Wednesday, October 5, 2022

ಕುವೈತ್‌ನಿಂದ ಭಾರತಕ್ಕೆ ಕಚ್ಚಾತೈಲ ತರುತ್ತಿದ್ದ ಹಡಗಿನಲ್ಲಿ ಅಗ್ನಿ ಅವಘಡ : ರಕ್ಷಣಾ ಕಾರ್ಯ ಚುರುಕು..

ಕುವೈತ್‌ನಿಂದ ಭಾರತಕ್ಕೆ ಕಚ್ಚಾತೈಲ ತರುತ್ತಿದ್ದ ಹಡಗಿನಲ್ಲಿ ಅಗ್ನಿ ಅವಘಡ : ರಕ್ಷಣಾ ಕಾರ್ಯ ಚುರುಕು..

ಕೊಲಂಬೊ: ಶ್ರೀಲಂಕಾದ ಪೂರ್ವ ಕಡಲಿನಲ್ಲಿ ಸಾಗುತ್ತಿದ್ದ ತೈಲ ಹೊತ್ತ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿಂಗಪುರ ಸೇರಿದಂತೆ ವಿವಿಧ ದೇಶಗಳ ತಜ್ಞರು ಹಡಗು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪನಾಮಾ ಮೂಲದ ‘ಎಂಟಿ ನ್ಯೂ ಡೈಮಂಡ್‌’ ಹೆಸರಿನ ಹಡಗಿನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ. 2.70 ಲಕ್ಷ ಟನ್‌ ಕಚ್ಚಾ ತೈಲ ಹೊತ್ತ ಈ ಹಡಗು ಕುವೈತ್‌ನಿಂದ ಭಾರತಕ್ಕೆ ತೆರಳುತ್ತಿತ್ತು.

ಫಿಲಿಪ್ಪೀನ್‌ನ 18 ಹಾಗೂ ಗ್ರೀಕ್‌ನ 5 ಜನ ಸೇರಿದಂತೆ ಒಟ್ಟು 23 ಸಿಬ್ಬಂದಿ ಹಡಗಿನಲ್ಲಿದ್ದರು. ಬಾಯ್ಲರ್‌ ಸ್ಫೋಟಗೊಂಡ ಪರಿಣಾಮ ಫಿಲಿಪ್ಪೀನ್‌ ಮೂಲದ ನಾವಿಕರೊಬ್ಬರು ಮೃತಪಟ್ಟಿದ್ದಾರೆ.

ಉಳಿದವರನ್ನು ರಕ್ಷಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.ಭಾರತದ ನೌಕಾಪಡೆಯ ಒಂದು, ಇಂಡಿಯನ್‌ ಕೋಸ್ಟ್‌ ಗಾರ್ಡ್‌ನ ಸಾರಂಗ್‌, ಸುಜಯ್‌ ಹಾಗೂ ಬೆಂಕಿ ನಂದಿಸುವ ಸಾಧನಗಳಿರುವ ಟಿಟಿಟಿ ಒನ್ ಸೇರಿದಂತೆ ಐದು ಹಡಗುಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.

ಭಾರತದ ವಾಯುಪಡೆ ಸಹ ಈ ಕಾರ್ಯಕ್ಕೆ ಕೈಜೋಡಿಸಿದೆ. ಬ್ರಿಟನ್‌ ಹಾಗೂ ನೆದರ್ಲೆಂಡ್‌ನ 10 ಜನ ತಜ್ಞರನ್ನು ಒಳಗೊಂಡ ತಂಡವೂ ಈ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ವಿಪತ್ತು ನಿರ್ವಹಣೆ, ಕಾನೂನಾತ್ಮಕ ವಿಷಯಗಳಲ್ಲಿ ಈ ತಂಡ ವಿಶೇಷ ಪರಿಣತಿ ಹೊಂದಿದೆ ಎಂದು ಶ್ರೀಲಂಕಾ ನೌಕಾಪಡೆ ಮೂಲಗಳು ಹೇಳಿವೆ.

ಈ ಹಡಗಿನ ಮಾಲೀಕರು ಸಿಂಗಪುರ ಮೂಲದ ಕಂಪನಿಯನ್ನು ರಕ್ಷಣಾ ಕಾರ್ಯಕ್ಕಾಗಿ ನೇಮಕ ಮಾಡಿಕೊಂಡಿದ್ದು, ಕಂಪನಿಯ ತಜ್ಞರು ಕೂಡ ಘಟನಾ ಸ್ಥಳಕ್ಕೆ ತೆರಳಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ.

LEAVE A REPLY

Please enter your comment!
Please enter your name here

Hot Topics

Breaking: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಪತನ..!

ನವದೆಹಲಿ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ (Cheetah Helicopter) ಪತನಗೊಂಡು ಪೈಲಟ್ (Pilot) ಹುತಾತ್ಮರಾಗಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ (Arunachal Pradesh) ನಡೆದಿದೆ.ತವಾಂಗ್ ಬಳಿಯ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಸೇನಾ ವಾಯುಯಾನ ಚೀತಾ...

ಅರಬ್‌ ನಾಡಲ್ಲಿ ನೂತನ ಹಿಂದೂ ದೇವಾಲಯ: ಉದ್ಘಾಟಿಸಿದ UAE ಸಚಿವ ಶೇಖ್ ನಹ್ಯಾನ್

ದುಬೈ(ಯುಎಇ): ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ.ಯುಎಇಯ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.ಯುಎಇಯ...

ದೇವಳದ ಅಂಗಳದಲ್ಲಿ ಐಟಂ ಸಾಂಗ್‍ಗೆ ಡ್ಯಾನ್ಸ್ – ಯುವತಿ ವಿರುದ್ಧ FIR

ಭೋಪಾಲ್: ಯುವತಿಯೊಬ್ಬಳು ದೇವಸ್ಥಾನವೊಂದರ ಆವರದಲ್ಲಿ ಐಟಂ ಸಾಂಗ್‍ವೊಂದಕ್ಕೆ ಡ್ಯಾನ್ಸ್ ಮಾಡಿ ಕೆಂಗಣ್ದಣಿಗೆ ಗುರಿಯಾದ ಘಟನೆ  ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.ಇನ್‍ಸ್ಟಾಗ್ರಾಮ್‍ನಲ್ಲಿ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೋಮದಿರುವ ನೇಹಾ ಎಂಬಾಕೆ ದೇವಸ್ಥಾನದಲ್ಲಿ ಮುನ್ನಿ...