Connect with us

DAKSHINA KANNADA

ಹಾವೇರಿಯಲ್ಲಿ ಅಗಸ್ಟ್‌ನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಾಗಿ ಮಂಗಳೂರಿನಲ್ಲಿ ಶೋಧ

Published

on

ಮಂಗಳೂರು: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಿರೇಕೆರೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳೆದ 2022 ಆಗಸ್ಟ್‌ ತಿಂಗಳಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಹುಡುಕಿಕೊಂಡು ಹಿರೇಕೆರೂರು ಪೊಲೀಸರು ಮಂಗಳೂರಿಗೆ ಆಗಮಿಸಿದ್ದಾರೆ.


ಹಿರೇಕೆರೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಮದಗ ಮಾಸೂರ ಕೆರೆಯ ಜಲಪಾತದ ಬಳಿ ಸುಮಾರು 40 – 45 ವರ್ಷ ಪ್ರಾಯದ ವ್ಯಕ್ತಿಯ ಶವ ಸಿಕ್ಕಿದ್ದು, ಇದೊಂದು ಕೊಲೆ ಪ್ರಕರಣ ಎಂಬುದಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ತನಿಖೆಯ ವೇಳೆ ಈ ಕೊಲೆ ಪ್ರಕರಣದ ಆರೋಪಿ ರಟ್ಟಿಹಳ್ಳಿ ತಾಲೂಕಿನ ಕಮಲಾಪುರ ನಿವಾಸಿ ಗದಿಗೆಪ್ಪ ಎಂಬುದಾಗಿ ಪೊಲೀಸರು ಗುರುತಿಸಿದ್ದರು. ಆದರೆ ಆರೋಪಿ ಗದಿಗೆಪ್ಪ ಕೊಲೆ ಕೃತ್ಯದ ಬಳಿಕ ತಲೆ ಮರೆಸಿಕೊಂಡಿದ್ದು, ಇದುವರೆಗೂ ಪತ್ತೆಯಾಗಿಲ್ಲ.

ಆರೋಪಿ ಗದಿಗೆಪ್ಪ ಕೆಲವು ವರ್ಷಗಳಿಂದ ಮಂಗಳೂರಿನ ಸುರತ್ಕಲ್‌ ಬಳಿ ಎಂಆರ್‌ಪಿಎಲ್‌ ಮತ್ತು ಇತರ ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡಿದ್ದು, ಹಾಗಾಗಿ ಆಗಿಂದಾಗ್ಗೆ ಮಂಗಳೂರಿಗೆ ಬಂದು ಹೋಗುತ್ತಿದ್ದನು.

ಆದ್ದರಿಂದ ಹಿರೇಕೆರೂರು ಪೊಲೀಸರು ಆರೋಪಿ ಗದಿಗೆಪ್ಪ ಮಂಗಳೂರಿನಲ್ಲಿ ಇರಬಹುದೆಂಬ ಗುಮಾನಿಯ ಹಿನ್ನೆಲೆಯಲ್ಲಿ ಮಂಗಳೂರಿಗೆ ಬಂದು ಶೋಧ ನಡೆಸಿದ್ದಾರೆ.

DAKSHINA KANNADA

ಮಹಿಳೆಗೆ ಡ್ಯಾಶ್‌ ಹೊಡೆದು ಬಳಿಕ ಆಕೆಯ ಜತೆ ಅಶ್ಲೀಲ ವರ್ತನೆ; ಆರೋಪಿ ವಶ

Published

on

ಪುತ್ತೂರು : ಅಂಗನವಾಡಿಗೆ ಮಗುವನ್ನು ಬಿಟ್ಟು ಮನೆಗೆ ಬರುತ್ತಿದ್ದ ಮಹಿಳೆಯ ಜತೆ ಕಾಮುಕ ಪುರುಷನೊಬ್ಬ ಆಶ್ಲೀಲವಾಗಿ ವರ್ತಿಸಿದ ಘಟನೆ ಪುತ್ತೂರಿನ ಕುಂಜುರುಪಂಜ ಎಂಬಲ್ಲಿ ನಡೆದಿದೆ.

ಅಸಭ್ಯವಾಗಿ ವರ್ತಿಸಿದ ವ್ಯಕ್ತಿ ಬಶೀರ್ ಎಂದು ತಿಳಿದು ಬಂದಿದೆ. ಕಾಮುಕ ಬಶೀರ್ ಮೊದಲಿಗೆ ಮಹಿಳೆಗೆ ಡ್ಯಾಶ್ ಹೊಡೆದಿದ್ದಾನೆ. ಬಳಿಕ ಆಕೆಯನ್ನು ಮನೆ ತನಕ ಹಿಂಬಾಲಿಸಿ, ಮನೆಯ ಎದುರು ಭಾಗದಲ್ಲೇ ಮರ್ಮಾಂಗವನ್ನು ತೋರಿಸಿ, ಆಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಮಂಗಳೂರು: ಸಾವ೯ಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಿದ್ದವರಿಗೆ ದಂಡ

ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಆಗಮಿಸಿ, ಕಾಮುಕ ಬಶೀರನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ವಿಷಯ ತಿಳಿದು ತಕ್ಷಣ ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಬಶೀರ್ ಈ ಮೊದಲು ಕೂಡಾ ಇದೇ ದಾರಿಯಲ್ಲಿ ಹೋಗುವ ಮತ್ತು ಬರುವ ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಮಾಹಿತಿ ಇದೆ.

Continue Reading

DAKSHINA KANNADA

ಮಂಗಳೂರು: ಸಾವ೯ಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಿದ್ದವರಿಗೆ ದಂಡ

Published

on

ಮಂಗಳೂರು: ದ.ಕ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತಂಡವು ಬರ್ಕೆ ಪೊಲೀಸ್ ಠಾಣೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿಗಳ ತಂಡದೊಂದಿಗೆ ನಗರದ ಲಾಲ್‌ಬಾಗ್‌ನ ಸಾಯಿಬಿನ್ ಸಂಕೀರ್ಣ, ಬಲ್ಲಾಲ್‌ಬಾಗ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ಹಾಗೂ ಕೋಟ್ಪ – 2003 ಕಾಯ್ದೆ ಉಲ್ಲಂಘನೆ ಮಾಡಿರುವ ಅಂಗಡಿ ಮಾಲಕರಿಗೆ ಕಾನೂನಿನ ಅನ್ವಯ ದಂಡವಿಧಿಸಿ ಎಚ್ಚರಿಕೆ ನೀಡಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ ಹೆಚ್.ಆರ್. ಇವರ ಆದೇಶದಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ನವೀನ್ ಚಂದ್ರ ಕುಲಾಲ್ ಇವರ ನೇತೃತ್ವದಲ್ಲಿ ಕಾಯ್ದೆ ಉಲ್ಲಂಘನೆ ವಿರುದ್ಧ 92 ಪ್ರಕರಣ ದಾಖಲಿಸಲಾಯಿತು.

ಕಾರ್ಯಾಚರಣೆಯ ತಂಡದಲ್ಲಿ ಎಎಸ್‌ಐ ಸುಧಾಕರ್, ಆರೋಗ್ಯ ನಿರೀಕ್ಷಕರಾದ ದೀಪಿಕಾ, ಪುಂಡಲೀಕ ಲಕಾಟಿ, ಶೃತಿ ಸಾಲ್ಯಾನ್ ಉಪಸ್ಥಿತರಿದ್ದರು.

Continue Reading

DAKSHINA KANNADA

ಡೆಕೋರೇಶನ್ ಶೆಡ್ ಮೇಲೆ ದುಷ್ಕರ್ಮಿಗಳ ದಾಳಿ; ಕಾರ್ಮಿಕರಿಗೆ ಮಾರಣಾಂತಿಕ ಹಲ್ಲೆ

Published

on

ಉಳ್ಳಾಲ : ಮಂಗಳೂರು ನಗರ ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನೋವಾ ಕಾರಿನಲ್ಲಿ ಬಂದ ಆರು ಮಂದಿ ಮುಸುಕುಧಾರಿ ದುಷ್ಕರ್ಮಿಗಳ ತಂಡ ಕೊಲ್ಕತ್ತಾ ರಾಜ್ಯದ ಡೆಕೋರೇಶನ್‌ ಮಾಡುವ ಕಾರ್ಮಿಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಗಂಭೀರವಾಗಿ ಗಾಯಗೊಂಡ ಯುವಕರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲದ ಮಡ್ಯಾರ್ ಪ್ರದೇಶದಲ್ಲಿ ಸಮಾರಂಭಗಳಿಗೆ ಡೆಕೋರೇಶನ್‌ ಮಾಡುವ ಸಂಸ್ಥೆಯೊಂದಿದ್ದು, ಇಲ್ಲಿ ಇರುವ ಗೋಡೌನ್‌ನಲ್ಲಿ ಅನ್ಯ ರಾಜ್ಯದ ಕಾರ್ಮಿಕರು ಡೆಕೋರೇಶನ್ ಕೆಲಸವನ್ನು ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ರಾತ್ರಿ ಅವರು ಇಲ್ಲೇ ತಂಗುತ್ತಿದ್ದು, ನಿನ್ನೆ ರಾತ್ರಿ ಆರು ಮಂದಿ ಮುಸುಕುಧಾರಿಗಳ ತಂಡ ರಾಡ್, ರೀಪುಗಳಿಂದ ಈ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಪಾಳುಬಿದ್ದ ಮನೆಯ ಫ್ರಿಡ್ಜ್‌ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆ! 

ಹಲ್ಲೆಕೋರರು ತುಳು ಚೆನ್ನಾಗಿ ಮಾತನಾಡುತ್ತಿದ್ದು, ಸ್ಥಳೀಯ ಪ್ರದೇಶದ ಯುವಕರೇ ಎನ್ನುವುದು ಖಚಿತವಾಗಿದೆ. ಪೂರ್ವದ್ವೇಷದಿಂದ ಹಲ್ಲೆ ಮಾಡಿರುವ ಶಂಕೆ ಇದೆ ಎನ್ನಲಾಗಿದೆ. ಇನ್ನು ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗುತ್ತಿರುವ ದೃಶ್ಯಗಳು ಇಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ.

ಉಳ್ಳಾಲ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಇಂತಹ ಘಟನೆಗಳಿಂದ ಸುತ್ತಮುತ್ತಲಿನ ಪರಿಸರದ ಮಂದಿ ಆತಂಕಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

Continue Reading

LATEST NEWS

Trending

Exit mobile version