Connect with us

    DAKSHINA KANNADA

    ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಆಮಂತ್ರಣ ಪತ್ರಿಕೆ ಬಿಡುಗಡೆ

    Published

    on

    ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಅ. 28 ಮತ್ತು 29ರಂದು ಉಡುಪಿಯಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನ-2023 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಬುಧವಾರ ಸಂಜೆ ನಗರದ ಖಾಸಗಿ ಹೋಟೆಲ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

    ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, “ಐಕಳ ಹರೀಶ್ ಶೆಟ್ಟಿಯವರು ಬಂಟ ಸಮಾಜದ ಅತ್ಯಧ್ಭುತ ನಾಯಕ. ಅವರಲ್ಲಿನ ಸಂಘಟನಾ ಶಕ್ತಿ ಇತರರಿಗೆ ಮಾದರಿ. ಇಂದು ವಿಶ್ವ ಬಂಟರ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದೇವೆ. ಇದು ಬಂಟ ಸಮಾಜದ ಮನೆಮನೆಗೆ ತಲುಪಲಿ ಆ ಮೂಲಕ ಒಂದೇ ವೇದಿಕೆಯಡಿಯಲ್ಲಿ ಸಮಾಜದ ಎಲ್ಲರೂ ಪಾಲ್ಗೊಳ್ಳುವಂತಾಗಲಿ ಸಮ್ಮೇಳನದಿಂದ ಸಮಾಜಕ್ಕೆ ಪ್ರಯೋಜನವಾಗಲಿ” ಎಂದು ಶುಭ ಹಾರೈಸಿದರು.

    ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, “ಕಾರ್ಯಕ್ರಮ ಖಂಡಿತಾ ಯಶಸ್ವಿಯಾಗುತ್ತದೆ. ಆದರೆ ದೊಡ್ಡ ಸಂಖ್ಯೆಯಲ್ಲಿ ನಮ್ಮ ಸಮುದಾಯದ ಜನರನ್ನು ಸೇರಿಸುವ ಮೂಲಕ ನಮ್ಮ ಶಕ್ತಿಯನ್ನು ಈ ಮೂಲಕ ತೋರಿಸಿಕೊಡಬೇಕು” ಎಂದರು.

    ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಸಮಾಜದ ಜನರ ಹಿತದೃಷ್ಟಿಗಾಗಿ ಸಂಘಟನೆ ಮೂಲಕ ಹತ್ತಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದೇವೆ. ಸಮುದಾಯದ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ ವಿಶ್ವ ಬಂಟರ ಸಮ್ಮೇಳನ ಆಯೋಜನೆ ಮಾಡಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಎರಡು ದಿನಗಳ ಕಾಲ ಕಾರ್ಯಕ್ರಮದ ಯಶಸ್ಸಿಗಾಗಿ ಕೆಲಸ ಮಾಡಬೇಕು” ಎಂದರು.

    ಬಳಿಕ ಮಾತಾಡಿದ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು, “ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಹೊಸ ದಿಕ್ಕು ತೋರಿಸಿದವರು ಐಕಳ ಹರೀಶ್ ಶೆಟ್ಟಿಯವರು. ಅವರಿಂದ ಇಂದು ಬಂಟರ ಸಂಘಗಳು ಒಗ್ಗಟ್ಟಾಗಿ ಕೆಲಸ ಮಾಡಲಾರಂಭಿಸಿವೆ. ಬಲಿಷ್ಟ ಸಮಾಜದ ನಿರ್ಮಾಣಕ್ಕೆ ಬಂಟರ ಸಮ್ಮೇಳನದ ಯಶಸ್ಸಿಗೆ ನಾವೆಲ್ಲರೂ ಒಟ್ಟಾಗಿ ದುಡಿಯೋಣ” ಎಂದು ಶುಭ ಹಾರೈಸಿದರು.

    ವೇದಿಕೆಯಲ್ಲಿ ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ,ಮಾಜಿ ಸಚಿವ ಬಿ. ರಮಾನಾಥ್ ರೈ ಸುಧಾಕರ ಎಸ್. ಪೂಂಜಾ, ಎ.ಜಗನ್ನಾಥ ಚೌಟ, ಲೋಕೇಶ್ ಶೆಟ್ಟಿ ಕೊಳ, ಸುರೇಶ್ ರೈ ಮಕರಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

    DAKSHINA KANNADA

    ಕೋಟಿ ಗಾಯತ್ರಿ ಯಾಗ: ಸೆ. 29ರಂದು ಚಿತ್ರಾಪುರ ಮಠದಲ್ಲಿ ಸಂಕಲ್ಪ ದಿನ

    Published

    on

    ಮಂಗಳೂರು : ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ವತಿಯಿಂದ ಅಕ್ಟೋಬರ್ 26 ಮತ್ತು 27ರಂದು ನಡೆಯಲಿರುವ ಕೋಟಿ ಗಾಯತ್ರಿ ಯಾಗದ ಪೂರ್ವಭಾವಿಯಾಗಿ ಸೆ. 29ರ ಭಾನುವಾರ ಮುಂಜಾನೆ ಸಂಕಲ್ಪ ದಿನವನ್ನು ಮಂಗಳೂರಿನ ಚಿತ್ರಾಪುರ ಮಠದಲ್ಲಿ ನಡೆಲು ಉದ್ದೇಶಿಸಲಾಗಿದೆ ಎಂದು ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಹೇಳಿದರು. ಚಿತ್ರಾಪುರ ಮಠದಲ್ಲಿ ನಡೆದ ಬ್ರಾಹ್ಮಣ ಸಮುದಾಯದ ಸಮಸ್ತರ ಸಭೆಯಲ್ಲಿ ಕೋಟಿ ಗಾಯತ್ರಿ ಯಾಗದ ಯಶಸ್ವಿಗಾಗಿ ನಾನಾ ಸಮಿತಿಗಳನ್ನು ರಚನೆಯ ಬಗ್ಗೆ ಚರ್ಚಿಸಿ ನಿರ್ಣಯಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

    ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬ್ರಾಹ್ಮಣ ಸಮುದಾಯವು ಈಗಾಗಲೇ ಗಾಯತ್ರಿ ಯಜ್ಞದ ಪೂರ್ವಭಾವಿಯಾಗಿ ಜಪದ ಸಂಕಲ್ಪ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹೊರಭಾಗದಲ್ಲಿರುವ ಜಿಲ್ಲೆಯ ಬ್ರಾಹ್ಮಣರು ಕೂಡಾ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚಿನ ಮಂದಿ ಹೆಸರು ನೋಂದಾಯಿಸುವ ನಿಟ್ಟಿನಲ್ಲಿ ಪ್ರೇರೇಪಿಸುವ ಕೆಲಸವಾಗಬೇಕು ಎಂದರು. ಬ್ರಾಹ್ಮಣ ಸಮಾಜದ ಎಲ್ಲಾ ಬಾಂಧವರು ಒಂದೇ ಸೂರಿನಡಿ ಸೇರಿಸಿ, ಹೊರ ಜಗತ್ತಿಗೆ ಬ್ರಾಹ್ಮಣ ಎಂಬ ಸಂದೇಶ ಮುಟ್ಟಿಸುವಂತಾಗಬೇಕು. ಇದೊಂದು ವಿಶೇಷ ಕಾರ್ಯಕ್ರಮ ಈ ಕಾರ್ಯಕ್ರಮವು ಗಾಯತ್ರಿ ಸಂಗಮವಾಗಿದೆ. ’ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮ ತೇಜದ ಬೆಳಕಲಿ’ ಶೀರ್ಷಿಕೆಯಡಿ ಜರಗಲಿದೆ. ಆದುದರಿಂದ ರಚನೆಯಾದ ಸಮಿತಿಯ ಸದಸ್ಯರು ಎಲ್ಲರೂ ಒಂದಾಗಿ ತಮ್ಮ ಮನೆ ಕಾರ್ಯಕ್ರಮ ಎಂಬ ರೀತಿಯಲ್ಲಿ ದುಡಿಯಬೇಕು. ಆ ಮೂಲಕ ಸಮಾಜಕ್ಕೆ ನಮ್ಮ ಒಗ್ಗಟ್ಟನ್ನು ತೋರಿಸಿಕೊಡಬೇಕು ಎಂದು ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಶ್ರೀ ಮಹೇಶ್ ಕಜೆ ಹೇಳಿದರು.

    ನಾನಾ ಸಮಿತಿಗಳ ಜವಾಬ್ದಾರಿ, ಹೋಮದ ರೂಪು ರೇಶೆ, ಹೋಮದ ಉದ್ದೇಶ, ಕಾರ್ಯಯೋಜನೆಯ ಕುರಿತು ಮಾಹಿತಿ ನೀಡಿದ ವಿದ್ವಾನ್ ಕಶೆಕೋಡಿ ಸೂರ್ಯನಾರಾಯಣ ಭಟ್ ಸಾಂದರ್ಭಿಕವಾಗಿ ಮಾತನಾಡಿದರು. ಅ. 26ರಂದು ಮಹಿಳೆಯರಿಗಾಗಿ ಮಾತೃ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ಮಾತೆಯರು ಈ ಸಂಗಮದಲ್ಲಿ ಭಾಗವಹಿಸಬೇಕು. ಮುಂದಿನ ದಿನಗಳಲ್ಲಿ ಈ ವೇದಿಕೆಯೇ ಇಡೀ ಸಮಾಜದ ಮುಖವಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಹಿಂದೆ ಗಾಯತ್ರಿ ಯಾಗ ಮಾಡಿ ಅನುಭವ ಇರುವ ವಿದ್ವಾನ್ ಬಂದಗದ್ದೆ ನಾಗರಾಜ್ ಮಾತನಾಡಿ, ಗಾಯತ್ರಿ ಮಂತ್ರ ಅನುಷ್ಠಾನ ಮಾಡುವುದರಿಂದ ಸಿಗುವ ಲಾಭ, ಮಾನಸಿಕ ವಿಕಸನದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

    ವಿದ್ವಾನ್ ಕಟೀಲಿನ ಶ್ರೀಹರಿ ನಾರಾಯಣದಾಸ ಆಸ್ರಣ್ಣ ಮಾತನಾಡಿ, ಎಲ್ಲಾ ವಿಪ್ರ ಸಮಾಜ ಬಾಂಧವರು ಒಟ್ಟು ಸೇರಿ ಈ ಯಜ್ಞ ಕಾರ್ಯದಲ್ಲಿ ಭಾಗಿಗಳಾಗೋಣ, ಪ್ರತಿಯೊಬ್ಬ ಬ್ರಾಹ್ಮಣನು ಸಹ ಕುಟುಂಬ ಸಹಿತ ಪಾಲ್ಗೊಳ್ಳಬೇಕು ಹಾಗೂ ಸೆ.೨೯ರ ಸಂಕಲ್ಪ ಕಾರ್ಯದಲ್ಲಿ ಕನಿಷ್ಠ ೫೦೦ ಜನ ಬಾಂಧವರು ಸೇರಬೇಕು ಎಂದರು. ಬ್ರಾಹ್ಮಣ ಮಹಾಸಭಾ ಸುರತ್ಕಲ್‌ನ ಗೌರವಾಧ್ಯಕ್ಷ ಪಿ. ಪುರುಷೋತ್ತಮ ರಾವ್ ಇದು ನಮ್ಮೆಲ್ಲರ ಕಾರ್ಯಕ್ರಮ ಪ್ರತಿಯೊಬ್ಬರು ತಾನು ಮನ ಧನಗಳಿಂದ ಸಾಹಕರಿಸೋಣ ಎಂದರು.

    ವಿವಿಧ ಬ್ರಾಹ್ಮಣ ಸಮಾಜದ ಪ್ರಮುಖರಾದ ಕರ್ಗಿ ಶ್ರೀನಿವಾಸ ಅಚಾರ್, ಶ್ರೀನಿವಾಸ್ ಚಿತ್ರಾಪುರ, ಸುರೇಶ್ ರಾವ್ ಚಿತ್ರಾಪುರ, ಶ್ರೀಕರ ದಾಮ್ಲೆ, ಎಂ.ಟಿ. ಭಟ್, ಉದಯ ಕುಮಾರ್, ಉದಯ ಕುಮಾರ್ ಸುರತ್ಕಲ್, ಕಾತ್ಯಾಯಿನಿ ರಾವ್, ಶೋಭಾ ಚಿತ್ರಾಪುರ, ಸಾವಿತ್ರಿ ಹೆಚ್ ಭಟ್, ಹೊಸಬೆಟ್ಟು, ರಮಾ.ವಿ ರಾವ್, ಯಮುನಾ ಪಿ ರಾವ್, ಎಂ ಸದಾಶಿವ ಕುಳಾಯಿ, ಪ್ರಕಾಶ್ ಕೋಟೆಕಾರ್, ಜಯಪ್ರಕಾಶ್ ಹೆಬ್ಬಾರ್, ಜಯರಾಮ್ ಭಟ್, ಸುಬ್ರಹ್ಮಣ್ಯ ವಿ ಭಟ್, ಗೋಪಾಲಕೃಷ್ಣ ಮಯ್ಯ, ಜ್ಯೋತಿಷಿ ರಂಗ ಐತಾಳ್ ಕದ್ರಿ, ವಿದ್ವಾನ್ ಸತ್ಯಕೃಷ್ಣ ಭಟ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

    Continue Reading

    DAKSHINA KANNADA

    ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮಂಗನ ಜ್ವರಕ್ಕೆ ವಿಶೇಷ ನಿಗಾ

    Published

    on

    ಮಂಗಳೂರು: ಮಂಗನ ಜ್ವರದ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ನಿಪಾಹ್ ವೈರಸ್‌ನಿಂದಾಗಿ ಕೇರಳದಲ್ಲಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

    ಆಫ್ರಿಕನ್ ದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಂಗನ ಜ್ವರ ಸ್ಥಳೀಯವಾಗಿ ಆತಂಕವನ್ನು ಉಂಟುಮಾಡಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಿಂದ ನಗರಕ್ಕೆ ಆಗಮಿಸುವ ಪ್ರಯಾಣಿಕರು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ ಮತ್ತು ತುರ್ತು ಪರಿಸ್ಥಿತಿಗಳಿಗಾಗಿ ಮೀಸಲಾದ ಆಂಬ್ಯುಲೆನ್ಸ್ ಸಿದ್ಧವಾಗಿದೆ. ಮಂಗನ ಜ್ವರ ಪ್ರಕರಣಗಳ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಕೂಡ ಕಾಯ್ದಿರಿಸಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಮಾತನಾಡಿ, ‘ಸದ್ಯ ಜಿಲ್ಲೆಯಲ್ಲಿ ಕೋತಿ ಜ್ವರದ ಪ್ರಕರಣಗಳು ವರದಿಯಾಗಿಲ್ಲ, ರಾಜ್ಯ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಸೂಚನೆ ಬಂದಿಲ್ಲ.ಆದರೆ, ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬಂದರುಗಳಿಗೆ ಆಗಮಿಸುವ ಪ್ರಯಾಣಿಕರು. ಮುನ್ನೆಚ್ಚರಿಕೆಯಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಆರು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ, ಮುಂದಿನ ಕ್ರಮಗಳನ್ನು ಚರ್ಚಿಸಲು ನಾವು ಶೀಘ್ರದಲ್ಲೇ ವಿಶೇಷ ಸಭೆ ನಡೆಸುತ್ತೇವೆ ಎಂದರು.

    ‘ಇತ್ತೀಚೆಗೆ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ವೈರಲ್ ಸೋಂಕುಗಳು ಹೆಚ್ಚಾಗುತ್ತಿವೆ. ಜಿಲ್ಲೆಯ ವಿವಿಧೆಡೆ ಕೆಮ್ಮು, ನೆಗಡಿ, ಗಂಟಲು ನೋವಿನ ಲಕ್ಷಣಗಳಿರುವ ಜ್ವರ ಕಾಣಿಸಿಕೊಂಡಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುವ ರೋಗಿಗಳ ಸಂಖ್ಯೆ ಹೆಚ್ಚಿದೆ. ವಿಶೇಷವಾಗಿ ಮಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಕೆಲವು ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲಿ ತುಂತುರು ಮಳೆಯಾಗುತ್ತಿದ್ದು, ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

    Continue Reading

    DAKSHINA KANNADA

    ಆಂಧ್ರದಲ್ಲಿ ನಡೆದ ವಾಲಿಬಾಲ್ ಪಂದ್ಯಾಟ; ಚಿನ್ನದ ಪದಕ ಗೆದ್ದ ನಿತೀಶ್ ಕುಮಾರ್

    Published

    on

    ಮಂಗಳೂರು/ಹೆಬ್ರಿ : ಹೆಬ್ರಿ ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ನಿತೀಶ್ ಕುಮಾರ್ ಆಂಧ್ರಪ್ರದೇಶ ವಿಜಯವಾಡದಲ್ಲಿ ನಡೆದ ವಿದ್ಯಾಭಾರತಿ ಕ್ಷೇತ್ರ ಮಟ್ಟದ ವಾಲಿಬಾಲ್ ಪಂದ್ಯಕೂಟದಲ್ಲಿ ಭಾಗವಹಿಸಿ, ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

    ಮುಂದಿನ ತಿಂಗಳು ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ವಿದ್ಯಾಭಾರತಿ ನಡೆಸುವ ರಾಷ್ಟ್ರಮಟ್ಟದ ಪಂದ್ಯಕೂಟದ ವಾಲಿಬಾಲ್ ತಂಡಕ್ಕೆ ನಿತೀಶ್ ಕುಮಾರ್ ಆಯ್ಕೆಯಾಗಿದ್ದಾರೆ.

    ಇದನ್ನೂ ಓದಿ : ವೈಪರ್ ಕೈಕೊಟ್ಟು ಅವಘಡ; ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ತೂಫಾನ್

    ನಿತೀಶ್ ಕುಮಾರ್, ಪೆರುವಾಣಿ ಗ್ರಾಮದ ಸತ್ಯನಾರಾಯಣ ಮಣಿಯಣಿ ಮತ್ತು ಜ್ಯೋತಿ ಅವರ ಪುತ್ರನಾಗಿದ್ದು, ಅವರಿಗೆ ಅಮೃತ ಭಾರತಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ನಿಶಾನ್ ಶೆಟ್ಟಿ ತರಬೇತಿ ನೀಡಿದ್ದರು.

    Continue Reading

    LATEST NEWS

    Trending