Monday, October 18, 2021

ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕಾ ಮಂಟಪದ ಉದ್ಘಾಟನೆ..

ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕಾ ಮಂಟಪದ ಉದ್ಘಾಟನೆ

Inauguration of Sri Sudheendra Theertha Swamiji’s Guru Paduka Mantapa..

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ನೂತನವಾಗಿ ನಿರ್ಮಿಸಲಾದ ನವೀಕೃತ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕಾ ಮಂಟಪದ ಉದ್ಘಾಟನೆಯು ಬುಧವಾರ ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನೆರವೇರಿತು.

ಬಳಿಕ ಸಂಸ್ಥಾನದ ಕೀರ್ತಿಯನ್ನು ಉತ್ತುಂಗಕ್ಕೇರಿಸಿ ಜತೆಗೆ ಸಮಾಜವನ್ನೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿ ಶಿಷ್ಯವರ್ಗದ ಪಾಲಿಗೆ ಮಾತನಾಡುವ ದೇವರೆನಿಸಿದ್ದ  ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕೆಯನ್ನು ಶ್ರೀಗಳವರು ಪ್ರತಿಷ್ಠಾಪಿಸಿದರು.

ಗುರುವಾರದಂದು ಮಹಾಪ್ರಸ್ಥಾನಗೈದ ವೃಂದಾವನಸ್ಥರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಐದನೇ ಪುಣ್ಯತಿಥಿ ಆರಾಧನೆ ಯು ಈ ಬಾರಿ ಮಂಗಳೂರಿನ ಶ್ರೀ ವೆಂಕಟರಮಣ ದೇವಳದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರ ಗಲಿದ್ದು ,ರಾತ್ರಿ ಶ್ರೀ ದೇವಳದಲ್ಲಿ ವಿಶೇಷ ಸ್ವರ್ಣ ಗರುಡೋತ್ಸವ , ಸಂಸ್ಥಾನದಲ್ಲಿ ಪ್ರಧಾನ ಶ್ರೀ ವೇದವ್ಯಾಸ ದೇವರಿಗೆ ಕನಕಾಭಿಷೇಕ , ಗಂಗಾಭಿಷೇಕ , ಲಘು ವಿಷ್ಣು ಅಭಿಷೇಕಗಳು ನಡೆಯಲಿವೆ .

ರಾತ್ರಿ ಸಂಸ್ಥಾನದ ಶ್ರೀ ವೇದವ್ಯಾಸ ದೇವರಿಗೆ  ಸ್ವರ್ಣ ಗರುಡ ವಾಹನ ಸೇವೆ ಶ್ರೀಗಳವರ ದಿವ್ಯ ಹಸ್ತಗಳಿಂದ ನಡೆಯಲಿರುವುದು .

ಶ್ರೀಗಳವರು ಈ ಬಾರಿ ಒಂದು ತಿಂಗಳ ಪರ್ಯಂತ ಶ್ರೀದೇವಳದಲ್ಲಿ ಮೊಕ್ಕಾಂ ಮಾಡಲಿದ್ದು ಈ ಸಂದರ್ಭದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಶ್ರೀ ವಾಯುಸ್ತುತಿ , ಶ್ರೀ ನರಸಿಂಹ ಸ್ತುತಿ ನಮಸ್ಕಾರ , ಶ್ರೀ ವೀರ ವೆಂಕಟೇಶ ದೇವರ ಲಕ್ಷ ಪ್ರದಕ್ಷಿಣಾ ನಮಸ್ಕಾರ , ಸಂಸ್ಥಾನದ ದೇವರ ಸನ್ನಿಧಿಯಲ್ಲಿ ಲಕ್ಷ ತುಳಸಿ ಅರ್ಚನೆ , ಚಂಡಿಕಾ ಹವನ , ಗಾಯತ್ರಿ ಹವನ , ವಾಯುಸ್ತುತಿ ಹವನ ಕಾರ್ಯಕ್ರಮಗಳು ನಡೆಯಲಿರುವುದು .

ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಸಿ . ಎಲ್ . ಶೆಣೈ , ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಉಪಸ್ಥಿತರಿದ್ದರು .

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...