ಮಂಗಳೂರು/ ವಾಷಿಂಗ್ಟನ್ : 47ನೇ ಯುಎಸ್ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದರು. ಭಾರತದ ಅಳಿಯ ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಪರವಾಗಿ ನಿಂತಿದ್ದ ವ್ಯಾನ್ಸ್ ಇದೀಗ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸದ್ಯ ಈ ಜೆಡಿ ವ್ಯಾನ್ಸ್‌ನತ್ತ ಎಲ್ಲರ ಚಿತ್ತ ಹರಿದಿದ್ದು ಜೊತೆಗೆ ಅವರೊಂದಿಗೆ ಕಾಣಿಸಿಕೊಂಡ ಅವರ ಪತ್ನಿ ಉಷಾ ಚಿಲುಕುರಿಯೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಗಮನಸೆಳೆದಿದ್ದಾರೆ. ಇದೀಗ ಇವರ ಹಿನ್ನಲೆ ಬಗ್ಗೆ ಸಹಜವಾಗೇ ಕುತೂಹಲ ಹುಟ್ಟಿದೆ.
ಜೆಡಿ ವ್ಯಾನ್ಸ್ ಯಾರು?
1984 ಆಗಸ್ಟ್ 2ರಂದು ಓಹಿಯೋದ ಮಿಡಲ್‌ಟೌನ್‌ನಲ್ಲಿ ಜನಿಸಿದ ಜೆಡಿ ವ್ಯಾನ್ಸ್ ಸದ್ಯ ಅಮೆರಿಕಾದ ಉಪಾಧ್ಯಕ್ಷ. ಇವರಿಗೂ ಭಾರತಕ್ಕೂ ಇರುವ ನಂಟು ಆಗಾಗ ಸುದ್ದಿಯಾಗುತ್ತಿರುತ್ತದೆ. ಜೆಡಿ ವ್ಯಾನ್ಸ್ ಬಾಲ್ಯದಲ್ಲಿ ಬಡತನ ಕಂಡವರು. ತಾಯಿಗೆ ದುಷ್ಚಟಗಳಿದ್ದರಿಂದ ವ್ಯಾನ್ಸ್ ತಂದೆಯ ಆಸರೆಯಲ್ಲಿ ಬೆಳೆದರು. ಓಹಿಯೋ ಸ್ಟೇಟ್ ಯೂನಿವರ್ಸಿಟಿ ಮತ್ತು ಯೇಲ್ ಲಾ ಸ್ಕೂಲ್‌ನಲ್ಲಿ ಓದಿದ ವ್ಯಾನ್ಸ್ ಬಳಿಕ, ಸಿಲಿಕಾನ್ ವ್ಯಾಲಿಯಲ್ಲಿ ವೆಂಚರ್ ಕ್ಯಾಪಿಟಲಿಸ್ಟ್ ಆಗಿ ಕೆಲಸಕ್ಕೆ ಸೇರಿದರು. ವ್ಯಾನ್ಸ್ ಒಬ್ಬ ರಾಜಕಾರಣಿ, ಲೇಖಕನೂ ಹೌದು. ಓಹಿಯೋದಿಂದ ಜೂನಿಯರ್ ಸೆನೆಟರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಭಾರತದೊಂದಿಗಿದೆ ವ್ಯಾನ್ಸ್ ನಂಟು:
ವ್ಯಾನ್ಸ್‌ಗೆ ಭಾರತದೊಂದಿಗೆ ಪ್ರಮುಖ ನಂಟೊಂದು ಬೆಸೆದಿದೆ. ಅವರು ಭಾರತದ ಅಳಿಯ. ಅವರು ವರಿಸಿರುವುದು ಭಾರತೀಯ ಮೂಲದ ಉಷಾ ಚಿಲುಕುರಿ ಎಂಬವರನ್ನು. ಹಾಗಾಗಿ ಭಾರತದೊಂದಿಗೆ ವ್ಯಾನ್ಸ್ ನಂಟು ದೊಡ್ಡದೆಂದರೆ ತಪ್ಪಾಗಲಾರದು. ಅಂದ್ಹಾಗೆ ವ್ಯಾನ್ಸ್ ಹಾಗೂ ಉಷಾ 2014ರಲ್ಲಿ ಮದುವೆಯಾದರು. ದಂಪತಿಗೆ ಐವಾನ್, ವಿವೇಕ್ ಮತ್ತು ಮಿರಾಬೆಲ್ ಎಂಬ ಮೂವರು ಮಕ್ಕಳಿದ್ದಾರೆ.
ಉಷಾ ಚಿಲುಕುರಿ ಭಾರತದ ರಾಜ್ಯವಾದ ಆಂಧ್ರಪ್ರದೇಶ ಮೂಲದವರು. ಉಷಾ ಹಿಂದೂ ಆಗಿದ್ದರೆ, ವ್ಯಾನ್ಸ್ ರೋಮನ್ ಕ್ಯಾಥೋಲಿಕ್. ಆಂಧ್ರದ ಅಳಿಯ ಈಗ ದೊಡ್ಡಣ್ಣನ ಉಪಾಧ್ಯಕ್ಷ. ಹೀಗಾಗಿ ಉಷಾ ಚಿಲುಕುರಿ ಹೆಸರೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಉಷಾ ಎಲ್ಲಿಯವರು?
ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ಭಾರತೀಯ ಮೂಲದವರು. ಅವರು ಸ್ಯಾನ್ ಫ್ರಾನ್ಸಿಸ್ಕೋದ ಹಿರಿಯ ವಕೀಲೆ. ಉಷಾ ಅವರ ಪೋಷಕರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪಮಾರು ಗ್ರಾಮದ ನಿವಾಸಿಗಳು. ಅಪ್ಪ ಚಿಲುಕುರಿ ರಾಧಾಕೃಷ್ಣ ಮತ್ತು ತಾಯಿ ಲಕ್ಷ್ಮೀ. 1980ರಲ್ಲಿ ಅವರು ಅಮೆರಿಕಕ್ಕೆ ತೆರಳಿದರು. ಉಷಾ ಹುಟ್ಟಿದ್ದು ಕ್ಯಾಲಿಫೋರ್ನಿಯಾದಲ್ಲಿ. ಅಂದ್ಹಾಗೆ ಉಷಾ ತಂದೆ ಇಂಜಿನಿಯರ್, ತಾಯಿ ಜೀವ ವಿಜ್ಞಾನಿ.
ಉಷಾ ಅವರು ಯೇಲ್ ವಿಶ್ವವಿದ್ಯಾಲಯದಿಂದ ಇತಿಹಾಸವನ್ನು ಅಧ್ಯಯನ ಮಾಡಿದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಆಧುನಿಕ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಯೇಲ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ, ಅವರು ಜೆಡಿ ವ್ಯಾನ್ಸ್ ಅವರನ್ನು ಭೇಟಿಯಾದರು. ಉಷಾ ಮತ್ತು ವ್ಯಾನ್ಸ್ ಕೆಂಟುಕಿಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು.
ಮಂಗಳೂರು/ಮುಂಬೈ : ಬಾಲಿವುಡ್ ನಟ ಸೈಫ್ ಆಲಿ ಖಾನ್ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚೂರಿ ಇ*ರಿತಕ್ಕೊಳಗಾಗಿ ಗಂ*ಭೀರವಾಗಿ ಗಾ*ಯಗೊಂಡ ಸೈಫ್ ಆಲಿ ಖಾನ್ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೈಫ್ ಆಲಿ ಖಾನ್‌ಗೆ 2 ಸರ್ಜರಿ ಮಾಡಲಾಗಿದೆ. ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಸೈಫ್ ಆಲಿ ಖಾನ್ ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೈಫ್ ಪತ್ನಿ ಕರೀನಾ ಕಪೂರ್ ಖಾನ್, ತಾಯಿ ಶರ್ಮಿಳಾ ಠಾಗೂರ್ ಜೊತೆ ಬಾಂದ್ರಾ ಮನೆಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ. ಸೈಫ್‌ಗೆ ಕೆಲ ತಿಂಗಳುಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗಿದೆ.
ಗಾ*ಯ ಗುಣವಾಗಲು ಹಾಗೂ ಸೈಫ್ ಸಂಪೂರ್ಣ ಚೇತರಿಸಿಕೊಳ್ಳಲು ಕೆಲವು ಸಮಯ ಹಿಡಿಯಲಿದೆ. ಹೀಗಾಗಿ ವಿಶ್ರಾಂತಿ ಅಗತ್ಯವಿದೆ. ಇನ್ಫೆಕ್ಷನ್ ಆಗದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ಮುಂಬೈನ ಲೀಲಾವತಿ ಆಸ್ಪತ್ರೆ ಬಳಿ ಭಾರಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು. ಅಲ್ಲದೇ, ಸೈಫ್ ಆಲಿ ಖಾನ್ ಮನೆ ಬಳಿಯೂ ಪೊಲೀಸರನ್ನು ನಿಯೋಜಿಸಲಾಗಿದೆ.
ಮಂಗಳೂರು/ಭುವನೇಶ್ವರ : ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಛತ್ತೀಸಗಢ – ಒಡಿಶಾ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹಿರಿಯ ಕೇಡರ್ ಸೇರಿದಂತೆ 10ಕ್ಕೂ ಅಧಿಕ ನಕ್ಸಲರು ಹ*ತರಾಗಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಸೋಜಿ ಒಡಿಶಾ ಮತ್ತು ಛತ್ತೀಸ್‌ಗಢ ಪೊಲೀಸರು ಅಂತರಾಜ್ಯ ಗಡಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾವೋವಾದಿಗಳನ್ನು ಹ*ತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಕ್ಸಲ್ ಮುಕ್ತ ಭಾರತದ ಸಂಕಲ್ಪ ಮತ್ತು ಭದ್ರತಾ ಪಡೆಗಳ ಜಂಟಿ ಪ್ರಯತ್ನದಿಂದ ನಕ್ಸಲಿಸಂ ಇಂದು ಕೊ*ನೆಯುಸಿರೆಳೆದಿದೆ. ಇದು ನಕ್ಸಲಿಸಂಗೆ ಮತ್ತೊಂದು ಪ್ರಬಲ ಹೊ*ಡೆತ. ನಕ್ಸಲ್ ಮುಕ್ತ ಭಾರತ ನಿರ್ಮಾಣದಲ್ಲಿ ನಮ್ಮ ಭದ್ರತಾ ಪಡೆಗಳು ಪ್ರಮುಖ ಯಶಸ್ಸನ್ನು ಸಾಧಿಸಿವೆ ಎಂದಿದ್ದಾರೆ.
ಸಿಆರ್‌ಪಿಎಫ್, ಸೋಜಿ ಒಡಿಶಾ ಮತ್ತು ಛತ್ತೀಸ್‌ಗಢ ಪೊಲೀಸರು ಒಡಿಶಾ-ಛತ್ತೀಸ್‌ಗಢ ಗಡಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 14 ನಕ್ಸಲರನ್ನು ಹತ್ಯೆಮಾಡಿದ್ದಾರೆ’ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸೋಮವಾರ ಮುಂಜಾನೆ ಜಂಟಿ ಕಾರ್ಯಾಚರಣೆ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲರು ಸಾ*ವಿಗೀಡಾಗಿದ್ದು, ಕೋಬ್ರಾ ಜವಾನನೊಬ್ಬ ಗಾ*ಯಗೊಂಡಿರುವ ಬಗ್ಗೆ ವರದಿಯಾಗಿತ್ತು. ಛತ್ತೀಸ್‌ಗಢ – ಒಡಿಶಾ ಗಡಿಯಲ್ಲಿರುವ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸೋಮವಾರ(ಜ.20) ತಡರಾತ್ರಿ ಮತ್ತು ಮಂಗಳವಾರ(ಜ.21) ಮುಂಜಾನೆ ಗುಂ*ಡಿನ ಚಕಮಕಿ ನಡೆದಿದೆ. ಈ ವೇಳೆ 10ಕ್ಕೂ ಅಧಿಕ ನಕ್ಸಲರನ್ನು ಹೊ*ಡೆದುರುಳಿಸಲಾಗಿದೆ. ಕಾರ್ಯಾಚರಣೆ ಮುಂದುವರಿದಿದ್ದು, ನಕ್ಸಲರ ಸಾ*ವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.
ಮಂಗಳೂರು/ಇಂದೋರ್ : ವಿಶ್ವದ ಅತಿದೊಡ್ಡ ಕಾರ್ಯಕ್ರಮ ಮಹಾಕುಂಭ ಮೇಳ. ಅಲ್ಲಿ ಚಿತ್ರ, ವಿಚಿತ್ರ ವೇಷ, ನಿಲುವುಗಳನ್ನು ಹೊಂದಿರುವ ಸಂತ, ನಾಗಸಾಧುಗಳು ಹೈಲೆಟ್. ಆದರೆ, ಈ ಬಾರಿ ಆ ಹುಡುಗಿ ಗಮನ ಸೆಳೆದಿದ್ದಳು.
ಮಹಾಕುಂಭಮೇಳದಲ್ಲಿ ಸರ, ಮಣಿ, ರುದ್ರಾಕ್ಷಿ ಮಾರುತ್ತಿದ್ದ ಬಟ್ಟಲು ಕಂಗಳ, ಕಂದು ವರ್ಣದ ಚೆಲುವೆ ಮೊನಾಲಿಸಾ ಎಲ್ಲರ ಚಿತ್ತಾಕರ್ಷಿಸಿದ್ದಳು. ಆಕೆಯ ಫೋಟೋ, ವೀಡಿಯೋಗಳು ವೈರಲ್ ಆಗ ತೊಡಗಿದ್ದವು. ಆಕೆಯನ್ನು ನೋಡಲು ಜನ ಮುಗಿಬಿದ್ದರು. ಆಕೆಯ ಸಂದರ್ಶನ, ಸೆಲ್ಫಿ ಹೆಚ್ಚಾಯಿತು. ಹೀಗಾಗಿ ಮೊನಾಲಿಸಾ ತಂದೆ ಆಕೆಯನ್ನು ವಾಪಾಸು ಮನೆಗೆ ಕಳುಹಿಸಿದ್ದರು. ಇದರಿಂದ ಮಹಾಕುಂಭಮೇಳಕ್ಕೆ ಭೇಟಿ ಕೊಡುವವರಿಗೆ ಈಕೆಯ ನೋಡುವ ಅವಕಾಶ ಇರಲಿಲ್ಲ. ಸೈಲೆಂಟಾಗಿ ಕಣ್ಮರೆಯಾದ ಬೆರಗು ಕಂಗಳ ಕೋಮಲೆ ಎಲ್ಲಿ ಹೋದಳಪ್ಪ ಎನ್ನುತ್ತಿರುವಾಗಲೇ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. ಅದೂ ಮಹಾಕುಂಭಮೇಳದಲ್ಲಿ ಅಲ್ಲ, ಬದಲಿಗೆ ಸೋಶಿಯಲ್ ಮೀಡಿಯಾದಲ್ಲಿ.
ಮಹಾಕುಂಭಮೇಳದಲ್ಲಿ ಸೋಜಿಗದಂತೆ ಸೆಳೆದ ಮೊನಾಲಿಸಾ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾಳೆ. ಆಕೆ ಬ್ಯೂಟಿ ಪಾರ್ಲರ್ ಮೆಟ್ಟಿಲೇರಿದ್ದು, ಬ್ಯೂಟೀಷನ್ ಒಬ್ಬರು ಆಕೆಗೆ ಹೊಸ ಲುಕ್ ಕೊಟ್ಟಿದ್ದಾರೆ.
ಹೊಸ ಲುಕ್‌ನಲ್ಲಿ ಮೊನಾಲಿಸಾ ಕಂಗೊಳಿಸುತ್ತಿದ್ದಾಳೆ. ಕೂದಲಿನ ವಿನ್ಯಾಸ ಬದಲಾಗಿದೆ. ಈ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮೊನಾಲಿಸಾ ಹೊಸ ಲುಕ್‌ಗೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ.