LATEST NEWS
ಭಾರತಕ್ಕೆ ದೊಡ್ಡ ಆಘಾತ.. ವಿನೇಶ್ ಫೋಗಾಟ್ ಒಲಿಂಪಿಕ್ಸ್ನಿಂದ ಅನರ್ಹ
ಆಗಸ್ಟ್ 6 ರಂದು ಒಲಿಂಪಿಕ್ಸ್ನಲ್ಲಿ ನಡೆದ ಮಹಿಳೆಯರ 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತದ ವಿನೇಶ್ ಫೋಗಟ್ ಇದೀಗ ಸ್ಪರ್ಧೆಯಿಂದ ಅನರ್ಹಗೊಂಡಿದ್ದಾರೆ.
ವಾಸ್ತವವಾಗಿ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯಲ್ಲಿ ಅವರ ತೂಕವು ನಿಗದಿತ ಮಿತಿಗಿಂತ 100 ಗ್ರಾಂ ಹೆಚ್ಚಿರುವುದು ಕಂಡುಬಂದಿದೆ. ನಿಯಮಗಳ ಪ್ರಕಾರ, ಯಾವುದೇ ಕುಸ್ತಿಪಟುವಿಗೆ ಯಾವುದೇ ವಿಭಾಗದಲ್ಲಿ 100 ಗ್ರಾಂ ಹೆಚ್ಚುವರಿ ತೂಕದ ಭತ್ಯೆ ನೀಡಲಾಗುತ್ತದೆ. ಆದರೆ ವಿನೇಶ್ ಅವರ ತೂಕ ಇದಕ್ಕಿಂತ ಹೆಚ್ಚಿದೆ ಹೀಗಾಗಿ ಅವರು ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
ವಿನೇಶ್ ಫೋಗಟ್ಗೆ ಬಿಗ್ ಶಾಕ್
ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಕೂಡ ವಿನೇಶ್ ಫೋಗಟ್ ಅನರ್ಹತೆಯನ್ನು ಖಚಿತಪಡಿಸಿದೆ. ವಿನೇಶ್ ಇಂದು ಮಧ್ಯಾಹ್ನ 12:45 ಕ್ಕೆ ಯುಎಸ್ಎ ಕುಸ್ತಿಪಟು ವಿರುದ್ಧ ಚಿನ್ನದ ಪದಕದ ಪಂದ್ಯವನ್ನು ಆಡಬೇಕಾಗಿತ್ತು. ಆದರೆ ನಿನ್ನೆ ನಡೆದ ತೂಕ ಪರೀಕ್ಷೆಯಲ್ಲಿ ವಿನೇಶ್ ಅವರ ತೂಕ ನಿಗದಿಗಿಂತ ಹೆಚ್ಚಿತ್ತು. ಹೀಗಾಗಿ ತಂಡವು ರಾತ್ರಿಯಿಡೀ ಅವರ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸಿತು. ಆದರೆ ಇಂದು ಬೆಳಿಗ್ಗೆ ನಡೆದ ತೂಕ ಪರೀಕ್ಷೆಯಲ್ಲಿ ಅವರ ತೂಕವು 50 ಕೆಜಿಗಿಂತ ಸ್ವಲ್ಪ ಹೆಚ್ಚಿತ್ತು. ಹೀಗಾಗಿ ಅವರನ್ನು ಅನರ್ಹಗೊಳಿಸಲಾಗಿದೆ.
ಸದ್ಯಕ್ಕೆ ಭಾರತ ತಂಡದಿಂದ ಯಾವುದೇ ಪ್ರತಿಕ್ರಿಯೆ ನಿರೀಕ್ಷಿಸುವಂತಿಲ್ಲ. ಜೊತೆಗೆ ವಿನೇಶ್ ಅವರ ಗೌಪ್ಯತೆಯನ್ನು ಗೌರವಿಸಲು ನಾವೆಲ್ಲರೂ ನಿಮ್ಮನ್ನು ವಿನಂತಿಸುತ್ತೇವೆ. ಇದರಿಂದ ನಾವು ಮುಂಬರುವ ಈವೆಂಟ್‌ನತ್ತ ಗಮನ ಹರಿಸಬಹುದು ಎಂದು ಐಒಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿನೇಶ್ಗೆ ಯಾವುದೇ ಪದಕ ಸಿಗುವುದಿಲ್ಲ..!
ಫೈನಲ್ ಸ್ಪರ್ಧೆಗೂ ಮುನ್ನ ವಿನೇಶ್ ಫೋಗಟ್ ಅನರ್ಹಗೊಂಡಿರುವುದರಿಂದಾಗಿ ಇದೀಗ 50 ಕೆ.ಜಿ. ವಿಭಾಗದಲ್ಲಿ ಯಾವುದೇ ಕುಸ್ತಿಪಟು ಬೆಳ್ಳಿ ಪದಕ ಪಡೆಯಲು ಸಾಧ್ಯವಾಗುವುದಿಲ್ಲ. ಉಳಿದಂತೆ ಈ ವಿಭಾಗದಲ್ಲಿ ವಿನೇಶ್ ಅವರೊಂದಿಗೆ ಫೈನಲ್ನಲ್ಲಿ ಸ್ಪರ್ಧಿಸಬೇಕಿದ್ದ ಅಮೆರಿಕದ ಕುಸ್ತಿಪಟುಗೆ ಚಿನ್ನದ ಪದಕ ಸಿಗಲಿದೆ. ಆದರೆ ಚೊಚ್ಚಲ ಪದಕದ ನಿರೀಕ್ಷೆಯಲ್ಲಿದ್ದ ವಿನೇಶ್ ಅವರಿಗೆ ಯಾವುದೇ ಪದಕ ಸಿಗುವುದಿಲ್ಲ.
ವಾಸ್ತವವಾಗಿ ಈ ಹಿಂದೆ 53 ಕೆಜಿ ವಿಭಾಗದಲ್ಲಿ ಭಾಗವಹಿಸುತ್ತಿದ್ದ ವಿನೇಶ್, 50 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆಯಲು ಅಧಿಕ ತೂಕದ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಅವರು ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿಯೂ ಇದೇ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಯಿತು. ಆದರೆ ಅತ್ಯಂತ ಕಡಿಮೆ ಅಂತರದಿಂದ ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
LATEST NEWS
ಜ್ಯೂಸ್‌ನಲ್ಲಿ ಮೂತ್ರ ಮಿಕ್ಸ್..! ಅಂಗಡಿ ಮಾಲೀಕ ಪೊಲೀಸ್ ವಶಕ್ಕೆ..!
ಉತ್ತರ ಪ್ರದೇಶ : ಜ್ಯೂಸ್‌ಗೆ ಮೂತ್ರ ಬೆರೆಸಿ ಗ್ರಾಹಕರಿಗೆ ನೀಡುತ್ತಿದ್ದ ಜ್ಯೂಸ್ ಅಂಗಡಿ ಮಾಲೀಕ ಹಾಗೂ ಆತನ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ಜ್ಯೂಸ್ ಕುಡಿದ ಜನರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಬಿಸಿಲಿನ ತಾಪಕ್ಕೆ ಜ್ಯೂಸ್ ಕುಡಿದು ಬಾಯಾರಿಕೆ ತೀರಿಸಿಕೊಳ್ಳುತ್ತಿದ್ದ ಜನರಿಗೆ ಜ್ಯೂಸ್ ಅಂಗಡಿಯವ ಮೂತ್ರ ಕುಡಿಸಿದ ಘಟನೆ ಇದು. ಇದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದ್ದು, ಸದ್ಯ ಅಂಗಡಿ ಮಾಲೀಕ ಪೊಲೀಸರ ಅತಿಥಿಯಾಗಿದ್ದಾನೆ. ಜ್ಯೂಸ್ ಕುಡಿದ ಜನರಿಗೆ ಅದರ ರುಚಿ ಹಾಗೂ ವಾಸನೆಯಿಂದ ಅನುಮಾನ ಬಂದಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜ್ಯೂಸ್ ಅಂಗಡಿಯಲ್ಲಿ ಪರಿಶೀಲನೆ ನಡೆಸಿದಾಗ ಸೀಲ್ ಮಾಡಿದ ಕ್ಯಾನ್‌ನಲ್ಲಿ ಮೂತ್ರ ತುಂಬಿಸಿಟ್ಟಿದ್ದು ಕಂಡು ಬಂದಿದೆ.
ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ್ದ ಜನರು ಅಂಗಡಿ ಮಾಲೀಕ ಸಮೀರ್ ಎಂಬಾತನ್ನು ಹಿಡಿದು ಸರಿಯಾಗಿ ಗೂಸ ನೀಡಿದ್ದಾರೆ. ಬಳಿಕ ಅಂಗಡಿಯನ್ನು ಸೀಝ್ ಮಾಡಿದ ಪೊಲೀಸರು ಕ್ಯಾನ್‌ನಲ್ಲಿದ್ದ ಮೂತ್ರವನ್ನು ಪರೀಕ್ಷೆಗೆ ಲ್ಯಾಬ್‌ಗೆ ಕಳುಹಿಸಿದ್ದಾರೆ. ಜ್ಯೂಸ್ ಅಂಗಡಿಯಲ್ಲಿ ಮೂತ್ರ ಸ್ಟಾಕ್ ಇಟ್ಟ ಬಗ್ಗೆ ಅಂಗಡಿ ಮಾಲೀಕ ಪೊಲೀಸರಿಗೆ ಯಾವುದೇ ಸಮಜಾಯಿಶಿ ನೀಡಿಲ್ಲ. ಹೀಗಾಗಿ ಈತ ಜ್ಯೂಸ್ ಜೊತೆಯಲ್ಲಿ ಜನರಿಗೆ ಮೂತ್ರ ಮಿಕ್ಸ್ ಮಾಡಿ ಕೊಡ್ತಾ ಇದ್ದ ಅನ್ನೋದು ಖಾತ್ರಿಯಾಗಿದೆ.
LATEST NEWS
ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಸಜ್ಜು
ಮುಂಬೈ: ಮುಂಬರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡ ಸಜ್ಜಾಗುತ್ತಿದ್ದು, ಎಲ್ಲರ ಕಣ್ಣು ವಿರಾಟ್ ಕೊಹ್ಲಿಯತ್ತ ನೆಟ್ಟಿದೆ. ಈಗಾಗಲೇ ಟಿ20 ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿರುವ ಅನುಭವಿ ಬ್ಯಾಟರ್ ಇದೀಗ ಟೆಸ್ಟ್ ಮತ್ತು ಏಕದಿನ ಸಾಂಪ್ರದಾಯಿಕ ಮಾದರಿಯಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ.
ಅವರ ವೃತ್ತಿಜೀವನವು ಮಹತ್ವದ ಮೈಲಿಗಲ್ಲು ಸಮೀಪಿಸುತ್ತಿರುವಾಗ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆಗಾಗಿ ಸಚಿನ್ ತೆಂಡೂಲ್ಕರ್ ಅವರ ಪೌರಾಣಿಕ ದಾಖಲೆಯನ್ನು ಮೀರಿಸಲು ಕೊಹ್ಲಿ ಕೇವಲ 58 ರನ್‌ಗಳ ಅಂತರದಲ್ಲಿ ನಿಂತಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 27,000 ರನ್ ಗಳಿಸಿದ ಕ್ರಿಕೆಟಿಗನಾಗಲು ಕೊಹ್ಲಿಗೆ ಕೇವಲ 58 ರನ್‌ಗಳ ಅಗತ್ಯವಿದೆ. ಪ್ರಸ್ತುತ, ಸಚಿನ್ ತೆಂಡೂಲ್ಕರ್ ಎಲ್ಲಾ ಸ್ವರೂಪಗಳಲ್ಲಿ 623 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ ದಾಖಲೆಯನ್ನು ಹೊಂದಿದ್ದಾರೆ. 226 ಟೆಸ್ಟ್ ಇನ್ನಿಂಗ್ಸ್, 396 ODI ಇನ್ನಿಂಗ್ಸ್, ಮತ್ತು 1 T20I ಇನ್ನಿಂಗ್ಸ್. 591 ಇನ್ನಿಂಗ್ಸ್‌ಗಳಲ್ಲಿ 26,942 ರನ್ ಗಳಿಸಿರುವ ಕೊಹ್ಲಿ, 600 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಯನ್ನು ಹಿಮ್ಮೆಟ್ಟಿಸಲು ಸಜ್ಜಾದಂತಿದೆ.
ಕೊಹ್ಲಿ 600ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27,000 ರನ್‌ಗಳನ್ನು ತಲುಪುವ ನಿರೀಕ್ಷೆಯು ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ.
LATEST NEWS
ತಂದೆಯ ಪ್ರತೀಕಾರ ತೀರಿಸಲು ಸಜ್ಜಾದ ಉಗ್ರ ಹಮ್ಜಾ ಬಿನ್ ಲಾಡೆನ್..!
ಮಂಗಳೂರು/ನವದೆಹಲಿ : 9/11 ಅಮೆರಿಕಾ ಟ್ವಿನ್ ಟವರ್ ಮೇಲೆ ವೈಮಾನಿಕ ದಾಳಿಯ ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಜೀವಂತವಾಗಿದ್ದಾನೆ. ಆತ ಭ*ಯೋತ್ಪಾದಕ ಗುಂಪನ್ನು ಸಕ್ರಿಯವಾಗಿ ಮುನ್ನಡೆಸ್ತಾ ಇದ್ದಾನೆ ಎಂಬ ಗುಪ್ತಚರ ವರದಿ ಲಭ್ಯವಾಗಿದೆ.
2019 ರಲ್ಲಿ ಯುಎಸ್ ವೈಮಾನಿಕ ದಾಳಿಯಲ್ಲಿ ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಸದ್ಯ ತಾಲಿಬಾನ್ ನಾಯಕರ ಸಂಪರ್ಕದಲ್ಲಿ ಇದ್ದಾನೆ ಎಂಬ ಮಾಹಿತಿ ಕೂಡ ಇದೆ. ಅಲ್ ಖೈದಾ ಸಂಘಟನೆಯನ್ನು ಮತ್ತೆ ಪುನರ್‌ಸ್ಥಾಪಿಸಲು ಹಮ್ಜಾ ಬಿನ್ ಲಾಡೆನ್ ಪ್ರಯತ್ನ ನಡೆಸಿದ್ದಾನೆ ಎಂದು ಗುಪ್ತಚರ ವರದಿ ಹೇಳಿದೆ.
ತಾಲಿಬಾನ್ ನಾಯಕರ ಜೊತೆ ಸಭೆಗಳನ್ನು ನಡೆಸುತ್ತಿರುವ ಹಮ್ಜಾ ಬಿನ್ ಲಾಡೆನ್‌ನನ್ನು ತಾಲಿಬಾನ್ ರಕ್ಷಣೆ ಮಾಡುತ್ತಿದ್ದು, ಇದು ಅಲ್ ಖೈದಾ ಮತ್ತು ತಾಲಿಬಾನ್ ನಡುವಿನ ಈ ಸಂಬಂಧ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಲಿದೆ. ಇರಾಕ್ ಯುದ್ಧದ ನಂತರ ಅಲ್ ಖೈದಾ ಸಂಘಟನೆಯನ್ನು ಅತ್ಯಂತ ಪ್ರಬಲವಾಗಿ ಕಟ್ಟಲಾಗುತ್ತಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
34 ವರ್ಷದ ಹಮ್ಜಾ ಕಾಬೂಲ್‌ನಿಂದ ಪೂರ್ವಕ್ಕೆ 100 ಮೈಲುಗಳಷ್ಟು ದೂರದಲ್ಲಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಹೆಸರುವಾಸಿಯಾದ ಜಲಾಲಾಬಾದ್‌ನಲ್ಲಿ ನೆಲೆಸಿದ್ದಾನೆ. ಅವನ ಗುರಿ ಪಾಶ್ಚಿಮಾತ್ಯ ದೇಶಗಳಾಗಿದ್ದು, ಭವಿಷ್ಯದಲ್ಲಿ ಈ ದೇಶಗಳ ಮೇಲೆ ದಾಳಿ ನಡೆಸಬಹುದು ಎಂದು ಅಂದಾಜಿಸಲಾಗಿದೆ. ಆತನ ಸಹೋದರ ಅಬ್ದುಲ್ಲಾ ಬಿನ್ ಲಾಡೆನ್ ಕೂಡ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾನೆ.
ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಹಮ್ಜಾ ಮತ್ತು ಅವನ ನಾಲ್ವರು ಪತ್ನಿಯರು ಇರಾನ್‌ನಲ್ಲಿ ಆಶ್ರಯ ಪಡೆದಿರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಮ್ಜಾ ಬಿನ್ ಲಾಡೆನ್ ಯಾರು?
ಹಮ್ಜಾ ಬಿನ್ ಲಾಡೆನ್ ಜಿಹಾದ್‌ನ ರಾಜಕುಮಾರ ಎಂದು ಕು*ಖ್ಯಾತಿಯನ್ನು ಪಡೆದುಕೊಂಡ ಉ*ಗ್ರನಾಗಿದ್ದಾನೆ. ಒಸಾಮಾ ಬಿನ್ ಲಾಡೆನ್ ನ 20 ಮಕ್ಕಳಲ್ಲಿ ಈತ 15ನೇಯವನು . ಒಸಾಮಾ ಬಿನ್ ಲಾಡೆನ್‌ನ ಮೂರನೇ ಹೆಂಡತಿಯಲ್ಲಿ ಈತ ಜನಿಸಿದ್ದಾನೆ. 9/11 ರ ದಾಳಿಯ ಮೊದಲು ಅಫ್ಘಾನಿಸ್ತಾನದಲ್ಲಿ ಒಸಾಮಾ ಬಿನ್ ಲಾಡೆನ್ ಜೊತೆ ಹಾಜರಿದ್ದ ಈತ ವಿಡಿಯೋ ಸಂದೇಶದಲ್ಲೂ ತಂದೆಯ ಜೊತೆ ಕಾಣಿಸಿಕೊಂಡಿದ್ದ.
ಇದನ್ನೂ ಓದಿ : ತೆಲುಗು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಮಂಗಳೂರಿನ ಯುವಕ
ದಾ*ಳಿಯಲ್ಲಿ ಹ*ತನಾಗಿದ್ದಾನೆ ಎಂದು ಟ್ರಂಪ್ ಘೋಷಣೆ :
2019 ರಲ್ಲಿ ಅಂದಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮ್ಜಾ ಬಿನ್ ಲಾಡೆನ್ ಹತನಾಗಿದ್ದಾನೆ ಎಂದು ಘೋಷಣೆ ಮಾಡಿದ್ದರು. ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದಲ್ಲಿ ನಡೆದ ಭ*ಯೋತ್ಪಾನಾ ನಿಗ್ರಹ ಕಾರ್ಯಾಚರಣೆಯಲ್ಲಿ ಹಮ್ಜಾನನ್ನು ಕೊ*ಲ್ಲಲಾಗಿದೆ ಎನ್ನಲಾಗಿತ್ತು. ಆದ್ರೆ, ಆತನ ಮ*ರಣವನ್ನು ದೃಢೀಕರಿಸಲು ಡಿಎನ್‌ಎ ಸಾಕ್ಷ್ಯಗಳು ಲಭಿಸಿರಲಿಲ್ಲ.
- LATEST NEWS5 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM4 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- LATEST NEWS3 days ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
- FILM4 days ago
ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!
Pingback: ಭಾವುಕ ಸಂದೇಶದೊಂದಿಗೆ ಕುಸ್ತಿಗೆ ನಿವೃತ್ತಿ ಘೋಷಿಸಿದ ವಿನೇಶ್ ಫೋಗಾಟ್..! ಬೆಳ್ಳಿ ಪದಕಕ್ಕಾಗಿ ನ್ಯಾಯಾಲಯದ ಮೊರೆ -