್ಯಮದ ಅವರ ಮೇರು ಸಾಧನೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಅವರ ಮುಡಿಗೇರಿದೆ.
LATEST NEWS
ಮನೆಯ ಕಪಾಟಿನಿಂದ ಬಟ್ಟೆಗಳು ಕೆಳಗೆ ಬೀಳುತ್ತದೆಯೇ? ಈ ಟಿಪ್ಸ್ ಸಹಾಯದಿಂದ ಕಬೋರ್ಡ್ ಈ ರೀತಿ ಜೋಡಿಸಿ
ಗೃಹಲಕ್ಷ್ಮಿ ಹಣ ಕೂಡಿಟ್ಟು ಶೌಚಾಲಯ ನಿರ್ಮಿಸಿದ ಮಹಿಳೆ
ಮಂಗಳೂರಿನಲ್ಲಿ ಜಿಲ್ಲೆಯ ಮೊದಲ ಮಕ್ಕಳ ಮಾದರಿ ಸಂಸತ್ ಅಧಿವೇಶನ
ಬಿಗ್ ಬಾಸ್ ಸ್ಪರ್ಧಿ ಗೌತಮಿ ಜಾದವ್ ಸಂಸಾರದಲ್ಲಿ ಬಿರುಕು?
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕು*ಸಿದು ಬಿ*ದ್ದ ಪೊಲೀಸ್ ಕಮಿಷನರ್ ..!
ಆರ್ಸಿಬಿಗೆ ಆಘಾತ; ಕೈಕೊಟ್ಟ ಸ್ಟಾರ್ ಪ್ಲೇಯರ್
Trending
- BIG BOSS4 days ago
ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?
- BIG BOSS7 days ago
ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ ಕಿಚ್ಚ
- BIG BOSS3 days ago
ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು: ಭವ್ಯಾಗೆ ತ್ರಿವಿಕ್ರಮ್ ಪ್ರಪೋಸ್
- BIG BOSS6 days ago
ಬಿಗ್ ಬಾಸ್ ಸೀಸನ್ 11ರ ವಿನ್ನರ್ ಒಬ್ಬರಲ್ಲ ಇಬ್ಬರು… ಅಷ್ಟಕ್ಕೂ ಟ್ರೋಫಿ ನೀಡಿದ ಸುಳಿವೇನು ?