Connect with us

    FILM

    ನಾನು ನಿಜವಾಗಿಯೂ ಅದೃಷ್ಟವಂತೆ; ಪವಿತ್ರ ಗೌಡ ಪುತ್ರಿಯಿಂದ ಭಾವುಕ ಪೋಸ್ಟ್

    Published

    on

    ಮಂಗಳೂರು/ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣ ರಾಜ್ಯವನ್ನೇ ಅದರನ್ನೂ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ. ನಟ ದರ್ಶನ್ ಹಾಗೂ ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ.  ಇವರಿಗೆ ಜಾಮೀನು ಸಿಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಮತ್ತೊಂದೆಡೆ ದರ್ಶನ್ ಹಾಗೂ ಪವಿತ್ರಾ ಗೌಡ ಕುಟುಂಬಸ್ಥರು ಅವರ ಬಿಡುಗಡೆಗಾಗಿ ಪ್ರಯತ್ನ ಪಡುತ್ತಲೇ ಇದ್ದಾರೆ.

    ಮತ್ತೊಂದೆಡೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ದೇವರ ಮೊರೆ ಹೋಗಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು, ಪವಿತ್ರ ಗೌಡ ಪುತ್ರಿ ಖುಷಿಗೌಡ ತಾಯಿಯ ಕಾಣಲು  ಆಗಾಗ್ಗೆ ಅಜ್ಜಿಯೊಂದಿಗೆ ಕಾರಾಗೃಹಕ್ಕೆ ಭೇಟಿ ನೀಡುತ್ತಿರುತ್ತಾರೆ. ಅಲ್ಲದೇ,  ತಾಯಿಯನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಖುಷಿ ಗೌಡ ತಾಯಿ ಪವಿತ್ರಾ ಗೌಡ ನೆನೆದು ಭಾವುಕ ಪೋಸ್ಟೊಂದನ್ನು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ತಾಯಿ ಜೊತೆಗಿನ ಫೋಟೋ ಹಂಚಿಕೊಂಡು ತಾಯಿಯ ಗುಣಗಾನ ಮಾಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?

    ತಾಯಿಯನ್ನು ಹೊಗಳಿರುವ ಖುಷಿಗೌಡ ಆಕೆಯ ಮಾತುಗಳನ್ನು ನೆನಪಿಕೊಂಡಿದ್ದಾರೆ. ‘ಅವಳು ನನ್ನ ಪ್ರೇರಣೆ, ಎಂತಹದ್ದೇ ಪರಿಸ್ಥಿತಿ ಬಂದರೂ ಗಟ್ಟಿಯಾಗಿರಬೇಕು ಎಂದು ಆಕೆ ನನಗೆ ಕಲಿಸಿಕೊಟ್ಟಿದ್ದಾಳೆ. ಅವಳು ಯಾವಾಗಲೂ ತುಂಬಾ ಮುಕ್ತವಾಗಿ ಇರುತ್ತಾಳೆ ಹಾಗೂ ಸದಾ ನನಗೆ ಬೆಂಬಲ ನೀಡುತ್ತಾಳೆ. ಅವಳು ಶತಕೋಟಿಯಲ್ಲಿ ಒಬ್ಬಳು. ನನ್ನ ತಾಯಿಯಂತೆ ಯಾರೂ ಇಲ್ಲ. ಅವಳಂತಹ ತಾಯಿಯನ್ನು ಪಡೆಯಲು ನಾನು ನಿಜವಾಗಿಯೂ ಅದೃಷ್ಟವಂತೆ ಹಾಗೂ ಅವಳ ಮಗಳಾಗಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಅಮ್ಮ’ ಎಂದು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ : ಹೊಸ ಇತಿಹಾಸ : ಭರತನಾಟ್ಯ ರಂಗಪ್ರವೇಶಗೈದ ಚೀನಾದ ಬಾಲೆ!
    ಖುಷಿ ಗೌಡ ಕೈಯಲ್ಲಿ ರೆಡ್‌ ಕಾರ್ಪೆಟ್‌ :

    ಪವಿತ್ರಾ ಗೌಡ ಫ್ಯಾಷನ್ ಡಿಸೈನರ್ ಆಗಿದ್ದು, ರಾಜರಾಜೇಶ್ವರಿ ನಗರದ ತಮ್ಮ ನಿವಾಸದ ಬಳಿ ಇರುವ ರೆಡ್‌ ಕಾರ್ಪೆಟ್‌ 777 ಶಾಪನ್ನು ನಡೆಸುತ್ತಿದ್ದರು. ಆದರೆ, ಈಗ ಪರಪ್ಪರ ಅಗ್ರಹಾರ ಸೇರಿದ್ದಾರೆ.   ಸೆಲೆಬ್ರಿಟಿಗಳಿಗೆ ಭಿನ್ನ ವಿಭಿನ್ನವಾಗಿ ಉಡುಪು ವಿನ್ಯಾಸ ಮಾಡುತ್ತಿರುವ ಈ ರೆಡ್‌ ಕಾರ್ಪೆಟ್‌ ಸಂಸ್ಥೆಯನ್ನು ಮುನ್ನಡೆಸುವ  ಜವಾಬ್ದಾರಿ ಖುಷಿ ಗೌಡ ಹೆಗಲಿಗೇರಿದೆ. ಹೀಗಾಗಿ ರೆಡ್ ಕಾರ್ಪೆಟ್ ನ ನವೀನ ಶೈಲಿಯ ಉಡುಪುಗಳನ್ನು ಧರಿಸಿ ವೀಡಿಯೋ ಮಾಡಿ ಖುಷಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿರುತ್ತಾರೆ.

    FILM

    ಕನ್ನಡ ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಮುಹೂರ್ತ ಫಿಕ್ಸ್‌! ಹೋಸ್ಟ್‌ ಕೂಡ ಕನ್‌ಫರ್ಮ್‌!

    Published

    on

    ಬಿಗ್‌ ಬಾಸ್‌ ವೀಕ್ಷಕರಿಗೆ ಅಂತೂ ಸಿಹಿ ಸುದ್ದಿ ಬಂದಿದೆ. ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ನಿರೂಪಣೆ ಮಾಡೋರು ಯಾರು? ಯಾವಾಗಿನಿಂದ ಶುರು ? ಎಂದು ತಿಳಿಯಲು ಮುಂದೆ ಓದಿ.

    ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಅಂತೂ ಮುಹೂರ್ತ ಫಿಕ್ಸ್‌ ಆಗಿದೆ. ಬಹು ದಿನಗಳಿಂದ ಕಾದಿದ್ದ ವೀಕ್ಷಕರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಇದೇ ತಿಂಗಳ 28 ರಿಂದ 11 ನೇ ಬಿಗ್ ಬಾಸ್ ಶುರುವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲೇ 11 ನೇ ಬಿಗ್ ಬಾಸ್ ಆಗುತ್ತಿದೆ ಎಂಬುದೇ ವಿಶೇಷ. ಈಗಾಗಲೇ ಬಿಗ್ ಬಾಸ್ ಪ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ. ಸದ್ದಿಲ್ಲದೆ ಹೈದರಾಬಾದ್ ನಲ್ಲಿ ಫ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ.

    ಸೀಸನ್ 11 ಕ್ಕೆ ಕಿಚ್ಚ ಇರಲ್ಲ ಅನ್ನೋ ಗಾಳಿ ಸುದ್ದಿಗೆ ಬ್ರೇಕ್ ಕನ್ಪರ್ಮ್

    ಈ ಮುಂಚೆ ಸೀಸನ್‌ 11ರಲ್ಲಿ ರಿಷಬ್‌ ಶೆಟ್ಟಿ ಅಥವಾ ಗೋಲ್ಡನ್‌ ಸ್ಟಾರ್‌ ಗಣೇಶ್‌ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತಿದ್ದಾರೆ ಎಂದು ಗಾಸಿಪ್‌ಗಳು ಹರಿದಾಡುತ್ತಿದ್ದವು. ಇದೀಗ ಈ ಎಲ್ಲ ವದಂತಿಗಳಿಗೆ ಫುಲ್‌ಸ್ಟಾಪ್‌ ಇಡಲಾಗಿದೆ. ಇದೇ ತಿಂಗಳ 23 ಕ್ಕೆ ಬಿಗ್‌ ಬಾಸ್‌ ತಂಡ ಪ್ರೆಸ್‌ ಮೀಟ್‌ ಹಮ್ಮಿಕೊಂಡಿದೆ. ಸುದೀಪ್ ನೇತೃತ್ವದಲ್ಲೇ ಬಿಗ್‌ ಬಾಸ್‌ ಪ್ರೆಸ್‌ ಮೀಟ್‌ ನಡೆಯುತ್ತಿದೆ.

    ಈ ಮುಂಚೆ ವಾಹಿನಿ ಹಂಚಿಕೊಂಡ ಪ್ರೊಮೋದಲ್ಲಿ ಹ್ಯಾಶ್ ಟ್ಯಾಗ್‌ನಲ್ಲಿ ಕಿಚ್ಚ ಸುದೀಪ್ ಹೆಸರು ಇಲ್ಲವಾಗಿತ್ತು ಹಾಗಾಗಿಯೇ ಕಿಚ್ಚ ಇರಲ್ಲ ಎನ್ನುವ ಗಾಸಿಪ್‌ ಶುರುವಾಗಿತ್ತು,

    ಸ್ಪರ್ಧಿಗಳು ಯಾರೆಲ್ಲ?

    ಬಿಗ್ ಬಾಸ್ ಸ್ಪರ್ಧಿಗಳಾಗಿ ಸೋಷಿಯಲ್ ಮೀಡಿಯಾ influencer ಗಳು ಇರಲಿದ್ದಾರೆ ಎನ್ನಲಾಗುತ್ತಿದೆ. ಕಿರುತೆರೆ ಸ್ಟಾರ್ ಗಳ ಜೊತೆ ಬಿಗ್ ಬಾಸ್ ನಲ್ಲಿ ಕಾಣಿಸುತ್ತಿದ್ದಾರೆ ಎನ್ನಲಾಗಿದೆ. ಕಿರುತೆರೆ ನಟ ತ್ರಿವಿಕ್ರಮ್ 11ನೇ ಬಿಗ್ ಸೀಸನ್‌ಗೆ ಹೋಗೋದು ಬಹುತೇಕ ಫಿಕ್ಸ್‌ ಎನ್ನಲಾಗುತ್ತಿದೆ.

    Continue Reading

    FILM

    ನಟ ದರ್ಶನ್ ಮನವಿ ಪುರಸ್ಕರಿಸಿದ ಹೈಕೋರ್ಟ್; ಮಾಧ್ಯಮಗಳಿಗೆ ನಿರ್ಬಂಧ

    Published

    on

    ಮಂಗಳೂರು/ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲ 17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿರುವ ಅಂಶಗಳ ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಬಿತ್ತರವಾಗುತ್ತಿತ್ತು.

    ಚಾರ್ಜ್ ಶೀಟ್ ನಲ್ಲಿರುವ ವರದಿಯನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಕೋರಿ ನಟ ದರ್ಶನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು. ಇಂದು(ಸೆ.10) ಆದೇಶವನ್ನು ಪ್ರಕಟಿಸಿದ್ದು, ದರ್ಶನ್‌ ಮನವಿಯನ್ನು ಪುರಸ್ಕರಿಸಿ, ಅದನ್ನು ಮಾನ್ಯ ಮಾಡಿರುವ ನ್ಯಾಯಾಲಯ ಆರೋಪ ಪಟ್ಟಿಯ ಯಾವುದೇ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಆದೇಶಿಸಿದೆ.

    ಕಳೆದ ತಿಂಗಳು ಆಗಸ್ಟ್ 27 ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಅವರಿಗೆ ಸಂಬಂಧಿಸಿದ ಖಾಸಗಿ ಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರದರ್ಶಿಸದಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ ಪ್ರತಿಬಂಧಕಾಜ್ಞೆ ತಂದಿದ್ದರು.

    ಇದನ್ನೂ ಓದಿ :ಮಗುವನ್ನು ಕೊಂ*ದು ವಾಷಿಂಗ್ ಮೆಷಿನ್ ನಲ್ಲಿಟ್ಟ ಮಹಿಳೆ!

    ಈಗ ಅದೇ ಅರ್ಜಿಯನ್ನು ಉಲ್ಲೇಖಿಸಿ, ಆರೋಪ ಪಟ್ಟಿಯಲ್ಲಿರುವ ಮಾಹಿತಿ ಹಾಗೂ ಹರಿದಾಡುತ್ತಿರುವ ಕೆಲವು ಚಿತ್ರಗಳನ್ನು ಪ್ರದರ್ಶಿಸದಂತೆ ಸೂಚನೆ ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಹೈಕೋರ್ಟ್ ಏಕಸದಸ್ಯ ಪೀಠ ಮುಂದಿನ ವಿಚಾರಣೆಯವರೆಗೂ ಆರೋಪ ಪಟ್ಟಿಯಲ್ಲಿರುವ ಮಾಹಿತಿಯನ್ನು ಪ್ರಸಾರ ಮಾಡದಂತೆ ಸೂಚನೆ ನೀಡಿ ಆದೇಶ ಹೊರಡಿಸಿದೆ.

    Continue Reading

    FILM

    ರಶ್ಮಿಕಾ ಮಂದಣ್ಣಗೆ ಆಕ್ಸಿಡೆಂಟ್‌..! ಈ ಬಗ್ಗೆ ನಟಿ ಹೇಳಿದ್ದೇನು?

    Published

    on

    ಮುಂಬೈ/ಮಂಗಳೂರು: ಕಿರಿಕ್ ಪಾರ್ಟಿ ಸಿನೆಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇದೀಗ ನ್ಯಾಷನಲ್ ಕ್ರಷ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಸ್ಯಾಂಡಲ್‌ವುಡ್‌ ನಿಂದ ಬಾಲಿವುಡ್‌ ತನಕ ಉತ್ತಮ ನಟಿ ಪಟ್ಟವನ್ನೂ ಅಲಂಕರಿಸಿದ್ದಾರೆ.

    ಚಿತ್ರರಂಗದ ಬಿಗ್ ಸ್ಟಾರ್ ಗಳ ಜೊತೆ ಸ್ಕ್ರೀನ್‌ ಹಂಚಿಕೊಂಡಿರುವ ರಶ್ಮಿಕಾ ಇದೀಗ ಮುಂಬೈ, ಹೈದರಾಬಾದ್ ಗೆ ಸುತ್ತಾಡುತ್ತಿದ್ದಾರೆ. ಸದ್ಯಕ್ಕೆ ರಶ್ಮಿಕಾ ಕೈಯಲ್ಲಿ ಆರು ಸಿನೆಮಾಗಳಿದ್ದು ಆಭಿಮಾನಿಗಳು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪುಷ್ಪ-2 ಹಾಗೂ ಚಾವ ಸಿನೆಮಾಗಳು ಡಿ.6ಕ್ಕೆ ಒಂದೇ ದಿನ ರಿಲೀಸ್ ಆಗಲಿದ್ದು ಎರಡೂ ಸಿನೆಮಾಗಳ ಟೀಸರ್‌ಗಳು ಕೂಡಾ ಭಾರೀ ಸುದ್ದಿ ಮಾಡ್ತಿದೆ. ರೈನ್‌ ಬೋ, ದಿ ಗರ್ಲ್‌ ಫ್ರೆಂಡ್ ಎಂಬ ಎರಡು ಮಹಿಳಾ ಪ್ರಧಾನ ಸಿನೆಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇನ್ನು ಸಲ್ಮಾನ್ ಖಾನ್ ಜೋಡಿಯಾಗಿ ‘ಸಿಖಂದರ್’ ಹಾಗೂ ಧನುಷ್‌ಗೆ ಜೋಡಿಯಾಗಿ ‘ಕುಬೇರ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

    ವಿಕ್ಕಿ ಕೌಶಲ್-ರಶ್ಮಿಕಾ ನಟನೆಯ ಸಿನೆಮಾ ಟೀಸರ್ ರಿಲೀಸ್..! ಛತ್ರಪತಿ ಲುಕ್‌ನಲ್ಲಿ ವಿಕ್ಕಿ…

    ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟಿವ್ ಆಗಿರುವ ರಶ್ಮಿಕಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಇದೀಗ ಸ್ವತಃ ರಶ್ಮಿಕಾ ಇದಕ್ಕೆ ಕಾರಣವೇನು ಎಂಬುದನ್ನು ತಿಳಿಸಿದ್ದಾರೆ.

    ರಶ್ಮಿಕಾಗೆ ಸಣ್ಣದಾದ ಅಫಘಾತ ಉಂಟಾಗಿ ಚಿಕಿತ್ಸೆಗೆ ಒಳಪಟ್ಟಿದ್ದರೆಂಬುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, “ಹಾಯ್‌ ಎಲ್ಲರೂ ಹೇಗಿದ್ದೀರಾ? ನಾನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಬಹಳ ಸಮಯವಾಗಿದೆ. ಕಳೆದ ತಿಂಗಳು ನಾನು ಹೆಚ್ಚು ಸಕ್ರಿಯವಾಗಿಲ್ಲದೇ ಇರಲು ಕಾರಣ ನನಗೆ ಸಣ್ಣ ಅಪಘಾತವಾಗಿ ಪೆಟ್ಟಾಗಿತ್ತು. ವೈದ್ಯರು ಹೇಳಿದಂತೆ ನಾನು ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದಾರೆ. ಈಗ ನಾನು ಚೆನ್ನಾಗಿದ್ದೇನೆ, ನಾನು ಸೂಪರ್ ಆ್ಯಕ್ಟೀವ್‌ ಆಗಿರುವ ಹಂತದಲ್ಲಿದ್ದೇನೆ. ಆದ್ದರಿಂದ ನನ್ನ ಚಟುವಟಿಕೆ ಮತ್ತೆ ಆರಂಭವಾಗಿದೆ. ಯಾವಾಗಲೂ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸಲು ಆದ್ಯತೆ ನೀಡಿ. ಯಾಕಂದ್ರೆ ಜೀವನವು ತುಂಬಾ ಸೂಕ್ಷ್ಮ ಮತ್ತು ಚಿಕ್ಕದು. ನಮಗೆ ನಾಳೆ ಇರುತ್ತೋ ಇಲ್ಲವೋ ಗೊತ್ತಿಲ್ಲ. ಆದ್ದರಿಂದ ಪ್ರತಿದಿನ ನಾವು ಸಂತೋಷವಾಗಿರಬೇಕು ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಅಲ್ಲದೇ ಕೊನೆಗೆ ‘ಇನ್ನೊಂದು ವಿಷಯ.. ನಾನು ಈಗ ಹೆಚ್ಚು ಲಡ್ಡುಗಳನ್ನು ತಿನ್ನುತ್ತಿದ್ದೇನೆ’ ಎಂದು ತಮಾಷೆಯಾಗಿ ಬರೆದುಕೊಂಡು ಇಮೊಜಿ ಹಾಕಿದ್ದಾರೆ.

    ರಶ್ಮಿಕಾ ಪೋಸ್ಟ್‌ ನೋಡಿ ಹಲವು ಅಭಿಮಾನಿಗಳು ಆದಷ್ಟು ಚೇತರಿಸಿಕೊಳ್ಳಿ ಎಂದು ಕಾಮೆಂಟ್ ಮೂಲಕ ಶುಭಹಾರೈಸಿದ್ದಾರೆ.

    Continue Reading

    LATEST NEWS

    Trending