ಅಬುಧಾಬಿ: ಗಲ್ಫ್ ರಾಷ್ಟ್ರದಲ್ಲಿ ಮೊದಲ ಹಿಂದೂ ದೇವಾಲಯ ಯುಎಇಯ ಅಬುಧಾಬಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಈ ಜಾಗಕ್ಕೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭೇಟಿ ನೀಡಿದ್ದಾರೆ.
ಅಬು ಧಾಬಿಯಲ್ಲಿ ಸಿದ್ಧಗೊಳ್ಳುತ್ತಿರುವ ದೇಗುಲ ಶಾಂತಿ, ಸಹಿಷ್ಣುತೆ ಮತ್ತು ಸಾಮರಸ್ಯದ ಸಂಕೇತ ಎಂದ ಜೈಶಂಕರ್ ಬಣ್ಣಿಸಿದರು.
ಮೂರು ದಿನಗಳ ಗಲ್ಫ್ ಪ್ರವಾಸದಲ್ಲಿರುವ ಜೈಶಂಕರ್, ಗಣೇಶ ಚತುರ್ಥಿಯ ದಿನ ಇಲ್ಲಿಗೆ ಭೇಟಿ ನೀಡಿದ್ದೇನೆ. ಕಾಮಗಾರಿಯಲ್ಲಿ ತ್ವರಿತ ಪ್ರಗತಿ ನೋಡಲು ಸಂತೋಷವಾಗ್ತಿದೆ.
ಇಲ್ಲಿನ ಹಿಂದೂ ಸಮುದಾಯ ಹಾಗೂ ಭಕ್ತರನ್ನು ಭೇಟಿ ಮಾಡಿದ್ದೇನೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅವರನ್ನು ಭೇಟಿ ಮಾಡಿರುವ ಸಚಿವರು, ಕೆಲಹೊತ್ತು ಮಾತುಕತೆ ನಡೆಸಿದರು.
ಅಬು ಧಾಬಿಯಲ್ಲಿ 55,000 ಚದರ ಮೀಟರ್ ಜಾಗದಲ್ಲಿ ದೇವಾಲಯ ತಲೆ ಎತ್ತುತ್ತಿದೆ. ಇದರಲ್ಲಿ ಭಾರತೀಯ ಕುಶಲಕರ್ಮಿಗಳು ಕೆಲಸ ಮಾಡ್ತಿದ್ದಾರೆ. ಇದು ಮಧ್ಯಪ್ರಾಚ್ಯದ ಮೊದಲ ಹಿಂದೂ ದೇವಾಲಯವೆಂಬ ಹೆಗ್ಗಳಿಕೆ ಹೊಂದಿದೆ.