Connect with us

    LATEST NEWS

    185 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ; ಆಸೀಸ್ ಗೆ ಆರಂಭಿಕ ಆಘಾತ

    Published

    on

    ಮಂಗಳೂರು/ಸಿಡ್ನಿ : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 185 ರನ್‌ಗಳಿಗೆ ಸರ್ವಪತನ ಕಂಡಿದೆ.

    ಇನ್ನು ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ ತಂಡ ಕೂಡಾ ಆರಂಭಿಕ ಆಘಾತ ಅನುಭವಿಸಿದ್ದು, ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 9 ರನ್‌ ಗಳಿಸಿದೆ.

    ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 72.2 ಓವರ್ ಗಳಷ್ಟೇ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು. ತಂಡದ ಪರ ರಿಷಭ್ ಪಂತ್ ಗರಿಷ್ಠ 40 ರನ್ ಗಳಿಸಿದರೆ, ರವೀಂದ್ರ ಜಡೇಜಾ 26 ರನ್, ನಾಯಕ ಜಸ್ಪ್ರೀತ್ ಬುಮ್ರಾ 22 ರನ್, ಶುಭ್​ಮನ್ ಗಿಲ್ 20 ರನ್, ವಿರಾಟ್ ಕೊಹ್ಲಿ 17 ರನ್ ಮತ್ತು ಯಶಸ್ವಿ ಜೈಸ್ವಾಲ್ 10 ರನ್​ಗಳ ಕಾಣಿಕೆ ನೀಡಿದರು. ಇವರನ್ನು ಬಿಟ್ಟರೆ ಇತರ ಬ್ಯಾಟ್ಸ್‌ಮನ್‌ಗಳಿಗೆ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ.

    ಕೆಎಲ್ ರಾಹುಲ್ ನಾಲ್ಕು ರನ್, ಪ್ರಸಿದ್ಧ್ ಕೃಷ್ಣ ಮೂರು ರನ್ ಮತ್ತು ಮೊಹಮ್ಮದ್ ಸಿರಾಜ್ ಮೂರು ರನ್ ಕಲೆಹಾಕಿದರೆ, ನಿತೀಶ್ ರೆಡ್ಡಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲ್ಯಾಂಡ್ ನಾಲ್ಕು ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ ಎರಡು ವಿಕೆಟ್ ಪಡೆದರೆ, ನಾಥನ್ ಲಿಯಾನ್ ಒಂದು ವಿಕೆಟ್ ಪಡೆದರು.

    ಆಸೀಸ್ ಗೆ ಆರಂಭಿಕ ಆಘಾತ:
    ಇನ್ನು ದಿನದಾಟದ ಕೊನೆಯಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಸ್ಯಾಮ್ ಕೊನ್ ಸ್ಟಾಸ್ ಹಾಗೂ ಬುಮ್ರಾ ನಡುವಿನ ಮಾತಿನ ಚಕಮಕಿಗೆ ಉಸ್ಮಾನ್ ಖವಾಜ 2 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ರಾಹುಲ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ದಾರೆ.

    ಕೊನ್ ಸ್ಟಾಸ್ 7 ರನ್ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಇನ್ನೂ 176 ರನ್ ಗಳ ಹಿನ್ನೆಡೆಯಲ್ಲಿದೆ.

    DAKSHINA KANNADA

    ಮಂಗಳೂರು : ಎನ್‌ಸಿಸಿಯ ರಾಷ್ಟ್ರಮಟ್ಟದ ಪ್ಯಾರಾ ಜಂಪ್‌ನಲ್ಲಿ ತೇರ್ಗಡೆಯಾದ ಗ್ರಾಮೀಣ ಪ್ರತಿಭೆ

    Published

    on

    ಮಂಗಳೂರು : ತನ್ನ ಛಲ, ಹಠ ಮತ್ತು ಕಠಿಣ ಪರಿಶ್ರಮದ ಮೂಲಕ ಎನ್ ಸಿಸಿಯ ಪ್ಯಾರ ಜಂಪಿಂಗ್ ಪರೀಕ್ಷೆಯಲ್ಲಿ ಕುಮಾರಿ ಪ್ರತಿಕ್ಷಾ  ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಈ ಸಾಧನೆ ಮೆರೆದ  ದಕ್ಷಿಣ-ಕನ್ನಡ ಜಿಲ್ಲೆಯ ಪ್ರಪ್ರಥಮ ಗ್ರಾಮೀಣ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾರೆ.

    ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ಬೊಳಿಯದ ಪ್ರೇಮ ಪೂಜಾರಿ ಹಾಗೂ ಪ್ರಕಾಶ್ ಪೂಜಾರಿಯವರ ಮಗಳು, ಮೂಡಬಿದ್ರಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪ್ರತಿಕ್ಷಾ 2024ರ ನವೆಂಬರ್ 1 ರಿಂದ 25ರವೆರೆಗೆ ಉತ್ತರ ಪ್ರದೇಶದ ಆಗ್ರಾದ ಎಎಟಿಸಿ( Army Airborne Training Centre)ಯಲ್ಲಿ  ನಡೆದ ರಾಷ್ಟ್ರ  ಮಟ್ಟದ ಪ್ಯಾರ ಜಂಪ್ ಕ್ಯಾಂಪ್ (All India Parajump Camp) ನ್ನು ಯಶಸ್ವಿಯಾಗಿ ಮುಗಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ. ಮಂಗಳೂರು ತಾಲೂಕು ಕೊಳವೂರು ಗ್ರಾಮದ  ಬೊಳಿಯ ಸರಕಾರಿ ಉನ್ನತಿಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿ ವರೆಗೆ ವ್ಯಾಸಂಗ ಮಾಡಿದ ಬಳಿಕ ಕಾರ್ಕಳದ ಕೊಳಕ್ಕೆ ಇರ್ವತ್ತೂರು ಮೈಂದೊಟ್ಟುವಿನಲ್ಲಿ ವಾಸವಾಗಿದ್ದಾರೆ.

    ಸತತ ಪರಿಶ್ರಮದ ಫಲ :

    ದೇಶದಾದ್ಯಂತ 20 ಲಕ್ಷಕ್ಕೂ ಅಧಿಕ ಎನ್ ಸಿಸಿ ಕೆಡೆಟ್ ಗಳಲ್ಲಿ ಆಯ್ಕೆಯಾಗಿದ್ದ 100 ಕೆಡೆಟ್ ಗಳ ಪೈಕಿ ಕರ್ನಾಟಕ – ಗೋವಾ ಡೈರೆಕ್ಟರೇಟ್ ವ್ಯಾಪ್ತಿಯ ಮಂಗಳೂರು ಎನ್ ಸಿಸಿ 6ನೇ (ಕಾರ್) KAR ಏರ್ ಸ್ಕ್ಯಾಡ್ರೆನ್ ನ  ಆಳ್ವಾಸ್ ಕಾಲೇಜಿನ ಎನ್ ಸಿಸಿ ಯಿಂದ ತರಬೇತಿಗೆ ಆಯ್ಕೆಯಾದ ಪ್ರತೀಕ್ಷಾ ಮೂರು ಪ್ಯಾರಾ ಜಂಪ್ ಗಳನ್ನು ಯಶಸ್ವಿಯಾಗಿ ಪೂರೈಸಿದವರು. ಪ್ರತಿದಿನ ರನ್ನಿಂಗ್, ಪುಶ್ ಅಪ್, ಫುಲ್ಲಪ್ ಸೇರಿದಂತೆ ಸತತ ಪರಿಶ್ರಮ, ಕಠಿಣ ತರಬೇತಿ ಮತ್ತು ದೈಹಿಕ ಕ್ಷಮತೆಯನ್ನು ಬಯಸುವ ಪ್ಯಾರಾ ಜಂಪ್ ಸುಲಭದ ಕೆಲಸವಲ್ಲ.

    ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿಯನ್ನು ನೀಡಿದ ಬಳಿಕ ಕೆಡೆಟ್ ಗಳ ಎತ್ತರದ ಭಯವನ್ನು ನಿವಾರಿಸಲು ಹಲವು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕನಿಷ್ಠ 30 ಅಡಿ ಎತ್ತರದಿಂದ ಪ್ರಾರಂಭವಾಗುವ ಹಂತ ಹಂತದ ಪರೀಕ್ಷೆಗಳ ಬಳಿಕ 1250 ಅಡಿ ಎತ್ತರದಿಂದ ಪ್ಯಾರಾ ಜಂಪಿಂಗ್ ಪರೀಕ್ಷೆ ನಡೆಸಲಾಗುತ್ತದೆ. ಹೀಗೆ ವಿವಿಧ ಹಂತದ ಪರೀಕ್ಷೆಗಳನ್ನು ಎದುರಿಸಿ, ಮೂರು  ಪ್ಯಾರಾ ಜಂಪ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ ಹೆಮ್ಮೆ ಪ್ರತೀಕ್ಷಾ ಅವರದು.

    ಇದನ್ನೂ ಓದಿ :

    ಸೇನೆಗೆ ಸೇರುವ ಆಸೆ :

    ಬಾಲ್ಯದಿಂದಲೇ ಸೇನೆಗೆ ಸೇರಬೇಕು ಎಂಬ ಅಸೆ ಚಿಗುರಿದ್ದು ಪ್ರತೀಕ್ಷಾ ಅವರ ಅಣ್ಣ ಪ್ರಜ್ವಲ್ ಅವರಿಂದ. ಪ್ರಜ್ವಲ್ ಪೂಜಾರಿಯವರು ಸೈನಿಕನಾಗಿದ್ದು ಅವರೇ ನನಗೆ ಸ್ಫೂರ್ತಿ ಎನ್ನುತ್ತಾರೆ ಪ್ರತೀಕ್ಷಾ. ಪ್ಯಾರಾ ಜಂಪ್ ಪರೀಕ್ಷೆ ತೇರ್ಗಡೆಯಾಗಿರುವುದು ಪ್ರತೀಕ್ಷಾ ಅವರಿಗೆ ವಾಯುಪಡೆಗೆ ಸೇರಲು ಸಹಕಾರಿಯಾಗಿದೆ. ಅಲ್ಲದೇ ಯಾವುದೇ ಸರಕಾರಿ ಉದ್ಯೋಗಕ್ಕೆ ಆಯ್ಕೆ ಸಂದರ್ಭ ಪ್ಯಾರಾ ಜಂಪ್ ನ  ವಿಶೇಷ ಅಂಕಗಳು ಪರಿಗಣನೆಗೆ ಬರುತ್ತವೆ.

    ಆರ್ಥಿಕವಾಗಿ ಸದೃಢವಲ್ಲದ ಕುಟುಂಬದ, ಕುಳವೂರಿನ ಅಪ್ಪಟ ಗ್ರಾಮೀಣ ಬಾಲೆಯ ಈ ಸಾಧನೆಗೆ ಗ್ರಾಮಸ್ಥರಿಂದ  ಸಂತಸ ವ್ಯಕ್ತವಾಗಿದೆ.

     

    Continue Reading

    LATEST NEWS

    10 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ..! 16 ವರ್ಷದ ಸ್ನೇಹಿತನಿಂದ ಕೃತ್ಯ..!

    Published

    on

    ಮಂಗಳೂರು/ ಗುಜರಾತ್ : 16 ವರ್ಷದ ಹುಡುಗನೊಬ್ಬ 5 ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಗುಜರಾತ್‌ನ ಅರಾವಳಿ ಜಿಲ್ಲೆಯ ಧನ್ಸೂರಾ ಗ್ರಾಮದ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ತನ್ನ ತಾಯಿಯ ಸ್ಮಾರ್ಟ್‌ ಫೋನ್ ಬಳಸುತ್ತಿದ್ದ ಬಾಲಕಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 16 ವರ್ಷದ ಯುವಕನೊಬ್ಬನ ಪರಿಚಯವಾಗಿದೆ. ಇಬ್ಬರೂ ಚಾಟಿಂಗ್ ಮಾಡುತ್ತಿದ್ದು, ಫೋನ್‌ ನಂಬರ್ ಹಂಚಿಕೊಂಡು ಮಾತನಾಡುತ್ತಿದ್ದರು ಎಂಬುದಾಗಿ ವಿಚಾರಣೆ ವೇಳೆ ಪೋಷಕರು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮತ್ತು ಆಕೆಯ ಮತ್ತೋರ್ವ ಅಪ್ರಾಪ್ತ ಸಹೋದರಿ ಇನ್‌ಸ್ಟಾಗ್ರಾಮ್‌ನಲ್ಲಿ 7 ಖಾತೆಗಳನ್ನು ತೆರೆದಿದ್ದು, 2 ಅಕೌಂಟ್‌ನಲ್ಲಿ ಸಕ್ರೀಯವಾಗಿದ್ದರು ಎಂಬುದ ಕೂಡಾ ಗೊತ್ತಾಗಿದೆ.

    ಬಾಲಕಿಯ ಜೊತೆ ಚಾಟಿಂಗ್ ಮಾಡಿ ಫೋನ್ ಕೂಡಾ ಮಾಡುತ್ತಿದ್ದ ಹುಡುಗ ಮನೆಯವರಿಗೆ ತಿಳಿಯದಂತೆ ಆಕೆಯನ್ನು ಕರೆದೊಯ್ದಿದ್ದಾನೆ. ಬಾಲಕಿ ನಾಪತ್ತೆ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಮನೆಯವರು ನೀಡಿದ ಮಾಹಿತಿ ಆದರಿಸಿ ಹುಡುಕಾಟ ನಡೆಸಿ ಬಾಲಕಿಯನ್ನು ಪತ್ತೆ ಹಚ್ಚಲಾಗಿದೆ. ಬಳಿಕ ವಿಚಾರಣೆ ನಡೆಸಿದ ಪೊಲೀಸರಿಗೆ ಬಾಲಕಿಯ ಅತ್ಯಾಚಾರ ನಡೆದಿರುವುದು ಆಕೆಯ ಹೇಳಿಕೆಯಿಂದ ಗೊತ್ತಾಗಿದೆ.

    ಇಬ್ಬರೂ ಅಪ್ರಾಪ್ತರಾಗಿದ್ದು , ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಾಲಕನನ್ನು ಬಾಲ ನ್ಯಾಯ ಮಂಡಳಿಗೆ ಹಸ್ತಾಂತರ ಮಾಡಲಾಗಿದ್ದು, ಬಾಲಪರಾಧ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    Continue Reading

    LATEST NEWS

    ಚಿಕ್ಕಮಗಳೂರು : ಮುಂಡಗಾರು ಲತಾ ಸೇರಿ 6 ಮೋಸ್ಟ್ ವಾಂಟೆಡ್ ‘ನಕ್ಸಲರು’ ಶರಣಾಗತಿಗೆ ನಿರ್ಧಾರ!

    Published

    on

    ಚಿಕ್ಕಮಗಳೂರು: ಕಳೆದ ಕೆಲವು ದಿನಗಳ ಹಿಂದೆ ಚಿಕ್ಕಮಂಗಳೂರು ಭಾಗದಲ್ಲಿ ನಕ್ಷಲ್ ಚಟುವಟಿಕೆ ಹೆಚ್ಚಾಗಿದ್ದು, ಈ ವೇಳೆ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಿದ ಬಳಿಕ ಇದೀಗ 6 ನಕ್ಸಲರು ಚಿಕ್ಕಮಂಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತಿಗೆ ನಿರ್ಧರಿಸಿದ್ದು, ಮುಂದಿನ ಮೂರು ದಿನಗಳಲ್ಲಿ ಆರು ನಕ್ಸಲರು ಶರಣಾಗೋ ಸಾಧ್ಯತೆ ಇದೆ ಎನ್ನಲಾಗಿದೆ.

    ಹೌದು ಚಿಕ್ಕಮಗಳೂರಿನ ಜಿಲ್ಲಾಡಳಿತದ ಮುಂದೆ ಶರಣಾಗತಿ ಆಗಲು ನಿರ್ಧಾರ ಮಾಡಿದ್ದಾರೆ. ಕರ್ನಾಟಕ, ಕೇರಳ, ಆಂಧ್ರಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲರು ಇದೀಗ ಶರಣಾಗತಿಗೆ ನಿರ್ಧಾರ ಮಾಡಿದ್ದಾರೆ. ಕರ್ನಾಟಕದ ನಕ್ಸಲ್ ತುಂಗಾ ದಳದ ನಕ್ಸಲ್ ನಾಯಕಿ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ದಕ್ಷಿಣ ಭಾರತದ ಮೋಸ್ಟ ವಾಂಟೆಡ್ ನಕ್ಸಲ್ ಜೀಶ ಆಂಧ್ರಪ್ರದೇಶದ ಕೆ. ವಸಂತ್, ಮಾರಪ್ಪ ಅರೋಲಿ ಶರಣಾಗತಿಗೆ ನಿರ್ಧರಿಸಿದ್ದಾರೆ.

    ಈ ಬಗ್ಗೆ ಶಾಂತಿಗಾಗಿ ನಕ್ಸಲರು ನಾಗರೀಕ ವೇದಿಕೆಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ವೇದಿಕೆ ಸದಸ್ಯರು ಚರ್ಚಿಸಿದ್ದಾರೆ. ಮೂರು ದಿನಗಳಲ್ಲಿ ಆರು ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೂರು ತಿಂಗಳಿನಿಂದ ಚಿಕ್ಕಮಂಗಳೂರು ಉಡುಪಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿತ್ತು. ವಿಕ್ರಂ ಎನ್ಕೌಂಟರ್ ಬಳಿಕ ಸರ್ಕಾರ ನಕ್ಸಲರಿಗೆ ಶರಣಾಗತಿಗೆ ಆದ್ಯತೆ ನೀಡಿತ್ತು. ಹಾಗಾಗಿ ಇದೀಗ 6 ನಕ್ಸಲರು ತಾವಾಗಿಯೇ ಶರಣಾಗತಿಗೆ ನಿರ್ಧಾರ ಕೈಗೊಂಡಿದ್ದಾರೆ.

    Continue Reading

    LATEST NEWS

    Trending