ಚಿಕ್ಕಬಳ್ಳಾಪುರ: ಏಳು ಜೀವಂತ ಉಡಗಳನ್ನು ಮಾರಾಟ ಮಾಡುತ್ತಿದ್ದ ಸಂದರ್ಭ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ಮೂರು ಜನರನ್ನು ಬಂಧಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಪಟ್ಟಣದಲ್ಲಿ ನಡೆದಿದೆ.
ಎಸ್. ಇಸ್ಮಾಯಿಲ್ ಜಭೀಉಲ್ಲಾ, ರಿಜ್ವಾನ್ ಮತ್ತು ಬಾವಾಜಾನ್ ಬಂಧಿತ ಆರೋಪಿಗಳು.
ನಗರದ ಶಾಫಿಯಾ ಎಂಬ ಹೊಟೇಲ್ನಲ್ಲಿ ಜೀವಂತ ಉಡಗಳನ್ನು ಪಂಜರದಲ್ಲಿಟ್ಟು ಮಾರಾಟ ಮಾಡುತ್ತಿದ್ದ ಉಡಗಳನ್ನು ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ರಕ್ಷಣೆ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ರಾಜ್ಯ ಅರಣ್ಯ ಸಂಚಾರಿ ದಳದ ಉಪಸಂರಕ್ಷಣಾಧಿಕಾರಿ ಜಿ.ಎ ಗಂಗಾಧರ್ ಚಿಂತಾಮಣಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಿದಾನಂದ್ ಸೇರಿದಂತೆ ಹಲವು ಅರಣ್ಯ ಸಿಬ್ಬಂದಿ ಭಾಗಿಯಾಗಿದ್ದರು.