Monday, October 18, 2021

ಅಮೇರಿಕಾ ಯುದ್ದ ವಿಮಾನದಲ್ಲಿ ಜಾನುವಾರುಗಳ ರೀತಿ ಅಫ್ಘನ್ನರ ಸಾಗಾಟ ಫೊಟೋ ವೈರಲ್‌

ಕಾಬೂಲ್‌: ಅಫಘಾನಿಸ್ತಾನದ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ವಿಮಾನ ಏರಲು ಅದರ ಹಿಂದೆ ಓಡುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದೀಗ ಸೇನಾ ವಿಮಾನದಲ್ಲಿ ಕಿಕ್ಕಿರಿದು ಭಯದಿಂದ ಕುಳಿತ ಫೊಟೋ ವೈರಲ್‌ ಆಗುತ್ತಿದೆ. ಕೇವಲ 250 ಜನ ಸೈನಿಕರನ್ನು ಸಾಗಿಸುವ 600 ಕ್ಕೂ ಹೆಚ್ಚು ಅಫ್ಘಾನ್ ನಾಗರಿಕರು ಕೊನೆಯ ಕ್ಷಣದಲ್ಲಿ ಅಮೆರಿಕದ ಏರ್ ಫೋರ್ಸ್ ನ ಸರಕು ಸಾಗಣೆ ವಿಮಾನದಲ್ಲಿ ಖತರ್ ಗೆ ಪ್ರಯಾಣಿಸಿದ್ದಾರೆ.


ಅಮೆರಿಕದ ವಾಯುಪಡೆಯ ಸಿ -17 ಗ್ಲೋಬ್‌ಮಾಸ್ಟರ್ III ರ ಸರಕು ಸಾಗಣೆ ವಿಮಾನದ ದೊಳಗೆ ನೂರಾರು ಭಯಭೀತರಾದ ಅಫ್ಘಾನಿಯರು ಕುಳಿತಿರುವ ಆಘಾತಕಾರಿ ಫೋಟೊಗಳನ್ನು  ಹಂಚಿಕೊಳ್ಳಲಾಗಿದೆ.


ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಎಲ್ಲರೂ ಇದರಲ್ಲಿ ಪ್ರಯಾಣಿಸಿದ್ದಾರೆ. ನ್ಯೂಸ್ ವೆಬ್‌ಸೈಟ್ ಡಿಫೆನ್ಸ್ ಒನ್ ಪ್ರಕಾರ, ಸರಕು ಸಾರಿಗೆ ವಿಮಾನವು ಒಟ್ಟು 640 ಅಫ್ಘಾನಿಸ್ತಾನಿಗಳನ್ನು ಹೊತ್ತೊಯ್ದಿದೆ. ಈ ವಿಮಾನವು ಖತರ್ ಗೆ ತೆರಳಿದ್ದು, ಅಲ್ಲಿ ಅಫ್ಘನ್ನರು ಇಳಿದರು ಎಂದು ವೆಬ್‌ಸೈಟ್ ವರದಿ ಮಾಡಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...