LATEST NEWS
ಭಾರತದಲ್ಲಿ ಬಾಕಿಯಾಗಿದ್ದ ಆರೋಗ್ಯ ಕಾರ್ಯಕರ್ತರು ದುಬೈಗೆ ಪ್ರಯಾಣ
Published
4 years agoon
By
Adminದುಬೈ: ವಿಮಾನಯಾನ ರದ್ದುಗೊಂಡ ಹಿನ್ನೆಲೆಯಲ್ಲಿ ಭಾರತದಲ್ಲಿ ಬಾಕಿಯಾಗಿದ್ದ ಮೊದಲ ಹಂತದ 73 ಭಾರತೀಯ ಆರೋಗ್ಯ ಕಾರ್ಯಕರ್ತರನ್ನು ದುಬೈ ಆರೋಗ್ಯ ಪ್ರಾಧಿಕಾರ (ಡಿ.ಎಚ್.ಎ.)ಯಿಂದ ವಿಶೇಷ ಅನುಮತಿ ಪಡೆದು ಯು.ಎ.ಇ.ಗೆ ಕರೆಸಲಾಗಿದೆ ಎಂದು ಪ್ರತಿಷ್ಠಿತ ಆಸ್ಟರ್ ಡಿ.ಎಂ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಶೀರ್ ಬಂಟ್ವಾಳ ತಿಳಿಸಿದ್ದಾರೆ.
ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಏಪ್ರಿಲ್ 25ರಂದು ಭಾರತ – ಯು.ಎ.ಇ. ನಡುವಿನ ವಿಮಾನಯಾನ ರದ್ದುಗೊಂಡಿತ್ತು. ಇದರ ಪರಿಣಾಮ ಆಸ್ಟರ್ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳ ಒಟ್ಟು 250 ವೈದ್ಯಕೀಯ ಸಿಬ್ಬಂದಿ ಯು.ಎ.ಇ.ಗೆ ತೆರಳಲು ಸಾಧ್ಯವಾಗದೆ ಭಾರತದಲ್ಲಿ ಸಿಲುಕಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ. ಸಕಲ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ವೈದ್ಯರು, ದಾದಿಯರು ಮತ್ತು ಅರೆವೈದ್ಯರು ಸೇರಿದ 73 ಮಂದಿಯ ಮೊದಲ ತಂಡವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಅವರೆಲ್ಲೂ ಬುಧವಾರ ಮುಂಜಾನೆ ದುಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ವಿಶೇಷ ಎಮಿರೇಟ್ಸ್ ವಿಮಾನಗಳಲ್ಲಿ ಬಂದಿಳಿದರು ಎಂದು ಬಶೀರ್ ಬಂಟ್ವಾಳ ಹೇಳಿದ್ದಾರೆ.
ವಿಮಾನ ಹಾರಾಟ ರದ್ದು ಆದೇಶ ಘೋಷಣೆಯಾದಾಗ ವಾರ್ಷಿಕ ಅಥವಾ ತುರ್ತು ರಜೆಯಲ್ಲಿ ತೆರಳಿದ್ದ ವೈದ್ಯಕೀಯ ವೃತ್ತಿಪರರು, ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡುವ ಅನುಭವ ಹೊಂದಿದವರು, ಕೋವಿಡ್ – 19 ರೋಗಿಗಳಿಗೆ ಚಿಕಿತ್ಸೆ ನೀಡಲು ಪರಿಣತಿಯನ್ನು ಹೊಂದಿದವರು ಸಹಿತ ಹೆಚ್ಚಿನ ಆರೋಗ್ಯ ಕಾರ್ಯಕರ್ತರು ಮತ್ತು ಕೆಲವು ಹೊಸ ನೇಮಕಾತಿಗಳು ಭಾರತದಲ್ಲಿ ಸಿಲುಕಿಕೊಂಡಿದ್ದರು. ಈ ವ್ಯವಸ್ಥೆಯನ್ನು ಸಾಧ್ಯವಾಗಿಸುವಲ್ಲಿ ಆಸ್ಟರ್‌ಗೆ ನೀಡಿದ ಎಲ್ಲ ಬೆಂಬಲಕ್ಕಾಗಿ ದುಬೈ ಸರಕಾರ, ಡಿಎಚ್‌ಎ, ದುಬೈ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಎಮಿರೇಟ್ಸ್ ವಿಮಾನಯಾನ ಸಂಸ್ಥೆಗಳನ್ನು ಅಭಿನಂದಿಸಿರುವ ಬಶೀರ್ ಬಂಟ್ವಾಳ ಅವರು, ಭಾರತದಲ್ಲಿ ಇನ್ನೂ 250 ಸಿಬ್ಬಂದಿ ಸಿಲುಕಿಕೊಂಡಿದ್ದಾರೆ. ಅವರನ್ನೂ ಆದಷ್ಟು ಬೇಗ ಯು.ಎ.ಇ.ಗೆ ಕರೆ ತರಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
bengaluru
ಸರಿಗಮ ವಿಜಿ ಹೆಸರಿಗೆ ‘ಸರಿಗಮ’ ಸೇರಿಕೊಳ್ಳಲು ಆ ಒಂದು ನಾಟಕ ಕಾರಣ !
Published
26 minutes agoon
15/01/2025By
NEWS DESK3ಮಂಗಳೂರು/ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧ*ನ ಹೊಂದಿದ್ದಾರೆ. ಅವರು ಕನ್ನಡ ಸಿನಿಮಾ, ಧಾರವಾಹಿ ಹಾಗೂ ರಂಗಭೂಮಿಯಲ್ಲಿ ನಟಿಸಿದ್ದರು.
ಸರಿಗಮ ವಿಜಿ ಅವರ ಮೂಲ ಹೆಸರು ವಿಜಯ್ ಕುಮಾರ್. ಆದರೆ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಹಲವರಲ್ಲಿ ಇದೆ.
‘ಸರಿಗಮ ವಿಜಿ’ ಎಂದೇ ಕರೆಯಲ್ಪಡುವ ನಟ ವಿಜಯ್ ಕುಮಾರ್ (76) ಅವರು ಬುಧವಾರ (ಜ.15) ನಿಧ*ನರಾದರು. ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಶ್ವಾಸಕೋಶದ ಸೋಂಕು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ವಾರದ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ 9:45ರ ಸುಮಾರಿಗೆ ಅವರು ನಿಧ*ನ ಹೊಂದಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಇ*ನ್ನಿಲ್ಲ
ಬೆಂಗಳೂರಿನ ವಿಮಾನಪುರದಲ್ಲಿ (ಎಚ್ಎಎಲ್ ಪ್ರದೇಶ) ಜನಿಸಿದ ವಿಜಯ್ ಕುಮಾರ್, ನಾಟಕದ ನಂಟು ಇಟ್ಟುಕೊಂಡು ಸಿನಿಮಾಲೋಕ ಪ್ರವೇಶಿಸಿದವರು. ‘ಬೆಳುವಲದ ಮಡಿಲಲ್ಲಿ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ನಟನಾಗಿ ಮೊದಲ ಹೆಜ್ಜೆ ಇಟ್ಟ ಅವರು ಎನ್ ಜಿಇಎಫ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ದುಡಿದವರು. ಈ ಅವಧಿಯಲ್ಲೇ ಅವರು ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕ ಬರೆದರು.
ಇದು ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ, ಹೈದರಾಬಾದ್, ಚೆನ್ನೈ, ದೆಹಲಿಗಳಲ್ಲಿಯೂ ಆ ನಾಟಕ ಪ್ರದರ್ಶನವಾಗಿತ್ತು. ಸುಮಾರು 1390 ಪ್ರದರ್ಶನಗಳಲ್ಲಿ ‘ಸಂಸಾರದಲ್ಲಿ ಸರಿಗಮ’ ನಾಟಕ ಕಂಡಿತ್ತು. ಇದೇ ಕಾರಣಕ್ಕೆ ವಿಜಿ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡು ಸರಿಗಮ ವಿಜಿ ಎಂದೇ ಜನಪ್ರಿಯರಾದರು.
ಹಲವು ದಿಗ್ಗಜ ನಟರ ಜೊತೆ ತೆರೆಹಂಚಿಕೊಂಡಿದ್ದ ವಿಜಿ ಅವರು, ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. ಹಲವು ಧಾರವಾಹಿಗಳಲ್ಲೂ ಅವರು ಬಣ್ಣಹಚ್ಚಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಬಂಟ್ವಾಳ: ಬೈಕ್ ಗಳ ನಡುವೆ ಭೀ*ಕರ ಅ*ಪಘಾ*ತ ಸಂಭವಿಸಿ ಬೈಕ್ ನಲ್ಲಿ ಸಹ ಪ್ರಯಾಣಿಕೆಯಾಗಿದ್ದ ಬಾಲಕಿ ಮೃ*ತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ನಿನ್ನೆ (ಜ.14) ರಾತ್ರಿ ನಡೆದಿದೆ.
ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ (13) ಮೃ*ತ ಬಾಲಕಿ ಎಂದು ಗುರುತಿಸಲಾಗಿದೆ.
ಬಾಲಕಿಯ ತಂದೆ ಬೈಕ್ ಚಾಲಕ ಅಬ್ದುಲ್ ರಹಮಾನ್ ಕೂಡ ಗಾ*ಯಗೊಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಮಂಗಳೂರು: ಕೈದಿಗಳಿಂದ ಜೈಲು ಅಧಿಕಾರಿ, ಸಿಬಂದಿಯ ಕರ್ತವ್ಯಕ್ಕೆ ಅಡ್ಡಿ
ರಾಮಲ್ ಕಟ್ಟೆಯಿಂದ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಲ್ಲಿ ಬಂದ ನೆತ್ತರಕೆರೆ ನಿವಾಸಿ ರಂಜಿತ್ ಎಂಬಾತ ಬಿ.ಸಿ ರೋಡಿನ ಕಡೆಯಿಂದ ತುಂಬೆ ಕಡೆಗೆ ಸರಿಯಾದ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಗೆ ಡಿ*ಕ್ಕಿ ಹೊಡೆದಿದ್ದಾನೆ. ರಂಜಿತ್ ಗೆ ಕೂಡ ಗಾ*ಯವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಅ*ಪಘಾ*ತ ನಡೆದ ರಭಸಕ್ಕೆ ಬೈಕ್ ಸಂಪೂರ್ಣ ಜ*ಖಂಗೊಂಡಿದೆ. ಘಟನಾ ಸ್ಥಳಕ್ಕೆ ಪಾಣೆಮಂಗಳೂರು ಟ್ರಾಫಿಕ್ ಎಸ್.ಐ ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
bangalore
ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಇ*ನ್ನಿಲ್ಲ
Published
1 hour agoon
15/01/2025By
NEWS DESK3ಮಂಗಳೂರು/ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧ*ನ ಹೊಂದಿದ್ದಾರೆ.
ಇತ್ತೀಚೆಗಷ್ಟೇ ಇವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹಾಗಾಗಿ ಕಳೆದ 4 ದಿನಗಳಿಂದ ಯಶವಂತಪುರದ ಬಳಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದರ ಮಧ್ಯೆ ನಟ ಸರಿಗಮ ವಿಜಿ ಆರೋಗ್ಯ ಸ್ಥಿತಿ ಗಂ*ಭೀರವಾಗಿದೆ ಎಂದು ಹೇಳಲಾಗಿತ್ತು. ಈಗ ಇವರು ಮೃ*ತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಲವು ದಿಗ್ಗಜ ನಟರ ಜೊತೆ ತೆರೆಹಂಚಿಕೊಂಡಿದ್ದರು. ಹಾಸ್ಯ ಪಾತ್ರಗಳಲ್ಲಿ ಸರಿಗಮ ವಿಜಿ ಮಿಂಚಿದ್ದರು. ಹಲವು ಧಾರವಾಹಿಗಳಲ್ಲೂ ಅವರು ಬಣ್ಣಹಚ್ಚಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ತೆಲುಗು ವಿಜ್ಞಾನ ಸಮಿತಿ ನೀಡುವ ‘ಶ್ರೀ ಕೃಷ್ಣದೇವರಾಯ ಪುರಸ್ಕಾರ’, ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.
ಇದನ್ನೂ ಓದಿ: ಮೃ*ತಪಟ್ಟರೆಂದು ಭಾವಿಸಿ ಶವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಂತೆ ಬದುಕುಳಿದ ವ್ಯಕ್ತಿ
ಮಹಾಲಕ್ಷೀ ಲೇಔಟ್ ನಲ್ಲಿರುವ ಅವರ ನಿವಾಸದಲ್ಲಿ ನಾಳೆ ಬೆಳಿಗ್ಗೆ 10 ಗಂಟೆವರೆಗೆ ಪಾರ್ಥಿ*ವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ವೇಳೆ ಅಂ*ತ್ಯಕ್ರಿಯೆ ನಡೆಯಲಿದೆ.
LATEST NEWS
ಮಂಗಳೂರು: ಕೈದಿಗಳಿಂದ ಜೈಲು ಅಧಿಕಾರಿ, ಸಿಬಂದಿಯ ಕರ್ತವ್ಯಕ್ಕೆ ಅಡ್ಡಿ
ಮೃ*ತಪಟ್ಟರೆಂದು ಭಾವಿಸಿ ಶವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಂತೆ ಬದುಕುಳಿದ ವ್ಯಕ್ತಿ
ಚಾಲೆಂಜಿಂಗ್ ಸ್ಟಾರ್ ನ್ಯೂ ಪೋಸ್ಟ್; ದರ್ಶನ್ ಅಭಿಮಾನಿಗಳಿಗೆ ದಿಲ್ಖುಷ್
ಮಹಾಕುಂಭ ಮೇಳ 2025: ಗಮನ ಸೆಳೆಯುತ್ತಿರುವ ನಾಗಾ ಸಾಧ್ವಿಗಳು
ರಾಜ್ಯದ 6 ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ; ಎಲ್ಲೆಲ್ಲಿ?
ಭಾರತೀಯ ಸೇನಾ ದಿನ : ವಿಶೇಷತೆ ಹಾಗೂ ಮಹತ್ವವೇನು ?
Trending
- BIG BOSS4 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- LATEST NEWS5 days ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
- BIG BOSS2 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- FILM6 days ago
ಮಗುವಿನೊಂದಿಗೆ ಕೊಲ್ಲೂರು ದೇಗುಲಕ್ಕೆ ಹರ್ಷಿಕಾ ದಂಪತಿ ಭೇಟಿ