DAKSHINA KANNADA
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿ ‘ಇನಾಯತ್ ಅಲಿ’..!
ಪಕ್ಷದ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಇನಾಯತ್ ಅಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು ಈಗಾಗಲೇ ನಿರಂತರವಾಗಿ ಕ್ಷೇತ್ರದುದ್ದಕ್ಕೂ ಸಂಚರಿಸಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ತಲುಪುತ್ತಿದ್ದಾರೆ.
ಮಂಗಳೂರು : ರಾಜ್ಯ ವಿಧಾನ ಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಸಹಜವಾಗಿಯೇ ಗರಿಗೆದರಿವೆ.
ಹಾಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಜಾಗದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು ಪಕ್ಷದಲ್ಲಿ ಚಟುವಟಿಕೆಗಳು ಸ್ವಲ್ಪ ಜೋರಾಗಿಯೇ ಇದೆ.
ಕರಾವಳಿಯ ಬಿಜೆಪಿ ಭದ್ರ ಕೋಟೆ ದಕ್ಷಿಣ ಕನ್ನಡದಲ್ಲೂ ಈ ಬಾರಿ ಕಾಂಗ್ರೆಸ್ ನಿಂದ ಯುವ ನಾಯಕರೇ ಅಖಾಡಕ್ಕೆ ಇಳಿಯಲು ಪಕ್ಷದ ಹೈಕಮಾಂಡ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು ಇವರಲ್ಲಿ ಓರ್ವರಾಗಿದ್ದಾರೆ ಯುವ ನಾಯಕ ಇನಾಯತ್ ಅಲಿ.
ಪಕ್ಷದ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಇನಾಯತ್ ಅಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು ಈಗಾಗಲೇ ಅಖಾಡಕ್ಕೆ ಇಳಿದಿದ್ದು ನಿರಂತರವಾಗಿ ಕ್ಷೇತ್ರದುದ್ದಕ್ಕೂ ಸಂಚರಿಸಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ತಲುಪುತ್ತಿದ್ದಾರೆ.
ಕಳೆದೆರಡು ಬಾರಿಯು ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಟಿಕೆಟ್ ವಂಚಿತರಾಗಿದ್ದರು.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಬಲವಾಗಿರುವ ಹಾಲಿ ಶಾಸಕ ಡಾ. ಭರತ್ ಶೆಟ್ಟಿ ಎದುರು ಸೆಣಸಾಡಲು ಸಕ್ರೀಯ ಯುವ ನಾಯಕನ ಅವಶ್ಯಕತೆ ಇರುವುದನ್ನು ಕಾಂಗ್ರೆಸ್ ಮನಗಂಡಿದ್ದು ಇದಕ್ಕೆ ಇನಾಯತ್ ಅಲಿ ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಿದೆ.
ತಳಮಟ್ಟದಿಂದ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡು ಬಂದಿರುವ ಇನಾಯತ್ ಪ್ರಸ್ತುತ ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೂಡ ಆಗಿರುವುದು ಇವರ ಪ್ಲಸ್ ಪಾಯಿಂಟ್.
ಅದಕ್ಕೂ ಮುನ್ನ ಇಪ್ಪತ್ತೈದು ವರ್ಷಗಳ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ವಿಧ್ಯಾರ್ಥಿ ಘಟಕವಾದ NSUI ನಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡವರು ಜೊತೆಗೆ ಕಾರ್ಯಕರ್ತರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡು ಹಂತಹಂತವಾಗಿ ಮೇಲೆ ಬಂದವರಾಗಿದ್ದಾರೆ.
ವಿಧ್ಯಾರ್ಥಿ ದಿಸೆಯಲ್ಲೇ NSUI ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿ ರಾಷ್ಟ್ರ ಮಟ್ಟದವರೆಗೆ ತಲುಪಿ, ಪಕ್ಷ ಸಂಘಟನೆಯ ಸಾಕಷ್ಟು ಅನುಭವ ಹೊಂದಿರುವ ಇವರು ಇಂದು ಸಹಜವಾಗಿ NSUI ರಾಜ್ಯ ಉಸ್ತುವಾರಿಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.
ಮೊದಲು NSUI ಬ್ಲಾಕ್ ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷ, ರಾಷ್ಟ್ರೀಯ ಕಾರ್ಯದರ್ಶಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿ ಹೈಕಮಾಂಡ್ ಮಟ್ಟದಲ್ಲಿ ಗುರುತಿಸಿಕೊಂಡವರು.
ಯಶಸ್ವಿ ಉದ್ಯಮಿಯಾಗಿರುವ ಇನಾಯತ್ ಅಲಿ ಸವೆದ ಹಾದಿ ದುರ್ಗಮವಾಗಿತ್ತು.
ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಆಧಾರಸ್ತಂಭವಾಗಿದ್ದ ತನ್ನ ತಂದೆಯನ್ನು ಕಳೆದುಕೊಂಡ ಇವರು ಇಡೀ ಕುಟುಂಬದ ಜವಾಬ್ದಾರಿ ಹೊತ್ತು ಬಹಳ ಕಷ್ಟಕರ ಘಟ್ಟಗಳನ್ನು, ಹಲವು ಏಳು ಬೀಳುಗಳನ್ನು ಎದುರಿಸಿಕೊಂಡು ಉದ್ಯಮಿಯಾಗಿ ಬೆಳೆದು ನಿಂತರು.
ಒಬ್ಬ ಯಶಸ್ವಿ ಉದ್ಯಮಿಯಾದರೂ ಎಲ್ಲರೊಂದಿಗೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುವಂತಹ ವ್ಯಕ್ತಿತ್ವ ಜೊತೆಗೆ ಒಂದೊಳ್ಳೆಯ ಸಮಾಜ ಸೇವಕರೂ ಹೌದು ಇನಾಯತ್ ಅಲಿದ್ದು.
ಮನೆ ಬಾಗಿಲಿಗೆ ಕಷ್ಟ ಹೇಳಿಕೊಂಡು, ಸಹಾಯ ಯಾಚಿಸಿಕೊಂಡು ಬರುವವರಿಗೆ ಜಾತಿ ಮತ ನೋಡದೆ ಸಹಾಯ ಹಸ್ತ ಚಾಚುವ ಇವರ ಗುಣವನ್ನು ಕ್ಷೇತ್ರದ ಜನರು ಕೂಡ ಬಹಳ ಇಷ್ಟಪಡುತ್ತಾರೆ.
ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಮೂಲಕ ಪಾದರಸದ ಸ್ವಭಾವದಂತಿರುವ ಇನಾತ್ ಆಲಿ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಭರವಸೆ ಕಳೆದುಕೊಂಡಿದ್ದ ಕಾರ್ಯಕರ್ತರಲ್ಲಿ ಒಬ್ಬ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವುದು ಮಾತ್ರ ಅಷ್ಟೇ ಸತ್ಯ..
DAKSHINA KANNADA
ಕಿನ್ನಿಗೋಳಿಯಲ್ಲಿ ಮುಸ್ಲಿಂ ಯುವಕನ ಮೇಲೆ ದೈವ ಆವೇಶ- ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂತು ಮಹತ್ವದ ಸತ್ಯ..!
ಕಿನ್ನಿಗೋಳಿ: ಒರಿಸ್ಸಾ ಮೂಲದ ಮುಸ್ಲಿಂ ಯುವಕನು ಪೆರ್ಮುದೆಯಲ್ಲಿನ ಚಾಮುಂಡಿ ದೈವಸ್ಥಾನದ ಕೆಲಸ ನಿರ್ವಹಿಸುವ ಸಂದರ್ಭ ಏಕಾಏಕಿ ಈತನಿಗೆ ದೈವ ಆವೇಶವಾದ ಘಟನೆ ಮಂಗಳೂರಿನ ಕಿನ್ನಿಗೋಳಿಯಲ್ಲಿ ನಡೆದಿದೆ.
ಕಳೆದ ಎರಡು ತಿಂಗಳ ಹಿಂದೆ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಿಸುವ ಸಂದರ್ಭ ಒರಿಸ್ಸಾ ಮೂಲದ ಯುವಕನ ಮೈಯಲ್ಲಿ ದೈವ ಅವೇಷ ಬಂದಿದ್ದು, ಪ್ರಶ್ನಾ ಚಿಂತನೆಯಲ್ಲಿ ಕಂಡುಕೊಂಡಾಗ ಇದು ಜಿಲ್ಲೆಯ ಪ್ರತಿಷ್ಟಿತ ಕಂಪನಿಯಾದ ಎಂ.ಆರ್.ಪಿ.ಎಲ್ ನಿಂದ ಬಂದ ಸಮಸ್ಯೆ ಎಂದು ಕಂಡು ಬಂದಿದೆ.
ಕಳೆದ ಮೂರು ದಶಕಗಳ ಹಿಂದೆ, ಪ್ರತಿಷ್ಠಿತ ಎಂ.ಆರ್,ಪಿ,ಎಲ್ ಕಂಪನಿಗಾಗಿ ಜಮೀನು ಭೂಸ್ವಾಧೀನಗೊಂಡಿದ್ದು, ಆ ಸಂದರ್ಭ ಅಲ್ಲಿದ್ದ ಪಿಲಿಚಾಮುಂಡಿ ದೈವಸ್ಥಾನ ಹಾಗೂ ಕೊಡಮಣಿತ್ತಾಯ ದೈವಸ್ಥಾನ ಪುನರ್ವಸತಿ ಪ್ರದೇಶದಲ್ಲಿನ ಅಂದರೆ ಪೆರ್ಮುದೆ ಸೋಮನಾಥ ಧಾಮಕ್ಕೆ ಸ್ಥಳಾಂತರಗೊಂಡು ಕಾಲ ಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿತ್ತು.
ಪೆರ್ಮುದೆ ಗ್ರಾಮಕ್ಕೆ ಸಂಬಂಧಿಸಿ ದೈವಗಳ ನಾಲ್ಕು ಗಡು ಇದ್ದು, ಪ್ರಸುತ್ತ ಕಾಯರ್ ಕಟ್ಟೆ ಎಂಬುದು ಕುತ್ತೆತ್ತೂರು ಗ್ರಾಮದ ಪೆರ್ಮುದೆ ಗಡುವಾಗಿದೆ.
ಈ ಗಡು ಸ್ಥಳದಲ್ಲಿ ನಡೆಯುತ್ತಿದ್ದ ದೈವಾರಾಧನೆ ಪ್ರಕ್ರಿಯೆಗಳು ಕಳೆದ 18 ವರ್ಷಗಳಿಂದ ಸ್ಥಗಿತಗೊಂಡಿದೆ.
ಭೂಸ್ವಾಧೀನಗೊಂಡ ಮತ್ತು ಎಂ ಆರ್ ಪಿ ಎಲ್ ಗೆ ಹತ್ತಿರವಾದ ಕಾರಣ ಇಲ್ಲಿ ನೇಮ ನಡೆಸಲು ಆಸಾದ್ಯವಾಗಿತ್ತು.
ಇಲ್ಲಿನ ಬೌಗೋಳಿಕ ಸ್ಥಿತಿಗತಿಗಳೂ ಇದಕ್ಕೆ ಪ್ರಮುಖ ಕಾರಣವಾಗಿತ್ತು.
ನೇಮ ಸ್ಥಗಿತಗೊಂಡ ನಂತರದ ಕಾಲದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಮತ್ತು ಕಂಪನಿ ವ್ಯಾಪ್ತಿಯಲ್ಲಿ ದೋಷ ದೃಷ್ಟಾಂತ ಕಂಡು ಬರಲು ಪ್ರಾರಂಭವಾಯಿತು.
ಪಿಲಿಚಂಡಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಸಂದರ್ಭ ಕಾಯರ್ ಕಟ್ಟೆ ಗಡು ಸ್ಥಳದಲ್ಲಿ ನಡೆಯುತ್ತಿದ್ದ ಕಾರ್ಯಗಳು ಯಥಾ ಪ್ರಕಾರ ಮುಂದುವರಿದರೆ ಮಾತ್ರ ದೋಷಗಳಿಗೆ ಪರಿಹಾರ ಎಂಬ ದೈವದ ನುಡಿಯಾಯಿತ್ತು.
ಈ ಪ್ರಕರಣದ ಬಗ್ಗೆ ಗ್ರಾಮಸ್ಥರು ಸಮಾಲೋಚನೆ ನಡೆಸಿ ದೈವ ಸಾನಿದ್ಯಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವ ಮೂಲಕ ದೈವದ ನುಡಿಯ ಬಗ್ಗೆ ಸಂಕಲ್ಪ ಮಾಡಲಾಯಿತು.
ದೈವಾರಧನೆಯಲ್ಲಿ ಮೂಲ ಸ್ವರೂಪ ಕಳೆದುಕೊಂಡ ಕಾರಣದಿಂದಾಗಿ ಎಂ.ಆರ್.ಪಿ.ಎಲ್ ಸಹಿತ ಇತರ ಕೈಗಾರಿಕೆಗಳಿಗೂ ಕೂಡ ಹಲವು ದೋಷ ಕಂಡುಬಂದಿದ್ದು, ಪರಿಹಾರ ಪ್ರಾಯಶ್ಚಿತಕ್ಕಾಗಿ ಕಂಪನಿಯವರು ಕಂಪನಿ ಒಳಗೆ ಚಾಮುಂಡಿ ದೇವಸ್ಥಾನ ನಿರ್ಮಿಸಿ ಅರ್ಚಕರನ್ನು ನೇಮಿಸಿ ತ್ರಿಕಾಲ ಪೂಜೆ ಮಾಡಲಾಗುತ್ತಿದೆ.
ಕಂಪನಿಗಾಗಿ ಭೂಸ್ವಾಧೀನಗೊಂಡ ಕಾರಣ ಈ ಅವ್ಯವಸ್ಥೆಗಳು ಎದುರಾಗಿರುವುದರಿಂದ, ನೇಮೋತ್ಸವಕ್ಕೆ ಸೂಕ್ತವಾಗುವ ರೀತಿಯಲ್ಲಿ ಸ್ಥಳವನ್ನು ಜೀರ್ಣೋದ್ದಾರಗೊಳಿಸುವ ಕಾರ್ಯದಲ್ಲಿ ಕಂಪನಿಯೇ ಮೇಲುಸ್ತುವಾರಿ ವಹಿಸಬೇಕು ಅಲ್ಲದೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದ್ದು, ಕಂಪನಿಯ ನಿಯಮ ನಿಬಂಧನೆಗಳಿಗೆ ಬದ್ದರಾಗಿ ನೇಮೋತ್ಸವ ನಡೆಸಲಾಗುವುದು ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಒಟ್ಟಿನಲ್ಲಿ ಈ ಪ್ರಕರಣಕ್ಕೆ ಸಾಕಷ್ಟು ಮಹತ್ವ ಬಂದಿದ್ದು ಕಂಪನಿ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಕಾದು ನೋಡಬೇಕಾಗಿದೆ.
DAKSHINA KANNADA
Mangaluru: ಎಂಡೋ ಪೀಡಿತರಿಗೆ 1 ಕೋ.ರೂ. ನೆರವು ನೀಡಿದ ಎಂ.ಆರ್.ಪಿ.ಎಲ್. ಸಂಸ್ಥೆ
ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್- ಎಂ.ಆರ್.ಪಿ.ಎಲ್. ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯ ಎಂಡೋ ಸಲ್ಫಾನ್ ಪೀಡಿತ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಒಂದು ಕೋಟಿ ರೂಪಾಯಿ ಸಹಾಯ ಧನ ನೀಡಲು ಮುಂದಾಗಿದೆ.
ಈ ಕುರಿತಂತೆ ಆಶಯ ಪತ್ರವನ್ನು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಎಂ.ಆರ್.ಪಿ.ಎಲ್. ಕಂಪೆನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ಯಾಮ್ ಪ್ರಸಾದ್ ಕಾಮತ್ ಮುಂಡ್ಕೂರು ಅವರು ಅವರಿಗೆ ಹಸ್ತಾಂತರಿಸಿದರು.
ಎಂ.ಆರ್.ಪಿ.ಎಲ್. ಸಂಸ್ಥೆಯು ತನ್ನ ಸಿ.ಎಸ್.ಆರ್. ನಿಧಿಯಿಂದ ಒಂದು ಕೋಟಿ ರೂಪಾಯಿ ನೆರವನ್ನು ಜಿಲ್ಲೆಯ ಅರೋಗ್ಯ ಇಲಾಖೆಗೆ ನೀಡಲಿದ್ದು, ಈ ಮೊತ್ತವನ್ನು ವಿಟ್ಲ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಮತ್ತು ಮೂಡುಬಿದಿರೆ ತಾಲೂಕುಗಳಲ್ಲಿರುವ ಎಂಡೋ ಪೀಡಿತರ ಪುನರ್ವಸತಿ ಕೇಂದ್ರಗಳಿಗೆ ವೈದ್ಯಕೀಯ ವ್ಯವಸ್ಥೆಗಳಿಗಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಪ್ರಮುಖವಾಗಿ ನಾಲ್ಕು ಸಂಚಾರಿ ವೈದ್ಯಕೀಯ ವಾಹನಗಳು, ಫಿಸಿಯೋಥೆರಪಿ ಉಪಕರಣಗಳು, ಹಾಸಿಗೆ ಹಿಡಿದ ರೋಗಿಗಳನ್ನು ಪುನರ್ವಸತಿ ಕೇಂದ್ರಗಳಿಗೆ ಕರೆದೊಯ್ಯಲು ಮತ್ತು ವಾಪಸ್ ಕರೆತರಲು 2 ವಾಹನ ಖರೀದಿಸಲು, ಕೊಯಿಲ ಮತ್ತು ಕೊಕ್ಕಡಗಳಲ್ಲಿ ಇರುವ ಪುನರ್ವಸತಿ ಕೇಂದ್ರಗಳಿಗೆ ಎರಡು ಡೀಸೆಲ್ ಜನರೇಟರ್ ಕೊಂಡುಕೊಳ್ಳಲು ಇದನ್ನು ವಿನಿಯೋಗಿಲಾಗುತ್ತದೆ.
ಆಶಯ ಪತ್ರವನ್ನು ಸ್ವೀಕರಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ತಿಮ್ಮಯ್ಯ ಅವರು ನೆರವು ನೀಡಲು ಮುಂದಾಗಿರುವ ಎಂ.ಆರ್.ಪಿ.ಎಲ್. ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಈ ಕೊಡುಗೆಯಿಂದ ಜಿಲ್ಲೆಯಲ್ಲಿರುವ 4 ಸಾವಿರಕ್ಕೂ ಅಧಿಕ ಎಂಡೋ ಸಲ್ಫಾನ್ ಪೀಡಿತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ, ಎಂಡೋ ಸಲ್ಫಾನ್ ಪೀಡಿತರ ಆರೋಗ್ಯ ವಿಭಾಗದ ನೋಡಲ್ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್, ಎಂ.ಆರ್.ಪಿ.ಎಲ್. ಚೀಫ್ ಜನರಲ್ ಮ್ಯಾನೇಜರ್ ಮನೋಜ್ ಕುಮಾರ್ ಎ., ಎಚ್ ಅರ್ ವಿಭಾಗದ ಜಿ.ಜಿ.ಎಂ. ಕೃಷ್ಣ ಹೆಗ್ಡೆ ಅವರು ಉಪಸ್ಥಿತರಿದ್ದರು.
DAKSHINA KANNADA
ಪುತ್ತೂರಿನ ಯುವಕ ಕೇರಳದಲ್ಲಿ ನೀರಿನಲ್ಲಿ ಮುಳುಗಿ ಸಾವು..!
ಪುತ್ತೂರು: ನೀರಿನಲ್ಲಿ ಮುಳುಗಿ ಪುತ್ತೂರಿನ ಯುವಕ ಕೇರಳದಲ್ಲಿ ಸಾವನ್ನಪ್ಪಿದ ಘಟನೆ ಕಣ್ಣೂರಿನ ಕಡಂಬೆರಿಯಲ್ಲಿ ನಡೆದಿದೆ.
ಪುತ್ತೂರಿನ ಹಿರೇಬಂಡಾಡಿಯ ನಿವಾಸಿ ಮಹಮ್ಮದ್ ಅಝೀಮ್ (21) ಮೃತ ಯುವಕ ಎಂದು ಗುರುತಿಸಲಾಗಿದೆ.
ಕಣ್ಣೂರಿನ ಕಡಂಬೆರಿಯಲ್ಲಿ ಈಜಲೆಂದು ತೆರಳಿದ್ದ ವೇಳೆ ಈ ದುರಂತ ನಡೆದಿದೆ.
ಪುತ್ತೂರಿನಿಂದ ಐವರು ಸ್ನೇಹಿತರು ಕೇರಳಕ್ಕೆ ಪ್ರವಾಸಕ್ಕೆ ತೆರಳಿದ್ದರು.
ಈ ವೇಳೆ ಈಜಲೆಂದು ನೀರಿಗಿಳಿದ ಮಹಮ್ಮದ್ ಅಝೀಮ್ ನೀರಿನ ಆಳ ತಿಳಿಯದೆ ಈಜಲು ಆಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಮಹಮ್ಮದ್ ಅಝೀಮ್ ಗೆ ಸರಿಯಾಗಿ ಈಜು ಬಾರದೇ ಸಾವನ್ನಪ್ಪಿದ್ದರೆ, ಇನ್ನೊಬ್ಬನನ್ನು ಡಡಂಬೆರಿಯ ಸ್ಥಳೀಯ ನಿವಾಸಿಗಳು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
- bengaluru6 days ago
ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ..!
- DAKSHINA KANNADA7 days ago
ಮುಂದಿನ ವರ್ಷದಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ 3 ಬೋರ್ಡ್ ಎಕ್ಸಾಮ್- ಮಧು ಬಂಗಾರಪ್ಪ
- DAKSHINA KANNADA5 days ago
2ನೇ ಮದುವೆಯಾದ ಕಿರುತೆರೆ ನಟಿ ಜ್ಯೋತಿ ರೈ …!
- DAKSHINA KANNADA6 days ago
ಮಂಗಳೂರಿನ ಆಟೋಮ್ಯಾಟ್ರಿಕ್ಸ್ ಶೋ ರೂಮ್ ನಲ್ಲಿ ಟಾಟಾ ನೆಕ್ಸಾನ್, ಇ.ವಿ ಬಿಡುಗಡೆ
Salman Fariesh
03/12/2022 at 1:24 AM
Our proud leader Inayatha ali mulky