Saturday, May 21, 2022

ಶ್ರೀಲಂಕಾ ಇಂಧನ ರವಾನಿಸಿದ ಭಾರತ: ‘ದೊಡ್ಡಣ್ಣ’ ಎಂದ ಸನತ್ ಜಯಸೂರ್ಯ

ಹೊಸದಿಲ್ಲಿ: ನೆರೆಯ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ನಡುವೆ, ದೇಶದ ಆಂತರಿಕ ಆರ್ಥಿಕತೆಯನ್ನು ಸ್ಥಿರಗೊಳಿಸಲು ಹಾಗೂ ಅದರ ತುರ್ತು ಅಗತ್ಯಗಳಿಗೆ ನೆರವಾಗಲು ಭಾರತ ಇಂಧನ ರವಾನೆ ಮಾಡುತ್ತಿದೆ.


ಶ್ರೀಲಂಕಾಕ್ಕೆ ಕಳೆದ 24 ಗಂಟೆಗಳಲ್ಲಿ ಒಟ್ಟು 76,000 ಟನ್ ಇಂಧನವನ್ನು ಪೂರೈಕೆ ಮಾಡಲಾಗಿದೆ. ಇದರೊಂದಿಗೆ ಭಾರತದ ನೆರವಿನೊಂದಿಗೆ ಲಂಕಾಕ್ಕೆ ಕಳುಹಿಸಲಾದ ಒಟ್ಟು ಇಂಧನವು 2,70,000 ಟನ್‌ಗಳಿಗೂ ಅಧಿಕವಾಗಿದೆ.

ಇದೇ ವೇಳೆ ಭಾರತವನ್ನು ‘ದೊಡ್ಡಣ್ಣ’ ಎಂದು ಕರೆದಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ, ಅತ್ಯಂತ ಘೋರ ಸನ್ನಿವೇಶ ಎದುರಿಸುತ್ತಿರುವ ತಮ್ಮ ದೇಶಕ್ಕೆ ಮಾನವೀಯತೆಯ ನೆರವು ಒದಗಿಸುತ್ತಿರುವ

ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರವನ್ನು ಶ್ಲಾಘಿಸಿದ್ದಾರೆ.
ನೆರೆಯವರಾಗಿ ಮತ್ತು ನಮ್ಮ ದೇಶದ ಅಣ್ಣನಾಗಿ, ಭಾರತವು ನಮಗೆ ಯಾವಾಗಲೂ ಸಹಾಯ ಮಾಡುತ್ತಿದೆ.

ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ನಮಗೆ ಈಗಿನ ಸನ್ನಿವೇಶದಲ್ಲಿ ಬದುಕುಳಿಯುವುದು ಸುಲಭವಾಗಿಲ್ಲ. ಭಾರತ ಮತ್ತು ಇತರೆ ದೇಶಗಳ ನೆರವಿನಿಂದ ಇದರಿಂದ ಹೊರಗೆ ಬರುತ್ತೇವೆ ಎಂದು ಆಶಿಸುತ್ತೇವೆ” ಎಂದು ಜಯಸೂರ್ಯ ಹೇಳಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು ಮಳೆ: ಕುಲಶೇಖರ ಹೆದ್ದಾರಿಯಲ್ಲಿ ಉರುಳಿ ಬಿದ್ದ ಬೃಹತ್‌ ಮರ

ಮಂಗಳೂರು: ಎರಡು ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ಮಂಗಳೂರು ಕುಲಶೇಖರ ಕಲ್ಪನೆ ಬಳಿ ಬೃಹತ್ ಮರವೊಂದು ಧರಾಶಾಹಿಯಾಗಿದೆ.ರಸ್ತೆ ಬದಿಯಲ್ಲಿದ್ದ ಮರವು ಬುಡಸಮೇತ ಕಿತ್ತು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೃಷ್ಟವಶಾತ್ ಈ...

ಪಠ್ಯದಲ್ಲಿ ನಾರಾಯಣಗುರು ಹೆಸರು ಕೈ ಬಿಟ್ಟಿರುವುದು ಮಾನವ ಕುಲಕ್ಕೆ ನೋವಾಗಿದೆ-ಮಾಜಿ ಸಚಿವ ರೈ

ಮಂಗಳೂರು: ಪಠ್ಯಪುಸ್ತಕ ಮರು ಪರಿಷ್ಕರಣೆ ವೇಳೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರು ಕೈ ಬಿಟ್ಟಿರುವುದು ಕೇವಲ ಹಿಂದುಳಿದ ವರ್ಗಕ್ಕೆ ಮಾತ್ರ ನೋವಾಗಿಲ್ಲ. ಸಮಸ್ತ ಮಾನವ ಸಮಾಜಕ್ಕೆ ನೋವು ತರುವಂತಹ ವಿಚಾರ ಎಂದು ಮಾಜಿ ಸಚಿವ...

ಆಂಟಿಯೊಂದಿಗೆ ಸರಸವಾಡಿ ಉಂಡು ಹೋದ ಕೊಂಡು ಹೋದ ಫಯಾಝ್‌..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರಿಗೆ ಸಹಾಯದ ನೆಪದಲ್ಲಿ ಬಲೆಗೆ ಬೀಳಿಸಿ ನಿರಂತರ ಅತ್ಯಾಚಾರಗೈದು 1.50 ಕೋಟಿ ವಂಚನೆಗೈದ ಪ್ರಕರಣದಲ್ಲಿ ಮಂಗಳೂರು ಮಹಿಳಾ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಫಯಾಝ್ (30) ಬಂಧಿತ ಆರೋಪಿ. ಈತ ಮೂಲತಃ...