ಮಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಂಗಳೂರು ನಗರ ಹೊರವಲಯದ ಗುರುಪುರದ ಅಡ್ಡೂರು ಜಂಕ್ಷನ್‌ನಲ್ಲಿ ಫ್ರೆಂಡ್ಸ್ ಕ್ಲಬ್ ಅಡ್ಡೂರು ಇದರ ವತಿಯಿಂದ ಧ್ವಜಾರೋಹಣ ನಡೆಯಿತು.
ಮೊದಲಿಗೆ ಅಡ್ಡೂರು ಜಂಕ್ಷನ್‌ನಲ್ಲಿ ನಿರ್ಮಿಸಲಾಗಿರುವ ನೂತನ ಧ್ವಜಸ್ತoಭವನ್ನು ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಜನಾಬ್ ಯುಪಿ ಇಬ್ರಾಹಿಂ ಉದ್ಘಾಟಿಸಿದರು. ನಂತರ ಯಶವಂತ ಶೆಟ್ಟಿ ಹಾಗೂ ಆಶ್ರಫ್ AK ಆಶ್ರಫ್ ಅವರು ಧ್ವಜಾರೋಹಣಗೈದರು. ಫ್ರೆಂಡ್ಸ್ ಕ್ಲಬ್ ಅಡ್ಡೂರು ಅಧ್ಯಕ್ಷ Ak ಹಾರೀಸ್ ಅಧ್ಯಕ್ಷತೆ ವಹಿಸಿದ್ದರು.
ಬದ್ರಿಯಾ ಜುಮ್ಮಾ ಮಸೀದಿ ಅಡ್ಡೂರು ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ,ರಘುವನ್ನ ಟೈಲರ್, ಗಂಗಾಧರ್ ನಂದ್ಯಾ, ak ಮುಹಮ್ಮದ್, ಅಹ್ಮದ್ ಬಾವ ಕಾಂಜಿಲಕೋಡಿ ಹಾಗೂ ಇನ್ನಿತರ ಊರಿನ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಸ್ವಾಲಿ ಕರಾಯ ಮುಖ್ಯ ಭಾಷಣ ಮಾಡಿದರು. ಬಷೀರ್ ಮದನಿ ಕೋಳೂರ್ ಪ್ರಸ್ತಾವಿಕ ಭಾಷಣಗೈದರು. ಫಾರೂಕ್ ಅಡ್ಡೂರು ಸ್ವಾಗತಿಸಿದರು.