Connect with us

    DAKSHINA KANNADA

    ಅಕ್ರಮ ಮರಳುಗಾರಿಕೆ ; ಮರಳು ಸಹಿತ ವಾಹನ ವಶ

    Published

    on

    ಕಡಬ: ಅಕ್ರಮ ಮರಳು ಸಾಗಣಿಕೆ ಮಾಡುತ್ತಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಕಡಬದಲ್ಲಿ ನಡೆದಿರುವುದು ನಿನ್ನೆ (ಅ.27) ತಿಳಿದು ಬಂದಿದೆ.

    ಇಲ್ಲಿನ ಐತ್ತೂರು ಗ್ರಾಮದ ಮಾಯಿಪಾಜೆ ಎಂಬಲ್ಲಿ ಶನಿವಾರ ಕುಮಾರಧಾರಾ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿರುವ ಪೊಲೀಸರು ಮರಳು ಸಮೇತ ವಾಹನವನ್ನು ಪಡೆದುಕೊಂಡಿದ್ದಾರೆ.

    ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿರುವ ಪೊಲೀಸರು ಮರಳು ಸಾಗಾಟ ಮಾಡುತ್ತಿದ್ದ ಪಿಕಪ್‌ ವಾಹನವನ್ನು ವಶಪಡಿಸಿಕೊಂಡು ಗಣಿ ಇಲಾಖೆಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.

    ಈ ಪಿಕಪ್‌ ವಾಹನ ಸ್ಥಳೀಯ ಅಜಯ್‌ ಎಂಬವರಿಗೆ ಸೇರಿದ್ದಾಗಿದೆ ಎಂದು ಕಡಬ ಪೊಲೀಸರು ತಿಳಿಸಿದ್ದಾರೆ.

    DAKSHINA KANNADA

    ಸುಳ್ಯ: ರೋಗಿಯನ್ನು ಕರೆದೊಯ್ಯಲು 108 ಆ್ಯಂಬುಲೆನ್ಸ್‌ ನಿರಾಕರಣೆ

    Published

    on

    ಸುಳ್ಯ: ಸಾರ್ವಜನಿಕ ಆಸ್ಪತ್ರೆಯಲ್ಲಿ 108 ತುರ್ತು ಆ್ಯಂಬುಲೆನ್ಸ್‌ ವಾಹನವನ್ನು ಆಸ್ಪತ್ರೆಯ ಶೆಡ್‌ನ‌ಲ್ಲಿ ನಿಲುಗಡೆ ಮಾಡದಂತೆ ಸೂಚಿಸಿದ ಬಳಿಕ ಆರಂಭಗೊಂಡ ಗೊಂದಲ ಈಗ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.

    ಇದೇ ಕಾರಣ ಮುಂದಿಟ್ಟು 108 ಆ್ಯಂಬುಲೆನ್ಸ್‌, ಸೋಮವಾರ ರೋಗಿಯೋರ್ವರನ್ನು ಮಂಗಳೂರಿಗೆ ರವಾನಿಸಲು ನಿರಾಕರಿಸಲಾದ ಆರೋಪ ಕೇಳಿ ಬಂದಿದೆ.

    ಸುಳ್ಯ ಆಸ್ಪತ್ರೆಗೆ ಹೆಚ್ಚುವರಿ ಹೊಸ ಆ್ಯಂಬುಲೆನ್ಸ್‌ ಬಂದ ಕಾರಣ ಅದರ ನಿಲುಗಡೆಗೆ ಆಸ್ಪತ್ರೆಯ ಶೆಡ್‌ನ‌ಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ 108 ಆ್ಯಂಬುಲೆನ್ಸ್‌ ವಾಹನಕ್ಕೆ ನಿಲುಗಡೆಗೆ ಜಾಗದ ಕೊರತೆ ಉಂಟಾಗಿ ರಸ್ತೆ ಬದಿಯಲ್ಲೂ ನಿಲ್ಲಿಸಲಾಗಿತ್ತು. ಬಳಿಕ ಆಸ್ಪತ್ರೆಯ ಕ್ಯಾಂಟೀನ್‌ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. 108 ಆ್ಯಂಬುಲೆನ್ಸ್‌ಗೆ ನಿಲುಗಡೆಗೆ ಸೂಕ್ತ ವ್ಯವಸ್ಥೆ, ತಮಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಸಿಬಂದಿ ವರ್ಗವು ಸಂಬಂಧಿಸಿದವರಿಗೆ ಮನವಿ ಸಲ್ಲಿಸಿತ್ತು.

    ಈ ನಡುವೆ ಸೋಮವಾರ ಬೆಳಗ್ಗೆ ಸುಳ್ಯ ಆಸ್ಪತ್ರೆಯಿಂದ ಮಂಗಳೂರಿಗೆ ರೋಗಿಯೋರ್ವರನ್ನು ಕರೆದೊಯ್ಯಲು 108 ಆ್ಯಂಬುಲೆನ್ಸ್‌ ಗೆ ಕರೆ ಮಾಡಿದಾಗ, ಅದರ ಪ್ರಧಾನ ಕಚೇರಿಯಿಂದಲೇ ಸುಳ್ಯದ 108 ಆ್ಯಂಬುಲೆನ್ಸ್‌ ಒದಗಿಸಲು ನಿರಾಕರಿಸಲಾಗಿದೆ. ಇದರಿಂದ ಆಸ್ಪತ್ರೆಯ ಇನ್ನೊಂದು ಆ್ಯಂಬುಲೆನ್ಸ್‌ನಲ್ಲಿ ರೋಗಿಯನ್ನು ಮಂಗಳೂರಿಗೆ ಕೊಂಡೊಯ್ಯಲಾಯಿತು. ಪ್ರಕರಣ ತೀವ್ರತೆಯನ್ನು ಪಡೆಯುತ್ತಿದ್ದಂತೆ ಸಮಸ್ಯೆಯನ್ನು ಪರಿಹರಿಸುವಂತೆ ಪ್ರಮುಖರು ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದ್ದಾರೆ. ಒಂದು ಹಂತದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಮೇಲಿನಿಂದ ಆಸ್ಪತ್ರೆಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

    Continue Reading

    BELTHANGADY

    ಬೆಳ್ತಂಗಡಿ: ಮನೆಗೆ ನುಗ್ಗಿ ಕಳ್ಳತನ; ಪ್ರಕರಣ ದಾಖಲು 

    Published

    on

    ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಪಾಂಡೀಲು ಹೊಸಮನೆ ಎಂಬಲ್ಲಿ ಅ.27 ರಂದು ಸಂಜೆ 5 ಗಂಟೆಯಿಂದ ಅ.28 ರ ಮಧ್ಯಾಹ್ನ 12:15 ಗಂಟೆ ಮಧ್ಯ ಅವಧಿಯಲ್ಲಿ ಮನೆಯಿಂದ ಚಿನ್ನಭಾರಣ ಹಾಗೂ ನಗದು ಕಳವಾದ ಘಟನೆ ನಡೆದಿದೆ.

    ಪಾಂಡೀಲು ಹೊಸ ಮನೆ ನಿವಾಸಿ ಸುಜಾತಾ (51)ಅವರು ಮನೆಗೆ ಬೀಗ ಹಾಕಿ ತನ್ನ ತವರು ಮನೆಯಾದ ಅಳಿಯೂರು ಎಂಬಲ್ಲಿಗೆ ಹೋದ ಸಮಯ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ ಕಳವು ಗೈದಿದ್ದಾರೆ.

    ಮನೆಯ ಗೋದ್ರೇಜ್‌ ಕಪಾಟಿನಲ್ಲಿದ್ದ ನಗದು 25,000 ರೂ. ಹಾಗೂ 5 ಗ್ರಾಂ. ತೂಕದ ಬೆಂಡೋಲೆ ಒಂದು ಜತೆ ಹಾಗೂ 4 ಗ್ರಾಂ. ತೂಕದ ಚಿನ್ನದ ಉಂಗುರ ಒಂದನ್ನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತುಗಳ ನಗದು ಸೇರಿ ಒಟ್ಟು 80,000 ರೂ. ಅಂದಾಜು ಮೌಲ್ಯ ಎಂದು ವೇಣೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

    Continue Reading

    DAKSHINA KANNADA

    ಪಡುಬಿದ್ರಿ – ಪಾದಯಾತ್ರಿಗಳಿಗೆ ಮೋಟಾರು ಬೈಕ್‌ ಡಿ*ಕ್ಕಿ; ಗಾ*ಯಾಳುಗಳು ಆಸ್ಪತ್ರೆಗೆ ದಾಖಲು

    Published

    on

    ಪಡುಬಿದ್ರಿ: ಕಂಚಿನಡ್ಕದಿಂದ ಕಟೀಲಿಗೆ ಮುಂಜಾವದ ವೇಳೆ ಪಾದಯಾತ್ರೆಯಲ್ಲಿ ಹೊರಟಿದ್ದ ರಮೇಶ್‌(48) ಹಿಗೂ ವಾಣಿ(46) ಎಂಬವರಿಗೆ ಮೋಟಾರು ಬೈಕು ಡಿಕ್ಕಿಯಾಗಿ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.

    ಹೆಜಮಾಡಿ ಪೆಟ್ರೋಲ್‌ ಬಂಕ್‌ ಬಳಿ ರಾಷ್ಟ್ರೀಯ ಹೆದ್ದಾರಿಯ ಪೂರ್ವಬದಿಯಲ್ಲಿ ರಸ್ತೆಯಂಚಿನಲ್ಲಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ವಾಹನ ಧಾವಿಸಿದ ಹಿನ್ನಲೆ ದುರ್ಘಟನೆ ನಡೆದಿದೆ ಎನ್ನಲಾಗಿದೆ.

    ಗಾಯಾಳುಗಳು ತಮ್ಮ ಮಗ ಅನೀಷ್‌ನೊಂದಿಗೆ ಹೋಗುತ್ತಿದ್ದಾಗ ಈ ಘಟನೆಯು ಸಂಭವಿಸಿದೆ.

    ಮೋಟಾರು ಬೈಕ್‌ ಸವಾರ ಆರೋಪಿ ವಿಕ್ರಮ್‌ ಎಂಬವರಿಗೂ ಗಾಯಗಳಾಗಿದ್ದು ಮೂವರು ಗಾಯಾಳುಗಳೂ ಸುರತ್ಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending