ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೊರೋನಾ: 3ನೇ ಹಂತದ ಹರಡುವಿಕೆಯ ಭೀತಿಯಲ್ಲಿ ರಾಜ್ಯ..!!
ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಮತ್ತೆ ಮೂವರಲ್ಲಿ ಕಾಣಿಸಿಕೊಂಡಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 91ಕ್ಕೆರಿದೆ. ಕೊರೊನಾ ಸೋಂಕಿನ ಭೀತಿಯಿಂದ ಅಕ್ಷರಶಃ ಕರ್ನಾಟಕ ತತ್ತರಿಸಿದೆ.
ರಾಜ್ಯದ ಬಹುತೇಕ ಪ್ರವಾಸಿ ತಾಣಗಳಿಗೆ ಬೀಗ ಜಡಿಯಲಾಗಿದ್ದು, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಬೆಂಗಳೂರಿನಿಂದ ಹೊಸಪೇಟೆಗೆ ತೆರಳಿದ್ದ ಒಂದೇ ಕುಟುಂಬದ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಮೂವರನ್ನೂ ಬಳ್ಳಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಸ್ತುತ ಸೋಂಕಿತ ಟ್ರಾವೆಲ್ ಹಿಸ್ಟರಿ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಇನ್ನು ಸೋಂಕಿತರ ಪತ್ತೆಯಾದ ಹೊಸಪೇಟೆಯಲ್ಲಿ ಬಫರ್ ಜೋನ್ ಘೋಷಣೆ ಮಾಡಲಾಗಿದ್ದು, ಹೊಸಪೇಟೆಯಲ್ಲಿ ಸಂಪೂರ್ಣ ದಿಗ್ಭಂಧನ ಹೇರಲಾಗಿದೆ.
ಆ ಮೂಲಕ ಹೊಸಪೇಟೆಯಿಂದ ಹೊರಗೆ ಹೋಗುವ ಅಥವಾ ಒಳಗೆ ಬರುವ ಎಲ್ಲ ರಸ್ತೆಗಳನ್ನೂ ಬಂದ್ ಮಾಡಲಾಗಿದೆ. ಬಳ್ಳಾರಿ ಸಂಪೂರ್ಣ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಜನರು ಹೊರಗೆ ಬಾರದಂತೆ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ 10 ಗಂಟೆಯೊಳಗೆ ಜನರ ತಮ್ಮ ದಿನ ನಿತ್ಯದ ವಸ್ತುಗಳನ್ನು ಖರೀದಿ ಮಾಡಲು ಪೊಲೀಸರು ಅವಕಾಶ ಕಲ್ಪಿಸಿದ್ದಾರೆಇನ್ನು, ಕಲಬುರಗಿಯಲ್ಲಿ ಮಹಾಮಾರಿ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಒಂದೇ ದಿನದಲ್ಲಿ ಮತ್ತೆ ನಾಲ್ವರಿಗೆ ಸೋಂಕು ಕಾಣಿಸಿಕೊಂಡು ಭೀತಿ ಹೆಚ್ಚಿದೆ.
ಹೀಗಾಗಿ ಕಳೆದ ನಾಲ್ಕು ದಿನಗಳಿಂದ ಜಾರಿಯಲ್ಲಿರುವ “ಅಘೋಷಿತ ಬಂದ್’ ವಾತಾವರಣ ಒಂದು ತಿಂಗಳ ಕಾಲ ಮುಂದುವರಿಯುವುದು ಅಗತ್ಯವಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಸದ್ಯ ಕರ್ನಾಟಕ ರಾಜ್ಯಾದ್ಯಂತ 9 ಸಾವಿರ ಮಂದಿ ವಿದೇಶದಿಂದ ಬಂದವರಿಗೆ ಗೃಹ ನಿರ್ಬಂಧ ವಿಧಿಸಲಾಗಿದೆ. ಬಹುತೇಕ ಮಂದಿ ತಮ್ಮ ಕ್ವಾರಂಟೈನ್ ಅವಧಿ ಮುಗಿಸಬೇಕಿದೆ.
ಇವರಲ್ಲೂ ಕೂಡಾ ಬಹುತೇಕರು ಗಲ್ಫ್ ರಾಷ್ಟ್ರಗಳಿಂದಲೇ ಬಂದವರು ಎಂದು ತಿಳಿದು ಬಂದಿದೆ.
ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರೌಢ ಶಾಲೆಯಲ್ಲಿ ಜ. 8 ಮತ್ತು 9 ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ತಂಡದಲ್ಲಿ ಆದ್ಯ ಕೆ, ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ H ಶೆಟ್ಟಿ, ಸ್ನಿಗ್ಧ, ಆಯಿಷಾತ್ ಹಿಬಾ ಉತ್ತಮ ಪ್ರದರ್ಶನವನ್ನು ನೀಡಿ ಗೆಲುವಿಗೆ ಕಾರಣೀಭೂತರಾದರು. ಹಿಬಾ ಉತ್ತಮ ಆಟಗಾರ್ತಿಯಾಗಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.
ತಂಡಕ್ಕೆ ದೈಹಿಕ ಶಿಕ್ಷಕರಾದ ನಿರಂಜನ್ ಹಾಗೂ ಅಕ್ಷಯ್ ತರಬೇತಿಯನ್ನು ನೀಡಿದ್ದಾರೆ. ತಂಡದ ವ್ಯವಸ್ಥಾಪಕಿಯಾಗಿ ಅನಿತಾಸಿಯ ಗೋನ್ಸಲ್ವಸ್ ಇವರು ತಂಡವನ್ನು ಮುನ್ನಡೆಸಿದರು ಎಂಬುದಾಗಿ ಶಾಲಾ ಮುಖ್ಯ ಶಿಕ್ಷಕಿ ಭಗಿಣಿ ಸೆಲಿನ್ ಪೇತ್ರ ಮಾಹಿತಿ ನೀಡಿದ್ದಾರೆ.
ಮಂಗಳೂರು/ಗದಗ : ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿಯ ಕಾರು ಚಾಲಕ ನೇ*ಣಿಗೆ ಶರಣಾಗಿದ್ದಾರೆ. ಸುನಿಲ್ ಲಮಾಣಿ(25) ಆತ್ಮಹ*ತ್ಯೆ ಮಾಡಿಕೊಂಡವರು. ಸುನಿಲ್ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡ್ ಕಾಲೋನಿಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಆತ್ಮಹ*ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸುನೀಲ್ ಲಮಾಣಿ ಆತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಶಾಸಕ ಚಂದ್ರು ಲಮಾಣಿ ಇತ್ತೀಚೆಗೆ ಖರೀದಿಸಿದ್ದ ಮನೆಯಲ್ಲಿ ಸುನೀಲ್ ಆತ್ಮಹ*ತ್ಯೆ ಮಾಡಿಕೊಂಡಿದ್ದು, ಆತ ಚಂದ್ರು ಅವರ ಸಂಬಂಧಿ ಎಂದು ತಿಳಿದುಬಂದಿದೆ . ಮನೆ ಕಟ್ಟುವ ವಿಚಾರದಲ್ಲಿ ಸಹೋದರರ ನಡುವೆ ಕಲಹ ಉಂಟಾಗಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಸುನಿಲ್ ಆತ್ಮಹ*ತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ನೀವು ಚಿಕ್ಕವರಾಗಿರಲಿ ಅಥವಾ ವಯಸ್ಸಾದವರಾಗಿರಲಿ ಸಿಹಿತಿಂಡಿ ಸೇವಿಸಿದ ನಂತರ ಹಲ್ಲುಗಳನ್ನ ಸ್ವಚ್ಛಗೊಳಿಸುವಲ್ಲಿನ ಅಜಾಗರೂಕತೆಯು ಹಲ್ಲುಗಳಿಗೆ ಸೋಂಕು ತಗುಲಿಸಬಹುದು. ಇದು ಇಡೀ ಹಲ್ಲನ್ನು ಹಾನಿಗೊಳಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಜನರು ದಂತವೈದ್ಯರ ಬಳಿಗೆ ಹೋಗುತ್ತಾರೆ ಮತ್ತು ಆಗಾಗ್ಗೆ ಹಲ್ಲುಗಳನ್ನ ಕೀಳಬೇಕಾಗುತ್ತದೆ. ಯಾಕಂದ್ರೆ, ಇದು ಇತರ ಹಲ್ಲುಗಳಿಗೆ ಹಾನಿ ಮಾಡುವ ಅಪಾಯವನ್ನ ಹೆಚ್ಚಿಸುತ್ತದೆ.
ಇಂದಿಗೂ ಸಹ ನಾವು ನಮ್ಮ ಹಿರಿಯರ ಹಳೆಯ ಪರಿಹಾರಗಳನ್ನ ಅನುಸರಿಸುವ ಮೂಲಕ ಹಲ್ಲಿನ ಹುಳುಗಳನ್ನ ತೊಡೆದು ಹಾಕಬಹುದು. ಇಂದು ನಾನು ನಿಮಗೆ ಅಂತಹ ಮನೆಮದ್ದನ್ನ ಹೇಳಲಿದ್ದೇನೆ, ಅದನ್ನು ಬಳಸಿಕೊಂಡು ನೀವು ದಂತವೈದ್ಯರ ಬಳಿಗೆ ಹೋಗದೆ ಹಲ್ಲಿನ ಹುಳುಗಳನ್ನ ತೊಡೆದು ಹಾಕಬಹುದು.
ಚಾಕೊಲೇಟ್ ತಿನ್ನುವುದರಿಂದ ಮಕ್ಕಳ ಹಲ್ಲುಗಳು ಹಾನಿಗೊಳಗಾಗುತ್ತವೆ. ಆಹಾರ ಅಥವಾ ಸಿಹಿತಿಂಡಿಗಳನ್ನು ಸೇವಿಸಿದ ನಂತರ ನಾವು ತೊಳೆಯುವುದಿಲ್ಲ. 10 ರಿಂದ 12 ವರ್ಷ ವಯಸ್ಸಿನಲ್ಲಿ, ಕುಳಿಗಳಿಂದಾಗಿ ಮಕ್ಕಳ ಹಲ್ಲುಗಳು ಕ್ಷೀಣಿಸಲು ಪ್ರಾರಂಭಿಸುತ್ತವೆ.
ಇದನ್ನು ತಡೆಗಟ್ಟಲು ಸುಲಭ ಮಾರ್ಗವಿದೆ. ಯಾರಿಗಾದರೂ ಹಲ್ಲಿನಲ್ಲಿ ಕುಳಿ ಇದ್ದರೆ, ನೀವು ಅದನ್ನು ಮನೆಯಲ್ಲಿಯೇ ತೆಗೆದುಹಾಕಬಹುದು. ಮೊದಲಿಗೆ, ಈರುಳ್ಳಿ ಬೀಜಗಳನ್ನ ಮಾರುಕಟ್ಟೆಯಿಂದ ತರಬೇಕು. ನಂತರ ಬೆಂಕಿಯನ್ನ ಹೊತ್ತಿಸಿ ಕೆಂಡದ ಮೇಲೆ ಈರುಳ್ಳಿ ಬೀಜಗಳನ್ನ ಹಾಕಿ ಬಂದ ಹೊಗೆಯನ್ನ ಬಾಯಿಯಲ್ಲಿ ಶೇಖರಿಸಿ ನಂತ್ರ ಮುಚ್ಚಿ. ಈ ಪ್ರಕ್ರಿಯೆಯನ್ನ ಎರಡರಿಂದ ಮೂರು ಬಾರಿ ಮಾಡಿ. ಈಗ ನಿಮ್ಮ ಬಾಯಿಯಲ್ಲಿ ನೀರು ಹಾಕಿಕೊಂಡು ಮುಕ್ಕಳಿಸಿ ಆ ಬಟ್ಟಲಿನಲ್ಲಿ ಉಗುಳಿ. ಈಗ ಆ ಬಟ್ಟಲಿನಲ್ಲಿರುವ ನೀರಿನಲ್ಲಿ ಎಲ್ಲಾ ಹುಳುಗಳು ಗೋಚರಿಸುತ್ತವೆ.