Saturday, October 1, 2022

ಇರಾನ್‌ನಲ್ಲಿ ಹಿಜಾಬ್ ಗಲಾಟೆ: ಶಿರವಸ್ತ್ರ ಧರಿಸದ್ದಕ್ಕೆ ಅರೆಸ್ಟ್‌ ಆದ ಯುವತಿ ಸಾವು

ಟೆಹರಾನ್: ಇಸ್ಲಾಮಿಕ್ ದೇಶವೇ ಆಗಿರುವ ಇರಾನ್‌ನಲ್ಲಿ ಹಿಜಾಬ್ ವಿಚಾರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಹಿಜಾಬ್‌ ಧರಿಸಿದ್ದಕ್ಕೆ ನೈತಿಕ ಪೊಲೀಸ್‌ಗಿರಿ ಬಳಿಕ ಕೋಮಾಕ್ಕೆ ಜಾರಿದ್ದ ಇರಾನ್‌ನ 22 ವರ್ಷದ ಯುವತಿಯೊಬ್ಬಳು, ಶುಕ್ರವಾರ ಮೃತಪಟ್ಟಿದ್ದಾಳೆ. ಅವರ ಅನುಮಾನಾಸ್ಪದ ಸಾವಿಗೆ ಕಾರಣವಾದವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.


ಇರಾನ್ ರಾಜಧಾನಿ ಟೆಹರಾನ್‌ಗೆ ಕುಟುಂಬದವರ ಜತೆ ಬಂದಿದ್ದ 22 ವರ್ಷದ ಮಹ್ಸಾ ಅಮಿನಿ ಎಂಬ ಯುವತಿಯನ್ನು, ಮಹಿಳೆಯರಿಗೆ ಕಟ್ಟುನಿಟ್ಟಾದ ವಸ್ತ್ರಸಂಹಿತೆಯನ್ನು ಹೇರುವ ಕೆಲಸ ನಿರ್ವಹಿಸುವ ಇಸ್ಲಾಮಿಕ್ ರಿಪಬ್ಲಿಕ್‌ನ ಪೊಲೀಸ್ ಘಟಕವು ಮಂಗಳವಾರ ಬಂಧಿಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಶಿರವಸ್ತ್ರ ಧರಿಸುವುದು ಕಡ್ಡಾಯ ಎನ್ನುವುದು ಇದರ ನಿಯಮಗಳಲ್ಲಿ ಒಂದು.

ಇದನ್ನು ಉಲ್ಲಂಘಿಸಿದ್ದ ಅಮಿನಿ, ಹಿಜಾಬ್ ಧರಿಸಿರಲಿಲ್ಲ ಎನ್ನುವುದು ಪೊಲೀಸರ ಆರೋಪವಾಗಿತ್ತು.
ಕಳೆದ ಕೆಲವು ತಿಂಗಳಿನಿಂದ ಇರಾನ್‌ನ ಹಕ್ಕುಗಳ ಹೋರಾಟಗಾರರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಹಿಜಾಬ್ ಅಥವಾ ವೇಲ್‌ಗಳನ್ನು ತೆಗೆದುಹಾಕುವಂತೆ ಮಹಿಳೆಯರಿಗೆ ಮನವಿ ಮಾಡುತ್ತಿದ್ದಾರೆ.

‘ಅನೈತಿಕ ನಡವಳಿಕೆ’ಯನ್ನು ಕಟ್ಟುನಿಟ್ಟಾಗಿ ಮಟ್ಟ ಹಾಕಲು, ಇಸ್ಲಾಮಿಕ್ ವಸ್ತ್ರಸಂಹಿತೆ ನಿರಾಕರಿಸುವವರನ್ನು ಮುಲಾಜಿಲ್ಲದೆ ಬಂಧಿಸುವಂತೆ ಆಡಳಿತಗಾರರು ಸೂಚನೆ ನೀಡಿದ್ದಾರೆ.
ತಮ್ಮ ಹಿಜಾಬ್‌ಗಳನ್ನು ತೆಗೆದುಹಾಕಿದ ಮಹಿಳೆಯರ ವಿರುದ್ಧ ನೈತಿಕತೆ ಪೊಲೀಸರ ಘಟಕಗಳು ಬಲಪ್ರಯೋಗ ನಡೆಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಹಿಜಾಬ್ ಧರಿಸದ ಅಮಿನಿಯನ್ನು ಬಂಧಿಸಿದ್ದ ಪೊಲೀಸರು, ಇತರೆ ಬಂಧಿತ ಮಹಿಳೆಯರ ಜತೆ ನೈತಿಕ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು.

ಆಗ ಅಮಿನಿ ಅಸ್ವಸ್ಥಳಾಗಿದ್ದಾಳೆ ಎನ್ನಲಾಗಿದೆ. “ಆಕೆಯನ್ನು ವಾಹನಕ್ಕೆ ಹತ್ತಿಸುವುದರಿಂದ ಹಿಡಿದು, ಠಾಣೆಯಲ್ಲಿ ಇರಿಸುವವರೆಗೂ ಆಕೆಯ ಮೇಲೆ ದೈಹಿಕವಾಗಿ ಯಾವುದೇ ಹಲ್ಲೆ ನಡೆಸಿಲ್ಲ” ಎಂದು ಹೇಳಿಕೆ ನೀಡಿರುವ ಪೊಲೀಸರು, ಅಮಿನಿ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.

ಮಹ್ಸಾ ಅಮಿನಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಅಧ್ಯಕ್ಷ ಇಬ್ರಾಹಿಂ ರೈಸಿ ಸೂಚಿಸಿದ್ದಾರೆ. ಅಮಿನಿಗೆ ‘ಶಿಕ್ಷಣ’ ನೀಡುವ ಸಲುವಾಗಿ ಠಾಣೆಗೆ ಕರೆದೊಯ್ದ ಬಳಿಕ ಆಕೆಗೆ ಹೃದಯಾಘಾತ ಉಂಟಾಗಿತ್ತು ಎಂದು ಪೊಲೀಸರ ಮೊದಲು ಹೇಳಿದ್ದರು. ಆದರೆ, ಆಕೆಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಎಲ್ಲಿಯಾದ್ರು SDPI ಕಚೇರಿ ಸೀಲ್ ಮಾಡಿದ್ರೆ ನನಗೆ ತಿಳಿಸಿ-ADGP ಅಲೋಕ್ ಕುಮಾರ್

ಬೆಂಗಳೂರು: ನಿಷೆಧಿತ ಸಂಘಟನೆ ಪಿಎಫ್‌ಐ ಕಚೇರಿಗಳಿಗೆ ಪೊಲೀಸರು ಕಾರ್ಯಾಚರಣೆ ಮಾಡುವುದರ ಮುಖೇನ ಹಲವು ಕಚೇರಿಗಳನ್ನು ಸೀಲ್ ಮಾಡಿದ್ದಾರೆ ಹೊರತು ಪ್ರತ್ಯೇಕವಾಗಿ ಎಸ್‌ಡಿಪಿಐ ಕಚೇರಿಗಳನ್ನು ಸೀಲ್ ಮಾಡಿಲ್ಲ. ಪಿಎಫ್‌ಐ ತನ್ನ ಕಾರ್ಯಚಟುವಟಿಕೆಗಳಿಗೆ ಬಳಸುತ್ತಿದ್ದ ಎಸ್‌ಡಿಪಿಐ...

ಕಳಸದಲ್ಲಿ ನದಿಗೆ ಬಿದ್ದು ಸಾವನ್ನಪ್ಪಿದ ಯುವಕ-ಮೃತದೇಹ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಳಸದಲ್ಲಿ ಆಕಸ್ಮಿಕವಾಗಿ ನದಿ ನೀರಿಗೆ ಬಿದ್ದು ಸಾವನ್ನಪ್ಪಿದ ಶಿವಮೊಗ್ಗ ಮೂಲದ ಯುವಕನ ಮೃತದೇಹವನ್ನು ಉಡುಪಿ ಈಶ್ವರ್ ಮಲ್ಪೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಸತತ ಕಾರ್ಯಾಚರಣೆ ನಡೆಸುವ ಮೂಲಕ ನೀರಿನಿಂದ...

‘ಶೋಭಕ್ಕ ಒಂಜಿ ಸೆಲ್ಫಿ’: ಕಾಂಗ್ರೆಸ್ ಮುಖಂಡ ಮಿಥುನ್ ರೈ ‘ಸೆಲ್ಫಿ’ ಸ್ಪರ್ಧೆಗೆ BJP ಕಾರ್ಯಕರ್ತರ ಖಡಕ್ ರೆಸ್ಪಾನ್ಸ್

ಉಡುಪಿ: ರಸ್ತೆ ಅವ್ಯವಸ್ಥೆ, ಕಳಪೆ ಕಾಮಗಾರಿಯ ವಿರುದ್ಧ ಪ್ರತಿಭಟನೆ ನಡೆಸುವ ಸಂದರ್ಭ ಕಾಂಗ್ರೆಸ್ ಮುಖಂಡ ಮಿಥುನ್ ರೈ ಸೆಲ್ಫಿ ವಿಥ್ ಶೋಭಾ ಕರಂದ್ಲಾಜೆ ಎಂಬ ವೈವಿಧ್ಯಮಯ ಪ್ರತಿಭಟನೆಯ ಬಗ್ಗೆ ಘೋಷಣೆ ಮಾಡಿದ್ದರು.ಸಂಸದೆ ಶೋಭಾ...