Connect with us

    LATEST NEWS

    ಬಾಹ್ಯಾಕಾಶ ಇತಿಹಾಸದಲ್ಲಿ ಸಾಧನೆ ಮೆರೆದ ಭಾರತ; ಸ್ಪೇಡೆಕ್ಸ್ ಕಾರ್ಯಾಚರಣೆ ಯಶಸ್ವಿ

    Published

    on

    ಮಂಗಳೂರು/ಬೆಂಗಳೂರು : ಬಾಹ್ಯಾಕಾಶ ಇತಿಹಾಸದಲ್ಲಿ ಭಾರತ ಮತ್ತೊಂದು ಸಾಧನೆ ಮೆರೆದಿದೆ. ಇಸ್ರೋ ಸ್ಪೇಡೆಕ್ಸ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಅಂತರಿಕ್ಷದಲ್ಲಿ ಎರಡು ನೌಕೆಗಳನ್ನು ಜೋಡಿಸುವ ಮೂಲಕ ಇಸ್ರೋ ಯಶಸ್ವಿಯಾಗಿದ್ದು,  ಬಾಹ್ಯಾಕಾಶದಲ್ಲಿ ಯಶಸ್ವಿ ಡಾಕಿಂಗ್ ಮಾಡುವ ಸಾಮರ್ಥ್ಯ ಗಳಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹಿರಿಮೆ ಭಾರತಕ್ಕೆ ದಕ್ಕಿದೆ.

    ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದ್ದು, ಬಾಹ್ಯಾಕಾಶ ನೌಕೆ ಡಾಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೊಂದು ಐತಿಹಾಸಿಕ ಕ್ಷಣ ಎಂದಿದೆ. ಡಿಸೆಂಬರ್ 30 ರಂದು ಪಿಎಸ್‌ಎಲ್‌ವಿ  – ಸಿ 60 ರಾಕೆಟ್‌ನಲ್ಲಿ ಉಡಾವಣೆಯಾದ ಎರಡು ಉಪಗ್ರಹಗಳಾದ SDX01 ಮತ್ತು SDXO2 ಡಾಕಿಂಗ್‌ನಲ್ಲಿ ಒಳಗೊಂಡಿತ್ತು. ಬಹು ಪ್ರಯತ್ನಗಳ ಬಳಿಕ ಉಪಗ್ರಹಗಳನ್ನು ಯಶಸ್ವಿಯಾಗಿ ಡಾಕಿಂಗ್ ಮಾಡಲಾಯಿತು.

    ಇದನ್ನೂ ಓದಿ : ಮಂಗಳೂರು : ಬ್ಯಾಡ್ಮಿಂಟನ್ ಕೋರ್ಟ್‌ನಲ್ಲೇ ಕು*ಸಿದುಬಿದ್ದು ವಿದ್ಯಾರ್ಥಿ ಸಾ*ವು

    ಮೋದಿ ಮೆಚ್ಚುಗೆ :

    ಪ್ರಧಾನಿ ನರೇಂದ್ರ ಮೋದಿ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಸ್ರೋ ತಂಡವನ್ನು ಅಭಿನಂದಿಸಿರುವ ಅವರು, ಅಂತರಿಕ್ಷ ಡಾಕಿಂಗ್ ಪ್ರಯೋಗ ಯೋಜನೆ ಭವಿಷ್ಯದಲ್ಲಿ ಅಂತರಿಕ್ಷ ಕಾರ್ಯಾಚರಣೆಗಳಿಗೆ ಮಹತ್ವದ ಮೈಲಿಗಲ್ಲು ಎಂದಿದ್ದಾರೆ.

    LATEST NEWS

    ಎಟಿಎಂಗೆ ಹಣ ತುಂಬಲು ಬಂದ ಸಿಬ್ಬಂದಿ ಮೇಲೆ ಗುಂ*ಡಿನ ದಾ*ಳಿ; 93 ಲಕ್ಷ ದರೋಡೆ

    Published

    on

    ಮಂಗಳೂರು/ಬೀದರ್ : ಎಟಿಎಂಗೆ ಹಣ ತುಂಬಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂ*ಡಿನ ದಾ*ಳಿ ನಡೆಸಿರುವ ಘಟನೆ ಬೀದರ್‌ನ ಎಸ್‌ಬಿಐ ಮುಖ್ಯ ಕಚೇರಿ‌ ಮುಂದೆ ಗುರುವಾರ(ಜ.16) ನಡೆದಿದೆ.

    ಎಟಿಎಂಗೆ ಹಣ ತುಂಬಲು ಬಂದ ಸಿಬ್ಬಂದಿ ಮೇಲೆ ಖದೀಮರು ಕಣ್ಣಿಗೆ ಖಾರದ‌ ಪುಡಿ ಎರಚಿ, ಗುಂ*ಡು ಹಾ*ರಿಸಿ 93 ಲಕ್ಷ ಲೂಟಿ ಮಾಡಿ ಪರಾರಿಯಾಗಿದ್ದಾರೆ.  ಗುಂಡೇಟಿಗೆ ಇಬ್ಬರು ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ. ಗಿರಿ ವೆಂಕಟೇಶ್, ಶಿವಕುಮಾರ್ ಮೃ*ತಪಟ್ಟವರು.

    ಇದನ್ನೂ ಓದಿ : ಅಂದಿನ ಖ್ಯಾತ ಮಾಡಲ್ ಇಂದಿನ ಸನ್ಯಾಸಿನಿ ; ಯಾರು ಈ ಸುಂದರ ಸಾಧ್ವಿ ?

    ಎಸ್​ಬಿಐ ಬ್ಯಾಂಕ್​ ಸಿಬ್ಬಂದಿ ಜಿಎಸ್‌ಸಿ ವಾಹನದಲ್ಲಿ ಲಕ್ಷಾಂತರ ಹಣವನ್ನು ತೆಗೆದುಕೊಂಡು ಬಂದಿದ್ದರು. ಇನ್ನೇನು ಎಟಿಎಂಗೆ ಹಣ ಹಾಕಬೇಕು ಅನ್ನುವಷ್ಟರಲ್ಲಿ ದರೋಡೆಕೋರರು ಏಕಾಏಕಿ ಐದು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಓರ್ವ ಸಿಬ್ಬಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಮತ್ತೋರ್ವ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾ*ವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

     

     

     

     

    Continue Reading

    DAKSHINA KANNADA

    ತುಳು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ‘ಗೋಲ್ಡನ್ ಮೂವೀಸ್’; ಕುದ್ರೋಳಿ ಕ್ಷೇತ್ರದಲ್ಲಿ ‘ಪ್ರೊಡಕ್ಷನ್ ನಂ 1’ಗೆ ಅದ್ದೂರಿ ಚಾಲನೆ

    Published

    on

    ಮಂಗಳೂರು : ಚಂದನವನದಲ್ಲಿ ಸಿನಿಮಾ ನಿರ್ಮಾಣ ಮಾಡಿ ಗೆದ್ದಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್  ಅವರ ಪತ್ನಿ ಶಿಲ್ಪಾ ಗಣೇಶ್  ಕೋಸ್ಟಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ಗೋಲ್ಡನ್ ಮೂವೀಸ್ ಸಂಸ್ಥೆ ತುಳು ಸಿನೆಮಾ ಇಂಡಸ್ಟ್ರಿಗೆ ಕಾಲಿಟ್ಟಿದೆ. ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಈ ಪ್ರೊಡಕ್ಷನ್‌ನ ಮೊದಲ  ತುಳು ಸಿನಿಮಾ ಪ್ರೊಡಕ್ಷನ್ ನಂ 1ಗೆ ಮುಹೂರ್ತ ನೆರವೇರಿಸಲಾಗಿದೆ.

    ಉದ್ಯಮಿ ಎಂ ಆರ್ ಜಿ ಗ್ರೂಪ್‌ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅವರು ಮೊದಲ ಕ್ಲ್ಯಾಪ್‌ ಮಾಡಿದ್ದು, ಕುದ್ರೋಳಿ ಕ್ಷೇತ್ರದ ನವ ನಿರ್ಮಾಣದ ರೂವಾರಿ ಜನಾರ್ದನ ಪೂಜಾರಿ ಅವರ ಆಶೀರ್ವಾದೊಂದಿಗೆ ನಟ ಗಣೇಶ್ ಕ್ಯಾಮೆರಾ ರೋಲ್ ಮಾಡಿದ್ದಾರೆ.

    ಕಾರ್ಯಕ್ರಮದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್, ಉದ್ಯಮಿ ರೋಹನ್ ಮೊಂತೆರೋ, ಲೀಲಾಕ್ಷ ಕರ್ಕೇರ , ತುಳು ಸಿನೆಮಾದ ಕಲಾವಿದರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ.

    ಗಣೇಶ್ ಹೇಳಿದ್ದೇನು?

    ಈ ಬಗ್ಗೆ ಮಾಹಿತಿ ನೀಡಿದ ನಟ ಗಣೇಶ್ , ನಾಲ್ಕು ವರ್ಷದ ಹಿಂದೆ ಮಂಗಳೂರಿಗೆ ಬಂದಾಗ ತುಳು ಸಿನೆಮಾ ಮಾಡಬೇಕು ಅಂತ ಯೋಚನೆ ಬಂದಿತ್ತು. ಉತ್ತಮ ಕಥೆಗಾಗಿ ಕಾಯುತ್ತಿದ್ದು, ಈಗ ಅಂತಹ ಒಂದು ಉತ್ತಮ ಕಥೆ ಸಿಕ್ಕಿದೆ. ಹೀಗಾಗಿ ಶಿಲ್ಪಾ ಈ ಸಿನೆಮಾ ಮಾಡಲು ಮುಂದಾಗಿದ್ದಾಳೆ. ನನ್ನ ನಂಟು ತುಳುನಾಡಿನ ಜೊತೆ ಜಾಸ್ತಿ ಇದ್ದ ಕಾರಣ ಅವಕಾಶ ಸಿಕ್ಕರೆ ಈ ಸಿನೆಮಾದಲ್ಲಿ ಹಾಡಿನ ಸೀನ್‌ನಲ್ಲಾದ್ರೂ ಕಾಣಸಿಕೊಳ್ಳುವುದಾಗಿ ಹೇಳಿದ್ದಾರೆ.

    ಪ್ರೊಡಕ್ಷನ್ ನಂಬರ್ 1 ಸಿನಿಮಾ ತುಳುನಾಡಿನ ಸೊಗಡಿನೊಂದಿಗೆ ಸುಂದರ ಸಾಂಸಾರಿಕ ಕಥೆಯನ್ನು ಹೊಂದಿರುವ ಸಿನೆಮಾವಾಗಿದ್ದು, ನಾಯಕ ನಟನಾಗಿ ನಿತ್ಯ ಪ್ರಕಾಶ್ ಬಂಟ್ವಾಳ ಅವರು ಮೊದಲ ಬಾರಿಗೆ ಸಿನೆಮಾಗೆ ಎಂಟ್ರಿ ಕೊಟ್ಟಿದ್ದು, ಅಮೃತಾ ನಾಯಕ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

    ಇದನ್ನೂ ಓದಿ : ಅಂದಿನ ಖ್ಯಾತ ಮಾಡಲ್ ಇಂದಿನ ಸನ್ಯಾಸಿನಿ ; ಯಾರು ಈ ಸುಂದರ ಸಾಧ್ವಿ ?

    ಇನ್ನು ತುಳು ರಂಗಭೂಮಿ ಹಾಗೂ ತುಳು ಚಿತ್ರರಂಗದ  ಪ್ರಮುಖ ಕಲಾವಿದರು ಈ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

     

     

    Continue Reading

    LATEST NEWS

    ಅಂದಿನ ಖ್ಯಾತ ಮಾಡಲ್ ಇಂದಿನ ಸನ್ಯಾಸಿನಿ ; ಯಾರು ಈ ಸುಂದರ ಸಾಧ್ವಿ ?

    Published

    on

    ಮಂಗಳೂರು/ಪ್ರಯಾಗ್‌ರಾಜ್ : ಈಗಾಗಲೇ ಮಹಾ ಕುಂಭಮೇಳ 2025  ಪ್ರಾರಂಭವಾಗಿದೆ. ಮಹಾ ಕುಂಭಮೇಳದ ಮೊದಲ ದಿನ, ಪುಷ್ಯ ಪೂರ್ಣಿಮೆಯಂದು ಸಾಧ್ವಿಯೊಬ್ಬರ ಫೋಟೋ  ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿವೆ. ವೈರಲ್ ಆಗಿರುವ ಈ ಫೋಟೋಗಳನ್ನು ಮಹಾ ಕುಂಭಮೇಳದ ‘ಅತ್ಯಂತ ಸುಂದರ ಸಾಧ್ವಿ’ ಎಂಬುವುದಾಗಿ ವರ್ಣಿಸಲಾಗುತ್ತಿದೆ. ಹಾಗಾದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸುಂದರಿ ‘ಸಾಧ್ವಿ’ ಯಾರು ? ಅವಳ ಹಿನ್ನಲೆ ಏನು ? ಎಂದು ತಿಳಿಯೋಣ.

    ಹರ್ಷ ರಿಚಾರಿಯಾ ಎಂಬ  ಅತ್ಯಂತ ಸುಂದರ ಸಾಧ್ವಿಯಾಗಿ 2025 ರ ಮಹಾ ಕುಂಭಮೇಳದ ಸಂದರ್ಭ ಪ್ರಯಾಗರಾಜ್ ತಲುಪಿದ್ದಾರೆ. ಇವರು ಮೂಲತಃ ಭೋಪಾಲ್ ನಿವಾಸಿಯಾಗಿದ್ದು, ಪ್ರಸ್ತುತ  ಉತ್ತರಾಖಂಡದಲ್ಲಿ ವಾಸಿಸುತ್ತಿದ್ದಾರೆ. ಹರ್ಷ ರಿಚಾರಿಯಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಇವರು 21 ಜನವರಿ 2019 ರಂದು ಟ್ರಾವೆಲರ್ ಹರ್ಷ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು.

    ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದಗಿರಿ ಜಿ ಮಹಾರಾಜ್ ಅವರ ಶಿಷ್ಯೆ ಹರ್ಷ ರಿಚಾರಿಯಾ ಎಂದು ಹೇಳಲಾಗುತ್ತಿದೆ. ಹರ್ಷ ಕೇವಲ 2 ವರ್ಷಗಳ ಹಿಂದೆ ಸಾಧ್ವಿಯಾಗಿದ್ದಾರೆ. ಹರ್ಷ ರಿಚಾರಿಯಾ ಕೂಡ ಸಾಮಾಜಿಕ ಮಾಧ್ಯಮ ಪ್ರಭಾವಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆ ಆಂಕರ್ ಹರ್ಷ ರಿಚಾರಿಯಾ ಎಂಬ ಹೆಸರಿನಲ್ಲಿದೆ. ಸಾಧ್ವಿ ಆಗುವ ಮೊದಲು, ಹರ್ಷ ಮಾಡೆಲ್ ಮತ್ತು ಸೆಲೆಬ್ರಿಟಿ ಆಂಕರ್ ಆಗಿದ್ದರು. ಹರ್ಷ ಆಂಕರ್-ಮಾಡೆಲ್ ಆಗಿರುವುದರ ಜೊತೆಗೆ, ಮೇಕಪ್ ಕಲಾವಿದೆ ಮತ್ತು ಯೋಗ ಬೋಧಕಿಯೂ ಆಗಿದ್ದರು. ಹರ್ಷ ರಿಚಾರಿಯಾ ಸಾಧ್ವಿಯಾಗಲು ಕಾರಣವೇನು ಎಂದು ಕೇಳಿದಾಗ ” ಮನಸ್ಸಿಗೆ ಶಾಂತಿ ಬೇಕು ಹಾಗಾಗಿ ಈ ನಿರ್ಧಾರ ಕೈಗೊಂಡಿರುವೆ” ಎಂದು ಹೇಳಿದ್ದಾರೆ.  ಸನ್ಯಾಸತ್ವ ಸ್ವೀಕರಿಸುವ ವೇಳೆ ಅವರಿಗೆ 30 ವರ್ಷ ವಯಸ್ಸು. “ತಾನು ಉತ್ತರಾಖಂಡದಿಂದ ಬಂದಿದ್ದೇನೆ. ಆಚಾರ್ಯ ಮಹಾಮಂಡಲೇಶ್ವರ ಜಿ ಅವರ ಶಿಷ್ಯೆ” ಎಂದು  ಮಹಾಕುಂಭ ಮೇಳದಲ್ಲಿ ಹೇಳಿಕೊಂಡಿದ್ದಾರೆ.

    Continue Reading

    LATEST NEWS

    Trending