ಜೈಪುರ: ಪ್ರವಾದಿ ವಿವಾದದ ಮಧ್ಯೆಯೇ ಭಾರತವು ಕುವೈತ್‌ಗೆ 192 ಮೆಟ್ರಿಕ್ ಟನ್ ಹಸುವಿನ ಸೆಗಣಿಯನ್ನು ರಫ್ತು ಮಾಡಲಿದೆ.
ಸಾವಯವ ಕೃಷಿಯ ಸಲುವಾಗಿ ಎರಡು ದೇಶಗಳ ಮಧ್ಯೆ ಈ ವ್ಯವಹಾರ ನಡೆಯುತ್ತಿದೆ. ಜೈಪುರ ಮೂಲದ ಕಂಪೆನಿಯು ರಫ್ತು ಮಾಡಲಿದೆ.
‘ಮುಸ್ಲಿಂ ಬಾಹುಳ್ಯದ ಕುವೈತ್ ದೇಶವು ದೇಸೀ ಹಸುಗಳ ಸೆಗಣಿಯನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವುದು ಇದೇ ಮೊದಲು’ ಎಂದು ರಫ್ತು ಸಂಸ್ಥೆಯಾದ ಸನ್‌ರೈಸ್ ಅಗ್ರಿಲ್ಯಾಂಡ್ ಮತ್ತು ಡೆವಲಪ್‌ಮೆಂಟ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಪ್ರಶಾಂತ್ ಚತುರ್ವೇದಿ ಹೇಳಿದ್ದಾರೆ.
ಜೈಪುರದ ಗೋಶಾಲೆಯಲ್ಲಿರುವ ಸನ್‌ರೈಸ್ ಆರ್ಗಾನಿಕ್ ಪಾರ್ಕ್‌ನಲ್ಲಿ ಕಸ್ಟಮ್ಸ್ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಂಟೈನರ್‌ಗಳಲ್ಲಿ ಹಸುವಿನ ಸೆಗಣಿ ಪ್ಯಾಕ್ ಮಾಡುವ ಕೆಲಸ ನಡೆಯುತ್ತಿದೆ.
ದೇಶೀಯ ಹಸುವಿನ ಸೆಗಣಿಯ ಪ್ರಯೋಜನಗಳು ಸಂಶೋಧನೆಯಿಂದ ಸಾಬೀತಾಗಿದ್ದು, ಅದರ ಲಾಭಗಳನ್ನು ಪಡೆಯಲು ವಿದೇಶಗಳು ಉತ್ಸುಕವಾಗಿವೆ.
ಖರ್ಜೂರದ ಬೆಳೆಗೆ ಸೆಗಣಿಯನ್ನು ಗೊಬ್ಬರವಾಗಿ ಬಳಸಲಾಗುತ್ತದೆ.