ಮಂಗಳೂರು: ಆಜಾದಿ ಕಾ ಅಮೃತ್‌ಮಹೋತ್ಸವದ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಸಂಭ್ರಮದ ವಾತಾವರಣ ಕಂಡು ಬರುತ್ತಿದೆ.
ನಿನ್ನೆ ರಾತ್ರಿಯಿಂದ ಮಂಗಳೂರು ನಗರ ಪಾಲಿಕೆ ಕಚೇರಿಯಲ್ಲಿ ವಿಶೇಷ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದ್ದು, ಇದೀಗ ಪಾಲಿಕೆ ಕಚೇರಿ ಜಗಮಗಿಸುತ್ತಿದೆ.
ಹರ್‌ಘರ್‌ತಿರಂಗಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಬೆನ್ನಲ್ಲೇ ಎಲ್ಲೆಡೆ ಸರಕಾರದ ವತಿಯಿಂದಲೇ ಧ್ವಜಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಮಂಗಳೂರು ನಗರ ಪಾಲಿಕೆ ಕಚೇರಿಯಲ್ಲೂ ಧ್ವಜ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ವಿದ್ಯುತ್ ಅಲಂಕಾರದ ಜೊತೆಗೆ ತ್ರಿವರ್ಣದ ಬಟ್ಟೆಗಳಿಂದ ಮಾಡಿದ ಅಲಂಕಾರಗಳು, ವಿವಿಧ ಹೂಗಳಿಂದ ಮಾಡಲಾದ ಅಲಂಕಾರಗಳು, ಬಾವುಟಗಳು ಕಂಗೊಳಿಸುತ್ತಿದೆ. ಒಳಭಾಗದಲ್ಲಿ ಕೂಡಾ ಅತ್ಯಂತ ಆಕರ್ಷಕವಾದ ರೀತಿಯಲ್ಲಿ ಕಚೇರಿಯನ್ನು ಸುಂದರಗೊಳಿಸಲಾಗಿದೆ.
ನಿನ್ನೆ ಕೂಡಾ ಪಾಲಿಕೆ ಕಚೇರಿ ಮುಂಭಾಗದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ದೇಶಭಕ್ತಿಗಳ ಗೀತ ಗಾಯನ, ನುಡಿನಮನ ಕಾರ್ಯಕ್ರಮ, ಸ್ವಾತಂತ್ರ್ಯ ವೀರರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಗಿತ್ತು.