Connect with us

    International news

    ಆಸ್ಟ್ರೇಲಿಯಾದ ವಿರುದ್ದ ಮಹತ್ವದ ಟೆಸ್ಟ್; ಫಾಲೋಆನ್ ಭೀತಿಯಲ್ಲಿ ಟೀಮ್ ಇಂಡಿಯಾ

    Published

    on

    ಮಂಗಳೂರು/ಬ್ರಿಸ್ಬೇನ್: ಟೀಮ್ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 445 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಪ್ರಥಮ ಇನ್ನಿಂಗ್ಸ್ ಆಡುತ್ತಿರುವ ಟೀಮ್ ಇಂಡಿಯಾ 180 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದೆ.

    ಬ್ರಿಸ್ಬೇನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾ 51.5 ಓವರ್ ಗಳ ಮುಕ್ತಾಯದ ವೇಳೆಗೆ 180 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಆಸ್ಟ್ರೇಲಿಯಾ ಕಲೆಹಾಕಿದ 445 ರನ್ ಗಳಿಗೆ ಉತ್ತರವಾಗಿ ಭಾರತ ಇನ್ನಿಂಗ್ಸ್ ಆರಂಭಿಸಿ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

    ಇದನ್ನೂ ಓದಿ: ಜಸ್ಟಿನ್ ಟ್ರುಡೊಗೆ ದೊಡ್ಡ ಹೊಡೆತ; ಉಪ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕ್ರಿಸ್ಟಿಯಾ ! 

    ಆರಂಭಿಕ ಆಟಗಾರರು ಒಬ್ಬರಾದ ಮೇಲೆ ಒಬ್ಬರಂತೆ ಆಸ್ಟ್ರೇಲಿಯಾದ ಬೌಲರ್ ಗಳಿಗೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಕೆಎಲ್ ರಾಹುಲ್ 139 ಎಸೆತಗಳಲ್ಲಿ 84 ರನ್ ಗಳ ಕೊಡುಗೆ ನೀಡಿದರು. ಆದರೆ ಶತಕ ವಂಚಿತರಾದರು.

    ಈ ವೇಳೆ ಕಣಕ್ಕಿಳಿದ ರವೀಂದ್ರ ಜಡೇಜಾ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 82 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ರವೀಂದ್ರ ಜಡೇಜಾ (52) ಹಾಗೂ ನಿತೀಶ್ ರೆಡ್ಡಿ (9) ಬ್ಯಾಟಿಂಗ್ ಮಾಡುತ್ತಿದ್ದು, ಟೀಮ್ ಇಂಡಿಯಾ 51.5 ಓವರ್ ಗಳ ಮುಕ್ತಾಯದ ವೇಳೆಗೆ 180 ರನ್ ಕಲೆ ಹಾಕಿದೆ.

    ಟೀಂ ಇಂಡಿಯಾಗೆ ಫಾಲೋ ಅನ್ ತಪ್ಪಿಸಿಕೊಳ್ಳುವ ಅನಿವಾರ್ಯತೆ
    ಇತ್ತ ಫಾಲೋಆನ್ ತಪ್ಪಿಸಲು ಭಾರತ ತಂಡವು ಇನ್ನೂ 66 ರನ್ ಗಳನ್ನು ಕಲೆಹಾಕಬೇಕಿದೆ. ಅಂದರೆ ಟೀಮ್ ಇಂಡಿಯಾ 246 ರನ್ ಗಳ ಒಳಗೆ ಆಲೌಟ್ ಆದರೆ, ಆಸ್ಟ್ರೇಲಿಯಾ ತಂಡವು ಫಾಲೋಆನ್ ಹೇರಲಿದೆ. ಇದರಿಂದ ಟೀಮ್ ಇಂಡಿಯಾ 246 ರನ್ ಗಳ ಒಳಗೆ ಆಲೌಟ್ ಆದರೆ, ಆಸ್ಟ್ರೇಲಿಯಾ ತಂಡವು ಫಾಲೋಆನ್ ಹೇರಲಿದೆ. ಇದರಿಂದ ಟೀಮ್ ಇಂಡಿಯಾ ಮತ್ತೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಬೇಕಾಗುತ್ತದೆ.

    ಅತ್ತ ಕೊನೆಯ ದಿನದಾಟ ಮಾತ್ರ ಇರುವುದರಿಂದ ಟೀಮ್ ಇಂಡಿಯಾಗೆ ಫಾಲೋ ಆನ್ ತಪ್ಪಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಫಾಲೋಆನ್ ಹೇರಿ ಅಂತಿಮ ದಿನದಾಟದಲ್ಲಿ ಭಾರತ ತಂಡವನ್ನು ಬೇಗನೆ ಆಲೌಟ್ ಮಾಡಿ, ಆಸ್ಟ್ರೇಲಿಯಾ ಇನ್ನಿಂಗ್ಸ್ ಅಥವಾ ಕಡಿಮೆ ಮೊತ್ತದ ಗುರಿಯೊಂದಿಗೆ ಜಯ ಸಾಧಿಸಬಹುದು.

    ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಮೂರನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗುತ್ತ ಎಂಬ ಭೀತಿ ಎದುರಾಗಿದೆ. ಒಂದು ವೇಳೆ ಗಾಬಾ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾದರೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಭಾರತ ತಲುಪಲು ಸಾಧ್ಯವಾಗುತ್ತಾ ಎನ್ನುವ ಕುತೂಹಲ ಜೋರಾಗಿದೆ.

     

    Click to comment

    Leave a Reply

    Your email address will not be published. Required fields are marked *

    International news

    ಮಹತ್ವದ ನಿರ್ಧಾರ ಕೈಗೊಂಡ ಬೈಡನ್: 4.3 ಶತಕೋಟಿ ಡಾಲರ್ ವಿದ್ಯಾರ್ಥಿ ಸಾಲ ಮನ್ನಾ

    Published

    on

    ಮಂಗಳೂರು/ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಿವೃತ್ತಿಯಾಗುವುದಕ್ಕೂ ಮುನ್ನ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

    ಇದನ್ನೂ ಓದಿ: ರಷ್ಯಾದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಬೆಚ್ಚಿಬಿದ್ದ ಕಜಾನ್ ಜನತೆ !

    4.28 ಶತಕೋಟಿ ಡಾಲರ್ ಮೊತ್ತದ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಅಧ್ಯಕ್ಷರು ಘೋಷಿಸಿದ್ದಾರೆ. ಇದರೊಂದಿಗೆ ವಿದ್ಯಾರ್ಥಿ ಸಾಲದಿಂದ ಮುಕ್ತರಾದವರ ಸಂಖ್ಯೆ ಸುಮಾರು 5 ದಶಲಕ್ಷಕ್ಕೆ ತಲುಪಿದೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಿದೆ.

    Continue Reading

    International news

    ರಷ್ಯಾದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಬೆಚ್ಚಿಬಿದ್ದ ಕಜಾನ್ ಜನತೆ !

    Published

    on

    ಮಂಗಳೂರು/ಕೀವ್: ಉಕ್ರೇನ್ ನ 8 ಸ್ಪೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜನ್ ನಗರದ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದೇ ನಗರದಲ್ಲಿ ಇತ್ತೀಚೆಗೆ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ನಡೆದಿದ್ದು, ಭಾರತದ ಪ್ರಧಾನಿ ಸೇರಿದಂತೆ ಹಲವು ವಿಶ್ವ ನಾಯಕರು ಆಗಮಿಸಿದ್ದರು.

    ಇತ್ತೀಚೆಗೆ ಉಕ್ರೇನ್ ಮೇಲೆ ಕ್ಷೀಪಣಿ ದಾಳಿ ನಡೆಸಿದ್ದ ರಷ್ಯಾಗೆ ಡ್ರೋನ್ ದಾಳಿ ಮೂಲಕ ಉಕ್ರೇನ್ ತಿರುಗೇಟು ನೀಡಿದ್ದು, ಉಕ್ರೇನ್ ದಿಢೀರ್ ಕ್ರಮಕ್ಕೆ ರಷ್ಯಾದ ಕಜಾನ್ ಜನತೆ ಬೆಚ್ಚಿ ಬಿದ್ದಿದ್ದಾರೆ.

    ಘಟನೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದರೆ ಕಟ್ಟಡಗಳು ವ್ಯಾಪಕವಾಗಿ ಹಾನಿಗೊಳಗಾಗಿರುವುದಾಗಿ ವರದಿಗಳು ತಿಳಿಸಿವೆ.

    ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜಾನ್ ನಗರದ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ 3 ಕಟ್ಟಡಗಳು ಹಾನಿಗೊಳಗಾಗಿದ್ದು, ಜನರನ್ನು ಅಲ್ಲಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಸ್ಥಳೀಯ ಆಡಳಿತವು ಜನರಿಗೆ ಊಟ, ಬಟ್ಟೆಗಳನ್ನು ಒದಗಿಸಿದೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಡೋಕ್ಲಾಂನಲ್ಲಿ 22 ಗ್ರಾಮಗಳನ್ನು ನಿರ್ಮಾಣ ಮಾಡಿದ ಚೀನಾ !

    ಕಜನ್ ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 800 ಕಿಲೋಮೀಟರ್ ದೂರದಲ್ಲಿದೆ. ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಪ್ರಕಾರ, ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯ ಕಜಾನ್ ನಗರದಲ್ಲಿ ಡ್ರೋನ್ ಅನ್ನು ಉರುಳಿಸಿದ್ದು, ಕೆಲವು ಡ್ರೋನ್ ಗಳು ಅದನ್ನು ಭೇದಿಸಿ ದಾಳಿನಡೆಸಿವೆ ಎಂದು ತಿಳಿಸಿದೆ.

    9/11 ಶೈಲಿಯ ದಾಳಿ
    ಉಕ್ರೇನ್ ದಾಳಿಯು, ಸಪ್ಟೆಂಬರ್ 11, 2001ರಂದು ನ್ಯೂಯಾರ್ಕ್ ವಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಕ್ಕೆ ವಿಮಾನದ ಮೂಲಕ ದಾಳಿ ನಡೆಸಿದ ಘಟನೆಯನ್ನು ನೆನಪಿಸುವಂತಿದೆ.

    ಸೆಪ್ಟೆಂಬರ್ 11, 2001ರಂದು ಅಮೆರಿಕಗೆ ಅಲ್ ಕೈದಾ ಉಗ್ರ ಸಂಘಟನೆ ಶಾಕ್ ಕೊಟ್ಟಿದ್ದರು. ಈ ಭೀಕರ ಉಗ್ರ ದಾಳಿಯಲ್ಲಿ 2977 ಅಮಾಯಕರು ಮೃತರಾಗಿದ್ದರು.

    ಅಲ್ ಖೈದಾ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಅಧಿನಾಯಕ ಒಸಾಮಾ ಬಿನ್ ಲಾಡೆನ್ ನೇತೃತ್ವದಲ್ಲಿ ಅಮೆರಿಕದ ಮೇಲೆ ಉಗ್ರ ದಾಳಿ ನಡೆಸಿತ್ತು. ನ್ಯೂಯಾರ್ಕ್ ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಿತ್ತು. ಸೆಪ್ಟೆಂಬರ್ 11, 2001 ಈ ಘಟನೆ ನಡೆದಿದ್ದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಉಕ್ರೇನ್ ನ ಈ ದಢೀರ್ ದಾಳಿಯು 9/11ರ ಅಟ್ಯಾಕ್ ಸ್ಮರಿಸುವಂತೆ ಮಾಡಿದೆ.

     

    Continue Reading

    International news

    ಡೋಕ್ಲಾಂನಲ್ಲಿ 22 ಗ್ರಾಮಗಳನ್ನು ನಿರ್ಮಾಣ ಮಾಡಿದ ಚೀನಾ !

    Published

    on

    ಮಂಗಳೂರು/ನವದೆಹಲಿ: ಭಾರತದ ವಿರುದ್ಧ ಯಾವಾಗ್ಲೂ ಕುತಂತ್ರಿ ಚೀನಾ ಕತ್ತಿಮಸಿಯುತ್ತಲೇ ಇರುತ್ತೆ. ಸುಮ್ಮನೆ ಇರಲಾರದೇ ಗಡಿಯಲ್ಲಿ ಭಾರತವನ್ನು ಕೆಣಕುತ್ತೆ. ಇತ್ತೀಚೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಚೀನಾ ವಿದೇಶಾಂಗ ಸಚಿವ ವಾಂಗ್ ಯಿಯನ್ನ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದರು.

    ಆದರೆ, ಭೂತಾನ್ ಭಾಗ ಎನ್ನಲಾಗುವ ಪ್ರದೇಶದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಚೀನಾ 22 ಗ್ರಾಮಗಳನ್ನು ನಿರ್ಮಾಣ ಮಾಡಿದೆ. ಉಪಗ್ರಹ ಚಿತ್ರಗಳನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ. ಭಾರತದ ಸಿಕ್ಕಿಂ ಸಮೀಪ ಈ ಗ್ರಾಮಗಳ ನಿರ್ಮಾಣವಾಗಿದ್ದು, ಕಳವಳ ವ್ಯಕ್ತವಾಗಿದೆ.

    ಇದನ್ನೂ ಓದಿ: ಟ್ರಂಪ್ ಜೊತೆಗೆ ಮಾತುಕತೆಗೆ ಸಿದ್ದವಿದ್ದೇನೆ ಎಂದ ವ್ಲಾಡಿಮಿರ್ ಪುಟಿನ್ !

    ಚೀನಾದ ಸೇನಾಪಡೆಗಳಿಗೆ ಸುಲಭ ಸಂಚಾರ
    ಡೋಕ್ಲಾಂನಲ್ಲಿ ಗ್ರಾಮ ನಿರ್ಮಾಣವಾಗುತ್ತಿರುವುದರಿಂದ ಈ ಪ್ರಸ್ಥಭೂಮಿಯ ಅತ್ಯಂತ ದಕ್ಷಿಣಕ್ಕೆ ಚೀನಾದ ಸೇನಾಪಡೆಗಳು ಸಂಚಾರ ಮಾಡಲು ಅವಕಾಶ ದೊರೆಯುತ್ತದೆ. ಇದು ಭಾರತಕ್ಕೆ ತೀರ ಸಮೀಪವಾಗಿದ್ದು, ಇದು ಚೀನಾದ ಮಿಲಿಟರಿ ನೆಲೆಗಳಿಗೂ ಸಮೀಪದಲ್ಲಿದೆ.

    ಡೋಕ್ಲಾಂ ಬಿಕ್ಕಟ್ಟು
    2017ರಲ್ಲಿ ಡೋಕ್ಲಾಂನ ಈ ಪ್ರದೇಶವು ಭಾರತ ಮತ್ತು ಚೀನಾದ ಸೈನಿಕರ ನಡುವೆ 73 ದಿನಗಳ ಕಾಲದ ಬಿಕ್ಕಟ್ಟಿನ ಪ್ರದೇಶವಾಗಿತ್ತು. ಹೀಗಾಗಿ ಈ ಪ್ರಸ್ಥಭೂಮಿಯ ದಕ್ಷಿಣಕ್ಕೆ ಚೀನಾದ ಸೇನೆಗಳು ತಲುಪುವ ರಸ್ತೆ ಮಾರ್ಗಗಳ ನಿರ್ಮಾಣವನ್ನು ತಡೆಯಲು ಭಾರತ ಸರಕಾರ ಮಧ್ಯಪ್ರವೇಶಿಸಿತ್ತು.

    ಇದೀಗ ಮತ್ತೆ ಡೋಕ್ಲಾಂನಲ್ಲಿ ಗ್ರಾಮಗಳ ನಿರ್ಮಾಣ ವೇಗ ಪಡೆಯುತ್ತಿದ್ದು ಉಪಗ್ರಹ ಚಿತ್ರಗಳು ಭಾರತದ ಆತಂಕಕ್ಕೆ ಕಾರಣವಾಗಿದೆ.

     

    Continue Reading

    LATEST NEWS

    Trending