Connect with us

LATEST NEWS

ಸೈಬರ್‌ ಬೆದರಿಕೆ ಪಟ್ಟಿಗೆ ಸೇರ್ಪಡೆಯಾದ ಭಾರತ; ಕಾರಣ ಗೊತ್ತಾ ??

Published

on

ಮಂಗಳೂರು/ಹೊಸದಿಲ್ಲಿ: ಕೆನಡಾ ದೇಶವು ಖಲಿಸ್ಥಾನಿ ಉಗ್ರ ಹದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರವಾಗಿ ಭಾರತದ ವಿರುದ್ಧ ಆರೋಪ ಹೇರಿದ್ದು, ಇದೀಗ ತನ್ನ ಸೈಬರ್‌ ಬೆದರಿಕೆ ಪಟ್ಟಿಗೆ ಭಾರತವನ್ನು ಸೇರಿಸಿದೆ. ಕೆನಡಾ ಮೇಲೆ ಭಾರತವು ಸರ್ಕಾರಿ ಪ್ರಾಯೋಜಿತ ಹ್ಯಾಕಿಂಗ್‌ ಮತ್ತು ಸೈಬರ್‌ ಬೇಹುಗಾರಿಕೆಗೆ ಯತ್ನಿಸುತ್ತಿದೆ ಎಂಬುವುದಾಗಿ ಆರೋಪಿಸಲಾಗಿದೆ.

ನಿಜ್ಜರ್‌ ವಿಚಾರವಾಗಿ ಕೆನಡಾ ಮತ್ತು ಭಾರತದ ನಡುವೆ ಮೂಡಿರುವ ರಾಜತಾಂತ್ರಿಕ ಬಿಕ್ಕಟ್ಟು ಬಗೆಹರಿಯುವ ಮೊದಲೇ ಕೆನಡಾದ ಈ ನಡೆ ಉಭಯ ರಾಷ್ಟ್ರಗಳ ನಡುವೆ ಮತ್ತೂಂದು ಕಂದಕ ಮೂಡಿಸುವ ಸಾಧ್ಯತೆ ಇದೆ.

“ನ್ಯಾಶನಲ್‌ ಸೈಬರ್‌ ಥೆÅಟ್‌ ಅಸೆಸ್‌ಮೆಂಟ್‌ 2025-2026′ ವರದಿಯಲ್ಲಿ ಭಾರತದ ವಿರುದ್ಧ ಮೇಲ್ಕಂಡ ಆರೋಪವನ್ನು ಕೆನಡಾ ಸರಕಾರ ಮಾಡಿದೆ. ಕೆನಡಾದಲ್ಲಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಎದುರಿಸುತ್ತಿರುವ ಸೈಬರ್‌ ಬೆದರಿಕೆಗಳ ಕುರಿತಾದ ಮಾಹಿತಿ ಇರುವ ಈ ವರದಿಯು ಯಾವ ರಾಷ್ಟ್ರಗಳು ಈ ಬೆದರಿಕೆಗಳನ್ನು ಪ್ರಾಯೋಜಿಸುತ್ತಿವೆ ಎನ್ನುವ ಪಟ್ಟಿಯನ್ನೂ ಒಳಗೊಂಡಿದೆ. ಇದರಲ್ಲಿ ಭಾರತಕ್ಕೆ 5ನೇ ಸ್ಥಾನ ನೀಡಲಾಗಿದೆ. ಉಳಿದಂತೆ ಮೊದಲ ಸ್ಥಾನದಲ್ಲಿ ಚೀನಾ, ನಂತರದಲ್ಲಿ ರಷ್ಯಾ, ಇರಾನ್‌ ಮತ್ತು ಉತ್ತರ ಕೊರಿಯಾದ ಹೆಸರುಗಳನ್ನು ಉಲ್ಲೇಖೀಸಲಾಗಿದೆ. ಈ ಹಿಂದೆ ಯಾವ ವರದಿಯಲ್ಲೂ ಭಾರತದ ಹೆಸರು ಇರಲಿಲ್ಲ.

ಭಾರತದ ವಾಗ್ದಾಳಿ; ಕೆನಡಾ ಕುತಂತ್ರ

ಭಾರತದ ಮೇಲಿನ ಕೆನಡಾದ ಆರೋಪವನ್ನು ಭಾರತ ತಿರಸ್ಕರಿಸಿದೆ. ಭಾರತದ ಕುರಿತು ಜಗತ್ತಿನ ರಾಷ್ಟ್ರಗಳು ಹೊಂದಿರುವ ಅಭಿಪ್ರಾಯವನ್ನು ಬದಲಿಸಿ, ಭಾರತದ ವರ್ಚಸ್ಸಿನ ಮೇಲೆ ದಾಳಿ ನಡೆಸಲು ಕೆನಡಾ ಈ ರೀತಿಯ ಹೊಸ ಕಾರ್ಯತಂತ್ರ ರೂಪಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣದೀರ್‌ ಜೈಸ್ವಾಲ್‌ ಹೇಳಿದ್ದಾರೆ. ಜತೆಗೆ ಈ ಹಿಂದೆಯೂ ಭಾರತದ ಮೇಲೆ ಜಾಗತಿಕ ಅಭಿಪ್ರಾಯ ಬದಲಿಸಲು ಪ್ರಯತ್ನಿಸಿದ್ದಾಗಿ ಕೆನಡಾದ ಹಿರಿಯ ಅಧಿಕಾರಿಗಳೇ ಒಪ್ಪಿಕೊಂಡಿದ್ದರು.

ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ನಾಲ್ಕನೇ ಪರಮಾಣು ಜಲಾಂತರ್ಗಾಮಿ ನೌಕೆ ಸೇರ್ಪಡೆ

ಈಗಲೂ ಅಂಥದ್ದೇ ಪ್ರಯತ್ನ ಮಾಡಿದ್ದಾರೆ ಎಂದೂ ಹೇಳಿದ್ದಾರೆ. ಜತೆಗೆ ನೇರವಾಗಿ ಕೆನಡಾಗೆ ಚಾಟಿ ಬೀಸಿ, “ನೀವು ಮೊದಲಿಗೆ ನಮ್ಮ ವಿರುದ್ಧ ಆಧಾರರಹಿತ ಹೇಳಿಕೆ ನೀಡುತ್ತೀರಿ. ನಾವು ಅದನ್ನು ವಿರೋಧಿಸಿದಾಗ ನಮ್ಮ ವಿರುದ್ಧ ಇಂಥ ದೊಡ್ಡಮಟ್ಟದ ಆರೋಪ ಹೊರಿಸುತ್ತೀರಿ, ಇದು ಸರಿ ಅಲ್ಲ” ಎಂದು ಜೈಸ್ವಾಲ್‌ ಹೇಳಿದ್ದಾರೆ.

LATEST NEWS

ಇಂದು ಸಂಜೆ 5 ಗಂಟೆಯಿಂದ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಆರಂಭ

Published

on

ಶಬರಿಮಲೆ : ಇಂದಿನಿಂದ ಶಬರಿಮಲೆ ದೇವಸ್ಥಾನದಲ್ಲಿ ಈ ವರ್ಷದ ವಾರ್ಷಿಕ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆ ಆರಂಭವಾಗಲಿದೆ. ದೇವಾಲಯದ ಗರ್ಭಗುಡಿಯ ಬಾಗಿಲು ಇಂದು ಸಂಜೆ 5 ಗಂಟೆಗೆ ತೆರೆಯುತ್ತದೆ. ದೇವಸ್ಥಾನವನ್ನು ನಿರ್ಗಮಿತ ಮೇಳಶಾಂತಿ (ಪ್ರಧಾನ ಅರ್ಚಕ) ಪಿ.ಎನ್. ಮಹೇಶ ನಂಬೂತಿರಿ ನೆರವೇರಿಸುವರು.

ಶಬರಿಮಲೆ ಯಾತ್ರೆಯ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲು ಭಕ್ತರು ಕೆಲವು ನಿಯಮಗಳನ್ನು ಪಾಲಿಸಬೇಕು. ಇಂದು ಮಧ್ಯಾಹ್ನ 1 ಗಂಟೆಯಿಂದ ಭಕ್ತರಿಗೆ ಬೆಟ್ಟ ಹತ್ತಲು ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಮತ್ತು ಶನಿವಾರ ಬೆಳಗಿನ ಜಾವ 3 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪೂಜೆಗಳು ನಡೆಯಲಿವೆ.

ಶುಕ್ರವಾರ, ಉಪದೇವತಾ ದೇವಾಲಯವನ್ನು ಔಪಚಾರಿಕವಾಗಿ ಉದ್ಘಾಟಿಸಲಾಗುವುದು ಮತ್ತು ಪವಿತ್ರ ಅಗ್ನಿಯನ್ನು ಆಜಿಗೆ ವರ್ಗಾಯಿಸಲಾಗುತ್ತದೆ. ಈ ಸಂದರ್ಭದಲ್ಲಿ ನೂತನವಾಗಿ ನೇಮಕಗೊಂಡ ಮೇಲ್ಸಂತಿ ಎಸ್. ಅರುಣ್ ಕುಮಾರ್ ನಂಬೂತಿರಿ ಮತ್ತು ವಾಸುದೇವನ್ ನಂಬೂತಿರಿ ಅವರು ಅಯ್ಯಪ್ಪ ದೇವಸ್ಥಾನ ಮತ್ತು ಮಲಿಕಪ್ಪುರಂ ದೇವಿ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳನ್ನು ನಿರ್ವಹಿಸಲಿದ್ದಾರೆ.

ಭದ್ರತಾ ವ್ಯವಸ್ಥೆಗಳು ಮತ್ತು 299 ಸಿಬ್ಬಂದಿಯ ನಿಯೋಜನೆ:

ರಾಜ್ಯ ಪೊಲೀಸ್ ಮುಖ್ಯಸ್ಥ ಶೇಖ್ ದರ್ವೇಶ್ ಸಾಹೇಬ್ ಅವರು ಗುರುವಾರ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದಾದ ಬಳಿಕ ದೇವಾಲಯದ ಆವರಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆಗಾಗಿ 299 ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಇವರಲ್ಲಿ ಸನ್ನಿಧಾನಂನಲ್ಲಿ ಒಬ್ಬ ಡ್ಯೂಟಿ ಮ್ಯಾಜಿಸ್ಟ್ರೇಟ್, ಪಂಪಾದಲ್ಲಿ 144 ಉದ್ಯೋಗಿಗಳು ಮತ್ತು ನಿಲಕ್ಕಲ್‌ನಲ್ಲಿ 160 ಉದ್ಯೋಗಿಗಳು ಸೇರಿದ್ದಾರೆ. ಇದಲ್ಲದೆ, ಕಂದಾಯ ಇಲಾಖೆಯು ಸನ್ನಿಧಾನಂ, ನಿಲಕ್ಕಲ್ ಮತ್ತು ಪಂಪಾದಲ್ಲಿ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ಸಹ ಸ್ಥಾಪಿಸಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ತಕ್ಷಣವೇ ನಿಭಾಯಿಸಬಹುದು.

ಈ ಬಾರಿ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಪ್ರಮುಖ ಮೂಲ ನಿಲ್ದಾಣಗಳಲ್ಲಿ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಕಳೆದ ಋತುವಿನಲ್ಲಿ 50 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು ಮತ್ತು ಈ ವರ್ಷವೂ ಅಧಿಕಾರಿಗಳು ಬಿಡುವಿನ ವೇಳೆಗೆ ವಿಸ್ತಾರವಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಎರುಮೇಲಿ, ಚೆಂಗನ್ನೂರು, ಕುಮಿಲಿ, ಎಟ್ಟುಮನೂರು ಮತ್ತು ಪುನಲೂರು ಮುಂತಾದ ಪ್ರಮುಖ ಬೇಸ್ ಸ್ಟೇಷನ್‌ಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.

ಬಸ್ ಸೇವೆಗಳನ್ನು ಹೆಚ್ಚಿಸಲಾಗುವುದು

ಪಂಪಾ ಬಸ್ ನಿಲ್ದಾಣವು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಮಕರವಿಳಕ್ಕು ಹಬ್ಬ ಸಮೀಪಿಸುತ್ತಿದ್ದಂತೆ ಪಂಪಾ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಬಸ್ ಸಂಚಾರವನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ.

ದೇವಾಲಯವನ್ನು 18 ಗಂಟೆಗಳ ಕಾಲ ತೆರೆಯಲಾಗುತ್ತದೆ

ಈ ಬಾರಿ ದೇವಾಲಯವನ್ನು ದಿನಕ್ಕೆ 18 ಗಂಟೆಗಳ ಕಾಲ ತೆರೆಯಲಾಗುವುದು, ಇದರಿಂದ ಹೆಚ್ಚಿನ ಭಕ್ತರು ಅಯ್ಯಪ್ಪನ ದರ್ಶನವನ್ನು ಪಡೆಯಬಹುದಾಗಿದೆ. ಪ್ರತಿದಿನ 70,000 ಯಾತ್ರಾರ್ಥಿಗಳು ವರ್ಚುವಲ್ ಲೈನ್ ಮೂಲಕ ತಮ್ಮ ದರ್ಶನ ಸ್ಲಾಟ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೆ, ಪಂಪಾ, ಎರುಮೇಲಿ ಮತ್ತು ವಾಡಿಪೆರಿಯಾರ್‌ನಲ್ಲಿ ಸ್ಥಳದಲ್ಲೇ ಬುಕಿಂಗ್ ಮಾಡಲು ಹೆಚ್ಚುವರಿ 10,000 ಸ್ಥಳಗಳು ಲಭ್ಯವಿರುತ್ತವೆ.

Continue Reading

LATEST NEWS

ಕರ್ನಾಟಕದ ಭಕ್ತೆಯೊಡನೆ ತಮೀಳು ಮಠಾಧೀಶನ ವಿವಾಹ; ಭಕ್ತರ ಆಕ್ಷೇಪ

Published

on

ಮಂಗಳೂರು/ತಮಿಳುನಾಡು: ಕುಂಬಕೋಣಂನ ಪ್ರಸಿದ್ಧ ಸೂರ್ಯನಾರ್‌ ದೇವಾಲಯದ ಸ್ವಾಮೀಜಿ ಇತ್ತೀಚೆಗೆ ಕರ್ನಾಟಕದ ರಾಮನಗರದ ಭಕ್ತೆಯನ್ನು ವಿವಾಹವಾಗಿದ್ದು, ಭಾರೀ ವಿವಾದ ಹುಟ್ಟು ಹಾಕಿದೆ.

ಮಹಾಲಿಂಗ ಸ್ವಾಮಿ ಅ.10 ರಂದು ರಾಮನಗರ ಜಿಲ್ಲೆಯ ಹೇಮಶ್ರೀ (47) ಎಂಬುವವರನ್ನು ಬೆಂಗಳೂರಿನಲ್ಲಿ ವಿವಾಹವಾಗಿದ್ದಾರೆ. ಸ್ವಾಮೀಜಿ ಬ್ರಹ್ಮಚರ್ಯ ತ್ಯಜಿಸಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಕ್ಕೆ ಅವರ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಕ್ತರಿಂದ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸ್ವಾಮೀಜಿ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಸ್ವಾಮೀಜಿ ಉತ್ತರಿಸಿದ್ದು, “ಹಲವಾರು ಅಧೀನಮ್‌ ಮಠಾಧೀಶರು ವಿವಾಹಿತರಾಗಿದ್ದು, ನಾನೇ ಮೊದಲಲ್ಲ. ಇಲ್ಲಿ ನನಗೆ ಮುಚ್ಚಿಡಲು ಏನೂ ಇಲ್ಲ. ಹೇಮಶ್ರೀ ಆಧಿನಾಮ್‌ಗೆ ಭಕ್ತೆಯಾಗಿ ಬಂದರು. ಮುಂದೆಯೂ ಭಕ್ತೆಯಾಗಿಯೇ ಇರಲಿದ್ದಾರೆ” ಎಂದು ಹೇಳಿದ್ದಾರೆ.

Continue Reading

LATEST NEWS

ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಸಂಭ್ರಮ; ರಥೋತ್ಸವಕ್ಕೆ ಹಣತೆಗಳಿಂದ ಅಲಂಕಾರಗೊಂಡ ರಥಬೀದಿ

Published

on

ಅಪರೂಪದ ಸಂಪ್ರದಾಯಗಳಿಗೆ ಹೆಸರಾಂತ ಜಾಗ ಉಡುಪಿ. ಇಲ್ಲಿನ ಕೃಷ್ಣಮಠ‌ದಲ್ಲಿ ಲಕ್ಷದೀಪಗಳಿಂದ ಸಂಭ್ರಮ. ಕಡಗೋಲು ಕೃಷ್ಣನ ಮೊದಲ ರಥೋತ್ಸವಕ್ಕೆ ಅಷ್ಟಮಠಗಳ ರಥಬೀದಿ ಅಲಂಕಾರಗೊಂಡು ಹಣತೆಯ ದೀಪಗಳಿಂದ ಕಂಗೊಳಿಸುತ್ತಿದೆ. ಮಠಾಧೀಶರ ಉಪಸ್ಥಿತಿಯಲ್ಲಿ ವೈಭವದ ನಡುವೆ ಕೃಷ್ಣನ ದೇವರ ಮೆರವಣಿಗೆಯನ್ನ ನಡೆಸಲಾಯ್ತು. ಅಲ್ಲಿನ ರಥಬೀದಿಗಳಲ್ಲಿ ಲಕ್ಷದೀಪೋತ್ಸವ ಕಂಡು ಭಕ್ತರು ಭಕ್ತಿಯ ಮಳೆಯಲ್ಲಿ ನೆನೆದರು.

ಆ ಭಗವಂತನ ಸ್ವಾಗತಕ್ಕೆ ಉಡುಪಿಯ ಅಷ್ಟಮಠಗಳ ರಥಬೀದಿ ದೀಪಗಳಿಂದ ಕಂಗೊಳಿಸುತ್ತಿದ್ದು, ಭಕ್ತರು ಕೃಷ್ಣನಿಗೆ ಹಣತೆಯಲ್ಲಿ ದೀಪ ಬೆಳಗಿ ಸಂಭ್ರಮಿಸಿದ್ರು. ಕೃಷ್ಣ ದೇವರು ಯೋಗ ನಿದ್ರೆಯಲ್ಲಿರುತ್ತಾನೆ ಅನ್ನೋದು ಇಲ್ಲಿಯವರ ನಂಬಿಕೆ. ಉತ್ಥಾನ ದ್ವಾದಶಿಯ ದಿನ ಯೋಗ ನಿದ್ರೆ ಪೂರೈಸಿ ರಥಬೀದಿಗೆ ಬರುವ ದೇವರನ್ನ ಬರಮಾಡಿಕೊಳ್ಳಲು ನಡೆದಿರುವ ತಯಾರಿ ಇದು.

ಈ ಮಹೋತ್ಸವವನ್ನ ಲಕ್ಷದೀಪೋತ್ಸವ ಎನ್ನುತ್ತಾರೆ. ಇಳಿ ಹೊತ್ತಲ್ಲಿ ಭಕ್ತರೆಲ್ಲರೂ ಸೇರಿ ರಥಬೀದಿಯಲ್ಲಿ ಸಾವಿರಾರು ದೀಪಗಳನ್ನ ಬೆಳಗಿದರು. ಮಧ್ವ ಸರೋವರದಲ್ಲಿ ಕ್ಷೀರಾಬ್ದಿ ಪೂಜೆ ನೆರವೇರಿತು. ಆ ಬಳಿಕ ಮಠದಿಂದ ಹೊರ ಬರುವ ಕೃಷ್ಣ ದೇವರ ಉತ್ಸವ ಮೂರ್ತಿಯನ್ನ ಮಧ್ವ ಸರೋವರಕ್ಕೆ ಕೊಂಡೊಯ್ಯಲಾಯ್ತು. ಸಾಲು ಸಾಲು ದೀಪಗಳ ನಡುವೆ ಕೃಷ್ಣ ದೇವರ ಮೆರವಣಿಗೆ ನಡಿಯಿತು.. ರಥದ ಮುಂಭಾಗದಲ್ಲಿ ಚಂಡೆಗಳ ನಾದ ವೈಭವ ಮೇಳೈಸಿತು.

ಈ ಬಾರಿಯ ಲಕ್ಷದೀಪೋತ್ಸವದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳ ಸಹಿತ ಹಲವು ಮಠಗಳ ಯತಿಗಳು ಭಾಗವಹಿಸಿದ್ರು. ನೂರಾರು ಭಕ್ತರು ಸೇರಿ ಎರಡೂ ರಥಗಳನ್ನ ಎಳೆದರು. ಸಾವಿರಾರು ಸಂಖ್ಯೆಯಲ್ಲಿ ಕೃಷ್ಣ ಮಠಕ್ಕೆ ಬಂದ ಭಕ್ತರು ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಮೂರು ದಿನಗಳ ಕಾಲ ಸಮಾನ ವೈಭವದಿಂದ ಲಕ್ಷದೀಪೋತ್ಸವ ನಡೆಯುತ್ತೆ. ಅಷ್ಟಮಠಗಳ ರಥಬೀದಿಯಲ್ಲಿ ಸೇವಾರೂಪದಲ್ಲಿ ನಡೆಯುವ ಉತ್ಸವದಿಂದ ದಿನವೂ ಹಬ್ಬದ ವಾತಾವರಣ ಇರಲಿದೆ.

Continue Reading

LATEST NEWS

Trending

Exit mobile version