Thursday, September 29, 2022

ದ.ಕ.ಜಿಲ್ಲಾ ಮಡಿವಾಳರ ಸಂಘ, ರಜಕ ಯೂತ್‌ : ಸ್ವಾತಂತ್ರ್ಯ ಸಂಭ್ರಮ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ (ರಿ) ಮಂಗಳೂರು ಮತ್ತು ರಜಕ ಯೂತ್ ಮಂಗಳೂರು ಸಹಭಾಗಿತ್ವದಲ್ಲಿ ಆಝಾದಿ ಕಾ ಅಮೃತ್ ಮಹೋತ್ಸವದ ಹಿನ್ನೆಲೆಯಲ್ಲಿ ಸಂಘದ ಜಿಲ್ಲಾ ಕಚೇರಿಯಲ್ಲಿ ಸ್ವಾತಂತ್ರ್ಯ ಸಂಭ್ರಮದ ಧ್ವಜಾರೋಹಣ ನಡೆಯಿತು.

ಸಮಾಜದ ಹಿರಿಯ, ನಿವೃತ್ತ ಭೂಸೇನಾ ಯೋಧ ಗೋಪಾಲ ಬಂಗೇರ ದೇರೆಬೈಲ್ ಅವರು ಧ್ವಜಾರೋಹಣ ನೆರವೇರಿಸಿ ಪ್ರತಿಯೊಬ್ಬರೂ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಸಾಹಸ್ರಾರು ಮಂದಿಯ ತ್ಯಾಗ, ಬಲಿದಾನದ ಮೂಲಕ ಸಿಕ್ಕಿರುವ ಈ ಸ್ವಾತಂತ್ರ್ಯದ ಮೂಲಕ ನಾವೆಲ್ಲರೂ ಐಕ್ಯತೆ, ಭಾತೃತ್ವದ, ಸಹೋದರತ್ವದ ಸಂದೇಶ ಸಾರೋಣ ಎಂದರು.
ಸಂಘದ ಮುಖ್ಯ ಸಲಹೆಗಾರ, ಸಮಾಜದ ಹೆಮ್ಮೆಯ ನಿವೃತ್ತ ಬ್ಯಾಂಕಿಂಗ್ ಆಫೀಸರ್ ರಾಮಚಂದ್ರ ಕುಂದರ್ ಕುಡುಪು ಇವರು ದೇಶದ ಸ್ವಾತತ್ರ್ಯಕ್ಕಾಗಿ ಬಲಿದಾನ ನೀಡಿದ ರಾಷ್ಟ್ರ ನಾಯಕರನ್ನು ಈ ವೇಳೆ ಸ್ಮರಿಸಿದರು.


ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಗೌರವಾಧ್ಯಕ್ಷ ಪ್ರಕಾಶ್ ಬಿ ಎನ್‌ ವಹಿಸಿದ್ದರು. ಪದಾಧಿಕಾರಿಗಳಾದ ಮೋಹನ್ ಅಳಪೆ, ಶಶಿಧರ ಕೊಂಡಾಣ, ಜಿನೇಂದ್ರ ಮಾಣಿ, ಬಿ ಎಂ ಸಾಲ್ಯಾನ್‌, ಆನಂದ ಕಡಬ, ವೀಣಾಂಜಲಿ ನಾರಾಯಣ್‌, ಪ್ರೇಮಾ ಅಶೋಕ್‌ ಪೊಳಲಿ, ಲತಾ ಪ್ರಕಾಶ್, ಆಶಾ ಜಿನೇಂದ್ರ ಮಾಣಿ, ಸುಜಾತಾ ಪ್ರದೀಪ್, ಹೇಮಾ ಮೋಹನ್, ರವಿಕಲಾ ಗೋಪಾಲ್, ರಜಕ ಯೂತ್ ಅಧ್ಯಕ್ಷ ಸಂಪತ್ ಕೊಂಡಾಣ, ಮಧುರಾಜ್‌ ಬೈತುರ್ಲಿ, ಕಿರಣ್‌ ಕೊಡಿಯಾಲ್‌ ಬೈಲ್‌, ಸುರೇಶ್‌ ವಿಠಲ್‌, ವರದ ಉಜಿರೆ, ರಾಜ್‌ ಪದವಿನಂಗಡಿ, ಮನೋಜ್‌ ಪದವಿನಂಗಡಿ, ಧನು ಪಾಲ್ದಾನೆ, ಪ್ರದೀಪ್ ಸಾಲ್ಯಾನ್‌ ಬಲ್ಲಾಳ್ ಭಾಗ್, ಚಿರಂಜೀವಿ ಮಾಣಿ ಮೊದಲಾದವರಿದ್ದರು.


ಪ್ರಧಾನ ಕಾರ್ಯದರ್ಶಿ ಅಶೋಕ್ ಪೊಳಲಿ ಸ್ವಾಗತಿಸಿದರು. ಗ್ರೀಷ್ಮ ಸಾಲಿಯಾನ್ ಪಿಲಿಕೂರ್ ಧ್ವಜವಂದನಾ ಗೀತೆ ಹಾಡಿದರು.

LEAVE A REPLY

Please enter your comment!
Please enter your name here

Hot Topics

ಅಪರಿಚಿತರಿಂದ ಕಾಲಿವುಡ್‌ ‘ಆ್ಯಕ್ಷನ್‌ ಸ್ಟಾರ್’ ವಿಶಾಲ್ ಮನೆಗೆ ಕಲ್ಲು ತೂರಾಟ

ಚೆನ್ನೈ: ಕಾಲಿವುಡ್‌ನ 'ಆ್ಯಕ್ಷನ್‌ ಸ್ಟಾರ್' ನಟ ವಿಶಾಲ್ ಅವರ ಮನೆಗೆ ಯಾರೋ ಅಪರಿಚಿತ ಗನ್‌ಮ್ಯಾನ್‌ಗಳು ನುಗ್ಗಿ ಆಕ್ರಮಣ ಮಾಡಿ ಕಲ್ಲುತೂರಾಟ ಮಾಡಿದ್ದಾರೆ. ಅದರ ಪರಿಣಾಮವಾಗಿ ಮನೆಯ ಕಿಟಕಿ ಗಾಜುಗಳು ಒಡೆದಿರುವ ಘಟನೆ ಚೆನ್ನೈಯಲ್ಲಿ...

‘ಪುರಾಣ ಜ್ಞಾನ ನೀಡುವ ಅದ್ಭುತವಾದ ಕಲೆ ಯಕ್ಷಗಾನ’

ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 29 ನೆಯ ಸರಣಿ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ CA ಗಿರಿಧರ ಕಾಮತ್ ಯಕ್ಷಗಾನ ಕಲೆಯು ಪುರಾಣ ಜ್ಞಾನ ನೀಡುವಷ್ಟು ಬೇರೆ ಯಾವ ಮಾಧ್ಯಮವೂ...

ಪುತ್ತೂರಿನಲ್ಲಿ ಜಾಗದ ತಕರಾರು: V.A ಕಚೇರಿಗೆ ನುಗ್ಗಿ ದಾಂಧಲೆ-ಮಾರಕಾಸ್ತ್ರಗಳಿಂದ ಹತ್ಯೆ ಯತ್ನ

ಪುತ್ತೂರು: ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ, ಕಲ್ಲು ಎತ್ತುಹಾಕಿ ಕೊಲೆಗೆ ಯತ್ನಿಸಿದ ಘಟನೆ ಪುತ್ತೂರಿನ ಸವಣೂರು ಜಂಕ್ಷನ್ ನಲ್ಲಿ ಇಂದು ನಡೆದಿದೆ.ಸವಣೂರು ಗ್ರಾಮದ...