Connect with us

LATEST NEWS

ಉಳ್ಳಾಲ: ಮಸೀದಿಗೆ ಮಧ್ಯರಾತ್ರಿ ನುಗ್ಗಿ ಮಹಿಳೆಯರ ಮುಂದೆ ಅಸಭ್ಯ ವರ್ತನೆ ಮಾಡಿದ ಆರೋಪಿ ಅರೆಸ್ಟ್..!

Published

on

ಮಂಗಳೂರು: ಮಸೀದಿಯಲ್ಲಿ ಮಹಿಳೆಯರ ನಮಾಜು ಕೊಠಡಿಗೆ ನುಗ್ಗಿ ಅಲ್ಲಿದ್ದ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ಮತ್ತು ಅಶ್ಲೀಲವಾಗಿ ವರ್ತಿಸಿದ ಅನ್ಯ ಧರ್ಮೀಯ ಯುವಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ಮೂಲದ ಸುಜಿತ್‌ ಶೆಟ್ಟಿ (26) ಎಂದು ಗುರುತಿಸಲಾಗಿದೆ.

ಏ.28 ರಂದು ಮುಸ್ಲಿಂಮರ ಉಪವಾಸ ವೃತದ 27ನೇ ದಿನದ ವಿಶೇಷ ಉಪವಾಸ ಮತ್ತು ಜಾಗರಣೆ ಪ್ರಯುಕ್ತ ತೊಕ್ಕುಟ್ಟುವಿನ ಹುದಾ ಜುಮ್ಮಾ ಮಸೀದಿಯಲ್ಲಿ ಏರ್ಪಡಿಸಿದ್ದ ‘ಲೈಲಾತುಲ ಖದರ್‌’ ಎಂಬ ಕಾರ್ಯಕ್ರಮ ಇತ್ತು.

ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಮಸೀದಿಯಲ್ಲಿ ಮಹಿಳೆಯರು ನಮಾಜು ಮಾಡುವ ಕೊಠಡಿಗೆ ಏಕಾಏಕಿ ನುಗ್ಗಿದ ಸುಜೀತ್ ಅಲ್ಲಿದ್ದ ಹೆಣ್ಣು ಮಕ್ಕಳ ಕೈ ಹಿಡಿದು ಎಳೆದಿದ್ದಾನೆ.

ಬಳಿಕ ಪ್ಯಾಂಟು ಜಾರಿಸಿ ಅಸಭ್ಯವಾಗಿ ವರ್ತಿಸಿ ಮಹಿಳೆಯರ ಮಾನಹಾನಿ ಮಾಡಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದಾನೆ.

ಈ ಬಗ್ಗೆ ಅಲ್ಲಿದ್ದ ಮಹಿಳೆಯರು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪ್ರಕರಣ ದಾಖಲಿಸಿದ್ದ ಉಳ್ಳಾಲ ಪೊಲೀಸರು ಆರೋಪಿ ಸುಜೀತ್‌ ಶೆಟ್ಟಿಯನ್ನು ಬಂಧಿಸಿದ್ದಾರೆ..

LATEST NEWS

ಹಿಂದಿಗೆ ರಿಮೇಕ್ ಆಗುತ್ತಿದೆ ಝೀ ಕನ್ನಡದ ಫೇಮಸ್‌ ಸೀರಿಯಲ್‌…! ಪ್ರೋಮೋ ರಿಲೀಸ್‌..!

Published

on

ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಸೀತಾ ರಾಮ’ ಧಾರಾವಾಹಿ ಪ್ರೇಕ್ಷಕರ ಮನ ಗೆದ್ದಿದೆ. ಈ ಧಾರಾವಾಹಿಗೆ ಒಳ್ಳೆಯ ಟಿಆರ್​ಪಿ ಸಿಗುತ್ತಿದೆ. ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್, ಪೂಜಾ ಲೋಕೇಶ್, ಅಶೋಕ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈಗ ಈ ಧಾರಾವಾಹಿ ಹಿಂದಿಗೆ ರಿಮೇಕ್ ಆಗುತ್ತಿದೆ. ಇದಕ್ಕೆ ‘ಮೇ ಹೂ ಸಾತ್ ತೆರೆ’ ಎನ್ನುವ ಶೀರ್ಷಿಕೆ ಇಡಲಾಗಿದೆ.


‘ಸೀತಾ ರಾಮ’ ಧಾರಾವಾಹಿ ಮರಾಠಿಯ ‘ಮಜಿ ತುಜಿ ರೆಶಿಮಗತ್’ ಧಾರಾವಾಹಿಯ ಕಥೆಯನ್ನು ಆಧರಿಸಿದೆ. ಜೀ ಮರಾಠಿಯಲ್ಲಿ 2021 ಆಗಸ್ಟ್​ ತಿಂಗಳಿಂದ 2023 ಜನವರಿವರೆಗೆ ಈ ಧಾರಾವಾಹಿ ಪ್ರಸಾರ ಕಂಡಿತ್ತು. ಈ ಧಾರಾವಾಹಿ ಒಟ್ಟೂ 458 ಎಪಿಸೋಡ್​ಗಳನ್ನು ಹೊಂದಿತ್ತು. ಪ್ರಾರ್ಥನಾ ಬೆಹೆರೆ ಹಾಗೂ ಶ್ರೇಯಸ್ ತಲ್ಪಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯನ್ನು ಕನ್ನಡಕ್ಕೆ ‘ಸೀತಾ ರಾಮ’ ಹೆಸರಲ್ಲಿ ರಿಮೇಕ್ ಮಾಡಲಾಯಿತು. ಈಗ ಧಾರಾವಾಹಿ ಹಿಂದಿಗೂ ರಿಮೇಕ್ ಆಗುತ್ತಿದೆ.

ಜೀ ಟಿವಿಯಲ್ಲಿ ‘ಮೇ ಹೂ ಸಾತ್ ತೆರೆ’ ಧಾರಾವಾಹಿ ಪ್ರಸಾರ ಕಾಣಲಿದೆ. ಸದ್ಯ ಪ್ರೋಮೋಗಳ ಮೂಲಕ ಧಾರಾವಾಹಿ ಗಮನ ಸೆಳೆಯುತ್ತಿದೆ. ಕನ್ನಡದಲ್ಲಿ ಗಗನ್ ಚಿನ್ನಪ್ಪ ಮಾಡಿರೋ ಪಾತ್ರವನ್ನು ಹಿಂದಿಯಲ್ಲಿ ಕರಣ್ ವೋಹ್ರಾ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ಅವರ ಪಾತ್ರವನ್ನು ಉಲ್ಕಾ ಗುಪ್ತಾ ಮಾಡುತ್ತಿದ್ದಾರೆ. ಉಲ್ಕಾ ಗುಪ್ತಾ ಅವರು ‘ಜಾನ್ಸಿ ಕಿ ರಾಣಿ’ ಧಾರಾವಾಹಿ ಮೂಲಕ ಪ್ರಸಿದ್ಧರಾಗಿದ್ದಾರೆ.

ಕಥೆಯಲ್ಲಿ ಬದಲಾವಣೆ :

ಕನ್ನಡದಲ್ಲಿ ಕಥಾ ನಾಯಕ ಉದ್ಯಮಿ. ಹಿಂದಿಯಲ್ಲಿ ಕರಣ್ ಅವರು ಉದ್ಯಮಿಯ ಪಾತ್ರವನ್ನೇ ಮಾಡುತ್ತಿದ್ದಾರೆ. ಕನ್ನಡದಲ್ಲಿ ಕಥಾ ನಾಯಕಿ ಮಧ್ಯಮ ವರ್ಗದ ಹುಡುಗಿ. ಹಿಂದಿಯಲ್ಲಿ ಕಥಾ ನಾಯಕಿ ಸಿಂಗರ್ ಆಗಬೇಕು ಎಂದು ಕನಸು ಕಾಣುವ ಸಿಂಗಲ್ ಪೇರೇಂಟ್ ಆಗಿ ತೋರಿಸಲಾಗಿದೆ. ಹಿಂದಿಯಲ್ಲಿ ಕಥಾ ನಾಯಕಿಗೆ ಮಗ ಇರುವುದಾಗಿ ತೋರಿಸಲಾಗಿದೆ ಆದರೆ ಕನ್ನಡದಲ್ಲಿ ಕಥಾ ನಾಯಕಿಗೆ ಮಗಳಿದ್ದಾಳೆ. ಏಪ್ರಿಲ್​ನಿಂದ ಈ ಧಾರಾವಾಹಿ ಪ್ರಸಾರ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ‘ಫುಲ್ ಹೌಸ್ ಮೀಡಿಯಾ’ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ.

Continue Reading

bangalore

ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾ*ಸ್ಟ್ ಆಗಿ ಯುವಕನ ದುರ್ಮರ*ಣ

Published

on

ಬೆಂಗಳೂರು : ಏರ್‌ ಪ್ರೆಶರ್‌ ಪೈಪ್‌ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯೊಳಗೆ ಕರುಳು ಬ್ಲಾಸ್ಟ್‌ ಆಗಿ ಯುವಕ ಮೃ*ತಪಟ್ಟಿದ್ದಾನೆ. ಹುಡುಗಾಟದಲ್ಲಿ ಆಡಿದ ಆಟ ಘನಘೋರ ಅಂತ್ಯ ಕಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಯೋಗೀಶ್(28) ಮೃ*ತ ಯುವಕ.

ಹುಡುಗಾಟಕ್ಕೆ ಹೋಯ್ತು ಪ್ರಾಣ…!

ಮಾರ್ಚ್ 25ರಂದು ಬೈಕ್‌ ರಿಪೇರಿಗಾಗಿ ಸಂಪಿಗೆಹಳ್ಳಿಯ ಸಿಎನ್‌ಸಿ (CNS) ಬೈಕ್ ಸರ್ವೀಸ್ ಸೆಂಟರ್‌ಗೆ ಯೋಗೀಶ್‌ ಎಂಬ ಯುವಕ ತೆರಳಿದ್ದ. ಅದೇ ಸರ್ವೀಸ್‌ ಸೆಂಟರ್‌ನಲ್ಲಿ ಯೋಗೀಶ್‌ ಸ್ನೇಹಿತ ಮುರುಳಿ ಎಂಬಾತ ಕೆಲಸ ಮಾಡುತ್ತಿದ್ದ. ಸ್ನೇಹಿತರಿಬ್ಬರೂ ಒಬ್ಬರಿಗೊಬ್ಬರು ತರ್ಲೆ, ತಂಟೆ ಮಾಡಿಕೊಂಡು ಆಟವಾಡುತ್ತಿದ್ದರು. ಸರ್ವೀಸ್‌ ಸೆಂಟರ್‌ನಲ್ಲಿದ್ದ ಏರ್ ಪ್ಲೇಶರ್ ಪೈಪ್‌ನಿಂದ ಇಬ್ಬರು ಆಟ ಆಡುತ್ತಿದ್ದರು.

ಮೊದಲಿಗೆ ಮುರುಳಿ, ಯೋಗೀಶ್‌ನ ಮುಖ ಹಾಗೂ ಹೊಟ್ಟೆಗೆ ಗಾಳಿ ಬಿಟ್ಟಿದ್ದ. ಇದಾದ ಬಳಿಕ ಯೋಗಿಶ್ ಗುದದ್ವಾರಕ್ಕೆ ಏರ್‌ ಪ್ಲೇಶರ್‌ನಿಂದ ಗಾಳಿ ಬಿಟ್ಟಿದ್ದಾನೆ. ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಯೋಗೇಶ್‌ ಹೊಟ್ಟೆ ಊದಿಕೊಂಡು ಕರುಳು ಬ್ಲಾ*ಸ್ಟ್ ಆಗಿದೆ. ತಕ್ಷಣ ಯೋಗೀಶ್ ನರಳಾಟ ಕಂಡು ಮುರುಳಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗಿಶ್ ಮೃ*ತಪಟ್ಟಿದ್ದಾನೆ.

ಸದ್ಯ ಯೋಗೀಶ್‌ ಪೋಷಕರು ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮುರಳಿಯನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ.

Continue Reading

LATEST NEWS

ಕನ್ಯಾನ ಸದಾಶಿವ ಶೆಟ್ಟಿಗೆ ಮಾತೃ ವಿಯೋಗ

Published

on

ಬೆಳ್ತಂಗಡಿ : ಕೊಡುಗೈ ದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರ ತಾಯಿ, ಕನ್ಯಾನ ದಿವಂಗತ ಪಕೀರ ಶೆಟ್ಟಿ ಅವರ ಪತ್ನಿ ಲೀಲಾವತಿ ಶೆಟ್ಟಿ ನಿಧ*ನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರು ಮಕ್ಕಳಾದ ಕನ್ಯಾನ ಸದಾಶಿವ ಶೆಟ್ಟಿ, ಚಂದ್ರಹಾಸ ಶೆಟ್ಟಿ, ರಘುರಾಮ ಶೆಟ್ಟಿ, ರವೀಂದ್ರ ಶೆಟ್ಟಿ, ವಿಜಯಲಕ್ಷ್ಮೀ ಶೆಟ್ಟಿ, ದಿವಾಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಗಣ್ಯರ ಸಂತಾಪ :

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಶಶಿಧರ್ ಶೆಟ್ಟಿ, ಯಕ್ಷಧ್ರುವ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Continue Reading

LATEST NEWS

Trending