Connect with us

DAKSHINA KANNADA

ದ.ಕ. ಜಿಲ್ಲೆಯಲ್ಲಿ 7 ಸಾವಿರ ರೂಪಾಯಿಗೆ ಮರಳು ಸಿಗಲಿದೆ: ಜಿಲ್ಲಾಧಿಕಾರಿ ಸ್ಪಷ್ಟನೆ

Published

on

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳಿಗೆ ಸಾಕಾಗುವಷ್ಟು ಮರಳು ಸಂಗ್ರಹವಿದೆ. 10 ಯೂನಿಟ್‌ಗೆ  7 ಸಾವಿರ ರೂಪಾಯಿಗೆ ಮರಳು ಸಿಗಲಿದೆ. ಆದ್ದರಿಂದ ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡದಿರಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೇಳಿದ್ದಾರೆ.


ಸಿಆರ್ ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಮರಳಿನ ದರ ಹೆಚ್ಚಿದೆ ಎಂಬ ಮಾತು ಸರಿಯಲ್ಲ.

ಶಂಭೂರು ಹಾಗೂ ಮರವೂರಿನ ಡ್ಯಾಂನಲ್ಲಿ ಹೂಳೆತ್ತುವಿಕೆಯ ಮೂಲಕ ತೆರವುಗೊಳಿಸಲಾದ ಮರಳನ್ನು ಸಂಗ್ರಹಿಸಲಾಗುತ್ತದೆ.

ಇದು ಸಿಹಿನೀರಿನ ಮರಳು ಆಗಿರುವ ಕಾರಣ ಉತ್ತಮ ಗುಣಮಟ್ಟದ್ದಾಗಿದೆ. ಆನ್‌ಲೈನ್‌ ಮೂಲಕ ಮಿತ್ರ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಿ 7,000 ರೂಗೆ ಮರಳು ಸಿಗಲಿದೆ. ಇದಕ್ಕೆ ಜಿಎಸ್‌ಟಿ ಮತ್ತು ಸಾಗಾಟ ವೆಚ್ಚ ಹೆಚ್ಚಾಗಿ ಸೇರಲಿದೆ.

ಆದ್ದರಿಂದ ಅನಧಿಕೃತ ಮರಳುಗಾರಿಕೆಗೆ ಅವಕಾಶ ನೀಡದೇ ಅಧಿಕೃತವಾಗಿ ಮರಳುಗಾರಿಕೆ ಮೂಲಕ ಪಡೆಯವ ಮರಳು ಖರೀಸಬೇಕು. 200 ಮೆಟ್ರಿಕ್‌ ಟನ್‌ ಮರಳು ಸದ್ಯ ಇದೆ. ಆದ್ಯಪಾಡಿಯಲ್ಲಿ 9 ಸಾವಿರ ಯುನಿಟ್‌, ಶಂಭೂರಿನಲ್ಲಿ 12 ಸಾವಿರ ಮೆಟ್ರಿಕ್‌ ಟನ್‌ ಮರಳು ಲಭ್ಯವಿದೆ ಎಂದರು.

DAKSHINA KANNADA

ಕಬಕ-ಮುರ ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶ*ವ ಪತ್ತೆ

Published

on

ಪುತ್ತೂರು: ಇಲ್ಲಿನ ಮುರ ಎಂಬಲ್ಲಿ ಕಬಕ-ಪುತ್ತೂರು ರೈಲು ಸಂಚಾರದ ರೈಲ್ವೇ ಹಳಿಯಲ್ಲಿ ವ್ಯಕ್ತಿಯೊಬ್ಬರ ಮೃ*ತದೇಹ ಪತ್ತೆಯಾಗಿರುವ ಘಟನೆ ಎ.23ರಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ.

death

ಮೃತಪಟ್ಟ ವ್ಯಕ್ತಿಯ ದೇಹ ಹಳಿಯಿಂದ ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟಿದ್ದು ಕಾಲು ತುಂಡಾದ ಸ್ಥಿತಿಯಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹ*ತ್ಯೆಯೋ? ಅಥವಾ ರೈಲು ಡಿಕ್ಕಿಯಾಗಿ ಸಂಭವಿಸಿದ ಘಟನೆಯೋ ಅನ್ನುವುದು ತನಿಖೆ ವೇಳೆ ಬೆಳಕಿಗೆ ಬರಲಿದೆ.

ಮುಂದೆ ಓದಿ..; ಬೆಳ್ತಂಗಡಿ: ಕೆರೆಗೆ ಬಿದ್ದು ಕಾಡುಕೋಣ ಸಾವು.. ಸಾರ್ವಜನಿಕರಿಂದ ಅಂತ್ಯಸಂಸ್ಕಾರ

death

Continue Reading

BELTHANGADY

ಬೆಳ್ತಂಗಡಿ: ಕೆರೆಗೆ ಬಿದ್ದು ಕಾಡುಕೋಣ ಸಾ*ವು.. ಸಾರ್ವಜನಿಕರಿಂದ ಅಂತ್ಯಸಂಸ್ಕಾರ

Published

on

ಬೆಳ್ತಂಗಡಿ: ಇಲ್ಲಿನ ಬೆಳಾಲು ಗ್ರಾಮಕ್ಕೆ ಸಂಬಂಧಪಟ್ಟಂತೆ ಕೊಯ್ಯೂರು ರಸ್ತೆಯ ಬದ್ಯಾರು ಎಂಬಲ್ಲಿ ಹೆಚ್ ಪದ್ಮ‌ಗೌಡ ಎಂಬವರ ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತ*ದೇಹ ಪತ್ತೆಯಾಗಿದೆ.

bison

ಮುಂದೆ ನೋಡಿ..; ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಉಚ್ಛಾಟನೆ..!

ಈ ಕೆರೆಗೆ ಸುತ್ತ ಕಾಂಕ್ರೀಟ್ ರಿಂಗ್ ಅಳವಡಿಸಿದ್ದು ನೀರು ಕುಡಿಯಲು ಬಂದ ಕಾಡುಕೋಣ ಮೂರ್ನಾಲ್ಕು ದಿನಗಳ ಹಿಂದೆಯೇ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ. ಹೆಚ್ಚೂ ಕಮ್ಮಿ 10 ಕ್ವಿಂಟಾಲ್ ತೂಕ ಹೊಂದಿರಬಹುದೆಂದು ಅಂದಾಜಿಸಲಾಗಿದ್ದು, ಕೊಳೆತು ವಾಸನೆ ಬೀರುತ್ತಿತ್ತು. ಶೌರ್ಯ ವಿಪತ್ತು ತಂಡಕ್ಕೆ ಬಂದ ಮಾಹಿತಿಯಂತೆ ಉಜಿರೆ- ಬೆಳಾಲು ಘಟಕದ ಸಂಯೋಜಕ ಸುಲೈಮಾನ್ ಬೆಳಾಲು, ಮುಳುಗು ಪರಿಣತ ಹರೀಶ ಕೂಡುಗೆ, ಮುಹಮ್ಮದ್ ಶರೀಫ್ ಬೆಳಾಲು, ಅವಿನಾಶ್ ಭಿಡೆ ಅರಸಿಮನಕ್ಕಿ, ರವೀಂದ್ರ ಉಜಿರೆ, ಸುರೇಂದ್ರ ಉಜಿರೆ, ಅನಿಲ್ ಚಾರ್ಮಾಡಿ, ಶೌರ್ಯ ಘಟಕದ ಮಾಸ್ಟರ್ ಪ್ರಕಾಶ್ ಧರ್ಮಸ್ಥಳ, ನಳಿನ್ ಕುಮಾರ್ ಧರ್ಮಸ್ಥಳ ಮೊದಲಾದವರು ಸಾರ್ವಜನಿಕರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಕಾಡುಕೋಣದ ಕಳೇಬರವನ್ನು ಮೇಲೆತ್ತಿದ್ದಾರೆ. ಬಳಿಕ ಪಶುವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ಪ್ರಕ್ರೀಯೆ ನಡೆಸಿದ್ದು, ತೋಟದಲ್ಲೇ ಹೊಂಡ ತೋಡಿ ಅಂತ್ಯಸಂಸ್ಕಾರ ನಡೆಸಲಾಗಿದೆ.

Continue Reading

DAKSHINA KANNADA

ಕಾಗೆ ನಿಜಕ್ಕೂ ನಮ್ಮ ಪಿತೃನಾ..?

Published

on

ಹಿಂದೂ ಸಂಪ್ರದಾಯದ ಪ್ರಕಾರ ಕಾಗೆಗೆ ವಿಶೇಷವಾದ ಸ್ಥಾನಮಾನವಿದೆ. ಪಕ್ಷಿ ಜಾತಿಗೆ ಸೇರಿದ ಕಾಗೆಯನ್ನ ಹಿಂದಿನ ಕಾಲದಲ್ಲಿ ಸಂಪರ್ಕ ಸಾಧನವಾಗಿ ಬಳಸಲಾಗುತ್ತಿತ್ತು. ಯಾವೂದೇ ರೀತಿಯ ತಂತ್ರಜ್ಞಾನ ಹಾಗೂ ದೂರವಾಣಿ ಇಲ್ಲದಂತಹ ಸಮಯದಲ್ಲಿ ಕಾಗೆಯನ್ನೇ ಸಂದೇಶ ರವಾನಿಸಲು ಬಳಸಲಾಗುತ್ತಿತ್ತು. ನಮ್ಮ ಹಿರಿಯರ ಪ್ರಕಾರ ಕಾಗೆಗೂ ಮನುಷ್ಯರಿಗೂ ಅವೀನಾಭಾವ ಸಂಬಂಧ ಇದೆ ಎಂದು ಹೇಳಲಾಗುತ್ತದೆ. ಹಿಂದೂಗಳ ಆಚರಣೆಯಲ್ಲಿ ಕಾಗೆಗೆ ಪಿಂಡ ಕೂಡ ಇಡುತ್ತಾರೆ.

ಪಿತೃ ಪಕ್ಷದ ಶ್ರಾದ್ಧ ಸಮಯದಲ್ಲಿ ಕಾಗೆಗೆ ಪಿಂಡ ಇಡುತ್ತೇವೆ. ಕಾರಣ ಇಷ್ಟೇ, ಕಾಗೆಯನ್ನ ‘ಮೇಸೆಂಜರ್ ಆಫ್ ಪಿತೃಲೋಕ’ ಎಂದು ಪರಿಗಣಿಸಲಾಗುತ್ತೆ. ಇನ್ನು, ಅದೇ ಪಿತೃಲೋಕದಲ್ಲಿ ನಮ್ಮ ಪಿತೃಗಳು ಇರುವುದು. ನಮ್ಮ ಪಿತೃಗಳ ಆತ್ಮ ಕಾಗೆಯಲ್ಲಿ ಇದೆ ಎನ್ನುವ ನಂಬಿಕೆಯಿಂದ. ಕಾಗೆ ಸ್ವೀಕಾರ ಮಾಡಿದ ಆಹಾರ ನಮ್ಮ ಪಿತೃಗಳನ್ನ ಖುಷಿ ಪಡಿಸುತ್ತೆ ಎನ್ನುವ ನಂಬಿಕೆ ಕೂಡ ಇದೆ.

ಪಿತೃಗಳಂತೆ ಕಾಗೆ..!

ಕಾಗೆ ಎದ್ದೇಳೋದು ಬ್ರಾಹ್ಮಿ ಮುಹೂರ್ತದಲ್ಲಿ. ಕೋಳಿ ಅಲ್ವಾ ಮುಂಜಾನೆ ಬೇಗ ಏಳೋದು ಅಂತ ಕೇಳಿದ್ರೆ ನೀವು, ಕೋಳಿ ಸೂರ್ಯೋದಯದ ಸಮಯದಲ್ಲಿ ಎದ್ದೇಳುತ್ತೆ. ಆದ್ರೆ, ಬ್ರಾಹ್ಮಿ ಮೂಹೂರ್ತದಲ್ಲಿ ಅಂದ್ರೆ ಸೂರ್ಯೋದಯಕ್ಕೂ ಮುಂಚೆ ಎದ್ದೇಳೋದು ಕಾಗೆ. ಇನ್ನು ಸೂರ್ಯಾಸ್ತ ಆದ ನಂತರ ಅದು ಏನನ್ನು ಸೇರಿಸೋದಿಲ್ಲ. ಇವೆಲ್ಲಾ ಶಾಸ್ತ್ರದ ಪ್ರಕಾರ ಇದೆ.

ನಾವು ಏನೇ ಆಹಾರ ಕೊಟ್ರು ಕಾಗೆಗಳು ಅದನ್ನ ಹಂಚಿ ತಿನ್ನುತ್ತವೆ. ನಮ್ಮ ಪಿತೃಗಳು ಇದ್ದದ್ದೂ ಹಾಗೇ ಅಲ್ವಾ.. ಈಗ ಹಂಚಿ ತಿನ್ನೋದು, ಬ್ರಾಹ್ಮಿ ಮೂಹೂರ್ತಕ್ಕೆ ಏಳೋದು, ಸೂರ್ಯಾಸ್ತ ಆಗುವ ಮೊದಲು ಊಟ ಮುಗಿಸೋದು ಈ ಎಲ್ಲವೂ ಕಮ್ಮಿ ಆಗಿದೆ. ಅದಕ್ಕೆ ಕಾಗೆಗಳು ಕೂಡ ಮೊದಲಿನ ಹಾಗೇ ಹೆಚ್ಚು ಕಂಡು ಬರುವುದಿಲ್ಲ.

ಕಾ..ಕಾ…ಅಂದ್ರೇನು..?

ಕಾಗೆ ಶನಿಯ ವಾಹನ ಕೂಡ ಹೌದು. ಹಾಗಾಗಿ ಕಾಗೆ ಜೀವನದಲ್ಲಿ ಬರುವ ಒಳ್ಳೆಯ ಅಥವಾ ಕೆಟ್ಟ ಸೂಚನೆಗಳನ್ನ ಕೊಡುವ ಒಂದು ಮಾಧ್ಯಮ ಕೂಡ ಹೌದು. ಕಾಗೆಯನ್ನು ನಾವು ಕರೆಯುವಾಗ ಕಾ… ಕಾ… ಅಂತ ಕರೆಯುತ್ತೇವೆ. ಈ ಕಾ ಅಂದ್ರೆ ಕಾಪಾಡು ಅನ್ನೋ ಅರ್ಥ ಕೂಡ ಬರುತ್ತೆ. ಒಂದು ಲೆಕ್ಕದಲ್ಲಿ ನೋಡಲು ಹೋದರೆ ಪಿತೃಗಳಲ್ಲಿ ನಾವು ಕೇಳೋ ಮೊರೆ ಇದು. ‘ನಮ್ಮನ್ನು ಕಾಪಾಡಿ’ ಎಂದು. ಇದಕ್ಕೆ ಉತ್ತರವಾಗಿ ಕಾಗೆ ಕೂಡ ‘ಕಾ ಕಾ’ ಅನ್ನುತ್ತದೆ.

ಕಾ ಅಂದ್ರೆ ಸಂಸ್ಕೃತದಲ್ಲಿ ಯಾರು ಎಂದು ಅರ್ಥ. ನೀನ್ಯಾರು..? ನಿನ್ನೊಂದಿಗೆ ಇರೋರು ಯಾರು..? ನೀನು ಸತ್ತ ಮೇಲೆ ನಿನ್ನೊಂದಿಗೆ ಬರುವವರು ಯಾರು..? ಯೋಚಿಸು ಅನ್ನೋ ಸಂದೇಶ ಕೂಡ ಇದರಲ್ಲಿ ಗೌಪ್ಯವಾಗಿ ಅಡಗಿದೆ. ಹೆಚ್ಚಿನ ಜನರಿಗೆ ನಿಮ್ಮ ಪಿತೃಗಳು ಕಾಗೆಯ ರೂಪದಲ್ಲಿ ಬಂದು ನಿಮಗೆ ಸೂಚನೆ ಕೊಟ್ಟದ್ದು ಇರಬಹುದು. ಒಟ್ಟಾರೆಯಾಗಿ, ಹೇಳುವುದಾದರೆ ಕಾಗೆಗೇ ತನ್ನದೇ ಆದಂತಹ ವೈಶಿಷ್ಟ್ಯಗಳು ಇವೆ.

Continue Reading

LATEST NEWS

Trending