Connect with us

International news

ಭಾರತ vs ಆಸ್ಟ್ರೇಲಿಯಾ; 2ನೇ ಟೆಸ್ಟ್ ಗೆ ಭಾರತದ ಪ್ಲೇಯಿಂಗ್-11

Published

on

ಮಂಗಳೂರು/ಅಡಿಲೇಡ್: ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಟೆಸ್ಟ್ ನ ಎರಡನೇ ಪಂದ್ಯ ಡಿಸೆಂಬರ್ 6 ರಿಂದ ಅಡಿಲೇಡ್ ನಲ್ಲಿ ನಡೆಯಲಿದೆ.


ಎರಡನೇ ಪಂದ್ಯಕ್ಕೂ ಮೊದಲು ನಿನ್ನೆ, ಟೀಂ ಇಂಡಿಯಾ ಮತ್ತು ಪ್ರೈಮ್ ಮಿನಿಸ್ಟರ್ ಇಲೆವೆನ್ ತಂಡದ ಅಭ್ಯಾಸ ಪಂದ್ಯ ನಡೆಸಲಾಯಿತು. ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳಿಂದ ಪ್ರೈಮ್ ಮಿನಿಸ್ಟರ್ ಇಲೆವೆನ್ ತಂಡವನ್ನು ಸೋಲಿಸಿದೆ.
ಈ ಅಭ್ಯಾಸ ಪಂದ್ಯದಿಂದ ಟೀಂ ಇಂಡಿಯಾದ ಕೆಲವು ಆಟಗಾರರ ಸ್ಥಾನಗಳನ್ನು ನಿರ್ಧರಿಸಲಾಗಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಗಿಲ್ ಹೆಸರು ಕೂಡ ಸೇರಿದೆ.

ಹರ್ಷಿತ್ ರಾಣಾ ಸ್ಥಾನ ಬಹುತೇಕ ಖಚಿತ :
ಅಭ್ಯಾಸ ಪಂದ್ಯದಲ್ಲಿ ಮಾರಕ ಬೌಲಿಂಗ್ ಪ್ರದರ್ಶನ ನೀಡಿರುವ ಅಲ್ ರೌಂಡರ್ ಹರ್ಷಿತ್ ರಾಣಾ ಸ್ಥಾನ ಬಹುತೇಕ ಖಚಿತವಾಗಿದೆ. 6 ಓವರ್ ಗಳಲ್ಲಿ 44 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೂ ರಾಣಾ ಅದ್ಬುತ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ಪಡೆದರು.

ಇದನ್ನೂ ಓದಿ: BBK11: ಶೋಭಾ ಶೆಟ್ಟಿ ನಿರ್ಧಾರಕ್ಕೆ ಕಿಚ್ಚ ಗರಂ; ವೋಟ್ ಮಾಡಿದ ಜನರಿಗೆ ಕ್ಷಮೆ ಕೇಳಿದ ಸುದೀಪ್
ಯಾರು ಡ್ರಾಪ್ ? ಯಾರು ಇನ್ ?
ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಇವರಿಬ್ಬರ ಆಗಮನದಿಂದ ದೇವದತ್ ಪಡಿಕ್ಕಲ್ ಹಾಗೂ ಧ್ರುವ ಜುರೆಲ್ ರನ್ನು ಬೆಂಚ್ ನಲ್ಲಿ ಕೂರಿಸುವ ಸಾಧ್ಯತೆ ಇದೆ.

ಸಂಭಾವ್ಯ ಭಾರತದ ಪ್ಲೇಯಿಂಗ್ 11 :

ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಗಿಲ್, ಕೊಹ್ಲಿ, ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

International news

ಹತ್ತು ನಿಮಿಷದಲ್ಲಿ 2.63 ಕೋಟಿಗೆ ಬ್ರಾಡ್ಮನ್ ಕ್ಯಾಪ್ ಹರಾಜು !

Published

on

ಮಂಗಳೂರು/ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಅವರ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜಿನಲ್ಲಿ 2. 63 ಕೋಟಿ ರೂಪಾಯಿಗೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ.


ಕ್ರಿಕೆಟ್ ಇತಿಹಾಸದ ಅಪರೂಪದ ವಸ್ತುವೊಂದನ್ನು ಮಂಗಳವಾರ ಹರಾಜಿಗಿಟ್ಟ ನಂತರ ಬ್ರಾಡ್ಮನ್ ಅವರ ಕ್ಯಾಪ್ ಗೆ ಇಷ್ಟೊಂದು ದೊಡ್ಡ ಮೊತ್ತ ಲಭಿಸಿದೆ. 1947-48ರಲ್ಲಿ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಬ್ರಾಡ್ಮನ್ ಈ ಕ್ಯಾಪ್ ಧರಿಸಿದ್ದರು ಎಂದು ಹೇಳಲಾಗಿದೆ. ಈ ಕ್ಯಾಪ್ ಗೆ ಈಗ 80 ವರ್ಷ ವಯಸ್ಸಾಗಿದೆ ಎಂದು ಹರಾಜು ಸಂಸ್ಥೆ ಬೊನ್ಸಾಮ್ ಹೇಳಿದೆ.

ಇದನ್ನೂ ಓದಿ: 16 ವರ್ಷದ ಬಾಲಕನನ್ನು ಮದುವೆಯಾದ ಶಿಕ್ಷಕಿ !

ಕ್ರಿಕೆಟ್ ಅಂಗಳದಲ್ಲಿ ”ದಿ ಡಾನ್” ಎಂದು ಕರೆಸಿಕೊಂಡಿದ್ದ ಬ್ರಾಡ್ಮನ್ 2001ರಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಆದರೆ 20 ವರ್ಷಗಳ ತಮ್ಮ ಟೆಸ್ಟ್ ಕೆರಿಯರ್ ನಲ್ಲಿ ನಿರ್ಮಿಸಿದ ದಾಖಲೆಗಳು ಇನ್ನೂ ಸಹ ಅವರನ್ನು ಅಜರಾಮರರನ್ನಾಗಿರಿಸಿದೆ.

ಆಸ್ಟ್ರೇಲಿಯಾ ಪರ 52 ಟೆಸ್ಟ್ ಗಳನ್ನಾಡಿದ್ದ ಬ್ರಾಡ್ಮನ್, 2 ತ್ರಿಶತಕ, 12 ದ್ವಿಶತಕ, 29 ಶತಕಗಳು ಮತ್ತು 13 ಅರ್ಧ ಶತಕಗಳೊಂದಿಗೆ 6996 ರನ್ ಗಳನ್ನು ಗಳಿಸಿದ್ದಾರೆ. ಅಂದರೆ ಅವರ ಬ್ಯಾಟಿಂಗ್ ಸರಾಸರಿ 99.94 ಇತ್ತು. ಇದು ಕ್ರಿಕೆಟ್ ಇತಿಹಾಸದಲ್ಲೇ ಬ್ಯಾಟರ್ ರೊಬ್ಬರ ಗರಿಷ್ಠ ರನ್ ಸರಾಸರಿ ಎಂಬುದು ವಿಶೇಷ.

Continue Reading

International news

ಇಸ್ರೊದಿಂದ ಇಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಪ್ರೊಬಾ-3 ಮಿಷನ್ ಉಡಾವಣೆ

Published

on

ಮಂಗಳೂರು/ಶ್ರೀಹರಿಕೋಟ :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಬುಧವಾರ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESE) ಗಾಗಿ ಅತ್ಯಾಧುನಿಕ ತಂತ್ರಜ್ಞಾನ ಪ್ರದರ್ಶನ ಮಿಷನ್ ಪ್ರೊಬಾ-3 ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲು ಸಜ್ಜಾಗಿದೆ.


ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ಇಂದು ಅಪರಾಹ್ನ 4:08 ನಿಮಿಷಕ್ಕೆ ಉಡಾವಣೆಯಾಗಲಿದ್ದು, ಇದು ಇಸ್ರೋದ ವಾಣಿಜ್ಯ ಬಾಹ್ಯಾಕಾಶ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲಾಗಿರುತ್ತದೆ.

ಇದನ್ನೂ ಓದಿ: ಭಾರತೀಯ ನೌಕಪಡೆಯ ದಿನದ ವಿಶೇಷತೆಗಳೇನು ಗೊತ್ತಾ ?

ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESE) ಜತೆ ಒಪ್ಪಂದವನ್ನು ಪಡೆದುಕೊಂಡಿರುವ ಇಸ್ರೋ ಈ ಮಿಷನ್ ಅನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL)ನ ವಾಣಿಜ್ಯ ವಿಭಾಗದ ಅಡಿಯಲ್ಲಿ ಲಾಂಚ್ ಮಾಡುತ್ತಿದೆ. ಇದು ಪೋಲಾರ್ ಸ್ಯಾಟ್ ಲೈಟ್ ಲಾಂಚ್ ವಹಿಕಲ್ (ಪಿಎಸ್ ಎಲ್ ವಿ ರಾಕೆಟ್)ನ 61ನೇ ಹಾರಾಟವಾಗಿದೆ. ಹೆಚ್ಚು ತೂಕದ ಬಾಹ್ಯಾಕಾಶ ಮಿಷನ್ ಕೈಗೊಳ್ಳುವಲ್ಲಿ ಪಿಎಸ್ ಎಲ್ ವಿ ರಾಕೆಟ್ ಹೆಸರುವಾಸಿಯಾಗಿದೆ.ಈ ಮಿಷನ್ ಅಡಿ ಕರೋನಾಗ್ರಾಫ್ ಮತ್ತು ಆಕಲ್ಚರ್ ಎಂಬ ಎರಡು ಬಾಹ್ಯಾಕಾಶ ನೌಕೆಗಳನ್ನು ನಭಕ್ಕೆ ಕೊಂಡೊಯ್ಯಲಾಗುತ್ತದೆ. ಇದು ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಸಲುವಾಗಿ ವಿಶೇಷವಾಗಿ ವಿನ್ಯಾಸ ಮಾಡಿರುವ ನೌಕೆಗಳಾಗಿವೆ.

ಈಯೋಜನೆಯಲ್ಲಿ ಇಸ್ರೋ ಪಾತ್ರ
ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಪ್ರೋಬಾ-3 ಮಿಷನ್ ನ ವೈಜ್ಞಾನಿಕ ಅಂಶಗಳನ್ನು ಮುನ್ನಡೆಸುತ್ತದೆ. ಈ ಯೋಜನೆಯ ಉಡಾವಣೆ ಯಶಸ್ಸಿಗೆ ಇಸ್ರೋ ಪಲ್ಗೊಳ್ಳುವಿಕೆ ಅತ್ಯಂತ ನಿರ್ಣಾಯಕವಾಗಿದೆ. ಈ ಯೋಜನೆಗಾಗಿ ಇಸ್ರೋ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ರಾಕೆಟ್ ಅನ್ನು ಒದಗಿಸುತ್ತದೆ. ನಿಗದಿತ ಕಕ್ಷೆಗೆ 500 ಕೆಜಿವರೆಗಿನ ಪೇಲೋಡ್‌ಗಳನ್ನು ಕೊಂಡೊಯ್ಯುವ ವಿಷಯದಲ್ಲಿ ಪಿಎಸ್‌ಎಲ್‌ವಿ ರಾಕೆಟ್‌ ಹೆಸರುವಾಸಿಯಾಗಿದೆ. ಈ ಬಾಹ್ಯಾಕಾಶ ನೌಕೆಗಳನ್ನು ನಿಗದಿಪಡಿಸಿದ ಕಕ್ಷೆಗೆ ನಿಯೋಜಿಸುವಲ್ಲಿ ಇಸ್ರೋದ ಪಾತ್ರ ಮಹತ್ವದ್ದಾಗಿದೆ.

ಈಗಾಗಲೇ ಭಾರತವು ಸೌರ ಮಿಷನ್‌ ಕೈಗೊಂಡಿದೆ. ಆದಿತ್ಯ-L1 ಅನ್ನು ಸೆಪ್ಟೆಂಬರ್ 2023 ರಲ್ಲಿ ಯಶಸ್ವಿಯಾಗಿ ನಿಯೋಜಿಸಿದೆ. ಇಸ್ರೋದ ಈ ಪರಿಣತಿಯನ್ನು ಮನಗಂಡು ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆ ಭಾರತಕ್ಕೆ ಈ ಮಹತ್ವದ ಕೆಲಸವನ್ನು ನೀಡಿದೆ.
ಸೌರ ಕರೋನಾದ ಅಧ್ಯಯನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಈ ಮಿಷನ್ ಕೊಡುಗೆ ನೀಡಲಿದೆ.

Continue Reading

International news

ರೋಹಿತ್ ಬಿಟ್ಟು, ಕೊಹ್ಲಿ ಆಟೋಗ್ರಾಫ್ ಪಡೆದಿದ್ದೇಕೆ ಆಸ್ಟ್ರೇಲಿಯಾ ಪ್ರಧಾನಿ ?

Published

on

ಮಂಗಳೂರು/ಕ್ಯಾನ್ ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಆಲ್ಬನೀಸ್ ಅವರನ್ನು ಭೇಟಿ ಮಾಡಿತು. ಈ ವೇಳೆ ಆಸೀಸ್ ಪ್ರಧಾನಿ, ಕೊಹ್ಲಿ ಅವರ ಆಟೋಗ್ರಾಫ್ ಪಡೆದುಕೊಂಡಿದ್ದು ತುಂಬಾ ಸದ್ದು ಮಾಡಿತ್ತು.


ಅಷ್ಟಕ್ಕೂ, ಆಂಥೋನಿ ಆಲ್ಬನೀಸ್ ಅವರು ಟೀಂ ಇಂಡಿಯಾ ನಾಯಕ ರೋಹಿತ್ ಅವರನ್ನು ಬಿಟ್ಟು ವಿರಾಟ್ ಕೊಹ್ಲಿ ಅವರ ಆಟೋಗ್ರಾಫ್ ಪಡೆದಿದ್ದೇಕೆ ಎಂಬುದನ್ನು ಸ್ವತಃ ಅವರೇ ರಿವಿಲ್ ಮಾಡಿದ್ದಾರೆ.

ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ರಹಸ್ಯ ಬಯಲು ! 

ಈ ಬಗ್ಗೆ ಮಾತನಾಡಿರುವ ಆಲ್ಬನೀಸ್,’ನನ್ನ ಖಾಸಗಿ ವೈದ್ಯರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಅವರು ಕೊಹ್ಲಿಯ ಬಗ್ಗೆ ಎಷ್ಟು ಭಾವೋದ್ರಿಕೃತರಾಗಿದ್ದಾರೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ನಾನು ಕೊಹ್ಲಿಯನ್ನು ಭೇಟಿಯಾಗುತ್ತೇನೆ ಎಂದು ಹೇಳಿದಾಗ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಈಗಾಗೀ ಕೊಹ್ಲಿಯ ಆಟೋಗ್ರಾಫ್ ಕೊಡಿಸಲು ಅವರು ನನ್ನಲ್ಲಿ ಹೇಳಿದ್ದಾರೆ. ಎಂದು ತಿಳಿಸಿದರು.

ಇನ್ನೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಎರಡನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯಾವು ಶುಕ್ರವಾರದಿಂದ ಶುರುವಾಗಲಿದೆ.

Continue Reading

LATEST NEWS

Trending

Exit mobile version