Saturday, August 20, 2022

ಕಾರ್ಕಳ: ಹಿಂಸಾತ್ಮಕವಾಗಿ ಓಮ್ನಿಯಲ್ಲಿ ಅಕ್ರಮ ದನ ಸಾಗಾಟ- ಮೂವರು ಪರಾರಿ

ಕಾರ್ಕಳ: ಎರಡು ದನಗಳನ್ನು ಹಿಂಸಾತ್ಮಕವಾಗಿ ಓಮ್ನಿ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಪೊಲೀಸರನ್ನು ಕಂಡು ಮೂವರು ಓಮ್ನಿ ಬಿಟ್ಟು ಓಡಿಹೋದ ಘಟನೆ ಅಜೆಕಾರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.


ಡಿ.11ರಂದು ರಾತ್ರಿ ಅಜೆಕಾರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುದರ್ಶನ ದೊಡಮನಿ ರಾತ್ರಿ ರೌಂಡ್ಸ್ ತಿರುಗುತ್ತಿದ್ದರು. ಮಧ್ಯರಾತ್ರಿ 12.15 ಗಂಟೆಗೆ ಶಿರ್ಲಾಲು ಗ್ರಾಮದ ಗುಡ್ಡೆಯಂಗಡಿ ಬಳಿ ತಲುಪಿದಾಗ ಗುಡ್ಡೆಯಂಗಡಿಯ ತಿರುವಿನ ಬಳಿ ಬಿಳಿ ಬಣ್ಣದ ಮಾರುತಿ ಓಮ್ನಿ ಕಾರೊಂದು ನಿಂತುಕೊಂಡಿತ್ತು,

ಸ್ಥಳಕ್ಕೆ ಪೊಲೀಸ್‌ ವಾಹನ ತಲುಪಿದ ವೇಳೆ ಓಮ್ನಿ ವಾಹನದ ಚಾಲಕ ಏಕಾಏಕಿ ಸ್ಟಾರ್ಟ್‌ ಮಾಡಿ ಅತೀ ವೇಗದಿಂದ ಅಂಡಾರು ಕಡೆ ಚಲಾಯಿಸಿದ್ದಾನೆ.

ಅನುಮಾನಗೊಂಡು ತಕ್ಷಣ ಹಿಂಬಾಲಿಸಿದ ಪೊಲೀಸ್‌ ವಾಹನ ತೆಳ್ಳಾರು ಗ್ರಾಮದ ತೆಳ್ಳಾರು ರೈಸ್ ಮಿಲ್ ಬಳಿ ತಲುಪುವಾಗ ಓಮ್ನಿ ಚಾಲಕ ಓಮ್ನಿಯನ್ನು ನಿಲ್ಲಿಸಿ,

ಅದರೊಳಗಿದ್ದ ಮೂರು ಜನರು ಹಾಡಿಯಲ್ಲಿ ಓಡಿ ಹೋಗಿದ್ದಾರೆ. ತಕ್ಷಣ ಅವರನ್ನು ಬೆನ್ನಟ್ಟಿದರೂ ಅವರು ಓಡಿಹೋಗಿದ್ದಾರೆ.
ನಂತರ ಓಮ್ನಿ ವಾಹನ ಪರಿಶೀಲಿಸಿದಾಗ ಎರಡು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಅವುಗಳ ಕಾಲುಗಳನ್ನು ಹುರಿ ಹಗ್ಗದಿಂದ ಕಟ್ಟಿ, ನೀಲಿ ಬಣ್ಣದ ಟರ್ಪಾಲು ಹೊದಿಸಿದ್ದಾರೆ. ಅವುಗಳಲ್ಲಿ ಒಂದು ದನದ ಕಾಲಿಗೆ ರಕ್ತಗಾಯವಾಗಿದೆ.

ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆಯನ್ವಯ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics