Connect with us

    LATEST NEWS

    ಇನ್ಸ್ಟಾ, ಫೇಸ್‌ಬುಕ್, ವಾಟ್ಸ್‌ಆಪ್ ಬ್ಯಾನ್..!! ಅಯ್ಯೋ.. ಮುಂದೇನು..!?

    Published

    on

    ಬಾಂಗ್ಲಾದೇಶ/ಮಂಗಳೂರು: ಜನರು ಹೆಚ್ಚಾಗಿ ಎಡಿಕ್ಟ್‌ ಆಗಿರುವ ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ಗಳನ್ನು ಬಾಂಗ್ಲಾದೇಶದಲ್ಲಿ ಬ್ಯಾನ್ ಮಾಡಲಾಗಿದೆ. ಹೌದು, ಈಗಾಗಲೇ ಇನ್ಸ್ಟಾ, ವ್ಯಾಟ್ಸಾಪ್, ಯೂಟ್ಯೂಬ್‌ ಗಳು ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಇದೀಗ ಬಾಂಗ್ಲಾದೇಶದಲ್ಲಿ ಇವೆಲ್ಲವನ್ನೂ ಆ. 2ರಂದು ಬ್ಯಾನ್ ಮಾಡಲಾಗಿದೆ.

    ಹಲವಾರು ಜನರು ಸೋಶೀಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ಗಳನ್ನು ಆದಾಯದ ಮೂಲವಾಗಿ ತೆಗೆದುಕೊಂಡಿದ್ದಾರೆ. ಇದನ್ನೇ ನಂಬಿಕೊಂಡು ಅದೆಷ್ಟೋ ಮಂದಿ ಜೀವನ ನಡೆಸುತ್ತಿದ್ದಾರೆ. ಆದರೆ ಇದೀಗ ನೆರೆಯ ದೇಶ ಯೂಟ್ಯೂಬ್, ಇನ್ಸ್ಟಾ, ವ್ಯಾಟ್ಸ್‌ಆಪ್‌ ಹಾಗೂ ಟಿಕ್‌ಟಾಕ್‌ ಅನ್ನು ನಿಷೇಧ ಹೇರಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಗ್ರಾಮದಲ್ಲಿ ಬಂದು ಬಿದ್ದ ಪ್ಯಾರಾಚ್ಯೂಟ್‌..! ಇದರಲ್ಲಿದ್ದ ವಸ್ತು ನೋಡಿ ದಂಗಾದ ಗ್ರಾಮಸ್ಥರು

    ಮೆಟಾ ಒಡೆತನದ ವ್ಯಾಟ್ಸ್‌ಆಪ್, ಇನ್‌ಸ್ಟಾ ಗೂಗಲ್ ಒಡೆತನದ ಯೂಟ್ಯೂಬ್ ಮತ್ತು ಬೆಟೆಡ್ಯಾನ್ಸ್‌ ಒಡೆತನದ ಟಿಕ್‌ಟಾಕ್‌ಅನ್ನು ಆ.2ರಂದು ಬ್ಯಾನ್ ಮಾಡಲಾಗಿದೆ. ಇದೇ ಮಾದರಿಯಲ್ಲಿ ಟರ್ಕಿಯಲ್ಲೂಈ ಕ್ರಮವನ್ನು ಅನುಸರಿಸಿದ ಬಳಿಕ ಬಾಂಗ್ಲಾದೇಶವೂ ಕೂಡಾ ಈ ನಿರ್ಧಾರವನ್ನು ತೆಗೆದುಕೊಂಡಿದೆ.

    ಬ್ಯಾನ್‌ ಯಾಕೆ?
    ಕಳೆದ ಜುಲೈ ತಿಂಗಳಿನಲ್ಲಿ ಮೆಟಾ ಒಡೆತನದ ಫೇಸ್​​ಬುಕ್​ ಮತ್ತು ಇನ್​​​ಸ್ಟಾಗ್ರಾಂ ಬ್ಯಾನ್​ ಮಾಡಲು ಮುಂದಾಗಿತ್ತು. ಈ ಪ್ಲಾಟ್​​ಫಾರ್ಮ್​ಗಳು ಅಶಾಂತಿಗೆ ಕಾರಣವಾಗಿದ್ದ ಕಾರಣ ಸ್ಥಗಿತಗೊಳಿಸಲಾಯಿತು. ಅದರಂತೆಯೇ ಆಗಸ್ಟ್​ 2 ಮಧ್ಯಾಹ್ನ 12.15ಕ್ಕೆ ದೇಶದ ಎಲ್ಲಾ ಮೊಬೈಲ್​ ನೆಟ್​​ವರ್ಕ್​​ ಮೂಲಕ ಪ್ರವೇಶವನ್ನು ಕಡಿತಗೊಳಿಸಿದೆ.

    DAKSHINA KANNADA

    ಛೀ! ಎಂಥ ಹೇಯ ಕೃ*ತ್ಯ; ಜೀವಂತ ಸಾಕು ನಾಯಿಯನ್ನು ಕಸ ವಿಲೇವಾರಿ ವಾಹನಕ್ಕೆ ತುಂಬಿಸಿದ ಮಾಲಕ

    Published

    on

    ಮಂಗಳೂರು : ಮನೆಯಲ್ಲಿ ಪ್ರಾಣಿ, ಪಕ್ಷಿಗಳನ್ನು ಸಾಕುವುದನ್ನು ಹಲವರು ಇಷ್ಟ ಪಡುತ್ತಾರೆ. ಹೆಚ್ಚಿನವರ ಮನೆಯಲ್ಲಿ ನಾಯಿ, ಬೆಕ್ಕುಗಳನ್ನು ಸಾಕುವುದನ್ನು ಕಾಣುತ್ತೇವೆ. ತಮ್ಮ ಮಕ್ಕಳಂತೆ ಅವುಗಳನ್ನು ಮುದ್ದು ಮಾಡುತ್ತಾರೆ. ಆದ್ರೆ, ಇಲ್ಲಿ ಮಾತ್ರ ಆಗಿರೋದು ಬೇರೆ.

    ಹೌದು, ಜೀವಂತ ಸಾಕು ನಾಯಿಯನ್ನು ಮನೆ ಮಾಲಕರು ಪಾಲಿಕೆಯ ಕಸ ವಿಲೇವಾರಿ ಮಾಡುವ ವಾಹನಕ್ಕೆ ಕೊಟ್ಟ ಹೇಯ ಕೃ*ತ್ಯ ಮಂಗಳೂರಿನ ಡೊಂಗರಕೇರಿಯಲ್ಲಿ ನಡೆದಿದೆ. ಕೆಲ ವರ್ಷಗಳಿಂದ ಮನೆಯಲ್ಲಿ ಸಾಕಿದ್ದ ಹೆಣ್ಣು ಶ್ವಾನವನ್ನು ನಗರದ ಕಸ ವಿಲೇವಾರಿ ಮಾಡುವ ಪಾಲಿಕೆಯ ಲಾರಿಗೆ ಹಾಕಿ ನಗರದ ಹೊರವಲಯದ ವಾಮಾಂಜೂರು ಡಂಪಿಂಗ್ ಯಾರ್ಡ್ ಬಳಿ ಬಿಡಲಾಗಿದೆ.

    ಇದನ್ನೂ ಓದಿ : ಮಕ್ಕಳಿಗೆ ಹಣ್ಣು ಕೊಡುವಾಗ ಎಚ್ಚರ! ರಂಬುಟಾನ್ ಹಣ್ಣು ಗಂಟಲಲ್ಲಿ ಸಿಲುಕಿ ಬಾಲಕಿ ಸಾ*ವು

    ಘಟನೆಯ ವಿಡೀಯೋ ಸಿಟಿ ಟಿವಿಯಲ್ಲಿ ದಾಖಲಾಗಿದೆ. ಜೊತೆಗೆ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.  ಈ ಅಮಾನವೀಯ ಘಟನೆಗೆ ಪ್ರಾಣಿ ಪ್ರಿಯರು ಹಾಗೂ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

     

    Continue Reading

    FILM

    ಕನ್ನಡ ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಮುಹೂರ್ತ ಫಿಕ್ಸ್‌! ಹೋಸ್ಟ್‌ ಕೂಡ ಕನ್‌ಫರ್ಮ್‌!

    Published

    on

    ಬಿಗ್‌ ಬಾಸ್‌ ವೀಕ್ಷಕರಿಗೆ ಅಂತೂ ಸಿಹಿ ಸುದ್ದಿ ಬಂದಿದೆ. ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ನಿರೂಪಣೆ ಮಾಡೋರು ಯಾರು? ಯಾವಾಗಿನಿಂದ ಶುರು ? ಎಂದು ತಿಳಿಯಲು ಮುಂದೆ ಓದಿ.

    ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಅಂತೂ ಮುಹೂರ್ತ ಫಿಕ್ಸ್‌ ಆಗಿದೆ. ಬಹು ದಿನಗಳಿಂದ ಕಾದಿದ್ದ ವೀಕ್ಷಕರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಇದೇ ತಿಂಗಳ 28 ರಿಂದ 11 ನೇ ಬಿಗ್ ಬಾಸ್ ಶುರುವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲೇ 11 ನೇ ಬಿಗ್ ಬಾಸ್ ಆಗುತ್ತಿದೆ ಎಂಬುದೇ ವಿಶೇಷ. ಈಗಾಗಲೇ ಬಿಗ್ ಬಾಸ್ ಪ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ. ಸದ್ದಿಲ್ಲದೆ ಹೈದರಾಬಾದ್ ನಲ್ಲಿ ಫ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ.

    ಸೀಸನ್ 11 ಕ್ಕೆ ಕಿಚ್ಚ ಇರಲ್ಲ ಅನ್ನೋ ಗಾಳಿ ಸುದ್ದಿಗೆ ಬ್ರೇಕ್ ಕನ್ಪರ್ಮ್

    ಈ ಮುಂಚೆ ಸೀಸನ್‌ 11ರಲ್ಲಿ ರಿಷಬ್‌ ಶೆಟ್ಟಿ ಅಥವಾ ಗೋಲ್ಡನ್‌ ಸ್ಟಾರ್‌ ಗಣೇಶ್‌ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತಿದ್ದಾರೆ ಎಂದು ಗಾಸಿಪ್‌ಗಳು ಹರಿದಾಡುತ್ತಿದ್ದವು. ಇದೀಗ ಈ ಎಲ್ಲ ವದಂತಿಗಳಿಗೆ ಫುಲ್‌ಸ್ಟಾಪ್‌ ಇಡಲಾಗಿದೆ. ಇದೇ ತಿಂಗಳ 23 ಕ್ಕೆ ಬಿಗ್‌ ಬಾಸ್‌ ತಂಡ ಪ್ರೆಸ್‌ ಮೀಟ್‌ ಹಮ್ಮಿಕೊಂಡಿದೆ. ಸುದೀಪ್ ನೇತೃತ್ವದಲ್ಲೇ ಬಿಗ್‌ ಬಾಸ್‌ ಪ್ರೆಸ್‌ ಮೀಟ್‌ ನಡೆಯುತ್ತಿದೆ.

    ಈ ಮುಂಚೆ ವಾಹಿನಿ ಹಂಚಿಕೊಂಡ ಪ್ರೊಮೋದಲ್ಲಿ ಹ್ಯಾಶ್ ಟ್ಯಾಗ್‌ನಲ್ಲಿ ಕಿಚ್ಚ ಸುದೀಪ್ ಹೆಸರು ಇಲ್ಲವಾಗಿತ್ತು ಹಾಗಾಗಿಯೇ ಕಿಚ್ಚ ಇರಲ್ಲ ಎನ್ನುವ ಗಾಸಿಪ್‌ ಶುರುವಾಗಿತ್ತು,

    ಸ್ಪರ್ಧಿಗಳು ಯಾರೆಲ್ಲ?

    ಬಿಗ್ ಬಾಸ್ ಸ್ಪರ್ಧಿಗಳಾಗಿ ಸೋಷಿಯಲ್ ಮೀಡಿಯಾ influencer ಗಳು ಇರಲಿದ್ದಾರೆ ಎನ್ನಲಾಗುತ್ತಿದೆ. ಕಿರುತೆರೆ ಸ್ಟಾರ್ ಗಳ ಜೊತೆ ಬಿಗ್ ಬಾಸ್ ನಲ್ಲಿ ಕಾಣಿಸುತ್ತಿದ್ದಾರೆ ಎನ್ನಲಾಗಿದೆ. ಕಿರುತೆರೆ ನಟ ತ್ರಿವಿಕ್ರಮ್ 11ನೇ ಬಿಗ್ ಸೀಸನ್‌ಗೆ ಹೋಗೋದು ಬಹುತೇಕ ಫಿಕ್ಸ್‌ ಎನ್ನಲಾಗುತ್ತಿದೆ.

    Continue Reading

    LATEST NEWS

    ತಂಗಿಯ ಅದ್ಧೂರಿ ಮದುವೆಗಾಗಿ ಗಾಂಜಾ ಮಾರಲು ಹೋದ ಅಣ್ಣ ಜೈಲು ಪಾಲು..!!

    Published

    on

    ಬೆಂಗಳೂರು/ಮಂಗಳೂರು: ತನ್ನ ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಲು ಹೋಗಿ ಅಣ್ಣ ಪೊಲೀಸರಲ್ಲಿ ಲಾಕ್ ಆದ ಘಟನೆ ಬೆಂಗಳೂರಿನ ಬಾಸಣವಾಡಿಯಲ್ಲಿ ನಡೆದಿದೆ. ಅದ್ಧೂರಿ ಮದುವೆಗೆ ಗಾಂಜಾ ಮಾರಾಟ ಮಾಡಲು ಹೊರಟಿದ್ದ ಅಣ್ಣ ಇದೀಗ ಪೊಲೀಸರಲ್ಲಿ ಬಂಧಿಯಾಗಿದ್ದಾನೆ. ಬದ್ರುದ್ದಿನ್ (25) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.

    ಹೋಟೆಲ್‌ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಈತನಿಗೆ ತನ್ನ ತಂಗಿಯ ಮದುವೆ ಮಾಡೋದು ದೊಡ್ಡ ಸವಾಲಾಗಿ ಹೋಗಿತ್ತು. ಬರುವ ಸಂಬಳದಲ್ಲಿ ಮನೆ ನಿರ್ವಹಣೆ ಮಾಡುವುದು ಕಷ್ಟಕರವಾಗಿತ್ತು. ಈ ಮಧ್ಯೆ ಯಾರೋ ಸ್ನೇಹಿತರಿಂದ ಗಾಂಜಾ ಮಾರಿ ಹಣ ಮಾಡಬಹುದು ಎಂಬುದನ್ನು ತಿಳುದುಕೊಳ್ಳುತ್ತಾನೆ. ಬಳಿಕ ಪೆಡ್ಲರ್‌ ಒಬ್ಬರ ಸಂಪರ್ಕವನ್ನು ಮಾಡಿ ಒರಿಸ್ಸಾಗೆ ಹೋಗಿದ್ದಾನೆ. ಅಲ್ಲಿ ಲಾರಿ ಚಾಲಕನ ಪರಿಚಯವಾಗಿ ಆತನ ಮೂಲಕ ಗಾಂಜಾ ಖರೀದಿ ಮಾಡಿ ಬೆಂಗಳೂರಿಗೆ ಬರುತ್ತಿದ್ದ. ಅಲ್ಲಿಂದ ದುರಂತ್ ಎಕ್ಸ್‌ಪ್ರೆಸ್‌ ಟ್ರೈನ್‌ ಮೂಲಕ ಬರುವಾಗ ಎಸ್‌.ಎಂ.ಟಿ ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ.

    ವರ್ಕ್‌ ಫ್ರಮ್‌ ಹೋಮ್‌ ಲಿಂಕ್‌ ಒತ್ತಿ 67ಸಾವಿರ ರೂ ಕಳೆದುಕೊಂಡ ಮಹಿಳೆ..! ದೂರು ದಾಖಲು

    ಹೆಣ್ಣೂರು ಪೊಲೀಸರು ಒರಿಸ್ಸಾದ ದಿಲೀಪ್, ಶಿವರಾಜ್, ರಾಮ್ ಹಂತಲ್ ಎಂಬುವವರು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದಾಗಲೇ ಲಾಕ್ ಮಾಡಿದ ಪೊಲೀಸರು, 21 ಲಕ್ಷ ಮೌಲ್ಯದ 21 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

    Continue Reading

    LATEST NEWS

    Trending