ಮಂಗಳೂರು/ಗೀಲಾಂಗ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ದುಃಖಕರ ಸಂಗತಿ ಹೊರಬಿದ್ದಿದೆ.
ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಓಪನರ್ ಇಯಾನ್ ರೆಡ್ ಪತ್ (83) ನಿಧನರಾಗಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಮಾಹಿತಿ ನೀಡಿದೆ. ಇಯಾನ್ ರೆಡ್ ಪತ್ 1960 ಮತ್ತು 1970ರ ದಶಕಗಳಲ್ಲಿ ಆಸ್ಟ್ರೇಲಿಯಾ ತಂಡದ ನಿಯಮಿತ ಭಾಗವಾಗಿದ್ದರು. ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್ ನ ಸದಸ್ಯರೂ ಆಗಿದ್ದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 2ರಂದು ನಡೆಯಲಿದೆ. ರೆಡ್ ಪತ್ ನಿಧನದಿಂದ ಆಸ್ಟ್ರೇಲಿಯಾದಲ್ಲಿ ಶೋಕ ಸಾಗರದಲ್ಲಿ ಮುಳುಗಿದೆ.
ಗೀಲಾಂಗ್ ನಿವಾಸಿಯಾಗಿರುವ ರೆಡ್ ಪತ್ 66 ಟೆಸ್ಟ್ ಪಂದ್ಯಗಳಲ್ಲಿ ಆಡಿ 43.45 ಸರಾಸರಿಯಲ್ಲಿ 4737 ರನ್ ಗಳಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 31 ಅರ್ಧ ಶತಕಗಳು ಸೇರಿವೆ. ಇವರ ಗರಿಷ್ಠ ಸ್ಕೋರ್ 171 ಆಗಿತ್ತು. ಇಯಾನ್ ರೆಡ್ ಪತ್ 1963-64ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯ ಎರಡನೇ ಪಂದ್ಯದಲ್ಲಿ MCGಯಲ್ಲಿ ತನ್ನ ಟೆಸ್ಟ್ ಪಾದಾರ್ಪಣೆ ಮಾಡಿದ್ದರು.
ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್ ಮನ್ ರೆಡ್ ಪತ್ ನಿಧನದಿಂದ ಕ್ರಿಕೆಟ್ ಜಗತ್ತು ಶೋಕದಲ್ಲಿ ಮುಳುಗಿದೆ.
ಮಂಗಳೂರು/ಶ್ರೀಹರಿಕೋಟ :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಬುಧವಾರ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESE) ಗಾಗಿ ಅತ್ಯಾಧುನಿಕ ತಂತ್ರಜ್ಞಾನ ಪ್ರದರ್ಶನ ಮಿಷನ್ ಪ್ರೊಬಾ-3 ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲು ಸಜ್ಜಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ಇಂದು ಅಪರಾಹ್ನ 4:08 ನಿಮಿಷಕ್ಕೆ ಉಡಾವಣೆಯಾಗಲಿದ್ದು, ಇದು ಇಸ್ರೋದ ವಾಣಿಜ್ಯ ಬಾಹ್ಯಾಕಾಶ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲಾಗಿರುತ್ತದೆ.
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESE) ಜತೆ ಒಪ್ಪಂದವನ್ನು ಪಡೆದುಕೊಂಡಿರುವ ಇಸ್ರೋ ಈ ಮಿಷನ್ ಅನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL)ನ ವಾಣಿಜ್ಯ ವಿಭಾಗದ ಅಡಿಯಲ್ಲಿ ಲಾಂಚ್ ಮಾಡುತ್ತಿದೆ. ಇದು ಪೋಲಾರ್ ಸ್ಯಾಟ್ ಲೈಟ್ ಲಾಂಚ್ ವಹಿಕಲ್ (ಪಿಎಸ್ ಎಲ್ ವಿ ರಾಕೆಟ್)ನ 61ನೇ ಹಾರಾಟವಾಗಿದೆ. ಹೆಚ್ಚು ತೂಕದ ಬಾಹ್ಯಾಕಾಶ ಮಿಷನ್ ಕೈಗೊಳ್ಳುವಲ್ಲಿ ಪಿಎಸ್ ಎಲ್ ವಿ ರಾಕೆಟ್ ಹೆಸರುವಾಸಿಯಾಗಿದೆ.ಈ ಮಿಷನ್ ಅಡಿ ಕರೋನಾಗ್ರಾಫ್ ಮತ್ತು ಆಕಲ್ಚರ್ ಎಂಬ ಎರಡು ಬಾಹ್ಯಾಕಾಶ ನೌಕೆಗಳನ್ನು ನಭಕ್ಕೆ ಕೊಂಡೊಯ್ಯಲಾಗುತ್ತದೆ. ಇದು ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಸಲುವಾಗಿ ವಿಶೇಷವಾಗಿ ವಿನ್ಯಾಸ ಮಾಡಿರುವ ನೌಕೆಗಳಾಗಿವೆ.
ಈಯೋಜನೆಯಲ್ಲಿ ಇಸ್ರೋ ಪಾತ್ರ
ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಪ್ರೋಬಾ-3 ಮಿಷನ್ ನ ವೈಜ್ಞಾನಿಕ ಅಂಶಗಳನ್ನು ಮುನ್ನಡೆಸುತ್ತದೆ. ಈ ಯೋಜನೆಯ ಉಡಾವಣೆ ಯಶಸ್ಸಿಗೆ ಇಸ್ರೋ ಪಲ್ಗೊಳ್ಳುವಿಕೆ ಅತ್ಯಂತ ನಿರ್ಣಾಯಕವಾಗಿದೆ. ಈ ಯೋಜನೆಗಾಗಿ ಇಸ್ರೋ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ರಾಕೆಟ್ ಅನ್ನು ಒದಗಿಸುತ್ತದೆ. ನಿಗದಿತ ಕಕ್ಷೆಗೆ 500 ಕೆಜಿವರೆಗಿನ ಪೇಲೋಡ್‌ಗಳನ್ನು ಕೊಂಡೊಯ್ಯುವ ವಿಷಯದಲ್ಲಿ ಪಿಎಸ್‌ಎಲ್‌ವಿ ರಾಕೆಟ್ ಹೆಸರುವಾಸಿಯಾಗಿದೆ. ಈ ಬಾಹ್ಯಾಕಾಶ ನೌಕೆಗಳನ್ನು ನಿಗದಿಪಡಿಸಿದ ಕಕ್ಷೆಗೆ ನಿಯೋಜಿಸುವಲ್ಲಿ ಇಸ್ರೋದ ಪಾತ್ರ ಮಹತ್ವದ್ದಾಗಿದೆ.
ಈಗಾಗಲೇ ಭಾರತವು ಸೌರ ಮಿಷನ್ ಕೈಗೊಂಡಿದೆ. ಆದಿತ್ಯ-L1 ಅನ್ನು ಸೆಪ್ಟೆಂಬರ್ 2023 ರಲ್ಲಿ ಯಶಸ್ವಿಯಾಗಿ ನಿಯೋಜಿಸಿದೆ. ಇಸ್ರೋದ ಈ ಪರಿಣತಿಯನ್ನು ಮನಗಂಡು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಭಾರತಕ್ಕೆ ಈ ಮಹತ್ವದ ಕೆಲಸವನ್ನು ನೀಡಿದೆ.
ಸೌರ ಕರೋನಾದ ಅಧ್ಯಯನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಈ ಮಿಷನ್ ಕೊಡುಗೆ ನೀಡಲಿದೆ.
ಮಂಗಳೂರು/ಕ್ಯಾನ್ ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಆಲ್ಬನೀಸ್ ಅವರನ್ನು ಭೇಟಿ ಮಾಡಿತು. ಈ ವೇಳೆ ಆಸೀಸ್ ಪ್ರಧಾನಿ, ಕೊಹ್ಲಿ ಅವರ ಆಟೋಗ್ರಾಫ್ ಪಡೆದುಕೊಂಡಿದ್ದು ತುಂಬಾ ಸದ್ದು ಮಾಡಿತ್ತು.
ಅಷ್ಟಕ್ಕೂ, ಆಂಥೋನಿ ಆಲ್ಬನೀಸ್ ಅವರು ಟೀಂ ಇಂಡಿಯಾ ನಾಯಕ ರೋಹಿತ್ ಅವರನ್ನು ಬಿಟ್ಟು ವಿರಾಟ್ ಕೊಹ್ಲಿ ಅವರ ಆಟೋಗ್ರಾಫ್ ಪಡೆದಿದ್ದೇಕೆ ಎಂಬುದನ್ನು ಸ್ವತಃ ಅವರೇ ರಿವಿಲ್ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಲ್ಬನೀಸ್,’ನನ್ನ ಖಾಸಗಿ ವೈದ್ಯರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಅವರು ಕೊಹ್ಲಿಯ ಬಗ್ಗೆ ಎಷ್ಟು ಭಾವೋದ್ರಿಕೃತರಾಗಿದ್ದಾರೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ನಾನು ಕೊಹ್ಲಿಯನ್ನು ಭೇಟಿಯಾಗುತ್ತೇನೆ ಎಂದು ಹೇಳಿದಾಗ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಈಗಾಗೀ ಕೊಹ್ಲಿಯ ಆಟೋಗ್ರಾಫ್ ಕೊಡಿಸಲು ಅವರು ನನ್ನಲ್ಲಿ ಹೇಳಿದ್ದಾರೆ. ಎಂದು ತಿಳಿಸಿದರು.
ಇನ್ನೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಎರಡನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯಾವು ಶುಕ್ರವಾರದಿಂದ ಶುರುವಾಗಲಿದೆ.
ಮಂಗಳೂರು/ನವದೆಹಲಿ : ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಸಹೋದರಿ ಅಲಿಯಾ ಫಕ್ರಿಯನ್ನು ಬಂಧಿಸಲಾಗಿದೆ. ಮಾಜಿ ಪ್ರಿಯಕರ ಎಡ್ವರ್ಡ್ ಜೇಕಬ್ಸ್(35) ಮತ್ತು ಅನಸ್ತಾಸಿಯಾ ಎಟಿಯೆನ್ನೆಯನ್ನು ಹ*ತ್ಯೆಗೈದಿರುವ ಗಂಭೀರ ಆರೋಪ ಅಲಿಯಾ ವಿರುದ್ಧ ಕೇಳಿ ಬಂದಿದೆ. ಎಡ್ವರ್ಡ್ ಜೇಕಬ್ಸ್ ಮತ್ತು ಆತನ ಸ್ನೇಹಿತೆ ಅನಸ್ತಾಸಿಯಾ ನೆಲೆಸಿದ್ದ ಎರಡು ಅಂತಸ್ತಿನ ಕಟ್ಟಡಕ್ಕೆ ಅಲಿಯಾ ಫಕ್ರಿ ಬೆಂ*ಕಿ ಹಚ್ಚಿದ್ದರು. ನೀವೆಲ್ಲರೂ ಸಾಯಿರಿ ಎಂಬುದಾಗಿ ಆಕೆ ಕೂಗಾಡಿದ್ದರು ಎಂಬ ಬಗ್ಗೆ ವರದಿಯಾಗಿದೆ.
ಬೆಂ*ಕಿ ಸಂಪೂರ್ಣವಾಗಿ ಕಟ್ಟಡವನ್ನು ಆವರಿಸಿದ್ದರಿಂದ ಎಡ್ವರ್ಡ್ ಜೇಕಬ್ಸ್ ಮತ್ತು ಅನಸ್ತಾಸಿಯಾಗೆ ತಪ್ಪಿಕೊಳ್ಳಲಾಗಿರಲಿಲ್ಲ. ಹೀಗಾಗಿ, ದಟ್ಟ ಹೊಗೆ ಆವರಿಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಪ್ರಾ*ಣಬಿಟ್ಟಿದ್ದರು.
ಜೇಕಬ್ಸ್ ಒಂದು ವರ್ಷದ ಹಿಂದೆ ಅಲಿಯಾ ಫಕ್ರಿಯೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದ. ಆದರೂ ಅಲಿಯಾ ನನ್ನ ಮಗನನ್ನು ಹಿಂಬಾಸುತ್ತಿದ್ದಳು ಎಂಬುದಾಗಿ ಜೇಕಬ್ಸ್ ತಾಯಿ ಆರೋಪಿಸಿದ್ದಾರೆ. ಸದ್ಯ ಅಲಿಯಾರನ್ನು ನ್ಯೂಯಾರ್ಕ್‌ನ ಕ್ರಿಮಿನಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಜಿಲ್ಲಾ ಅಟಾರ್ನಿ ಮೆಲಿಂಡಾ ಜಾಮೀನು ನೀಡಲು ನಿರಾಕರಿಸಿದೆ ಎಂದು ತಿಳಿದುಬಂದಿದೆ.
Pingback: ಕನ್ನಡದ ಟಾಪ್ ನಟನಾಗಿದ್ದ ವಿಷ್ಣುವರ್ಧನ್, ಮಾಲಾಶ್ರೀ ಜೊತೆ ಏಕೆ ನಟಿಸಲಿಲ್ಲ? ಕಾರಣ ಬಹಿರಂಗ ! - NAMMAKUDLA NEWS - ನಮ್ಮಕುಡ್