Tuesday, May 30, 2023

ಮಹಾಮಾರಿ ಕೊರೊನಾ ಭೀತಿಯ ನಡುವೆಯೂ ಕರಾವಳಿಯಲ್ಲೂ ಸ್ವಾತಂತ್ರ್ಯೋತ್ಸವ ಆಚರಣೆಗೆ ಭರದ ಸಿದ್ದತೆ..!

ಮಹಾಮಾರಿ ಕೊರೊನಾ ಭೀತಿಯ ನಡುವೆಯೂ ಕರಾವಳಿಯಲ್ಲೂ ಸ್ವಾತಂತ್ರ್ಯೋತ್ಸವ ಆಚರಣೆಗೆ ಭರದ ಸಿದ್ದತೆ..!

ಮಂಗಳೂರು : ದೇಶಾದ್ಯಾಂತ 74 ನೇ ಸ್ವಾತಂತ್ರೋತ್ಸವದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.ಬ್ರಿಟೀಷರ ದಾಸ್ಯದಿಂದ ಬಿಡುಗಡೆಯಾದ ಭಾರತಕ್ಕೆ 74 ನೇ ವರ್ಷದ ಸಂಭ್ರಮ.

ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಧ್ವಜರೋಹಣ ಮಾಡಿ ಗೌರವ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡ ಕರಾವಳಿಯಲ್ಲೂ ಸ್ವಾತಂತ್ರ್ಯೋತ್ಸವ ಆಚರಣೆಗೆ ಭರದ ಸಿದ್ದತೆ ನಡೆದಿದೆ.

ಆದರೆ ಕೊರೊನಾ ಮಹಾಮಾರಿ ಈ ಬಾರಿ ಸಂಭ್ರಮಕ್ಕೆ ತಣ್ಣೀರು ಎರಚಿದೆ. ನಾಡಿನಾದ್ಯಂತ ಕೊರೊನಾ ಹಾವಳಿ ತೀವ್ರವಾಗಿರುವ ಕಾರಣ ಈ ಬಾರಿಯ ಸ್ವಾತಂತ್ರ್ಯೋತ್ಸವ ಸರಳವಾಗಿ ಆಚರಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿದ್ದು ಇದಕ್ಕೆ ಪೂರಕವಾಗಿ ಕರಾವಳಿ ನಗರ ಮಂಗಳೂರಿನಲ್ಲಿ ಅಗತ್ಯವಿರುವ ಸಿದ್ದತೆಗಳನ್ನು ಜಿಲ್ಲಾಡಳಿತ ಮಾಡಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಸಿಬಂದಿ ಮತ್ತು ಕೊರೊನಾ ವಾರಿಯರ್ಸ್ ಗಳಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ.

ರಾಷ್ಟ್ರದ ಏಕತೆ ಮತ್ತು ಗೌರವದ ಸಂಕೇತವಾಗಿರುವ ಸ್ವಾತಂತ್ರ್ಯೋತ್ಸವನ್ನು ಯಾವುದೇ ಕುಂದುಕೊರತೆಗಳು ಆಗದಂತೆ ಗೌರವಯುತವಾಗಿ ನಡೆಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ತೀರ್ಮಾನಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರಿನ ನೆಹರು ಮೈದಾನಿನಲ್ಲಿ ನಾಳಿನ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಆದರೆ ಈ ಬಾರಿ ಸರಳವಾಗಿ ಸ್ವಾತಂತ್ರ್ಯೋತ್ಸವ ಆಚರಣೆ ನಿರ್ಧರಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಧ್ವಜಾರೋಹನಗೈದು ರಾಷ್ಟ್ರ ದ್ವಜಕ್ಕೆ ಗೌರವಾರ್ಪಣೆ ಮಾಡಲಿದ್ದಾರೆ.

ಉಳಿದಂತೆ ಸಭಾ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ. ಕಾರ್ಯಕ್ರಮ ಸಂದರ್ಭ ನೆಹರು ಮೈದಾನಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಸಾರ್ವಜನಿಕರು ಇಡೀ ಕಾರ್ಯಕ್ರಮವನ್ನು ಮನೆಯಲ್ಲೇ ಕೂತು ವಿಕ್ಷಣೆ ಮಾಡಲು ಟಿವಿ, ಸಾಮಾಜಿಕ ಜಾಲತಾಣಗಳ ಮೂಲಕ ನೇರಾ ಪ್ರಸಾರದ ವ್ಯವಸ್ಥೆ ಮಾಡಿದೆ.

ಜಿಲ್ಲೆಯ ಸರ್ಕಾರಿ ಕಚೇರಿಗಳು, ಶಾಲಾ- ಕಾಲೇಜುಗಳಲ್ಲೂ ಸರಳವಾಗಿ ಸ್ವಾತಂತ್ರೋತ್ಸವ ಆಚರಣೆ ನಡೆಯಲಿದೆ. ವಿದ್ಯಾರ್ಥಿಗಳನ್ನು ಈ ಬಾರಿ ಹೊರಗಿಡಲಾಗಿದ್ದು , ಕೇವಲ ಮುಖ್ಯೋಪದ್ಯಾಯರುಗಳು ಮತ್ತು ಶಿಕ್ಷಕ ವರ್ಗಕ್ಕೆ ಅನುಮತಿ ನೀಡಲಾಗಿದೆ.

ಮಹಾಮಾರಿ ಕೊರೊನಾ ದೇಶದ ಇತಿಹಾಸದಲ್ಲೇ ಮೊದಲ ಬಾರಿ ಎಲ್ಲಾ ವರ್ಗದ ಸ್ವಾತಂತ್ರ್ಯವನ್ನು ಕಸಿದುಕೊಂಡದ್ದು ಮಾತ್ರ ಅಷ್ಟೇ ಸತ್ಯ.

ಕಾರ್ಯಕ್ರಮ ವಿವರ ಇಂತಿವೆ:
ಬೆಳಿಗ್ಗೆ 8.45 ಗಂಟೆಗೆ ಸಮಾವೇಶ,
8.55 ಗಂಟೆಗೆ ಗಣ್ಯರ ಆಗಮನ,
9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರಧ್ವಜಾರೋಹಣ
ರಾಷ್ಟ್ರ ಗೀತೆ(ಪೊಲೀಸ್ ಬ್ಯಾಂಡಿನಲ್ಲಿ),
9.05 ಗಂಟೆಗೆ ಸಚಿವರಿಂದ ಪೆರೇಡ್ ವೀಕ್ಷಣೆ, ಗೌರವ ಸ್ವೀಕಾರ, ನಾಡಗೀತೆ,
9.15 ಗಂಟೆಗೆ ಕೋವಿಡ್-19 ವಾರಿಯರ್ಸ್‍ಗಳಿಗೆ ಸನ್ಮಾನ ಕಾರ್ಯಕ್ರಮ,
9.20 ಗಂಟೆಗೆ ಸಚಿವರು ಸ್ವಾತಂತ್ರ್ಯೋತ್ಸವ ಕುರಿತು ಸಂದೇಶ ನೀಡಲಿದ್ದಾರೆ.
10 ಗಂಟೆಗೆ ಪಥ ಸಂಚಲನ ಹಾಗೂ ಪೆರೇಡ್ ವಿಸರ್ಜನೆ ನಡೆಯಲಿದೆ.
ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಹಾಜರಾಗುವವರು ಕಡ್ಡಾಯವಾಗಿ ಮುಖಗವಸು(ಮಾಸ್ಕ್) ಧರಿಸಬೇಕು ಹಾಗೂ ಸಾಮಾಜಿಕ ಅಂತರ ಪಾಲಿಸಬೇಕು.

LEAVE A REPLY

Please enter your comment!
Please enter your name here

Hot Topics