Connect with us

DAKSHINA KANNADA

ಅಂತಾರಾಜ್ಯ ಬಂಟ ಕ್ರೀಡೋತ್ಸವ; ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡ ಪ್ರಥಮ

Published

on

ಸುರತ್ಕಲ್: ಪಡುಬಿದ್ರೆ ಬಂಟರ ಸಂಘ ಮತ್ತು ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಪಡುಬಿದ್ರೆಯಲ್ಲಿ ದಿ. ರಮೇಶ್ ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಅಂತಾರಾಜ್ಯ ಬಂಟ ಕ್ರೀಡೋತ್ಸವದಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಸೆಮಿಫೈನಲ್ ನಲ್ಲಿ ಬಂಟ್ವಾಳ ತಂಡದ ಎದುರು ಜಯ ಸಾಧಿಸಿದ ಸುರತ್ಕಲ್ ತಂಡ ಫೈನಲ್ ನಲ್ಲಿ ಮಂಜೇಶ್ವರ ತಂಡವನ್ನು 2-0 ಅಂತರದಿಂದ ಸೋಲಿಸಿ ಪ್ರಶಸ್ತಿ ಜಯಿಸಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮುಣಿಯಾಲು ಉದಯಕುಮಾರ್ ಶೆಟ್ಟಿ ಪ್ರಶಸ್ತಿ ಹಸ್ತಾಂತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು, ಕ್ರೀಡಾ ಕಾರ್ಯದರ್ಶಿಗಳಾದ ಶಿಶಿರ್ ಶೆಟ್ಟಿ, ಬಬಿತಾ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು 75 ಸಾವಿರ ನಗದು ಮತ್ತು ಪ್ರಶಸ್ತಿಯನ್ನು ಒಳಗೊಂಡಿತ್ತು. ತರಬೇತುದಾರರಾದ ನಿನಾದ್ ಜಯರಾಮ್ ಶೆಟ್ಟಿ, ವಿಕ್ರಂ ಮಾಡ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಕರಾವಳಿ ಉತ್ಸವದ ಅಂಗವಾಗಿ ಸಿನೆಮಾ ಹಬ್ಬ; ಫಿಲ್ಮ್ ಫೆಸ್ಟಿವಲ್ ಉದ್ಘಾಟಿಸಿದ ಹಿನ್ನಲೆ ಗಾಯಕ ಗುರುಕಿರಣ್

Published

on

ಮಂಗಳೂರು : ಕರಾವಳಿ ಉತ್ಸವದ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಚಾಲನೆ ನೀಡಿದ್ದಾರೆ. ಮಂಗಳೂರಿನ ಭಾರತ್ ಮಾಲ್‌ನ ಭಾರತ್ ಸಿನೆಮಾಸ್‌ನಲ್ಲಿ ಇಂದು(ಜ.2) ಮತ್ತು ನಾಳೆ ಫಿಲ್ಮ್ ಫೆಸ್ಟಿವಲ್ ಅಯೋಜಿಸಲಾಗಿದೆ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹಾಗೂ ಮೇಯರ್ ಮನೋಜ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಗುರುಕಿರಣ್ ದೀಪ ಬೆಳಗಿಸಿ ಈ ಫಿಲ್ಮ್ ಫೆಸ್ಟಿವಲ್ ಉದ್ಘಾಟಿಸಿದ್ದಾರೆ.

ಭಾರತ್ ಮಾಲ್‌ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಜನಮೆಚ್ಚುಗೆ ಪಡೆದ 9 ಸಿನೆಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯಾಗಿ ಉಚಿತ ಸಿನೆಮಾ ವೀಕ್ಷಿಸುವ ಅವಕಾಶ ಸಿಗಲಿದೆ.

ಇಂದು ನಾಲ್ಕು ಕನ್ನಡ ಸಿನೆಮಾ ಹಾಗೂ ನಾಳೆ ನಾಲ್ಕು ಕನ್ನಡ ಮತ್ತು ಒಂದು ಕೊಂಕಣಿ ಸಿನೆಮಾ ಪ್ರದರ್ಶನವಾಗಲಿದೆ. ಫಿಲ್ಮ್ ಫೆಸ್ಟಿವಲ್ ಉದ್ಘಾಟನೆಯಾದ ಬಳಿಕ ಅರಿಷಡ್ವರ್ಗ ಕನ್ನಡ ಸಿನೆಮಾ ಪ್ರದರ್ಶನವಾಗಿದ್ದು, ಹಲವರು ಸಿನೆಮಾ ವೀಕ್ಷಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾರತ್‌ ಸಿನೆಮಾಸ್‌ ನ ಬಾಲಕೃಷ್ಣ ಶೆಟ್ಟಿ, ಸುಬ್ರಾಯ ಪೈ ಮೊದಲಾದವರು ಉಪಸ್ಥಿತರಿದ್ದರು.

ಯಾವೆಲ್ಲ ಸಿನಿಮಾ?

ಜ.2ರಂದು 10ಕ್ಕೆ ಕನ್ನಡದ “ಅರಿಷಡ್ವರ್ಗ, 12.30ಕ್ಕೆ “19-20-21′ (ಕನ್ನಡ) ಪ್ರದರ್ಶನಗೊಂಡಿದ್ದು, ಸಂಜೆ 6.30ಕ್ಕೆ ಮಧ್ಯಂತರ(ಕನ್ನಡ), ರಾತ್ರಿ 8ಕ್ಕೆ “ಕಾಂತಾರ(ಕನ್ನಡ) ಪ್ರದರ್ಶನಗೊಳ್ಳುವವು.

ಜ.3ರಂದು ಬೆಳಗ್ಗೆ 10.15ಕ್ಕೆ ಸಾರಾಂಶ(ಕನ್ನಡ) , 12.45ಕ್ಕೆ ತರ್ಪಣ(ಕೊಂಕಣಿ), ಮಧ್ಯಾಹ್ನ 3.15ಕ್ಕೆ ಶುದ್ಧಿ(ಕನ್ನಡ), ಸಂಜೆ 5.45ಕ್ಕೆ ಕುಬಿ ಮತ್ತು ಇಯಾಲ(ಕನ್ನಡ), ರಾತ್ರಿ 8ಕ್ಕೆ “ಗರುಡ ಗಮನ ವೃಷಭ ವಾಹನ'(ಕನ್ನಡ) ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಹಲವು ಕಾರ್ಯಕ್ರಮ ಆಯೋಜನೆ :

ಜ. 4 ಮತ್ತು 5 ರಂದು ಕದ್ರಿ ಪಾರ್ಕಿನಲ್ಲಿ ಯುವ ಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಅಂದು ಸಂಜೆ 6 ರಿಂದ 9 ರ ತನಕ ಸ್ಥಳೀಯ ಯುವ ಕಲಾವಿದರಿಂದ ಮ್ಯೂಸಿಕಲ್‌ ನೈಟ್‌ ಜರಗಲಿದೆ. ಅಲ್ಲದೆ, ಜ. 4  ರಂದು ಅಪರಾಹ್ನ 3 ರಿಂದ 6 ರ ತನಕ ಕಾರ್‌- ಬೈಕ್‌ ಎಕ್ಸ್‌ಪೊ ಏರ್ಪಡಿಸಲಾಗಿದೆ.

ಇದನ್ನೂ ಓದಿ : ಇನ್ಮುಂದೆ ನಾನು ಮಹಿಳೆಯರನ್ನು ನೋಡುವುದೇ ಇಲ್ಲ; ಹೊಸ ವರ್ಷಕ್ಕೆ ಖ್ಯಾತ ಡೈರೆಕ್ಟರ್ ಟ್ವೀಟ್ ವೈರಲ್ !

ಜ. 5 ರಂದು ಬೆಳಗ್ಗೆ 7 ರಿಂದ 8.30 ರ ತನಕ ವಾಯಲಿನ್‌ ವಾದಕರಿಂದ ‘ಉದಯ ರಾಗ’ ಕಾರ್ಯಕ್ರಮ, ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆ ತನಕ ಶ್ವಾನ ಪ್ರದರ್ಶನ ನಡೆಯಲಿದೆ. ಸುತ್ತ ಮುತ್ತಲ 2- 3 ಜಿಲ್ಲೆಗಳ ನಾಯಿಗಳ ಮಾಲಕರು ಶ್ವಾನಗಳನ್ನು ಪ್ರದರ್ಶಿಸಲಿದ್ದಾರೆ. ಪೊಲೀಸ್‌ ಶ್ವಾನ ದಳದ ಆಕರ್ಷಕ ಪ್ರದರ್ಶನ ಕೂಡ ಇರಲಿದೆ.

Continue Reading

DAKSHINA KANNADA

ಚಲಿಸುತ್ತಿದ್ದ ಅಟೋ ಗೆ ಅಡ್ಡ ಬಂದ ನಾಯಿ; ಅ*ಪಘಾತ ತಪ್ಪಿಸುವ ಯತ್ನದಲ್ಲಿ ಯಕ್ಷಗಾನ ಕಲಾವಿದನಿಗೆ ಗಾಯ

Published

on

ಕಿನ್ನಿಗೋಳಿ: ಚಲಿಸುತ್ತಿದ್ದ ಅಟೋ ಒಂದಕ್ಕೆ ನಾಯಿ ಅಡ್ದ ಬಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕಿನ್ನಿಗೋಳಿಯ ರಾಜರತ್ನಾಪುರದಲ್ಲಿ ನಡೆದಿದೆ.

ಗಾಯಗೊಂಡ ಆಟೋ ಚಾಲಕನನ್ನು ಕಟೀಲು ಮಲ್ಲಿಗೆಯಂಗಡಿ ಬಳಿಯ ನಿವಾಸಿ ಕಟೀಲು ಮೇಳದ ಕಲಾವಿದ ಆನಂದ್ ಎಂದು ಗುರುತಿಸಲಾಗಿದೆ. ಗಾಯಾಳು ಆನಂದ್ ಆಟೋದಲ್ಲಿ ಕಿನ್ನಿಗೋಳಿಯಿಂದ ಕಟೀಲು ಕಡೆಗೆ ಹೋಗುತ್ತಿದ್ದು ರಾಜರತ್ನಾಪುರ ಬಳಿ ನಾಯಿ ಅಡ್ಡ ಬಂದಿದೆ.

ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ಉರುಳಿದ ಶಾಲಾ ಬಸ್; ಓರ್ವ ವಿದ್ಯಾರ್ಥಿ ಬ*ಲಿ

ಈ ಸಂದರ್ಭ ಅ*ಪಘಾತ ತಪ್ಪಿಸಲು ಆಟೋ ಚಾಲಕ ಯತ್ನ ನಡೆಸಿದಾಗ ಆಟೋ ಪಲ್ಟಿಯಾಗಿದ್ದು ಸಮೀಪದ ಪೊದೆಯೊಳಗೆ ಆಟೋ ಬಿದ್ದಿದೆ. ಆಟೋ ಪಲ್ಟಿಯಾದ ರಭಸಕ್ಕೆ ,ಚಾಲಕನಿಗೆ ಗಂ*ಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದ ಆಟೋಗೆ ಸಂಪೂರ್ಣ ಹಾನಿಯಾಗಿದೆ.

Continue Reading

DAKSHINA KANNADA

ಕರಾವಳಿ ಉತ್ಸವಕ್ಕೆ ಸಿದ್ದವಾದ ಮಲ್ಟಿಪ್ಲೆಕ್ಸ್; ಇಂದು ಮತ್ತು ನಾಳೆ ನಡೆಯಲಿದೆ ಚಲನಚಿತ್ರೋತ್ಸವ

Published

on

ಮಂಗಳೂರು: ಕರಾವಳಿ ಉತ್ಸವಕ್ಕೆ ಇನ್ನಷ್ಟು ರಂಗು ತುಂಬಲು ಇದೇ ಮೊದಲ ಬಾರಿಗೆ ಚಲನ ಚಿತ್ರೋತ್ಸವ ಆಯೋಜಿಸಲಾಗಿದೆ.

ಇಂದು ಭಾರತ್ ಮಾಲ್‌ನ ಭಾರತ್ ಸಿನೆಮಾಸ್‌ನ ಮಲ್ಪಿಪ್ಲೆಕ್ಸ್ ಪರದೆಯಲ್ಲಿ ಸಿನೆಮಾಗಳನ್ನು ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇಂದು ಮತ್ತು ನಾಳೆ ಜನ ಮೆಚ್ಚುಗೆ ಪಡೆದ ಒಟ್ಟು ಒಂಬತ್ತು ಸಿನೆಮಾಗಳ ಪ್ರದರ್ಶನ ನಡೆಯಲಿದೆ.

ಇದನ್ನೂ ಓದಿ: ಕರಾವಳಿ ಉತ್ಸವದಲ್ಲಿ ಸೃಷ್ಠಿಯಾದ ಕೃತಕ ಅರಣ್ಯ

ಮುಂಜಾನೆ ಹತ್ತರಿಂದ ಆರಂಭವಾಗುವ ಈ ಸಿನೆಮಾಗಳು ರಾತ್ರಿ 8 ಗಂಟೆಯ ಶೋ ತನಕ ವೀಕ್ಷಿಸಲು ಅವಕಾಶ ಇದೆ. ಚಿತ್ರ ವೀಕ್ಷಣೆಗೆ ಉಚಿತ ಪ್ರವೇಶವಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆಯಲ್ಲಿ ಪ್ರವೇಶ ನೀಡಲಾಗುತ್ತದೆ.

ಕನ್ನಡ, ತುಳು, ಕೊಂಕಣಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಇದಲ್ಲದೆ ಇಂದು ಸಂಜೆ ಕರಾವಳಿ ಉತ್ಸವ ಮೈದಾನದಲ್ಲಿ ಬೆಂಗಳೂರಿನ ಮೆಲ್ಲೋಟ್ರಿ ಖ್ಯಾತಿಯ ರಂಜನ್ ಬ್ಯೂರಾ ಮತ್ತು ಬಳಗದವರಿಂದ ವಾದ್ಯ ಸಂಗೀತ ಕಾರ್ಯಕ್ರಮ ಕೂಡಾ ನಡೆಯಲಿದೆ.

Continue Reading

LATEST NEWS

Trending

Exit mobile version